ಜನ ಇಂದಿಗೂ ನನ್ನನ್ನು ಧನ್ಯಾ ಎಂದೇ ಗುರುತಿಸುತ್ತಾರೆ : ದೀಪಿಕಾ

By ಅನಿತಾ ಬನಾರಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ "ಸೇವಂತಿ" ಯಲ್ಲಿ ನಾಯಕಿ ಸೇವಂತಿ ಆಗಿ ಅಭಿನಯಿಸುತ್ತಿರುವ ದೀಪಿಕಾ ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು. ಕುಲವಧು ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಿತರಾದ ದೀಪಿಕಾ ಸದ್ಯ ಸೇವಂತಿಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಮೂಲತಃ ನೃತ್ಯಗಾರ್ತಿಯಾಗಿದ್ದ ದೀಪಿಕಾ ಶಾಸ್ತ್ರೋಕ್ತವಾಗಿ ನೃತ್ಯವನ್ನು ಕಲಿತಿದ್ದಾರೆ. ಮುಂದೆ ಹತ್ತು ಹಲವು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದ ದೀಪಿಕಾ ಸ್ನೇಹಿತೆಯ ಒತ್ತಾಯದ ಮೇರೆಗೆ ಧಾರಾವಾಹಿಯ ಆಡಿಶನ್‌ಗೆ ಹೋದರು. 'ಕುಲವಧು' ಧಾರಾವಾಹಿಯ ಆಡಿಶನ್‌ನಲ್ಲಿ ಆಯ್ಕೆಯಾದ ಆಕೆ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡಿದ್ದರು.

ಸೇವಂತಿ ಪಾತ್ರದಲ್ಲಿ ದೀಪಿಕಾ ಮಿಂಚಿಂಗ್

ಸೇವಂತಿ ಪಾತ್ರದಲ್ಲಿ ದೀಪಿಕಾ ಮಿಂಚಿಂಗ್

"ಸೇವಂತಿಯಾಗಿ ಸೀರಿಯಲ್ ವೀಕ್ಷಕರನ್ನು ರಂಜಿಸುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಜೊತೆಗೆ ನಾನು ಮುಖ್ಯ ಭೂಮಿಕೆಯಲ್ಲಿರುವ 'ಸೇವಂತಿ' ಧಾರಾವಾಹಿಯು ಯಶಸ್ವಿ ಸಾವಿರ ಸಂಚಿಕೆ ಪೂರೈಸಿ ಮುನ್ನುಗುತ್ತಿದೆ. ಇದಕ್ಕಿಂತ ಮೊದಲು ನಾನು ನಟಿಸಿದ್ದ 'ಕುಲವಧು' ಧಾರಾವಾಹಿಯು ಕೂಡಾ ಅಷ್ಟೇ.. 1500 ಸಂಚಿಕೆ ಪೂರೈಸಿತ್ತು. ಸಾವಿರ ಸಂಚಿಕೆ ಪೂರೈಸಿ ಮುನ್ನುಗುತ್ತಿರುವುದು ಸಣ್ಣ ವಿಚಾರವಲ್ಲ. ಸಂತಸವಾಗುತ್ತಿದೆ" ಎನ್ನುತ್ತಾರೆ ದೀಪಿಕಾ.

ಅರತಿ ಅವತಾರದಲ್ಲೂ ಗೆದ್ದ ದೀಪಿಕಾ

ಅರತಿ ಅವತಾರದಲ್ಲೂ ಗೆದ್ದ ದೀಪಿಕಾ

ಬರೋಬ್ಬರಿ ಐದಾರು ವರ್ಷಗಳ ಕಾಲ ಧನ್ಯಾ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ದೀಪಿಕಾ ಮುಂದೆ ಬದಲಾದದ್ದು ಆರತಿಯಾಗಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಆರತಿಯಾಗಿ ಈಕೆ ಕಾಣಿಸಿಕೊಂಡಿದ್ದರು. ಆದರೆ ಆ ಧಾರಾವಾಹಿ ಅರ್ಧದಲ್ಲಿಯೇ ಪ್ರಸಾರ ನಿಲ್ಲಿಸಿತ್ತು.

ತೆಲುಗು ಸೀರಿಯಲ್‌ನಲ್ಲೂ ನಟನೆ

ತೆಲುಗು ಸೀರಿಯಲ್‌ನಲ್ಲೂ ನಟನೆ

ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯ ನಂತರ ಉದಯ ವಾಹಿನಿಯ ಸೇವಂತಿ ಧಾರಾವಾಹಿಯಲ್ಲಿ ಸೇವಂತಿಯಾಗಿ ನಟಿಸುವ ಅವಕಾಶವನ್ನು ಕೂಡಾ ಈಕೆ ಪಡೆದುಕೊಂಡರು. ಇದರ ಜೊತೆಗೆ ಪರಭಾಷೆಯ ಕಿರುತೆರೆಯತ್ತಲೂ ದೀಪಿಕಾ ಮುಖ ಮಾಡಿದ್ದು "ಇಂಟಿಕಿ ದೀಪಂ ಇಲ್ಲಾಲು" ಎನ್ನುವ ತೆಲುಗು ಧಾರಾವಾಹಿಯಲ್ಲಿ ನಾಯಕಿ ಕೃಷ್ಣಪ್ರಿಯಾಯಾಗಿ ಮೋಡಿ ಮಾಡುತ್ತಿದ್ದಾರೆ.

ಸಿನಿಮಾಗೂ ಗ್ರ್ಯಾಂಡ್ ಎಂಟ್ರಿ

ಸಿನಿಮಾಗೂ ಗ್ರ್ಯಾಂಡ್ ಎಂಟ್ರಿ

'ಚಿಟ್ಟೆ' ಸಿನಿಮಾದ ಮೂಲಕ ಹಿರಿತೆರೆಗೆ ಹಾರಿದ ಈಕೆ 'ನನ್ ಮಗಳೇ ಹೀರೋಯಿನ್' ಸಿನಿಮಾದಲ್ಲಿಯೂ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ತೆಲುಗಿನ ಇಟ್ಲು ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಹೆಸರು ತಂದುಕೊಟ್ಟಿದ್ದು ಧನ್ಯಾ ಪಾತ್ರ

ಹೆಸರು ತಂದುಕೊಟ್ಟಿದ್ದು ಧನ್ಯಾ ಪಾತ್ರ

"ಕುಲವಧು ಧಾರಾವಾಹಿಯ ಧನ್ಯಾ ಪಾತ್ರದ ಮೂಲಕ ನನ್ನ ಕಿರುತೆರೆ ಪಯಣ ಶುರುವಾಯಿತು. ಮುಂದೆ ಆರತಿಗೊಬ್ಬ ಕೀರ್ತಿಗೊಬ್ಬ, ಸೇವಂತಿ ಧಾರಾವಾಹಿಗಳಲ್ಲಿ ನಾನು ಅಭಿನಯಿಸಿದ್ದರೂ ಜನ ನನ್ನನ್ನು ಗುರುತಿಸುವುದು ಧನ್ಯಾ ಆಗಿ. ನಾನು ಇಂದು ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಲು ಕೂಡಾ ಅದೇ ಪಾತ್ರ ಕಾರಣ" ಎಂದು ಹೇಳುತ್ತಾರೆ ದೀಪಿಕಾ.

English summary
Kulavadhu Serial Dhanya Character Gives Life Says Actress Deepika,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X