Lakshana Serial: ನಕ್ಷತ್ರಾಳೇ ಆರ್‌.ಜೆ.ಸಖಿ ಎಂದು ಭೂಪತಿಗೆ ಗೊತ್ತಾಗಿ ಹೋಯ್ತು !

By ಶೃತಿ ಹರೀಶ್ ಗೌಡ

ಶ್ವೇತಾ ಮಾಡಿದ ಎಲ್ಲಾ ಪ್ಲಾನ್ ಶ್ವೇತಾಗೆ ಉಲ್ಟಾ ಹೊಡೆಯುತ್ತಿದೆ. ಏನು ಅಂದುಕೊಂಡು ಬಂದರೆ ಮತ್ತೆ ಏನೇನೋ ಆಗಿದೆ. ನಾನು ದೊಡ್ಡ ಹುದ್ದೆಯನ್ನು ಅಲಂಕರಿಸುತ್ತೇನೆ ಅಂದುಕೊಂಡ ಶ್ವೇತಾಗಾಗಿ ಭೂಪತಿ ಕೊಟ್ಟ ಶಾಕ್‌ನಿಂದ ಹೊರಗೆ ಬರಲು ಆಗುತ್ತಿಲ್ಲ. ಈ ಕಡೆ ನಕ್ಷತ್ರ ಸರ್ಪ್ರೈಸ್ ನೀಡಿದ್ದು ಖುಷಿಯಾಗಿದೆ ಎಂದು ಭೂಪತಿ ಬಳಿ ಹೇಳುತ್ತಿದ್ದಾಳೆ. ಆದರೆ ಭೂಪತಿ ಅಜ್ಜಿ ಸಚಿಯೇ ಇಲ್ಲದೆ ಪ್ರೋಗ್ರಾಮ್ ಸ್ಟಾರ್ಟ್ ಮಾಡುವುದು ಹೇಗೆ ಎಂದು ಸಂಜು ಬಳಿ ಹೇಳಿದ್ದಾನೆ.

ಈ ಕಡೆ ಆರ್.ಜೆ‌.ಸಖಿಗೆ ಹುಷಾರಾಗಿ ಅಂದುಕೊಂಡು ಬೇಸರದಲ್ಲಿ ಇದ್ದರೆ ನಕ್ಷತ್ರ ಬಹುದೊಡ್ಡ ಶಾಕ್ ನೀಡಿದ್ದಾಳೆ. ಸ್ಟುಡಿಯೋ ಒಳಗೆ ಕಾಲಿಟ್ಟ ನಕ್ಷತ್ರ "ಹೆಲೋ ನಮಸ್ಕಾರ ಎಲ್ಲರೂ‌ ಹೇಗಿದ್ದೀರಾ? ನಾನು ನಿಮ್ಮ‌ ಆರ್.ಜೆ.ಸಖಿ. ಅದೇನು ಆರ್‌ಜೆ‌ ಸಖಿ ಇವತ್ತು ಮಧ್ಯಾಹ್ನನೇ ಬಂದಿದ್ದಾಳೆ ಅಂದುಕೊಂಡ್ರಾ ಇದು ನಮ್ಮ ಎಫ್.ಎಂ.ಸ್ಟೇಷನ್‌ನ ಸ್ಪೆಷಲ್ ಪ್ರೋಗ್ರಾಂ" ಎಂದು ಮಾತನಾಡುತ್ತಾ ಇರುತ್ತಾಳೆ. ಅಲ್ಲಿಗೆ ಓಡಿ ಬಂದ ಭೂಪತಿಗೆ ಶಾಕ್ ಆಗುತ್ತದೆ.

ಪಟಪಟನೇ ಮೈಕ್ ಮುಂದೆ ಮಾತನಾಡುತ್ತಿರುವ ನಕ್ಷತ್ರಳನ್ನು ಸ್ಟುಡಿಯೋ ಹೊರಗಿನಿಂದ ನೋಡಿ ಶಾಕ್ ಆಗಿ ಬಿಟ್ಟುಕೊಂಡು ನೋಡುತ್ತಾ ನಿಂತು ಬಿಡುತ್ತಾನೆ. ನಕ್ಷತ್ರ ಭೂಪತಿ ಬಂದಿದ್ದನ್ನು ನೋಡದೆ ಬಹಳ ಎಂಜಾಯ್ ಮಾಡಿಕೊಂಡು ಪ್ರೋಗ್ರಾಂ ಮಾಡುತ್ತಿರುತ್ತಾಳೆ. ನಕ್ಷತ್ರ ಮಾತನಾಡುವ ಶೈಲಿಯನ್ನು ನೋಡಿದ ಭೂಪತಿಗೆ ಇಷ್ಟು ದಿನ ತಾನು ಅಂದುಕೊಂಡಿದ್ದು ಸುಳ್ಳು ಎಂಬುದು ಮನವರಿಕೆ ಆಗುತ್ತದೆ.

ಭೂಪತಿಗೆ ನಕ್ಷತ್ರಾಳಿಂದ ಥ್ಯಾಂಕ್ಸ್

ಭೂಪತಿಗೆ ನಕ್ಷತ್ರಾಳಿಂದ ಥ್ಯಾಂಕ್ಸ್

ಭೂಪತಿ ಸ್ಟುಡಿಯೋ ಹೊರಗೆ ನಿಂತು ನೋಡುವುದನ್ನು ನೋಡಿದ ನಕ್ಷತ್ರ ಬ್ರೇಕ್ ತಗೆದುಕೊಂಡು ಬಂದು ಭೂಪತಿ ಜೊತೆಗೆ ಮಾತನಾಡಲು ಶುರು ಮಾಡುತ್ತಾಳೆ. ನಕ್ಷತ್ರ ಸ್ಟುಡಿಯೋದಿಂದ ಹೊರಗೆ ಬಂದ ನಂತರ ಭೂಪತಿ ನಕ್ಷತ್ರಾ ಬಳಿ ನೀನೇ ಆರ್.ಜೆ.ಸಖಿ ಎಂದು ಕೇಳಿದಾಗ ನಾನು ಅಲ್ಲದೇ ಇನ್ಯಾರು‌ ಆರ್‌.ಜೆ.ಸಖಿ ಎಂದು ನಕ್ಷತ್ರ ಕೇಳುತ್ತಾಳೆ. ನಾನು ಆರ್.ಜೆ.ಸಖಿ ಎಂದು ತಿಳಿದು‌ ತಾನೇ ಮತ್ತೆ ಪ್ರೋಗ್ರಾಂ ಶುರು ಮಾಡಿಸುತ್ತಿರುವುದು ಎಂದು ಕೇಳುತ್ತಾಳೆ.ನಂತರ ನಕ್ಷತ್ರ, ಭೂಪತಿಗೆ ಥ್ಯಾಂಕ್ಸ್ ಹೇಳುತ್ತಾಳೆ ನನ್ನ ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿರುವವನು ನೀನು ಒಬ್ಬನೇ ಮಿಸ್ರ್ರೀ ಮುನಿಯಪ್ಪ.‌ನಾನು ಎಲ್ಲೋ ಕಳೆದುಹೋಗಿದ್ದೆ. ನಿನ್ನಿಂದ ಈಗ ನಾನು ಜನರ ಜೊತೆಗೆ ಬೆರೆಯುವ ಹಾಗೇ ಆಯಿತು. ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲಲ್ಲ ಎಂದು ಭೂಪತಿ ಜೊತೆಗೆ ಮಾತನಾಡುತ್ತಾಳೆ. ಭೂಪತಿ ನಕ್ಷತ್ರ ಮಾತನಾಡುವುದನ್ನೇ ನೋಡುತ್ತಾ,‌ಇಂದಿಗೆ ಕಣ್ಣಿಗೆ ಕವಿದಿದ್ದ ಕತ್ತಲಿನ ಪೊರೆ ಕಳಚಿ ಸತ್ಯದ ದರ್ಶನವಾಗಿದೆ ಎಂದು ಕೊಂಡು ಅಲ್ಲೇ ಇರುತ್ತಾನೆ.

ಲೈವ್ ಶೋ ನೋಡಿದ ಭೂಪತಿ

ಲೈವ್ ಶೋ ನೋಡಿದ ಭೂಪತಿ

ಈ ಕಡೆ ನೀನೇ ಬೆಸ್ಟ್ ಎಂದು ಹೇಳಿ ನನ್ನ ಲೈವ್ ಪ್ರೋಗ್ರಾಂ ನೋಡಬೇಕು ಎಂದು ಆಸೆ ಪಟ್ಟಿದ್ದೆ ಅಲ್ವ ಎಂದು‌ ಹೇಳಿ ಮತ್ತೆ ನಕ್ಷತ್ರ ಸ್ಟುಡಿಯೋ ಒಳಗೆ ಹೋಗುತ್ತಾಳೆ. ಭೂಪತಿಗೆ ನಕ್ಷತ್ರ ರೇಗಿಸಿ ಲೈವ್ ಪ್ರೋಗ್ರಾಂ ನೋಡು ನಾನು ಬರುತ್ತೀನಿ. ನಿನ್ನ ಜೊತೆಗೆ ಮಾತನಾಡಬೇಕು ಎಂದು ಹೇಳುತ್ತಾಳೆ. ಈ ಕಡೆ ಭೂಪತಿ ಆಡುತ್ತಿರುವ ಮಾತು ಕೇಳಿ ಆಶ್ಚರ್ಯದಿಂದ ನೋಡುತ್ತಾ ಶೋ ಸ್ಟಾರ್ಟ್ ಮಾಡುತ್ತಾಳೆ.

ಭೂಪತಿಗೆ ಬೇಸರ

ಭೂಪತಿಗೆ ಬೇಸರ

ಈ ಕಡೆ ನಾನು ಯಾರನ್ನೋ‌ ಎನೋ ಅಂದುಕೊಂಡು ತಪ್ಪು ಮಾಡಿದೆ ಆರ್‌ಜೆ‌ ಸಖಿ. ನೀನಾ, ನಕ್ಷತ್ರ ಎಂದು ಮನಸಿನಲ್ಲಿ ಬೇಸರ ಮಾಡಿಕೊಳ್ಳುತ್ತಿರುತ್ತಾನೆ. ನಾನು ಈ ಕೆಲಸವನ್ನು ಮೊದಲೇ ಮಾಡಿದ್ರೆ ಸತ್ಯದ ದರ್ಶನವಾದರೂ ಆಗಿರೋದು ಎಂದು ಖುಷಿಯಿಂದ ನಕ್ಷತ್ರ ಚಟಪಟ ಅಂತಾ ಮಾತಾನಾಡುವುದ್ದನ್ನು ನೋಡಿ ಖುಷಿಪಡುತ್ತಾನೆ.

ಶ್ವೇತಾಗೆ ಧರ್ಮ ಸಂಕಟ

ಶ್ವೇತಾಗೆ ಧರ್ಮ ಸಂಕಟ

ಎನೋ ಮಾಡಲು ಹೋಗಿ‌ ಯಡವಟ್ಟು ಮಾಡಿಕೊಂಡ ಶ್ವೇತಾಗೆ ಹಾಗೂ ಮಿಲ್ಲಿಗೆ ಧರ್ಮಸಂಕಟ ಶುರುವಾಗಿದೆ. ನಾನೇ ಆರ್‌.ಜೆ.ಸಖಿ ಎಂದು ಸುಳ್ಳು ಹೇಳಿದ್ದ ಶ್ವೇತಾ ಮುಖವಾಡ ಭೂಪತಿ ಮುಂದೆ ಬಯಲಾಗಿದೆ. ಈಗ‌ ಶ್ವೇತಾ ಮತ್ತೇನು‌ ಹೊಸ ನಾಟಕ ಮಾಡುತ್ತಾಳೆ ಎಂಬುದೇ ಕುತೂಹಲಕಾರಿಯಾಗಿದೆ.

English summary
Lakshmana Kannada Serial Written Update on January 27th Episode. Here is the details about RJ Sakhi secret reveals.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X