For Quick Alerts
  ALLOW NOTIFICATIONS  
  For Daily Alerts

  ಕನ್ನಡ ಧಾರಾವಾಹಿ ಲೋಕಕ್ಕೆ ಕಾಲಿಟ್ಟ 'ರಣಧೀರನ ರಾಣಿ' ಖುಷ್ಬೂ

  By Bharath Kumar
  |

  ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಪ್ರಪ್ರಥಮ ಭಾರಿಗೆ ಕನ್ನಡ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಸಿಕರ ಮನಗೆದ್ದಿದ್ದ ರಣಧೀರನ ರಾಣಿ ಈಗ ಕಿರುತೆರೆ ಪ್ರೇಕ್ಷಕರನ್ನ ರಂಜಿಸಲು ತಯಾರಾಗಿದ್ದಾರೆ.

  ಹೌದು, ಅದ್ಭುತ ಮೇಕಿಂಗ್ ಹಾಗೂ ಕಥೆಯ ಮೂಲಕ ಕನ್ನಡ ನಾಡಿನ ಪ್ರೇಕ್ಷಕರ ಮನಸ್ಸು ಕದ್ದಿರುವ 'ನಂದಿನಿ' ಧಾರವಾಹಿಯಲ್ಲಿ ಖುಷ್ಬೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ನಂದಿನಿ' ಧಾರವಾಹಿ ಈಗಾಗಲೇ ಹೆಚ್ಚು ಜನಮನ್ನಣೆ ಗಳಿಸಿಕೊಂಡಿದೆ.

  ಖುಷ್ಬೂ ಅವರು ಧಾರವಾಹಿಯಲ್ಲಿ ಪಾರ್ವತಿ ಎಂಬ ಪಾತ್ರವನ್ನ ನಿರ್ವಹಿಸಲಿದ್ದು, ಅವರ ಪಾತ್ರದ ಒಂದು ಪರಿಚಯ ಇಲ್ಲಿದೆ ನೋಡಿ. ''ಪಾರ್ವತಿ ಪುರದಲ್ಲಿ ಪಾರ್ವತಿ ಎಂಬ ಹೆಸರಿನಿಂದ ಅಲ್ಲಿನ ಜನರಿಗೆ ನಾಟಿ ಔ‍ಷಧಿಗಳನ್ನ ಕೊಡುವುದರ ಮೂಲಕ, ಅವರ ಕಷ್ಟಗಳನ್ನ ಪರಿಹರಿಸುತ್ತಾ ಆ ಜನರ ಪಾಲಿಗೆ ದೇವತೆಯಾಗಿರುತ್ತಾರೆ. ಜನರು ತಿಳಿದಂತೆ ಜನರ ಸಮಸ್ಯೆಗಳ ಜೊತೆ ಕಾಡು ದೇವತೆಯ ಸಂಪತ್ತನ್ನ ರಕ್ಷಿಸುವ ದೇವಿಯಾಗಿರುತ್ತಾಳೆ. ಇವಳ ಇಚ್ಛಾಧಾರಿ ನಾಗಿಣಿ. ದೇವಿಯನ್ನ ಪೂಜಿಸುವಾಗ ನಾಗಿಣಿಯಾಗಿ ಮತ್ತೆ ಮನುಷ್ಯರೂಪ ತಾಳುವ ಶಕ್ತಿ ಅವಳದ್ದು. ಇವಳ ಮತ್ತೊಂದು ಹೆಸರು ಶಿವನಾಗ. ಇವಳ ಮಗಳು ನಂದಿನಿ.

  ಹಿಂದೆ ಕೆಲವು ದುಷ್ಟರು ದೇವಿಯ ಅಡಿಯಲ್ಲಿರುವ ಕಾಲಚಕ್ರವನ್ನ ಅಪಹರಿಸಲು ಬಂದಾಗ, ಅದನ್ನ ರಕ್ಷಿಸಲು ಹೋಗಿ, ಪಾರ್ವತಿ ತನ್ನ ಪ್ರಾಣವನ್ನ ತ್ಯಾಗ ಮಾಡಿರುತ್ತಾಳೆ. ಅವಳ ಅಂತ್ಯಕಾಲದಲ್ಲಿ ಹೇಳಿದಂತೆ ನಂದಿನಿ ಈಗ ನಡೆದುಕೊಳ್ಳುತ್ತಿದ್ದಾಳೆ.

  ಹಾಗಾದ್ರೆ, ಈಗ ಪಾರ್ವತಿ ಮತ್ತೆ ಬರಲು ಕಾರಣವೇನು? ಅವಳಿಂದ ನಂದಿನಿಯಲ್ಲಾಗುವ ಬದಲಾವಣೆಗಳೇನು ಎಂಬುದನ್ನ ಕಾದುನೋಡಬೇಕಿದೆ.

  ಖುಷ್ಬೂ ಅಭಿನಯದ ಪಾರ್ವತಿ ಪಾತ್ರ ಇದೇ ಸೋಮವಾರದಿಂದ 'ನಂದಿನಿ' ಧಾರವಾಹಿಯಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಮಿಸ್ ಮಾಡ್ದೆ ನೋಡಿ ಎಂಜಾಯ್ ಮಾಡಿ....

  English summary
  Popular South india Actress Kushboo Acting in Nandini Serial at Udaya Tv

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X