Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಜೋಡಿ: ಶಶಿಕಲಾ ಜೊಲ್ಲೆ ಮಾಲೀಕತ್ವದ ಬ್ಯಾಂಕ್ಗೆ ಕನ್ನ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Lakshana Serial : ಶ್ವೇತಾ ಎಷ್ಟೇ ಬೇಡಿಕೊಂಡರೂ ಕರಗದ ಶಾಕುಂತಲದೇವಿ ಮನಸು
ಮನೆಗೆ ನಕ್ಷತ್ರ ಸೇರನ್ನ ಒದ್ದು ಒಳಗೆ ಬರುತ್ತಾಳೆ. ಇದೇ ವೇಳೆ ಚಂದ್ರಶೇಖರ್ ಈ ಮನೆಯಿಂದ ಅವಳ ಬಾಳು ಬೆಳಗುತ್ತದೆ ಎಂದು ಹೇಳುತ್ತಾರೆ. ನನ್ನ ಮಗಳ ಕಷ್ಟ ಇಂದಿಗೆ ದೂರವಾಯಿತು ಎಂದು ಹೇಳಿ ಎಲ್ಲರೂ ಒಳಗೆ ಬರುತ್ತಾರೆ. ಇತ್ತ ನಕ್ಷತ್ರ, ಶಾಕುಂತಲ ದೇವಿಯ ಕಾಲಿಗೆ ಬೀಳಲು ಹೋದರೆ ದೂರ ಸರಿದು ನಿಲ್ಲುತ್ತಾರೆ. ನಂತರ ಚಂದ್ರಶೇಖರ ಹಾಗೂ ಆರತಿಯ ಆಶೀರ್ವಾದವನ್ನು ನಕ್ಷತ್ರ ಪಡೆಯುತ್ತಾಳೆ.
ಇದೇ ವೇಳೆ ಆರತಿ ಮಗಳಿಗೆ ಶುಭ ಹಾರೈಸುತ್ತಾರೆ ಇಂದು ನೀನು ಶಾಕುಂತಲಾ ದೇವಿಯ ಮನೆಯ ಸೊಸೆಯಾಗಿದ್ದೀಯ ನಾಳೆ ಭೂಪತಿಯ ಹೆಂಡತಿಯಾಗಿ ಅವನ ಜೊತೆ ಸಂಸಾರ ಮಾಡುತ್ತೀಯ ಎಂದು ತಿಳಿಸುತ್ತಾರೆ. ಆಗ ನಕ್ಷತ್ರಾಗೆ ಎಲ್ಲಿಲ್ಲದ ಸಂತೋಷ ಆಗುತ್ತದೆ. ನೂರು ಕಾಲ ಇಬ್ಬರು ಖುಷಿಯಾಗಿರಿ ಎಂದು ನಕ್ಷತ್ರ ಗೆ ಆರತಿ ಹಾರೈಸುತ್ತಾರೆ. ನಕ್ಷತ್ರ ಮಯೂರಿಯನ್ನು ತಬ್ಬಿಕೊಂಡು ಸಂತಸವನ್ನ ವ್ಯಕ್ತಪಡಿಸುತ್ತಾಳೆ.
Ramachari
Serial:
ದೀಪಾಗೆ
ವಾರ್ನಿಂಗ್
ಕೊಟ್ಟ
ರಾಮಾಚಾರಿ
ಈ ಕಡೆ ಮನೆಯಲ್ಲಿದ್ದ ಗೌರವ ಹೋಯಿತು ಎಂದು ಕೋಪ ಮಾಡಿಕೊಂಡ ಶ್ವೇತಾ ರೂಮಿನಲ್ಲಿದ್ದ ವಸ್ತುಗಳನ್ನೆಲ್ಲ ಹೊಡೆದು ಹಾಕುತ್ತಿರುತ್ತಾಳೆ. ಹೋಯಿತು ಎಲ್ಲಾ ಹೋಯಿತು ಈ ಕಡೆ ಅತ್ತೆ ನಂಬಿಕೆ ಕಳೆದುಕೊಂಡೆ. ಆ ಕಡೆ ಭೂಪತಿಯನ್ನು ಕಟ್ಟಿಕೊಳ್ಳುವ ಕನಸು ಸಹ ನುಚ್ಚು ನೂರಾಯ್ತು ಎಂದು ಅಳುತ್ತಿರುತ್ತಾಳೆ. ನಕ್ಷತ್ರಾಳನ್ನ ಮನೆಗೆ ತುಂಬಿಸಿಕೊಂಡು ನನ್ನ ಕಪಾಳಕ್ಕೆ ಹೊಡೆದರು ಎಂದು ಜೋರಾಗಿ ಕಿರುಚಿಕೊಳ್ಳುತ್ತಾಳೆ.

ಶ್ವೇತಾಗೆ ಕೆಲ ಟಿಪ್ಸ್ ನೀಡಿದ ಮಿಲ್ಲಿ
ಈ ಕಡೆ ಶ್ವೇತಾ ರೂಮಿಗೆ ಬಂದ ಮೇಲೆ ಯಾಕೆ ಹುಚ್ಚುಚ್ಚಾಗಿ ಆಡುತ್ತಿದ್ದೀಯ ಎಂದು ಕೇಳಿದ್ದಾಳೆ. ನಿನ್ನಿಂದಲೇ ಆಗಿದ್ದು ಎಂದು ಮಿಲ್ಲಿಯ ಮೇಲೆ ಶ್ವೇತಾ ರೇಗಿದ್ದಾಳೆ. ಅದಕ್ಕೆ ಮಿಲ್ಲಿ ಆಗಿರುವುದನ್ನು ಬಿಟ್ಟು ಮೊದಲು ಆಗಬೇಕಾದ ಕೆಲಸದ ಕಡೆ ಗಮನ ಕೊಡು ನೀನು ಈಗ ಶಾಕುಂತಲ ದೇವಿಯವರ ಮನಸ್ಸನ್ನು ಗೆಲ್ಲುವುದು ಮುಖ್ಯವಾಗಿದೆ ಎಂದು ಹೇಳುತ್ತಾಳೆ. ಮನೆಯಲ್ಲಿ ಅವರೊಬ್ಬರೇ ನಿನ್ನನ್ನ ನೋಡಿಕೊಳ್ಳಲು ಸಾಧ್ಯ ನಿನ್ನ ಸ್ಥಾನ ಭದ್ರ ಮಾಡಿಕೋ ಎಂದು ಶ್ವೇತಾಗೆ ಮಿಲ್ಲಿ ತಿಳಿಸುತ್ತಾಳೆ. ಇದು ಸರಿಯಾಗಿದೆ ಎಂದು ಯೋಚನೆ ಮಾಡಿದ ಶ್ವೇತ ಶಾಕುಂತಲ ದೇವಿಯವರ ಬಳಿ ಹೋಗಿದ್ದಾಳೆ.

ಕಣ್ಣೀರು ಹಾಕಿ ಶ್ವೇತಾ ನಾಟಕ
ಈ ಕಡೆ ಶಾಕುಂತಲಾ ದೇವಿಯವರ ಬಳಿ ಹೋದ ಶ್ವೇತಾ ಪರಿಪರಿಯಾಗಿ ಕ್ಷಮೆಯನ್ನು ಕೇಳಿದ್ದಾಳೆ. ನಾನು ಭೂಪತಿಯನ್ನು ಮದುವೆಯಾಗಬೇಕು ಆದರೆ ಅದರಲ್ಲೂ ಮೋಸವಾಯಿತು. ಕೊನೆಗೆ ನನ್ನನ್ನು ಸಾಕಿದ ಅಪ್ಪ ಅಮ್ಮ ಮನೆಯಿಂದ ಹೊರಗೆ ಹಾಕಿದರು. ನನ್ನ ಸ್ವಂತ ಅಪ್ಪ ಅಮ್ಮ ಸಹ ನನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದು ಕಣ್ಣೀರು ಹಾಕಿ ನಾಟಕ ಮಾಡಿದ್ದಾಳೆ. ಶ್ವೇತಾ ಎಷ್ಟೇ ಹೇಳಿದರೂ ಸಹ ಶಾಕುಂತಲಾ ದೇವಿ ಇಲ್ಲಿಯವರೆಗೂ ನಿನ್ನನ್ನು ಸೊಸೆ ಎಂದು ಅಂದುಕೊಂಡಿದ್ದೆ ಇನ್ಮುಂದೆ ನೀನು ನನ್ನ ಮನೆಯ ಗೆಸ್ಟ್ ಅಷ್ಟೇ ಎಂದು ಹೇಳಿದ್ದಾರೆ.

ಶಕುಂತಲಾ ದೇವಿ ಮಾತಿಗೆ ಶ್ವೇತಾ ಶಾಕ್
ಶಕುಂತಲಾ ದೇವಿಯ ಮಾತನ್ನು ಕೇಳಿದ ಶ್ವೇತಾಗೆ ಶಾಕ್ ಆಗುತ್ತದೆ. ನಾನು ನಕ್ಷತ್ರಳನ್ನು ಮನೆಯಿಂದ ಹೊರಗೆ ಹಾಕಿ ನನ್ನ ಮಗನನ್ನು ಒಪ್ಪಿಸಿ ನಿನ್ನನ್ನು ಮದುವೆ ಮಾಡಿಕೊಳ್ಳಬೇಕು ಎಂದಿದ್ದೆ. ಆದರೆ ನೀನು ನನ್ನ ನಂಬಿಕೆಗೆ ದ್ರೋಹ ಬಗೆದೆ, ಎಂದು ಹೇಳುತ್ತಾರೆ. ನಿನಗೆ ಕಂಪನಿಯ ಜವಾಬ್ದಾರಿ ನೀಡಿದ್ದೇನೆ. ನೀನು ಈ ಮನೆಯ ಗೆಸ್ಟ್ ಅಷ್ಟೇ ನನ್ನ ಸೊಸೆ ನಕ್ಷತ್ರ ಎಂದು ಒಪ್ಪಿಕೊಂಡು ಆಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶಾಕುಂತಲದೇವಿ, ಶ್ವೇತಾ ಬಳಿ ಹೇಳಿದ್ದಾರೆ. ಇದನ್ನೆಲ್ಲಾ ಕೇಳಿಸಿಕೊಂಡ ನಕ್ಷತ್ರಾಗೆ ಖುಷಿಯಾಗಿದೆ.

ಬ್ಲ್ಯಾಕ್‌ಮೇಲ್ ಮಾಡ್ಬೇಡಿ ಎಂದ ಭೂಪತಿ
ಇತ್ತ ಚಂದ್ರಶೇಖರ್ ಗೆ ಕರೆ ಮಾಡಿದ ಭೂಪತಿ ಇನ್ಮುಂದೆ ನೀವು ಮನೆಗೆ ಬರೋದು ಅದನ್ನು ಗಲಾಟೆ ಮಾಡುವುದು ಇದನ್ನೆಲ್ಲ ನಿಲ್ಲಿಸಿ ಎಂದು ಭೂಪತಿ ಹೇಳಿದ್ದಾನೆ. ನಿಮ್ಮ ಮಗಳಿಗೋಸ್ಕರ ಗಲಾಟೆ ಮಾಡುತ್ತೀರಾ ಇದರಿಂದಾಗಿ ಇಲ್ಲಿರುವ ಎಲ್ಲರ ಮನಸ್ಸು ಹಾಳಾಗುತ್ತದೆ. ಈಗ ನಿಮ್ಮ ಮಗಳು ನಮ್ಮ ಅಮ್ಮನ ಸೊಸೆ ಇನ್ಮುಂದೆ ನೀವು ಈ ರೀತಿ ಮಾಡುವುದು ಸರಿಯಲ್ಲ ಎಂದು ಭೂಪತಿ ಹೇಳಿದ್ದಾನೆ. ಇನ್ಮುಂದೆ ಈ ಬ್ಲಾಕ್ ಮೇಲ್ ಮಾಡುವುದನ್ನೆಲ್ಲ ನಿಲ್ಲಿಸಿ ಈಗ ನಿಮ್ಮಿಂದ ಆಗಿರುವುದೇ ಸಾಕು ಎಂದು ಭೂಪತಿ ಹೇಳಿದ್ದಾನೆ. ಇದಕ್ಕೆ ಪ್ರತಿಯಾಗಿ ಚಂದ್ರಶೇಖರ್ ನನ್ನಿಂದ ತಪ್ಪಾಗಿದೆ ಇನ್ಮುಂದೆ ಈ ರೀತಿಯ ತಪ್ಪು ಆಗದಂತೆ ತಿದ್ದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಈಗ ಶ್ವೇತಾ ಭೂಪತಿಯನ್ನು ಮದುವೆಯಾಗಲು ಯಾವ ರೀತಿಯ ಪ್ಲಾನ್ ಮಾಡಿ ನಕ್ಷತ್ರಗಳನ್ನು ಮನೆಯಿಂದ ಹೊರಗೆ ಹಾಕುತ್ತಾಳೆ ಎಂಬುವುದೇ ಕುತೂಹಲಕಾರಿಯಾಗಿದೆ.