"ಜಯ ಜಯ ರಾಮ" ಎಂದು ಮಿಂಚಿದ 'ಲಕ್ಷಣ' ಧಾರಾವಾಹಿಯ ನಟಿ; ಭಕ್ತಿಗೀತೆಯಲ್ಲಿ ವಿಜಯಲಕ್ಷ್ಮಿ

By ಅನಿತಾ ಬನಾರಿ

ನಟಿ ವಿಜಯಲಕ್ಷ್ಮಿ ಗೊತ್ತಾ ಎಂದು ಕೇಳಿದರೆ ಒಂದು ಕ್ಷಣ ಯಾರು ಎಂಬ ಕುತೂಹಲ ಕಿರುತೆರೆ ವೀಕ್ಷಕರಲ್ಲಿ ಮಾಡಿದರೆ ಆಶ್ಚರ್ಯವಿಲ್ಲ! ಅದೇ 'ಲಕ್ಷಣ' ಧಾರಾವಾಹಿಯ ನಕ್ಷತ್ರ ನಿಮಗೆ ಗೊತ್ತಿದೆಯಾ ಎಂದು ಕೇಳಿ ನೋಡಿ. ಹೋ! ಅವರಾ? ಯಾರಿಗೆ ತಾನೇ ಗೊತ್ತಿಲ್ಲ ಎಂಬ ಉತ್ತರ ವೀಕ್ಷಕರಿಂದ ನಿಮಗೆ ಸಿಕ್ಕೇ ಸಿಕ್ಕುತ್ತದೆ. 'ಲಕ್ಷಣ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ವಿಜಯಲಕ್ಷ್ಮಿ ಇದೀಗ 'ಮೈನಾ' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ಇದರ ಜೊತೆಗೆ ವಿಜಯಲಕ್ಷ್ಮಿ ಅವರು ಭಕ್ತಿಗೀತೆಯೊಂದರಲ್ಲಿ ಅಭಿನಯಿಸಿದ್ದಾರೆ. ಆ ಮೂಲಕ ಮತ್ತೆ ತಮ್ಮ ಅಭಿನಯವನ್ನು ಸಾಬೀತು ಮಾಡಿದ್ದಾರೆ. ಸಂಗೀತಗಾರ್ತಿ ಆಶಾ ಭಟ್ ಅವರು ಹಾಡಿರುವ ಜಯ ಜಯ ರಾಮ ಎಂಬ ರಾಮನ ಕುರಿತಾದ ಭಕ್ತಿಗೀತೆಯಲ್ಲಿ ಅಭಿನಯಿಸಿರುವ ನಟಿ ವಿಜಯಲಕ್ಷ್ಮಿ ಅವರು ತಮ್ಮ ಅದ್ಭುತ ಅಭಿನಯದ ಮೂಲಕ ಹಾಡಿಗೆ ಒಂದು ಹೊಸ ಕಳೆ ತಂದಿದ್ದಾರೆ. ಈ ಮೂಲಕ ವೀಕ್ಷಕರಲ್ಲಿಯೂ ಭಕ್ತಿ ಭಾವನೆ ಮೂಡುವಂತೆ ಮಾಡಿದ್ದಾರೆ.

Lakshana serial actress Vijayalakshmi acted in devotional song

ಗೌರಂಗ ಗ್ಲೋಬಲ್ ಫೌಂಡೇಶನ್ ಅವರ ಬ್ಯಾನರ್‌ನಲ್ಲಿ ಮೂಡಿಬಂದಿರುವ ಈ ವಿಡಿಯೋ ಆ ಫೌಂಡೇಶನ್‌ನ ದೈವಭಕ್ತಿಯನ್ನು ತೋರಿಸುತ್ತದೆ. ನಿರ್ದೇಶಕ ಅನುತ್ತಮ ಕೃಷ್ಣ ದಾಸ (ಅನಿಲ್) ಅವರು ಈ ವಿಡಿಯೋವನ್ನು ನಿರ್ದೇಶನ ಮಾಡಿದ್ದು ಅರುಣಾಚಲೇಶ್ವರ ದೇವಸ್ಥಾನದ ಆವರಣದಲ್ಲಿ ಚಿತ್ರಕರಿಸಲಾಗಿದೆ.

ಜಯ ಜಯ ರಾಮ ಎಂಬ ಈ ಭಕ್ತಿಗೀತೆ ನಟಿ ವಿಜಯಲಕ್ಷ್ಮಿ, ಸಂಗೀತಗಾರ್ತಿ ಆಶಾ ಭಟ್, ಸಂಗೀತ ನಿರ್ದೇಶಕ ಶ್ರೇಯಸ್ ರಾವ್, ಹಾಗು ನಿರ್ದೇಶಕ ಅನಿಲ್ ಅವರ ಕೂಡು ಪರಿಶ್ರಮದಿಂದ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನು ನಟನೆಯ ವಿಚಾರ ಬಂದರೆ ಮೊದಲ ಧಾರಾವಾಹಿ 'ಲಕ್ಷಣ'ದಲ್ಲಿ ನಾಯಕಿ ನಕ್ಷತ್ರ ಆಗಿ ನಟಿಸಿದ್ದರು ವಿಜಯಲಕ್ಷ್ಮಿ. ಇದೀಗ 'ಮೈನಾ' ಧಾರಾವಾಹಿಯಲ್ಲಿಯೂ ನಾಯಕಿಯಾಗಿ ನಟಿಸುತ್ತಿರುವ ಈಕೆ ಸ್ನಾತಕೋತ್ತರ ಪದವೀಧರೆ.

Lakshana serial actress Vijayalakshmi acted in devotional song

ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಈಕೆಗೆ ನಟಿಯಾಗುವ ಕನಸಿತ್ತು. ಬಣ್ಣದ ಲೋಕದಲ್ಲಿ ಮಿಂಚುವ ಬಯಕೆಯಿತ್ತು. ಹಾಗಾಗಿ ಬಂದಂತಹ ಎಲ್ಲಾ ಅವಕಾಶಗಳನ್ನು ಆಕೆ ಉಪಯೋಗಿಸುತ್ತಿದ್ದರು. ಆಡಿಶನ್‌ಗಳಲ್ಲಿ ಭಾಗವಹಿಸಲಾರಂಭಿಸಿದರು. ಸತತ ಐದು ವರ್ಷಗಳ ಕಾಲ ಆಡಿಶನ್‌ನಲ್ಲಿ ಭಾಗವಹಿಸುತ್ತಿದ್ದ ವಿಜಯಲಕ್ಷ್ಮಿ ಅವರಿಗೆ ತಾನು ಆಯ್ಕೆಯಾಗದಿದ್ದಾಗ ಸಹಜವಾಗಿ ಬೇಸರ ಆಗಿತ್ತು. ಮುಂದೆ ಅಧ್ಯಾಪನ ವೃತ್ತಿಯತ್ತ ಹೆಜ್ಜೆ ಇಡುವ ನಿರ್ಧಾರ ತೆಗೆದುಕೊಂಡ ಆಕೆಗೆ ಅದು ಮನಸ್ಸಿರಲಿಲ್ಲ.

ಆ ಸಮಯದಲ್ಲಿ 'ಲಕ್ಷಣ' ಧಾರಾವಾಹಿಯಲ್ಲಿ ನಟಿಸುವ ಸುವರ್ಣಾವಕಾಶ ದೊರಕಿತು. ಜೊತೆಗೆ ಮೊದಲ ಬಾರಿ ನಕ್ಷತ್ರಳಾಗಿ ತೆರೆ ಮೇಲೆ ಕಾಣಿಸಿಕೊಂಡಾಗ ಆಕೆಗೆ ಕನಸು ನನಸಾದ ಖುಷಿ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯ ಪಾತ್ರ, ಜೊತೆಗೆ ಕಿರುತೆರೆ ವೀಕ್ಷಕರು ಆ ಪಾತ್ರವನ್ನು ಮೆಚ್ಚಿಕೊಂಡಾಗ ವಿಜಯಲಕ್ಷ್ಮಿ ಅವರಿಗೆ ಸಂತೋಷವಾಯಿತು. ಇದೀಗ ಮೈನಾ ಆಗಿ ನಟಿಸುತ್ತಿರುವ ಈಕೆ ಹಳ್ಳಿ ಹುಡುಗಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

More from Filmibeat

English summary
Vijayalakshmi, who has charmed on television through acting, has now become a hit by acting in a devotional song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X