'ಬಿಗ್ ಬಾಸ್' ಮೊದಲ ಸ್ಪರ್ಧಿ ಹೆಸರನ್ನು ಬಹಿರಂಗ ಪಡಿಸಿದ ಕಲರ್ಸ್ ವಾಹಿನಿ
Recommended Video
ಇಂದು ಸಂಜೆ 6 ಗಂಟೆಯಿಂದ 'ಬಿಗ್ ಬಾಸ್ ಕನ್ನಡ ಸೀಸನ್ 7' ಪ್ರಾರಂಭ ಆಗುತ್ತಿದೆ. ಕಾರ್ಯಕ್ರಮದ ಮೊದಲ ಸ್ಪರ್ಧಿಯ ಹೆಸರನ್ನು ಕಲರ್ಸ್ ಕನ್ನಡ ವಾಹಿನಿ ಬಹಿರಂಗ ಪಡಿಸಿದೆ.
'ಬಿಗ್ ಬಾಸ್' ಸ್ಪರ್ಧಿಗಳಾಗುವ ಸಂಭಾವ್ಯ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅದರಲ್ಲಿ ಎಷ್ಟೋ ಹೆಸರುಗಳು ಕಾಮನ್ ಆಗಿ ಕೇಳಿ ಬರುತ್ತಿದ್ದು, ಆ ಪೈಕಿ ಒಬ್ಬ ಸ್ಪರ್ಧಿ ಬಿಗ್ ಮನೆಗೆ ಹೋಗುವುದು ಈಗ ಅಧಿಕೃತವಾಗಿದೆ. ಗ್ರಾಂಡ್ ಓಪನಿಂಗ್ ಮೊದಲೇ ಈ ಸ್ಪರ್ಧಿ ಹೆಸರನ್ನು ವಾಹಿನಿ ತಿಳಿಸಿದೆ.
ಹಾಸ್ಯ ನಟ, ಮಜಾ ಟಾಕೀಸ್ ಖ್ಯಾತಿಯ ಕುರಿ ಪ್ರತಾಪ್ ಕಾರ್ಯಕ್ರಮದ ಸ್ಪರ್ಧಿ ಎನ್ನುವ ಸುದ್ದಿ ಅನೇಕ ದಿನಗಳಿಂದ ಇತ್ತು. ಈ ಸುದ್ದಿ ನಿಜವಾಗಿದೆ. ಕಾರಣ ಕಲರ್ಸ್ ವಾಹಿನಿಯ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಈ ವಿಷಯ ಹಂಚಿಕೊಂಡಿದೆ.

ಕಾರ್ಯಕ್ರಮದ ಮೊದಲ ಸ್ಪರ್ಧಿ ಕುರಿ ಪ್ರತಾಪ್
ಹಾಸ್ಯ ನಟ ಕುರಿ ಪ್ರತಾಪ್ 'ಬಿಗ್ ಬಾಸ್ ಸೀಸನ್ 7' ಕಾರ್ಯಕ್ರಮದ ಮೊದಲ ಸ್ಪರ್ಧಿ ಆಗಿದ್ದಾರೆ. ಒಂದು ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಮೊದಲ ಸ್ಪರ್ಧಿಯನ್ನು ವಾಹಿನಿ ಪರಿಚಯ ಮಾಡಿದೆ. ಬಿಗ್ ಬಾಸ್ ಗೆ ಹೋಗಲು ಸಿದ್ಧವಾಗಿರುವ ಕುರಿ ಪ್ರತಾಪ್ ತಮ್ಮ ಜರ್ನಿ ಬಗ್ಗೆ ಈ ವಿಡಿಯೋದಲ್ಲಿ ಮಾತನಾಡಿದ್ದಾರೆ. ಅವರ ಕುಟುಂಬದ ಜೊತೆಗೆ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

ತಮ್ಮ ಪರಿಚಯ ಮಾಡಿಕೊಂಡ ಕುರಿ ಪ್ರತಾಪ್
'ಪ್ರತಾಪ್.. ಕುರಿ ಪ್ರತಾಪ್..' ಎಂದು ಹೇಳುತ್ತಾ ವಿಡಿಯೋದಲ್ಲಿ ತಮ್ಮ ಪರಿಚಯನ್ನು ಕುರಿ ಪ್ರತಾಪ್ ಮಾಡಿಕೊಂಡಿದ್ದಾರೆ. ತಮ್ಮ ಸ್ಟೈಲ್ ನಲ್ಲಿ ಇಂಗ್ಲೀಷ್ ನಲ್ಲಿ ಶುರು ಮಾಡಿ ಕಾಮಿಡಿ ಮಾಡಿದ್ದಾರೆ. ತಾವು, ತಮ್ಮ ಕುಟುಂಬ ಮೈಸೂರಿನಲ್ಲಿ ಇದ್ದು, ಚಿತ್ರೀಕರಣದ ಕೆಲಸ ಇದ್ದರೆ ಮಾತ್ರ ಬೆಂಗಳೂರಿಗೆ ಬರುತ್ತೇನೆ'' ಎಂದು ತಮ್ಮ ವಿವರವನ್ನು ಕ್ಯಾಮರಾ ಮುಂದೆ ಹಂಚಿಕೊಂಡಿದ್ದಾರೆ.

'ಕುರಿಗಳು ಸಾರ್' ನಿಂದ ಜರ್ನಿ ಶುರು
ಹಾಸ್ಯ ನಾಟಕಗಳನ್ನು ಮಾಡುತ್ತಿದ್ದ ಕುರಿ ಪ್ರತಾಪ್ ನಂತರ ಉದಯ ಟಿವಿಯ 'ಕುರಿಗಳು ಸಾರ್' ಕಾರ್ಯಕ್ರಮದ ಮೂಲಕ ತಮ್ಮ ಕಿರುತೆರೆ ಜರ್ನಿ ಶುರು ಮಾಡಿದರು. ಅಲ್ಲಿಂದ ಅವರ ಹೆಸರಿನ ಜೊತೆಗೆ ಕುರಿ ಅಂಟಿಕೊಂಡಿತು. 'ಮಜಾ ಟಾಕೀಸ್'ನಲ್ಲಿ ಕೂಡ ಅವರು ಹೆಸರು ಹಾಗೆಯೇ ಮುಂದುವರೆಯಿತು. ಇಂದಿಗೂ ಅವರನ್ನು ಕುರಿ ಎಂದೇ ಕರೆಯುತ್ತಾರೆ.

ಇಂದು ಸಂಜೆವರೆಗೆ ಕಾಯಬೇಕು
ವಿಡಿಯೋ ಮೂಲಕ ಕುರಿ ಪ್ರತಾಪ್ ಪರಿಚಯ ಮಾಡಿಸಿರುವ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಸ್ಪರ್ಧಿ ಎಂದು ಸುಳಿವು ನೀಡಿದೆ. ಆದರೆ, ವಿಡಿಯೋದಲ್ಲಿ ಕುರಿ ಪ್ರತಾಪ್ ತಾವು ಬಿಗ್ ಬಾಸ್ ಗೆ ಹೋಗುತ್ತಿದ್ದೇನೆ ಎಂದು ಬಾಯಿ ಬಿಟ್ಟು ಹೇಳಿಲ್ಲ. ಆದರೆ, ಕುರಿ ಪ್ರತಾಪ್ ಈ ಬಾರಿಯ ಸ್ಪರ್ಧಿ ಆಗುವುದು ನೂರಕ್ಕೆ ನೂರರಷ್ಟು ನಿಜ. ಅದನ್ನು ಅವರ ಬಾಯಲ್ಲೇ ಕೇಳಲು ಇಂದು ಸಂಜೆ ಆರು ಗಂಟೆವರೆಗೆ ಕಾಯಬೇಕು.


Click it and Unblock the Notifications











