'ಪುಟ್ಟಕ್ಕನ ಮಕ್ಕಳು' ನಟಿ ಸಂಜನಾ ಬುರ್ಲಿ ಇದಕ್ಕೂ ಮುನ್ನ 7 ಸಿನಿಮಾಗಳಲ್ಲಿ ನಟಿಸಿದ್ರು ಅನ್ನೋದು ಗೊತ್ತಾ?

By ಅನಿತಾ ಬನಾರಿ

ಸಂಜನಾ ಬುರ್ಲಿ ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರು. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪುಟ್ಟಕ್ಕನ ಎರಡನೇ ಮಗಳು ಸ್ನೇಹಾ ಆಗಿ ಅಭಿನಯಿಸುತ್ತಿರುವ ಸಂಜನಾ ಬುರ್ಲಿ ಮನೋಜ್ಞ ನಟನೆಯ ಮೂಲಕ ಕಿರುತೆರೆ ಜಗತ್ತಿನಲ್ಲಿ ಗುರುತಿಸಿಕೊಂಡ ಬೆಡಗಿ.

ಇಂಡಸ್ಟ್ರಿಯಲ್ಲಿ ಯಾವುದೇ ಗಾಡ್‌ಫಾದರ್ ಇಲ್ಲದೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಸಂಜನಾ ಬುರ್ಲಿಗೆ ನಟನೆಯೆಂದರೇನು, ನಟನೆಯ ರೀತಿ ನೀತಿಗಳೇನು ಎಂಬುದು ತಿಳಿದಿರಲಿಲ್ಲ. ಮಾತ್ರವಲ್ಲದೇ ಇಂಡಸ್ಟ್ರಿಯಲ್ಲಿ ಕಾಂಟ್ರಾಕ್ಟನ್ನು ಹೇಗೆ ಪಡೆಯುವುದು ಎಂಬ ಕಲ್ಪನೆಯೂ ಕೂಡಾ ಅವರಿಗಿರಲಿಲ್ಲ. ನಟನಾ ಜಗತ್ತಿಗೆ ಕಾಲಿಟ್ಟ ಸಂಜನಾ ಅವರದೇ ಆದ ಸ್ಥಾನವನ್ನು ರೂಪಿಸಲು ಪ್ರಾರಂಭಿಸಿದರು.

Lack of opportunities for new faces on television Says Sanjana Burli

ನಟನಾ ಲೋಕದಲ್ಲಿ ಬಹಳ ಸೀಮಿತ ಅವಕಾಶಗಳಿವೆ ಎಂಬುದನ್ನು ಆ ಸಂದರ್ಭದಲ್ಲಿ ಅರಿತುಕೊಂಡರು ಸಂಜನಾ ಬುರ್ಲಿ. ಆ ಸಮಯದಲ್ಲಿ ಬಂದಂತಹ ಎಲ್ಲ ಅವಕಾಶವವನ್ನೂ ಆಕೆ ಪಡೆದುಕೊಳ್ಳಲು ಪ್ರಾರಂಭಿಸಿದರು. ಪ್ರತಿ ಅವಕಾಶವೂ ಕೂಡಾ ತನ್ನ ನಟನಾ ವೃತ್ತಿಜೀವನಕ್ಕೆ ಬ್ರೇಕ್ ನೀಡುತ್ತದೆ ಎಂದು ಭಾವಿಸಿದ್ದರು ಸಂಜನಾ ಬುರ್ಲಿ.

ಸಂಜನಾ ಕನ್ನಡ ಮತ್ತು ತಮಿಳಿನಲ್ಲಿ ಏಳು ಚಿತ್ರಗಳಲ್ಲಿ ನಟಿಸಿದ್ದಾರೆ ಎಂಬುದು ಹಲವರಿಗೆ ತಿಳಿದಿಲ್ಲ. ಏಳರಲ್ಲಿ ಎರಡು ಚಿತ್ರಗಳು ಮಾತ್ರ ಥಿಯೇಟರ್‌ಗೆ ಬಂದವು. ಅದರಲ್ಲೂ ಕೆಟ್ಟ ಮಾರ್ಕೆಟಿಂಗ್‌ನಿಂದಾಗಿ ಉತ್ತಮ ಪ್ರದರ್ಶನ ಕಾಣಲಿಲ್ಲ. ನಂತರ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದ ಆಕೆ 'ಲಗ್ನ ಪತ್ರಿಕೆ' ಧಾರಾವಾಹಿಯಲ್ಲಿ ನಾಯಕಿ ಮಯೂರಿ ಆಗಿ ನಟನೆ ಶುರು ಮಾಡಿದರು. ಭರವಸೆ ದೊರೆತರೂ ಕೂಡ ಶೀಘ್ರದಲ್ಲೇ ಆ ಧಾರಾವಾಹಿ ಸ್ಥಗಿತಗೊಂಡಿದ್ದರಿಂದ ಅಲ್ಲೂ ಕೂಡಾ ಆಕೆಗೆ ನಿರಾಶೆಯಾಯಿತು

Lack of opportunities for new faces on television Says Sanjana Burli

'ಲಗ್ನ ಪತ್ರಿಕೆ'ಯಲ್ಲಿ ಸಂಜನಾ ನಟನೆ ನೋಡಿದ ನಿರ್ಮಾಪಕರು 'ಪುಟ್ಟಕ್ಕನ ಮಕ್ಕಳು'ಗಾಗಿ ಆಕೆಯನ್ನು ಸಂಪರ್ಕಿಸಿದರು. ಅದೃಷ್ಟವಶಾತ್ ಪುಟ್ಟಕ್ಕನ ಮಕ್ಕಳು ಸಂಜನಾ ವೃತ್ತಿಜೀವನದಲ್ಲಿ ಅವರು ಬಯಸಿದ ಹಾದಿಗೆ ಬರಲು ನೆರವಾಯಿತು. ಆದರೆ, ಇನ್ನೂ ಕೂಡಾ ಆಕೆ ಕಷ್ಟಪಡುತ್ತಿದ್ದಾರೆ. ಅವಕಾಶಗಳ ಕೊರತೆ ಇದೆ. ಅನೇಕರಿಗೆ, ಆಕೆ ನಟಿಯಾಗಿ ಯಶಸ್ಸನ್ನು ಆನಂದಿಸುತ್ತಿರುವಂತೆ ತೋರಬಹುದು. ಆದರೆ ಇನ್ನು ಕೂಡಾ ಕಷ್ಟಪಡುತ್ತಿದ್ದಾರೆ ಎಂದು ಅನೇಕರಿಗೆ ತಿಳಿದಿಲ್ಲ.

ಧಾರಾವಾಹಿ ಕಲಾವಿದೆಯಾಗಿರುವುದರಿಂದ ಈಗಂತೂ ಆಕೆ ಹಲವಾರು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹಲವು ಸಿನಿಮಾ ಆಡಿಷನ್‌ಗಳನ್ನು ನೀಡಲು ಹೋಗುವ ಸಂಜನಾ ಲುಕ್ ಟೆಸ್ಟ್‌ನಲ್ಲಿ ಓಕೆ ಆಗುತ್ತಾರೆ. ಆದರೆ, ಧಾರಾವಾಹಿ ಕಲಾವಿದೆ ಎಂಬ ಕಾರಣದಿಂದ ನಿರಾಕರಣೆಯನ್ನು ಎದುರಿಸಬೇಕಾಗುತ್ತದೆ. ವೆಬ್ ಸೀರೀಸ್ ಅಥವಾ ಸಿನಿಮಾಗಳಿಗೆ ಅವಕಾಶಗಳು ಬರುತ್ತಿದ್ದರೂ, ಆಕೆಯ ಡೇಟ್ ಫ್ಲೆಕ್ಸಿಬಿಲಿಟಿಯಿಂದಾಗಿ ಬಂದಂತಹ ಅವುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಧಾರಾವಾಹಿ ಕಲಾವಿದರ ಲಭ್ಯತೆಗೆ ಅನುಗುಣವಾಗಿ ಅವರು ದಿನಾಂಕ ಅಥವಾ ಸಮಯವನ್ನು ಬದಲಾಯಿಸಲು ಸಿದ್ಧರಿರುವುದಿಲ್ಲ ಎನ್ನುತ್ತಾರೆ ಸಂಜನಾ ಬುರ್ಲಿ.

ಅವಕಾಶಗಳ ಕೊರತೆಯಿರುವವರು ಸ್ವಂತ ಅವಕಾಶಗಳನ್ನು ಮಾಡಿಕೊಳ್ಳಬೇಕು ಎಂಬುದು ಸಂಜನಾ ಮಾತು. ಮತ್ತೊಂದೆಡೆ, ಸ್ವಜನ ಪಕ್ಷಪಾತವೂ ಇದೆ. ಯಾವುದೇ ಕಲಾವಿದರ ಸಂಬಂಧಿಕರು ಅನಗತ್ಯ ಪ್ರಯೋಜನಗಳನ್ನು ಪಡೆಯುವುದನ್ನು ನೋಡಿದಾಗ ಕೆಲವೊಮ್ಮೆ ಅದು ಹಿಸುಕುತ್ತದೆ. ಆದರೆ, ಅವರಿಗೆ ಹಾಗೆ ಅವಕಾಶಗಳು ಸಿಗುತ್ತಲೇ ಇದ್ದರೆ, ನಮ್ಮಂತಹ ಕಲಾವಿದರು ನಮ್ಮ ದಾರಿಯನ್ನು ರೂಪಿಸುವ ಬಗೆ ಏನು ಎಂಬುದು ಸಂಜನಾ ಅಭಿಪ್ರಾಯ.

ಸಿನಿಮಾಗಳಿಗೆ ತಿರಸ್ಕಾರ ಮಾಡುವುದಕ್ಕೆ ಒಗ್ಗಿಕೊಂಡಿದ್ದಾರೆ. ಹಾಗೇ ಅದನ್ನು ಹೇಗೆ ಸ್ವೀಕರಿಸಬೇಕೆಂದನ್ನು ಈಗಾಗಲೇ ರೂಢಿಸಿಕೊಂಡಿದ್ದಾರೆ. ಇಂಡಸ್ಟ್ರಿಯಲ್ಲಿ ಹಲವು ದೊಡ್ಡ ಪ್ರಾಜೆಕ್ಟ್‌ಗಳಿಂದ ಇವರನ್ನು ಕೈ ಬಿಟ್ಟಿದ್ದರ ಬಗ್ಗೆನೂ ವರದಿಯಾಗಿದೆ. ಪ್ರತಿಯೊಂದು ಅವಕಾಶವೂ ಹೊಸ ವಿರಾಮದ ಆರಂಭವನ್ನು ಅಥವಾ ಕೆಲವೊಮ್ಮೆ ಅದರ ಅಂತ್ಯವನ್ನು ಗುರುತಿಸಬಹುದು. ಪ್ರತಿಯೊಬ್ಬ ಕಲಾವಿದನ ಪಾತ್ರವೂ ಅವರ ನಿರ್ಧಾರಗಳ ಮೇಲೆ ಅವಲಂಬಿತವಾಗಿರುತ್ತದೆ ಅನ್ನೋ ಅರಿವು ಸಂಜನಾಗಿದೆ.

More from Filmibeat

English summary
Do you know what Sanjana Burli said about the existence of nepotism,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X