ನಿಶ್ಚಿತಾರ್ಥ ಮಾಡಿಕೊಂಡ ಕುಲವಧು ಖ್ಯಾತಿಯ ಧನ್ಯಾ

Recommended Video

ಧನ್ಯಾ ಮದುವೆಯಾಗುವ ಹುಡುಗ ಏನ್ ಮಾಡ್ತಾರೆ ಗೊತ್ತಾ? | FILMIBEAT KANNADA

ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾದ 'ಕುಲವಧು' ಮೂಲಕ ಕನ್ನಡ ಪ್ರೇಕ್ಷಕರ ಮನೆಮಾತಾಗಿರುವ ಧನ್ಯಾ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧನ್ಯಾ ಪಾತ್ರದ ಮೂಲಕ ಎಲ್ಲರ ಮನಗೆದಿದ್ದ ಇವರ ನಿಜವಾದ ನಾಮದೇಯ ದೀಪಿಕಾ. ಆದ್ರೆ ದೀಪಿಕಾ ಎನ್ನುವುದಕ್ಕಿಂತ ಹೆಚ್ಚಾಗಿ ಧನ್ಯಾ ಅಂತಾನೆ ಖ್ಯಾತಿಗಳಿಸಿದ್ದಾರೆ.

ಅಂದ್ಹಾಗೆ ಮೊನ್ನೆ ಮೊನ್ನೆಯಷ್ಟೆ 'ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019' ಪಟ್ಟ ಗೆದ್ದು ಬಿಂಕದಿಂದ ಬೀಗಿದ್ದ ಧನ್ಯಾ ಈಗ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಕೆಲವು ದಿನಗಳ ಹಿಂದೆಯೆ ಮದುವೆ ಬಗ್ಗೆ ಸುಳಿವು ನೀಡಿದ್ದರು ಧನ್ಯಾ. ಅಲ್ಲದೆ ಬಾವಿ ಪತಿಯನ್ನು ಅಭಿಮಾನಿಗಳಿಗೆ ಪರಿಚಿಯಿಸಿದ್ದರು.

ಹೌದು, ಸಾಮಾಜಿಕ ಜಾಲತಾಣದಲ್ಲಿ ಮದುವೆಯಾಗುತ್ತಿರುವ ಹುಡುಗನ ಪೋಟೋವನ್ನು ಶೇರ್ ಮಾಡುವ ಮೂಲಕ ಬಾವಿ ಪತಿಯನ್ನು ದರ್ಶನ ಮಾಡಿಸಿದ್ರು ಧನ್ಯಾ. ಕಿರುತೆರೆಯ ನಟ ಆಕರ್ಷ್ ಎನ್ನುವವರ ಜೊತೆ ಧನ್ಯಾ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಉಂಗುರ ಬದಲಾಯಿಸಿಕೊಂಡ ಧನ್ಯಾ-ಆಕರ್ಷ್

ಉಂಗುರ ಬದಲಾಯಿಸಿಕೊಂಡ ಧನ್ಯಾ-ಆಕರ್ಷ್

ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿರುವ ಧನ್ಯಾ ಮತ್ತು ಆಕರ್ಷ್ ಇಬ್ಬರು ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರ ನಿಶ್ಚಿತಾರ್ಥ ಸಮಾರಂಭಕ್ಕೆ ಕುಟುಂಬದವರು ಮತ್ತು ಸ್ನೇಹಿತರನ್ನು ಮಾತ್ರ ಆಹ್ವಾನ ನೀಡಲಾಗಿತ್ತು. ಕಿರುತೆರೆಯ ಕೆಲವು ನಟ-ನಟಿಯರು ಸಹ ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ. ಈ ಜೋಡಿ ನಿಶ್ಚಿತಾರ್ಥದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಾನಸ ಸರೋವರ ಧಾರಾವಾಹಿಯಲ್ಲಿ ಆಕರ್ಷ್

ಮಾನಸ ಸರೋವರ ಧಾರಾವಾಹಿಯಲ್ಲಿ ಆಕರ್ಷ್

ಅಂದ್ಹಾಗೆ ಆಕರ್ಷ್ ಕೂಡ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಕಿರುತೆರೆ ಜೊತೆಗೆ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಮಾನಸ ಸರೋವರ' ಧಾರಾವಾಹಿಯಲ್ಲಿ ಆಕರ್ಷ್ ಅಭಿನಯಿಸುತ್ತಿದ್ದಾರೆ. ಇಬ್ಬರು ಸಹ ವರ್ಷದಿಂದ ಪ್ರೀತಿಸುತ್ತಿದ್ದು ಈಗ ಅಧಿಕೃತವಾಗಿ ಎಂಗೇಜ್ ಆಗುವ ಮೂಲಕ ಮದುವೆಗೆ ಸಜ್ಜಾಗಿದ್ದಾರೆ.

ಕುಲವಧು ಧಾರಾವಾಹಿಯಲ್ಲಿ ಧನ್ಯಾ

ಕುಲವಧು ಧಾರಾವಾಹಿಯಲ್ಲಿ ಧನ್ಯಾ

ಧನ್ಯಾ ಸದ್ಯ ಕುಲವಧು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ವಿಶೇಷ ಅಂದ್ರೆ ಧಾರಾವಾಹಿಯಲ್ಲಿ ಧನ್ಯಾ ಸಹೋದರಿಯಾಗಿ ಅಭಿನಯಿಸುತ್ತಿರುವ ವಚನ ಪಾತ್ರದಾರಿ ಅಮೃತ ಕೂಡ ಇತ್ತೀಚಿಗಷ್ಟೆ ಹಸೆಮಣೆ ಏರಿದ್ದಾರೆ. ಈಗ ಧನ್ಯಾ ಪಾತ್ರದಾರಿ ದೀಪಿಕಾ ಕೂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧನ್ಯಾ ಕಿರುತೆರೆ ಮಾತ್ರವಲ್ಲದೆ ಬೆಳ್ಳೆ ಪರದೆ ಮೇಲು ಮಿಂಚಿದ್ದಾರೆ. 'ನನ್ ಮಗಳೆ ಹೀರೋಯಿನ್' ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ದೊಡ್ಡ ಪರದೆಯಲ್ಲು ಕಾಣಿಸಿಕೊಂಡಿದ್ದಾರೆ.

'ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019'

'ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019'

ಇತ್ತೀಚಿಗಷ್ಟೆ ಮಿಸ್ ಸತ್ ಇಂಡಿಯಾ ಗ್ಲಾಮರ್ 2019 ಆಗಿ ಹೊರಹೊಮ್ಮಿದ್ದರು. ಈ ಮೂಲಕ ಎಲ್ಲರಿಗೂ ಧನ್ಯವಾದ ತಿಳಿಸಿದ್ರು. ಪ್ರೋತ್ಸಾಹ ನೀಡಿದ ಅಭಿಮಾನಿಗಳಿಗೆ ಮತ್ತು ವಿಶೇಷವಾಗಿ ಬಾವಿ ಪತಿ ಆಕರ್ಷ್ ಕೂಡ ಧನ್ಯವಾದ ತಿಳಿಸಿದ್ದರು. ಈಗ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಬಾಳಿನ ಹೊಸಿಲಲ್ಲಿ ನಿಂತಿದ್ದಾರೆ. ಮದುವೆ ನಂತರವು ಧನ್ಯಾ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಿಲಿದ್ದಾರೆ.

More from Filmibeat

English summary
Kannada serial artist 'Kulavadhu' fame Dhanya engaged with her love Akarsh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X