ಸ್ವಾರ್ಥ ಮನೋಭಾವದ 'ಕುಲವಧು' ವಚನ 'ಲಕ್ಷ್ಮಿ ನಿವಾಸ'ದ ಮೃಧು ಸ್ವಭಾವದ ಭಾವನಾ ಆಗಿದ್ದೇ ಇಂಟ್ರೆಸ್ಟಿಂಗ್!
ಧಾರಾವಾಹಿಗಿಂತ ಸಿನಿಮಾ ದೊಡ್ಡ ಇಂಡಸ್ಟ್ರಿಯಾದರೂ ಜನರನ್ನು ಬೇಗ ತಲುಪಿ ಮನ ಮುಟ್ಟುವುದು ಕಿರುತೆರೆಯೇ! ಅದೆಷ್ಟೋ ಪಾತ್ರಗಳು ಜನರ ಮನಕ್ಕೆ ಎಷ್ಟು ಹತ್ತಿರವಾಗುತ್ತದೆ. ಅಂದರೆ, ಆ ನಟರನ್ನು ಅದೇ ಪಾತ್ರಗಳ ಮೂಲಕ ಎಂದೆಂದಿಗೂ ಗುರುತಿಸುವುದುಂಟು. ನಟಿ ದಿಶಾ ಮದನ್ ಅವರು ಹತ್ತು ವರ್ಷಗಳ ಹಿಂದೆ 'ಕುಲವಧು' ಎಂಬ ಧಾರಾವಾಹಿಯಲ್ಲಿ ವಚನ ಪಾತ್ರ ಮಾಡಿರುವುದು ಯಾರಿಗೆ ಮರೆತು ಹೋಗಿದೆ ಹೇಳಿ!? ನೆಗೆಟಿವ್ ರೋಲ್ ಆದರೂ ಜನ ನಟಿ ದಿಶಾ ಮದನ್ ಅವರನ್ನು ಕುಲವಧು ವಚನ ಎಂದೇ ಗುರುತಿಸುತ್ತಿದ್ದರು.
'ಕುಲವಧು' ಧಾರಾವಾಹಿ ಮುಗಿದು ಇಂದಿಗೆ ಹತ್ತು ವರ್ಷಕ್ಕೂ ಹೆಚ್ಚು ಕಾಲವಾಗಿದೆ. 'ಕುಲವಧು' ಧಾರಾವಾಹಿ ನಂತರ ಒಂದೆರಡು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಮತ್ತೆ ಬರೋಬ್ಬರಿ 10 ವರ್ಷಗಳ ಕಾಲ ಕಿರುತೆರೆ ಇಂಡಸ್ಟ್ರಿಯಿಂದ ನಟಿ ದಿಶಾ ಮದನ್ ದೂರವೇ ಉಳಿದಿದ್ದರು .

ವೈಯಕ್ತಿಕ ಜೀವನಕ್ಕೆ ಹೆಚ್ಚು ಒತ್ತು ಕೊಟ್ಟ ಆಕೆ ಮದುವೆಯಾಗಿ ಇದೀಗ ಎರಡು ಮಕ್ಕಳನ್ನು ಹೊಂದಿದ್ದಾರೆ. ಅದಾದ ಮೇಲೆ 'ಇಸ್ಮಾರ್ಟ್ ಸೂಪರ್ ಜೋಡಿ' ಎಂಬ ರಿಯಾಲಿಟಿ ಶೋಗೆ ತನ್ನ ಪತಿಯೊಂದಿಗೆ ಬಂದು ಮತ್ತೆ ಜನರನ್ನು ಮನರಂಜಿಸಿದರು. ಸೋಶಿಯಲ್ ಮೀಡಿಯಾದಲ್ಲಂತೂ ಸಖತ್ ಆ್ಯಕ್ಟಿವ್ ಆಗಿದ್ದ ನಟಿ ದಿಶಾ ಮದನ್ ಆಗಾಗ ರೀಲ್ಸ್ ಮಾಡುವ ಮೂಲಕ, ತಮ್ಮ ಪತಿಯೊಂದಿಗೆ ಡಾನ್ಸ್ ಮಾಡುವ ಮೂಲಕ ತಮ್ಮ ಫಾಲೋವರ್ಸ್ ಅನ್ನು ಎಂಟರ್ಟೈನ್ ಮಾಡುತ್ತಿರುತ್ತಾರೆ.
ಏನೇ ಆದರೂ ಇಂದಿಗೂ ಈಕೆ ಕುಲವಧು ದಿಶಾ ಎಂದೇ ಫೇಮಸ್ಸು. ಪ್ರಸ್ತುತ 'ಲಕ್ಷ್ಮಿ ನಿವಾಸ' ಎಂಬ ಧಾರಾವಾಹಿಯಲ್ಲಿ ಲಕ್ಷ್ಮಿ ನಿವಾಸದ ಮನೆಮಗಳು ಭಾವನಾ ಎಂಬ ಪಾತ್ರದಲ್ಲಿ ಈ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲ ಧಾರಾವಾಹಿಗಳಿಗಿಂತಲೂ ತುಸು ವಿಭಿನ್ನವಾದ ಕಥೆಯುಳ್ಳ 'ಲಕ್ಷ್ಮೀ ನಿವಾಸ' ಪ್ರೇಕ್ಷಕರಿಗೆ ಬಹಳಷ್ಟು ಖುಷಿ ಕೊಟ್ಟಿದೆ. ಇಂದಿನ ಕಾಲದಲ್ಲೂ ಕೂಡು ಕುಟುಂಬದ ಕಥೆಯನ್ನು ಹೇಳಲು ಹೊರಟಿರುವ ಇದು ಪಕ್ಕಾ ಮಿಡಲ್ ಕ್ಲಾಸ್ ವಾಸ್ತವತೆಯನ್ನು ತೋರಿಸಲು ಹೊರಟಿದೆ.

ಈ ಧಾರಾವಾಹಿಯಲ್ಲಿ ಭಾವನಾ ಎಂಬ ಪಾತ್ರವನ್ನು ಮಾಡುತ್ತಿರುವ ದಿಶಾ ಮದನ್ ಅವರು ಬಹಳ ಸೌಮ್ಯ ಹಾಗೂ ಮೃದು ಸ್ವಭಾವದ ಹೆಣ್ಣು ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದರೆ, ಹತ್ತು ವರ್ಷಗಳ ಹಿಂದೆ ಮಾಡಿದ ವಚನ ಪಾತ್ರದ ತದ್ವಿರುದ್ಧದ ಪಾತ್ರ ಇದಾಗಿದೆ. ವಚನ ಎಂಬ ಪಾತ್ರ ಬಹಳ ಸ್ವಾರ್ಥ ಮನೋಭಾವದ ತಂಗಿಗೆ ಏನು ಒಳಿತಾಗಲು ಬಿಡದ ಕೆಟ್ಟ ಪಾತ್ರವಾಗಿತ್ತು. ಇಂದು ಮಾಡುತ್ತಿರುವ ಭಾವನಾ ಪಾತ್ರದಲ್ಲಿ ತ್ಯಾಗ ಹಾಗೂ ಮಾತೃ ಹೃದಯದ ಟಚ್ ಇದೆ. ತಮ್ಮ ಸ್ವಂತ ಮಗಳಲ್ಲದಿದ್ದರೂ ಖುಷಿ ಎಂಬ ಮಗುವನ್ನು ಬಹಳಷ್ಟು ಪ್ರೀತಿಸಿರುವ ಭಾವನಾ, ಆ ಮಗುವನ್ನು ತಾಯಿಯಾಗಿ ಸಾಕಿ ಸಲಹಲು ತಯಾರಾಗಿ ನಿಂತಿದ್ದಾಳೆ.
ಈ ಪಾತ್ರ ಇದೀಗ ಜನರಿಗೆ ಎಷ್ಟು ಮೆಚ್ಚುಗೆ ಆಗಿದೆ ಅಂದರೆ ಬಹಳ ಕಮ್ಮಿ ಸಮಯದಲ್ಲಿ ಕುಲವಧು ವಚನ ಎಂಬ ಪಾತ್ರವನ್ನೇ ಮರೆತು ಇದೀಗ ದಿಶಾ ಮದನ್ ಅವರು ಲಕ್ಷ್ಮೀ ನಿವಾಸದ ಭಾವನೆ ಎಂದೇ ಹೆಚ್ಚು ಮನಸ್ಸಿಗೆ ಹತ್ತಿರವಾಗುತ್ತಿದೆ. ಇದೇ ಅಲ್ಲವೇ ನಟನಾ ಬದುಕಿನ ವಿಸ್ಮಯ! ಕೆಲ ಪಾತ್ರಗಳು ಪ್ರೇಕ್ಷಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುವುದು ಅವರು ಆ ಪಾತ್ರಧಾರಿಗಳನ್ನು ಗುರುತಿಸುವುದರಿಂದ ತಿಳಿಯದೆ ಹೋಗುತ್ತದೆ. ಪಾತ್ರಗಳಿಗೆ ಜೀವ ತುಂಬುವುದು ಅಂದರೆ ಇದೇ ಅನಿಸುತ್ತೆ.
ಇಂದಿಗೂ ನಟ ವಿಜಯ್ ಸೂರ್ಯ ಅಗ್ನಿಸಾಕ್ಷಿ ಸಿದ್ದಾರ್ಥ ಎಂದು, ನಟ ಜಯರಾಮ ಅವರು ಜೆಕೆ ಎಂದು, ನಟಿ ವೈಷ್ಣವಿ ಗೌಡ ಅವರು ಸನ್ನಿಧಿ ಎಂದು, ನಟಿ ಶ್ವೇತಾ ಪ್ರಸಾದ್ ಅವರು ರಾಧ ಎಂದು ಗುರುತಿಸಿಕೊಳ್ಳುವುದಕ್ಕೆ ಅವರು ಮಾಡಿರುವ ಪಾತ್ರಗಳು ಹಾಗೂ ಪ್ರೇಕ್ಷಕರ ಮೇಲಿನ ಆದರ ಅಗಾಧ ಪರಿಣಾಮವೇ ಕಾರಣ.


Click it and Unblock the Notifications











