For Quick Alerts
  ALLOW NOTIFICATIONS  
  For Daily Alerts

  'ಕುಂಕುಮ್ ಭಾಗ್ಯ' ಧಾರಾವಾಹಿಯ ಪ್ರಸಿದ್ಧ ನಟಿ ಜರೀನಾ ರೋಷನ್ ಖಾನ್ ನಿಧನ

  |

  ಹಿಂದಿ ಧಾರಾವಾಹಿ ಲೋಕದ ಜನಪ್ರಿಯ ನಟಿ ಜರೀನಾ ರೋಷನ್ ಖಾನ್ ನಿಧನರಾಗಿದ್ದಾರೆ. 54 ವರ್ಷದ ನಟಿ ಜರೀನಾ ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾಗಿದ್ದಾರೆ. ಜರೀನಾ ಖಾನ್ ಹಿಂದಿಯ ಪ್ರಸಿದ್ಧ ಕುಂಕುಮ್ ಭಾಗ್ಯ ಧಾರಾವಾಹಿಯ ಇಂದೂ ದಾಸಿ ಅಧವಾ ಇಂದೂ ಸೂರಿ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದ್ದರು.

  ಜರೀನಾ ರೋಷನ್ ಖಾನ್ ಹಠಾತ್ ನಿಧನಕ್ಕೆ ಕಿರುತೆರೆ ಲೋಕ ಕಂಬನಿ ಮಿಡಿದಿದೆ. ಕುಂಕುಮ್ ಭಾಗ್ಯ ಧಾರಾವಾಹಿಯ ಸಹಕಲಾವಿದರು ಜರೀನಾ ರೋಷನ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಸಹ ಕಲಾವಿದೆ ಪ್ರಜ್ಞಾ ಪಾತ್ರದಲ್ಲಿ ನಟಿಸುತ್ತಿದ್ದ ಇತಿಶ್ರೀ ಇನ್ಸ್ಟಾಗ್ರಾಮ್ ನಲ್ಲಿ ಜರೀನಾ ಜೊತೆಗಿನ ಫೋಟೋ ಶೇರ್ ಮಾಡಿ ಸಂತಾಪ ಸೂಚಿಸಿದ್ದಾರೆ.

  ಹಿರಿಯ ನಟ ಮತ್ತು ಬರಹಗಾರ ಕೃಷ್ಣ ನಾಡಿಗ್ ನಿಧನಹಿರಿಯ ನಟ ಮತ್ತು ಬರಹಗಾರ ಕೃಷ್ಣ ನಾಡಿಗ್ ನಿಧನ

  ಕುಂಕುಮ್ ಭಾಗ್ಯ ಧಾರಾವಾಹಿಯ ರಾಜ್ ಮೆಹ್ರಾ ವೆಬ್ ಪೋರ್ಟಲ್ ಜೊತೆ ಮಾತನಾಡಿ, 'ಈ ಸುದ್ದಿ ನಿಜ. ಆದರೆ ಆಘಾತವಾಗಿದೆ. ತುಂಬಾ ಒಳ್ಳೆಯ ವ್ಯಕ್ತಿ. ಈ ವಯಸ್ಸಿನಲ್ಲೂ ಅವರು ತುಂಬಾ ಶಕ್ತಿಯುತವಾಗಿದ್ದರು. ಸಿನಿಮಾ ವೃತ್ತಿ ಜೀವನದ ಪ್ರಾರಂಭದಲ್ಲಿ ಜರೀನಾ ಸ್ಟಂಗ್ ಮಹಿಳೆಯಾಗಿ ಕೆಲಸ ಮಾಡಿದ್ದರು. ನಿಜ ಜೀವನದಲ್ಲಿ ಹೋರಾಟಗಾರರಂತೆ ಇದ್ದರು' ಎಂದು ಹೇಳಿದ್ದಾರೆ.

  ಜರೀನಾ ರೋಶನ್ ಖಾನ್ ಹಲವು ಧಾರಾವಾಹಿಗಳ ಜೊತೆಗೆ ಸಿನಿಮಾದಲ್ಲೂ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಪಾಲಿಗೆ 2020 ನಿರಾಶಾದಾಯಕ ವರ್ಷವಾಗಿದೆ. ಅನೇಕ ಪ್ರಸಿದ್ಧ ಕಲಾವಿದರನ್ನು ಚಿತ್ರರಂಗ ಕಳೆದುಕೊಂಡಿದೆ. ಜರೀನಾ ಖಾನ್ ನಿಧನ ಟಿವಿ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

  English summary
  Kumkum Bhgya serial Actress Zarena Roshan Khan passss away due to heart attack.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X