'ಮಜಾ ಟಾಕೀಸ್' ಕುರಿ ಪ್ರತಾಪ್ 'ಸೂಪರ್ ಟಾಕ್ ಟೈಂ' ನಲ್ಲಿ ಪ್ರತ್ಯಕ್ಷ
'ಮಜಾ ಟಾಕೀಸ್' ಮುಗಿಯಿತು ಅಂತಿದ್ದ ಹಾಗೆ ಕುರಿ ಪ್ರತಾಪ್ ಈಗ 'ಸೂಪರ್ ಟಾಕ್ ಟೈಂ'ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಾರದ ಕಾರ್ಯಕ್ರಮದ ಅತಿಥಿಗಳ ಪೈಕಿ ಅವರು ಕೂಡ ಒಬ್ಬರಾಗಿದ್ದಾರೆ.
ಕೊನೆಯ ಹಂತ ತಲುಪಿರುವ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಈಗ ವಿಶೇಷ ಅತಿಥಿಗಳ ಆಗಮನ ಆಗಿದೆ. ಮಜಾ ಟಾಕೀಸ್ ಖ್ಯಾತಿಯ ಕುರಿ ಪ್ರತಾಪ್, ಪವನ್, ಬಿಗ್ ಬಾಸ್ ಖ್ಯಾತಿಯ ಶಾಲಿನಿ ಮತ್ತು ನಿರಂಜನ್ ದೇಶ್ ಪಾಂಡೆ ಈಗ 'ಸೂಪರ್ ಟಾಕ್ ಟೈಂ'ಗೆ ಬಂದಿದ್ದಾರೆ.

ಈ ವಾರ ನಟ ಗಣೇಶ್ ಸಂಚಿಕೆಯೊಂದಿಗೆ ಈ ಸಂಚಿಕೆ ಕೂಡ ಪ್ರಸಾರ ಆಗಲಿದೆ. ಈ ಎರಡು ಸಂಚಿಕೆಗಳೊಂದಿಗೆ 'ಸೂಪರ್ ಟಾಕ್ ಟೈಮ್' ಕೊನೆಗೊಳ್ಳುತ್ತಿದೆ. ಈ ಸುದ್ದಿಯನ್ನ ಸ್ವತಃ ನಿರೂಪಕ ಅಕುಲ್ ಬಾಲಾಜಿ ಅವರೇ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
More from Filmibeat
English summary
Kuri Prathap, Niranjan deshpande, Shalini and Pavan takes part in Colors Super Channel's popular show 'Super talk time'.


Click it and Unblock the Notifications











