»   » 'ಕುಲವಧು' ಧಾರಾವಾಹಿಯ ಧನ್ಯಾಳಿಗೆ ಅಗ್ನಿಪರೀಕ್ಷೆ.!

'ಕುಲವಧು' ಧಾರಾವಾಹಿಯ ಧನ್ಯಾಳಿಗೆ ಅಗ್ನಿಪರೀಕ್ಷೆ.!

Posted By:
Subscribe to Filmibeat Kannada

ಧನ್ಯ ಮತ್ತು ವಚನಾ.... ಕಲರ್ಸ್ ಕನ್ನಡ ವಾಹಿನಿಯ 'ಕುಲವಧು' ಕಾರ್ಯಕ್ರಮವನ್ನು ಬಿಟ್ಟೂಬಿಡದೆ ನೋಡುತ್ತಿರುವವರಿಗೆ ಈ ಎರಡೂ ಹೆಸರುಗಳು ಚಿರಪರಿಚಿತ.

ವಚನಾಳ ಸಂತೋಷಕ್ಕೋಸ್ಕರ ಏನು ಬೇಕಾದರೂ ಮಾಡುವ ತ್ಯಾಗಮಯಿ ಧನ್ಯಾ, ಈಗ ಇಕ್ಕಟ್ಟಿಗೆ ಸಿಲುಕಿದ್ದಾಳೆ. ವಚನಾ ಮತ್ತು ಧನ್ಯಾ... ಇಬ್ಬರೂ ಗರ್ಭವತಿ ಆಗಿದ್ದಾರೆ. ವಚನಾ ತಾಯ್ತನದ ಸಂಭ್ರಮದ ತುತ್ತ ತುದಿಯಲ್ಲಿದ್ದರೆ, ಧನ್ಯಾ ಆತಂಕದೊಡಲಿನಲ್ಲಿದ್ದಾಳೆ.

'Kulavadhu' Dhanya in trouble again

ವಚನಾ ಹುಚ್ಚು ಹಠದಿಂದ ತಾನೇ ಮೊದಲು ತಾಯಿಯಾಗಬೇಕೆಂದು ಧನ್ಯಾಳಿಂದ ತೆಗೆದುಕೊಂಡ ಭಾಷೆ, ಡಾಕ್ಟರ್ ಹೇಳಿಕೆಯಂತೆ ವಚನಾಳಿಗಿಂತಲೂ ಮೊದಲೇ ಮಗುವಿನ ಸತ್ಯ ಧನ್ಯಾಳನ್ನು ಗೊಂದಲಕ್ಕೀಡು ಮಾಡಿದೆ.

ಪ್ರತಿಯೊಂದು ಹೆಣ್ಣಿಗೆ ತಾಯ್ತನ ಮಹತ್ತರ ಘಟ್ಟ. ಇಂತಹ ಅನುಭವನ್ನು ಎಲ್ಲರಿಗೂ ಹೇಳಿ ಸಂಭ್ರಮಿಸುವ ಸಮಯದಲ್ಲಿ, ತಾಯಿಯಾಗುತ್ತಿರುವ ಸುದ್ದಿಯನ್ನೇ ಒಡಲೊಳಗೆ ಬಚ್ಚಿಟ್ಟ ಸತ್ಯ ಒಂದು ದಿನ ಪ್ರಪಂಚಕ್ಕೆ ತಿಳಿಯಲೇಬೇಕು.

ಎಲ್ಲಿಯವರೆಗೂ ಧನ್ಯಾ ಈ ಸತ್ಯವನ್ನು ಮುಚ್ಚಿಡುತ್ತಾಳೆ.? ಈ ಸತ್ಯ ವಚನಾಳಿಗೆ ತಿಳಿದರೆ ಪರಿಸ್ಥಿತಿ ಹೇಗಿರುತ್ತದೆ.? ವಚನಾಳ ಸ್ವಾರ್ಥ ಧನ್ಯಾಳ ಬಾಳಿಗೆ ಮತ್ಯಾವ ಸವಾಲೊಡ್ಡುತ್ತದೆ.? ತನ್ನ ಜೀವನದ ಎಲ್ಲ ಸಂತೋಷವನ್ನು ಬಿಟ್ಟು ಅವಳ ಖುಷಿಯನ್ನೇ ತನ್ನ ಖುಷಿ ಎಂದುಕೊಂಡಿದ್ದ ಧನ್ಯಾ ತಾಯ್ತನವನ್ನೇ ತ್ಯಾಗ ಮಾಡುತ್ತಾಳೆಯೇ.?

ಈ ಎಲ್ಲಾ ಕುತೂಹಲಗಳಿಗೆ ಆದಷ್ಟು ಬೇಗ 'ಕುಲವಧು' ಧಾರಾವಾಹಿಯಲ್ಲಿ ಉತ್ತರ ಸಿಗಲಿದೆ.

ಪ್ರತಿ ಸೋಮವಾರದಿಂದ ಶನಿವಾರ ಸಂಜೆ 6.30ಕ್ಕೆ ನಿಮ್ಮ ಕಲರ್ಸ್ ವಾಹಿನಿಯಲ್ಲಿ 'ಕುಲವಧು' ಧಾರಾವಾಹಿ ನೋಡಿರಿ...

English summary
'Kulavadhu' Dhanya in trouble again. Watch 'Kulavadhu' serial from Monday to Friday in Colors Kannada Channel at 6.30 pm

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada