For Quick Alerts
  ALLOW NOTIFICATIONS  
  For Daily Alerts

  ಕುರಿ ಪ್ರತಾಪ್ 'ಫೇಕ್' ಎನ್ನುವವರು ಸ್ವಲ್ಪ ಶ್ವೇತಾ ಚೆಂಗಪ್ಪ ಮಾತನ್ನ ಕೇಳಿ..

  |
  ನಿಜವಾಗಿಯೂ ಕುರಿ ಪ್ರತಾಪ್ ಕನ್ ಫ್ಯೂಸ್ಡ್ ಅಂದ್ರ್ರು ಶ್ವೇತಾ ಚಂಗಪ್ಪ | FILMIBEAT KANNADA

  ಹಾಸ್ಯ ಕಲಾವಿದ ಕುರಿ ಪ್ರತಾಪ್ ಗೆ 'ಒಗಟು' ಮತ್ತು 'ಗಾದೆ' ನಡುವಿನ ವ್ಯತ್ಯಾಸ ಗೊತ್ತಿಲ್ವಾ.? ಕುರಿ ಪ್ರತಾಪ್ ಗೆ ನಿಜಕ್ಕೂ ಇಂಗ್ಲೀಷ್ ಬರಲ್ವಾ.? ಎಷ್ಟೊಂದು ಸಿನಿಮಾಗಳಲ್ಲಿ ಆಕ್ಟ್ ಮಾಡಿರುವ ಕುರಿ ಪ್ರತಾಪ್ ಅಷ್ಟೊಂದು ಗೊಂದಲ ಯಾಕೆ ಮಾಡಿಕೊಳ್ಳುತ್ತಾರೆ.?

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮವನ್ನು ಪ್ರತಿ ದಿನ ಬಿಡದೆ ನೋಡುವವರ ತಲೆಯಲ್ಲಿ ಇಂತಹ ಪ್ರಶ್ನೆಗಳು ಮೂಡುವುದು ಸಾಮಾನ್ಯ. ಅದರಲ್ಲೂ ಕ್ಯಾಪ್ಟನ್ ಆದ ವಾರದಲ್ಲಿ ಕುರಿ ಪ್ರತಾಪ್ ತುಂಬಾ ಕನ್ ಫ್ಯೂಸ್ಡ್ ಆಗಿ ಇದ್ದರು.

  'ಬಿಗ್ ಬಾಸ್' ಮನೆಯೊಳಗೆ ಮಾತ್ರ ಕುರಿ ಪ್ರತಾಪ್ ಹೀಗೆ ಆಡ್ತಿದ್ದಾರೆ. ಕಾಮಿಡಿ ಮಾಡುವ ಸಲುವಾಗಿ ಬೇಕು ಅಂತ ಗೊಂದಲ ಮಾಡಿಕೊಳ್ಳುತ್ತಿದ್ದಾರೆ. ''ಬಿಗ್ ಬಾಸ್' ಮನೆಯೊಳಗೆ ಕಾಣುತ್ತಿರುವ ಕುರಿ ಪ್ರತಾಪ್ ಫೇಕ್'' ಅಂತ ಹಲವರು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಅಂಥವರೆಲ್ಲಾ ಒಮ್ಮೆ ಶ್ವೇತಾ ಚೆಂಗಪ್ಪ ಮಾತನ್ನ ಕೇಳಲೇಬೇಕು.!

  ನಿಜವಾಗಿಯೂ ಕುರಿ ಪ್ರತಾಪ್ ಕನ್ ಫ್ಯೂಸ್ಡ್

  ನಿಜವಾಗಿಯೂ ಕುರಿ ಪ್ರತಾಪ್ ಕನ್ ಫ್ಯೂಸ್ಡ್

  ''ಕುರಿ ಪ್ರತಾಪ್ ಫೇಕ್ ಅಲ್ಲ. ಅವರು ನಿಜವಾಗಿಯೂ ತುಂಬಾ ಕನ್ ಫ್ಯೂಸ್ಡ್ ಆಗಿ ಇರ್ತಾರೆ. ಸೀನ್ ಪೇಪರ್ ನ ನೆನಪಿಟ್ಟುಕೊಳ್ಳಿ ಅಂತ ಕೊಟ್ಟರೆ, ಅವರು ಕನ್ಫ್ಯೂಸ್ ಆಗಿ ಬಿಡ್ತಾರೆ'' ಎಂದು ನ್ಯೂಸ್ ಫಸ್ಟ್ ಗೆ ನೀಡಿರುವ ಸಂದರ್ಶನದಲ್ಲಿ ಶ್ವೇತಾ ಚೆಂಗಪ್ಪ ಹೇಳಿದ್ದಾರೆ. ಅಸಲಿಗೆ ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ 'ಮಜಾ ಟಾಕೀಸ್'ನಲ್ಲಿ ಒಟ್ಟಿಗೆ ಕೆಲಸ ಮಾಡಿದವರು.

  ಕುರಿ ಪ್ರತಾಪ್ ಗೆ 'ಬಿಗ್ ಬಾಸ್' ಕೊಡುತ್ತಿರುವ ಸಂಭಾವನೆ ಇಷ್ಟೊಂದಾ.?ಕುರಿ ಪ್ರತಾಪ್ ಗೆ 'ಬಿಗ್ ಬಾಸ್' ಕೊಡುತ್ತಿರುವ ಸಂಭಾವನೆ ಇಷ್ಟೊಂದಾ.?

  ಕುರಿ ಪ್ರತಾಪ್ ಗಾಗಿ 'ಬಿಗ್ ಬಾಸ್' ನೋಡುತ್ತಿರುವ ಶ್ವೇತಾ

  ಕುರಿ ಪ್ರತಾಪ್ ಗಾಗಿ 'ಬಿಗ್ ಬಾಸ್' ನೋಡುತ್ತಿರುವ ಶ್ವೇತಾ

  ''ನಮ್ಮ ಮಜಾ ಟಾಕೀಸ್' ಟೀಮ್ ನಲ್ಲಿ ಕುರಿ ಪ್ರತಾಪ್ ಇದ್ದರು. ಈಗ ಅವರು 'ಬಿಗ್ ಬಾಸ್'ನಲ್ಲಿ ಇರುವ ಕಾರಣ ನಾನು 'ಬಿಗ್ ಬಾಸ್' ಕಾರ್ಯಕ್ರಮವನ್ನು ನೋಡುತ್ತಿದ್ದೇನೆ. ನಮ್ಮ ಸೆಟ್ ನಲ್ಲಿ ಕುರಿ ಪ್ರತಾಪ್ ಆಕ್ಸಿಜನ್ ತರಹ. ಅವರು ಬರ್ತಿದ್ದಾರೆ ಅಂದ್ರೆ ನಮಗೆ ನಗು ಬರುತ್ತೆ'' ಅಂತಾರೆ ಶ್ವೇತಾ ಚೆಂಗಪ್ಪ.

  ಕುರಿ ಪ್ರತಾಪ್ 'ಇನ್ನೊಂದು ಮುಖ'ವನ್ನ ಪರಿಚಯಿಸಿದ ಪ್ರಥಮ್.!ಕುರಿ ಪ್ರತಾಪ್ 'ಇನ್ನೊಂದು ಮುಖ'ವನ್ನ ಪರಿಚಯಿಸಿದ ಪ್ರಥಮ್.!

  ಕುರಿ ಪ್ರತಾಪ್ ಯಾರಿಗೂ ನೋವು ಮಾಡಲ್ಲ

  ಕುರಿ ಪ್ರತಾಪ್ ಯಾರಿಗೂ ನೋವು ಮಾಡಲ್ಲ

  ''ಇಲ್ಲಿಯವರೆಗೂ ಯಾರ ಮನಸ್ಸನ್ನೂ ಕುರಿ ಪ್ರತಾಪ್ ನೋಯಿಸಿರುವುದನ್ನು ನಾನು ನೋಡಿಲ್ಲ. ಯಾವತ್ತೂ ಅವರು ಬೇರೆಯವರಿಗೆ ನೋವು ಆಗುವ ಹಾಗೆ ಮಾತನಾಡಲ್ಲ. ತಮ್ಮ ಬಗ್ಗೆ ತಾವು ಕಾಮಿಡಿ ಮಾಡಿಕೊಳ್ಳುತ್ತಾರೆ, ಬೇರೆಯವರ ಬಗ್ಗೆ ಕಾಮಿಡಿ ಮಾಡಲ್ಲ. ಆ ರೀತಿ ಅವರು ಮೇಲು. ಹೀಗಾಗಿ, ನನಗೆ ಕುರಿ ಪ್ರತಾಪ್ ಅಂದ್ರೆ ಇಷ್ಟ'' ಎಂದಿದ್ದಾರೆ ಶ್ವೇತಾ ಚೆಂಗಪ್ಪ.

  ಫಿನಾಲೆಗೆ ಬರ್ತಾರೆ ಕುರಿ ಪ್ರತಾಪ್

  ಫಿನಾಲೆಗೆ ಬರ್ತಾರೆ ಕುರಿ ಪ್ರತಾಪ್

  'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ನಗಿಸುವ ಕುರಿ ಪ್ರತಾಪ್ ರಿಂದ 'ಬಿಗ್ ಬಾಸ್' ಮನೆಯಲ್ಲೂ ಹೆಚ್ಚು ಕಾಮಿಡಿಯನ್ನ ಶ್ವೇತಾ ಚೆಂಗಪ್ಪ ನಿರೀಕ್ಷೆ ಮಾಡುತ್ತಿದ್ದಾರೆ. ಈ ಬಾರಿಯ 'ಬಿಗ್ ಬಾಸ್' ಫಿನಾಲೆಯಲ್ಲಿ ಕುರಿ ಪ್ರತಾಪ್ ಇದ್ದೇ ಇರುತ್ತಾರೆ ಎಂಬ ನಂಬಿಕೆ ಶ್ವೇತಾ ಚೆಂಗಪ್ಪಗೆ ಇದೆ. (ಕೃಪೆ: ನ್ಯೂಸ್ ಫಸ್ಟ್ ಕನ್ನಡ)

  English summary
  Bigg Boss Kannada 7 Contestant Kuri Prathap is not fake says Shwetha Changappa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X