ಕುರಿ ಪ್ರತಾಪ್ ಮೇಲೆ ಮೊದಲ ದಿನವೇ ಬೇಸರಗೊಂಡ ಕಿಚ್ಚ ಸುದೀಪ್

Recommended Video

Sudeep angry on Kuri Prathap | FILMIBEAT KANNADA

ಕನ್ನಡ ಬಿಗ್ ಬಾಸ್ ಸೀಸನ್-7ಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಮುರಾರಿಯನ್ನು ನೆನೆಯುತ್ತ ಕಿಚ್ಚ ಸುದೀಪ್ ಬಿಗ್ ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಎಂಟ್ರಿಯಾಗುತ್ತಿದ್ದಂತೆ ಮೊದಲ ಸ್ಪರ್ದಿಯಾಗಿ ಕುರಿ ಪ್ರತಾಪ್ ಅವರನ್ನು ವೇದಿಕೆ ಮೇಲೆ ಬರಮಾಡಿಕೊಂಡಿದ್ದಾರೆ.

ಸಿನಿಮಾ ಮತ್ತು ಕಿರುತೆರೆಯಲ್ಲಿ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಕುರಿ ಪ್ರತಾಪ್ ಎಂಟ್ರಿ ಭಾರಿ ಕುತೂಹಲ ಮೂಡಿಸಿದೆ. ಕುರಿ ಪ್ರತಾಪ್ ತೆರೆಮೇಲೆ ಬಂದ್ರೆ ಸಾಕು ಪ್ರೇಕ್ಷಕರು ಹಾಸ್ಯದ ರಸದೌತಣ ಸಿಗುತ್ತೆ. ಎಲ್ಲರನ್ನು ನಗಿಸುತ್ತಲೆ ಬಿಗ್ ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ.

Kuri Prathap First Contestant To Enter To Bigg Boss House

ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಮೊದಲು ಸ್ಪರ್ಧಿಗಳು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಆದ್ರೆ ಕುರಿ ಪ್ರತಾಪ್ ಬಿಗ್ ಹಬಾಸ್ ಮನೆಗೆ ಎಂಟ್ರಿ ಕೊಡ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಿತ್ತು. ಈ ಬಾರಿಯ ಬಿಗಿ ಬಾಸ್ ಗೆ ಕುರಿ ಪ್ರತಾಪ್ ಹೋಗುವುದು ಕನ್ಫರ್ಮ್ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದ್ರೆ ಬಿಗ್ ಬಾಸ್ ನಿಯಮದ ಪ್ರಕಾರ ಸ್ಪರ್ಧಿಗಳು ಆಯ್ಕೆಯಾಗಿರುವ ವಿಚಾರ ಬಹಿರಂಗ ಪಡಿಸುವ ಹಾಗಿಲ್ಲ. ಆದ್ರೆ ಕುರಿ ಪ್ರತಾಪ್ ಎಲ್ಲರಿಗೂ ಹೇಳಿದ್ದಾರೆ ಎನ್ನುವ ಕಾರಣಕ್ಕೆ ಕುರಿ ಪ್ರತಾಪ್ ಮೇಲೆ ಬೇಸರವಿದೆ ಎಂದು ಕಿಚ್ಚ ಸುದೀಪ್ ಹೇಳಿದ್ರು.

Kuri Prathap First Contestant To Enter To Bigg Boss House

ಆದ್ರೆ ಕುರಿ ಪ್ರತಾಪ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ವಿಚಾರ ಹೇಗೆ ಎಲ್ಲರಿಗೂ ಗೊತ್ತಾಯಿತು ಎನ್ನುವುದನ್ನು ಕೇಳಿ ಎಲ್ಲರು ಬಿದ್ದು ಬಿದ್ದು ನಕ್ಕರು. ಇನ್ನು ಇಂಗ್ಲೀಷ್ ನಲ್ಲಿ ಬಿಗ್ ಬಾಸ್ ಮನೆಯ ರೂಲ್ಸ್ ಬುಕ್ ಓದಿದ ಕುರಿ ಪ್ರತಾಪ್ ಶೈಲಿಗೆ ಎಲ್ಲರು ಹೊಟ್ಟೆ ಹುಣ್ಣಾಗುವಂತೆ ನಕ್ಕರು. ಮೊದಲ ದಿನವೆ ವೇದಿಕೆ ಮೇಲೆ ಎಲ್ಲರನ್ನು ನಗಿಸಿದ ಪ್ರತಾಪ್ ಮನೆಯೊಳಗೆ ಎಷ್ಟು ಮನರಂಜನೆ ನೀಡಲಿದ್ದಾರೆ ನೀಡಲಿದ್ದಾರೆ ಎನ್ನುವುದು ಪ್ರೇಕ್ಷಕರ ಕುತೂಹಲ.

More from Filmibeat

English summary
Bigg Boss Kannada season-7 grand opening: Kuri Prathap first contestant to enter to Bigg Boss House.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X