For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ 7'ನಲ್ಲಿ ಕನ್ನಡದ ಈ ಹಾಸ್ಯ ನಟ ಸ್ಪರ್ಧಿಯಾಗುವುದು ಪಕ್ಕಾ

  |
  Bigg Boss kannada 7 : 'ಬಿಗ್ ಬಾಸ್ 7'ನಲ್ಲಿ Kuri Prathap ಸ್ಪರ್ಧಿಯಾಗುವುದು ಪಕ್ಕಾ

  ಒಂದು, ಎರಡು, ಮೂರು ಎಂದು ಹೇಳುತ್ತಿದ್ದ ಹಾಗೆ 'ಬಿಗ್ ಬಾಸ್' ಕಾರ್ಯಕ್ರಮ ಬರುತ್ತಿದೆ. ಏಳನೇ ಆವೃತ್ತಿಯ 'ಬಿಗ್ ಬಾಸ್' ಕಾರ್ಯಕ್ರಮ ಇಂದು ಸಂಜೆ ಆರು ಗಂಟೆಗೆ ಗ್ರಾಂಡ್ ಆಗಿ ಓಪನಿಂಗ್ ಆಗಲಿದೆ.

  ಈ ಬಾರಿ ಕಾರ್ಯಕ್ರಮದ ಸ್ಪರ್ಧಿ ಯಾರಾಗುತ್ತಾರೆ ಎನ್ನುವುದು ಕುತೂಹಲವಾಗಿಯೇ ಉಳಿದುಕೊಂಡಿದೆ. ಅದಕ್ಕೆ ಉತ್ತರ ಈ ಭಾನುವಾರದಂದು ಸಿಗಲಿದೆ. ಪ್ರತಿ ಬಾರಿಯಂತೆ ಈ ಬಾರಿಗೂ ಕೆಲವರ ಹೆಸರು ಕೇಳಿ ಬರುತ್ತಿದೆ. ಆ ರೀತಿ ಕೇಳಿ ಬಂದ ಹೆಸರುಗಳ ಪೈಕಿ ಕೆಲವರು, ಈಗಾಗಲೇ ಕಾರ್ಯಕ್ರಮಕ್ಕೆ ಹೊಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  ಬಿಗ್ ಬಾಸ್ 7ನೇ ಆವೃತ್ತಿಯಲ್ಲಿ ಸುದೀಪ್ ಸಂಭಾವನೆ ಎಷ್ಟು?ಬಿಗ್ ಬಾಸ್ 7ನೇ ಆವೃತ್ತಿಯಲ್ಲಿ ಸುದೀಪ್ ಸಂಭಾವನೆ ಎಷ್ಟು?

  ಹೀಗಾಗಿ, 'ಬಿಗ್ ಬಾಸ್ 7'ಗೆ ಹೋಗುವ ಸ್ಪರ್ಧಿಗಳ ಹೆಸರು ಈ ಬಾರಿಯೂ ನಿಗೂಢವಾಗಿಯೇ ಇದೆ. ಆದರೆ, 'ಫಿಲ್ಮಿಬೀಟ್ ಕನ್ನಡ'ಕ್ಕೆ ಸಿಕ್ಕ ಮಾಹಿತಿಯ ಪ್ರಕಾರ ಕನ್ನಡದ ಒಬ್ಬ ಹಾಸ್ಯ ನಟ 'ಬಿಗ್ ಬಾಸ್ 7' ಸ್ಪರ್ಧಿ ಆಗುವುದು ಬಹುತೇಕ ಖಚಿತ. ಈ ಹಿಂದಿನ ಸೀಸನ್ ಗಳಲ್ಲಿ ಪದೇ ಪದೇ ಕೇಳಿ ಬರುತ್ತಿದ್ದ ಇವರ ಹೆಸರು, ಈಗ ಅಧಿಕೃತ ಆಗಿದೆಯಂತೆ.

  ಯಾರು ಆ ಹಾಸ್ಯ ನಟ?

  ಯಾರು ಆ ಹಾಸ್ಯ ನಟ?

  ಕನ್ನಡದ ಹಾಸ್ಯ ನಟ ಕುರು ಪ್ರತಾಪ್ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವುದು ಬಹುತೇಕ ಪಕ್ಕಾ ಆಗಿದೆ. ಈಗಾಗಲೇ ಕುರಿ ಪ್ರತಾಪ್ ಜೊತೆಗೆ ಮಾತುಕತೆ ಕೂಡ ಮುಗಿದಿದೆ. ಡಿಲ್ ಓಕೆ ಆದ ನಂತರ ಕುರಿ ಪ್ರತಾಪ್ ಕಾರ್ಯಕ್ರಮಕ್ಕೆ ಹೋಗಲು ಒಪ್ಪಿಕೊಂಡಿದ್ದಾರೆ. ಕಳೆದ ಕೆಲವು ಸೀಸನ್ ನಿಂದ ಕುರಿ ಪ್ರತಾಪ್ ಸ್ಪರ್ಧಿ ಆಗಬೇಕು, ಅವರು ಕಾರ್ಯಕ್ರಮದಲ್ಲಿ ಇರಬೇಕು ಎನ್ನುವ ಒತ್ತಾಯ ಪ್ರೇಕ್ಷಕರ ಕಡೆಯಿಂದ ಇತ್ತು. ಹೀಗಾಗಿ ಈ ಬಾರಿ ಅದು ಯಶಸ್ವಿಯಾಗಿದೆ.

  ಕಲರ್ಸ್ ಕುಟುಂಬಕ್ಕೆ ಸೇರುವ ಕುರಿ ಪ್ರತಾಪ್

  ಕಲರ್ಸ್ ಕುಟುಂಬಕ್ಕೆ ಸೇರುವ ಕುರಿ ಪ್ರತಾಪ್

  ಕುರಿ ಪ್ರತಾಪ್ ಸಿನಿಮಾಗಳಿಗಿಂತ ಹೆಚ್ಚು ಗಮನ ಸೆಳೆದಿದ್ದು, 'ಮಜಾ ಟಾಕೀಸ್' ಕಾರ್ಯಕ್ರಮದ ಮೂಲಕ. ಈ ಕಾರ್ಯಕ್ರಮ ಕುರಿ ಪ್ರತಾಪ್ ಒಳ್ಳೆಯ ಹೆಸರು ಹಾಗೂ ಎಷ್ಟೋ ಸಿನಿಮಾ ಅವಕಾಶಗಳಿಗೆ ಕಾರಣವಾಗಿದೆ. ಕಲರ್ಸ್ ವಾಹಿನಿಗೆ ಸಂಬಂಧಪಡುವ ಕುರಿ ಪ್ರತಾಪ್ ಅದೇ ವಾಹಿನಿಯ 'ಬಿಗ್ ಬಾಸ್'ಗೆ ಬುಕ್ ಆಗಿದ್ದಾರೆ. ಕುರಿ ಬಿಗ್ ಬಾಸ್ ಮನೆಗೆ ಹೋಗಲು ಇರುವ ಪ್ರಮುಖ ಕಾರಣಗಳಲ್ಲಿ ಇದು ಒಂದು.

  ಬಿಗ್ ಬಾಸ್ ಪಟ್ಟ ಮುಡಿಗೇರಿಸಿಕೊಂಡ 6 ಮಂದಿ ವಿನ್ನರ್ಸ್ ಈಗ ಏನ್ಮಾಡ್ತಿದ್ದಾರೆ?ಬಿಗ್ ಬಾಸ್ ಪಟ್ಟ ಮುಡಿಗೇರಿಸಿಕೊಂಡ 6 ಮಂದಿ ವಿನ್ನರ್ಸ್ ಈಗ ಏನ್ಮಾಡ್ತಿದ್ದಾರೆ?

  ಒಳ್ಳೆಯದು ಇದೆ.. ಕೆಟ್ಟದ್ದೂ ಇದೆ..

  ಒಳ್ಳೆಯದು ಇದೆ.. ಕೆಟ್ಟದ್ದೂ ಇದೆ..

  'ಬಿಗ್ ಬಾಸ್' ಕಾರ್ಯಕ್ರಮ ಕೆಲ ಸ್ಪರ್ಧಿಗಳ ಮುಂದಿನ ಭವಿಷ್ಯವನ್ನು ಬದಲು ಮಾಡಿದೆ. ಇನ್ನು ಕೆಲವು ಸ್ಪರ್ಧಿಗಳು ಈ ಕಾರ್ಯಕ್ರಮದಿಂದ ಹೆಸರು ಹಾಳು ಮಾಡಿಕೊಂಡಿದ್ದಾರೆ. ಹೀಗಾಗಿ ಕುರಿ ಪ್ರತಾಪ್ ಯಾವ ರೀತಿ ಕಾರ್ಯಕ್ರಮವನ್ನು ನಿರ್ವಹಿಸುತ್ತಾರೆ ಎನ್ನುವುದು ಸವಾಲಾಗಿದೆ. ಇಷ್ಟು ದಿನ ತಮ್ಮ ತರ್ಲೆ, ಕಾಮಿಡಿ ಮೂಲಕ ಕುರಿ ಪ್ರತಾಪ್ ಜನರಿಗೆ ಹತ್ತಿರ ಆಗಿದ್ದರು. 'ಬಿಗ್ ಬಾಸ್' ಮನೆಗೆ ಹೊದ ನಂತರ ತಮ್ಮ ಹೆಸರನ್ನು ಕುರಿ ಪ್ರತಾಪ್ ಹೇಗೆ ಉಳಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಇದೆ.

  ಆಫರ್ ನಿರಾಕರಿಸಿದ ಶಿವರಾಜ್ ಕೆ ಆರ್ ಪೇಟೆ

  ಆಫರ್ ನಿರಾಕರಿಸಿದ ಶಿವರಾಜ್ ಕೆ ಆರ್ ಪೇಟೆ

  ಕನ್ನಡದ ಮತ್ತೊಬ್ಬ ಹಾಸ್ಯ ನಟ, 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ 'ಬಿಗ್ ಬಾಸ್'ಗೆ ಹೋಗಬೇಕಾಗಿತ್ತು. ಆದರೆ, ಶಿವರಾಜ್ ಬಂದ ಅವಕಾಶವನ್ನು ನಿರಾಕರಿಸಿದ್ದಾರೆ. ಒಳ್ಳೆ ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಈ ವೇಳೆ 'ಬಿಗ್ ಬಾಸ್'ಗೆ ಹೋಗುವುದು ಬೇಡ ಎನ್ನುವುದು ಶಿವರಾಜ್ ನಿರ್ಧಾರವಾಗಿದೆ. ಶಿವರಾಜ್ ನಿರ್ಧಾರದಂತೆ 'ಬಿಗ್ ಬಾಸ್'ನಿಂದ ಬದುಕು ಬದಲಿಸಲು ಸಾಧ್ಯವಿಲ್ಲ ಬಿಡಿ.

  'ಬಿಗ್ ಬಾಸ್' ಮನೆ ಕಂಡ ಬಿಸಿ ಬಿಸಿ ಪ್ರೇಮ ಪ್ರಸಂಗಗಳು'ಬಿಗ್ ಬಾಸ್' ಮನೆ ಕಂಡ ಬಿಸಿ ಬಿಸಿ ಪ್ರೇಮ ಪ್ರಸಂಗಗಳು

  ಇಂದು ಸಂಜೆ ಆರು ಗಂಟೆಗೆ ಪ್ರಾರಂಭ

  ಇಂದು ಸಂಜೆ ಆರು ಗಂಟೆಗೆ ಪ್ರಾರಂಭ

  'ಬಿಗ್ ಬಾಸ್ ಕನ್ನಡ ಸೀಸನ್ 7' ಕಾರ್ಯಕ್ರಮ ಇಂದು ಸಂಜೆ ಆರು ಗಂಟೆಗೆ ಪ್ರಾರಂಭ ಆಗುತ್ತಿದೆ. ಈ ಬಾರಿ ಕಲರ್ಸ್ ಸೂಪರ್ ವಾಹಿನಿಯಿಂದ ಕಲರ್ಸ್ ಕನ್ನಡಕ್ಕೆ ಕಾರ್ಯಕ್ರಮ ವರ್ಗಾವಣೆ ಆಗಿದೆ. ಸೀಸನ್ 7ರಲ್ಲಿ ಕಾಮನ್ ಮ್ಯಾನ್ ಗಳಿಗೆ ಅವಕಾಶ ನೀಡಿಲ್ಲ. ಸುದೀಪ್ ಸಾರಥ್ಯದಲ್ಲಿಯೇ ಈ ಬಾರಿಯೂ ಕಾರ್ಯಕ್ರಮ ಮುನ್ನಡೆಯುತ್ತಿದೆ. ಸೋಮವಾರದಿಂದ ಪ್ರತಿ ದಿನ 9 ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ.

  English summary
  Kannada comedy actor Kuri Prathap will be the one of the contestant in 'Bigg Boss Kannada 7'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X