»   » ನಟ-ನಟಿ ಜಸ್ಟ್ ಬಚಾವ್ ! ಬೆಂಕಿ ಜತೆ ಸರಸ, ಹೊತ್ತಿ ಉರಿದ ಮಂಟಪ

ನಟ-ನಟಿ ಜಸ್ಟ್ ಬಚಾವ್ ! ಬೆಂಕಿ ಜತೆ ಸರಸ, ಹೊತ್ತಿ ಉರಿದ ಮಂಟಪ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಿಗ್ ಬಾಸ್ ಹಿಂದಿ ಆವೃತ್ತಿಯಲ್ಲಿ ಸಹ ಸ್ಪರ್ಧಿಗೆ ಹೊಡೆದು, ಮನೆಯ ಗೋಡೆ ಹತ್ತಿ ಹಾರಲು ಯತ್ನಿಸಿ, ಪ್ರೇಮಪಾಶದ ಕಥೆಯಲ್ಲಿ ಭಾಗಿಯಾಗಿದ್ದ ನಟ ಕುಶಾಲ್ ಟಂಡನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಬೇಹಾದ್ ಎಂಬ ಧಾರಾವಾಹಿ ಸಂದರ್ಭದಲ್ಲಿ ಸಹ ನಟಿಯನ್ನು ಬೆಂಕಿ ದುರಂತದಿಂದ ರಕ್ಷಿಸಿದ್ದಾರೆ.

ಬೇಹಾದ್ ಧಾರಾವಾಹಿಯ ಚಿತ್ರೀಕರಣ ನಡೆದಿತ್ತು. ಕುಶಾಲ್ ಟಂಡನ್ ಹಾಗೂ ಜೆನ್ನಿಫರ್ ವಿಂಗೆಟ್ ನಡುವೆ ವಿವಾಹ ಜರುಗಲು ಮಂಟಪದ ಸೆಟ್ ಹಾಕಲಾಗಿತ್ತ್ತು. ಈ ಮಂಟಪಕ್ಕೆ ಬೆಂಕಿ ಬಿದ್ದು ಜೆನ್ನಿಫರ್ ಗಾಬರಿಗೊಂಡು ನಿಂತಿದ್ದಾಗ ಕುಶಾಲ್, ಆಕೆಯನ್ನು ರಕ್ಷಿಸಿದ್ದಾರೆ.

Kushal rescues Jennifer as fire breaks out on 'Beyhadh' sets

31 ವರ್ಷ ವಯಸ್ಸಿನ ಕುಶಾಲ್ ಅವರು ಈ ಬಗ್ಗೆ ಇನ್ಸ್ಟ್ರಾಗ್ರಾಮ್ ನಲ್ಲಿ ವಿಡಿಯೋ ಹಾಕಿದ್ದಾರೆ. ಘಟನೆಯ ಪೂರ್ಣ ವಿವರ ನೀಡಿದ್ದಾರೆ. ಸೆಟ್ ಗೆ ಬೆಂಕಿ ಬಿದ್ದಾಗ ನಾನು ಓಡಿ ಹೋದೆ. ಆದರೆ, ಜೆನ್ನಿಫರ್ ಅಲ್ಲೇ ನಿಂತಿರುವುದು ನೋಡಿ ಮತ್ತೊಮ್ಮೆ ಹೋಗಿ ಅವರನ್ನು ರಕ್ಷಿಸಲು ಧಾವಿಸಿದೆ. ಆಗ ನಗು ಬಂತು. ಆದರೆ, ನಂತರ ಇದು ಶೂಟಿಂಗ್ ಅಲ್ಲ ನಿಜವಾಗಿ ನಡೆದಿದ್ದು ಎಂಬುದು ಅರಿವಾಗಿ ಭಯವಾಯಿತು ಎಂದಿದ್ದಾರೆ. ವಿಡಿಯೋ ನೋಡಿ:

English summary
Actor Kushal Tandon has saved his co-star Jennifer Winget as fire broke out on the sets of their TV serial, "Beyhadh".

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada