Vijaya Lakshmi: ಮಾಡರ್ನ್ ಡ್ರೆಸ್ ತೊಟ್ಟ 'ಲಕ್ಷಣ'ದ ವಿಜಯ ಲಕ್ಷ್ಮೀ ನೋಟಕ್ಕೆ ಫ್ಯಾನ್ಸ್ ಫಿದಾ!
ಲಕ್ಷಣ ಧಾರಾವಾಹಿ ಮೂಲಕ ಖ್ಯಾತಿ ಪಡೆದ ನಟಿ ವಿಜಯ ಲಕ್ಷ್ಮೀ. ಹೌದು ಈ ಧಾರಾವಾಹಿಯಲ್ಲಿ ಅದ್ಭುತವಾಗಿ ನಟನೆ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದರು. ಇದೀಗ ನಟಿ ವಿಜಯ ಲಕ್ಷ್ಮೀ ಮಾಡರ್ನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಇವರನ್ನು ನೋಡಿದ ಜನರಿಗೆ ಬಹಳ ಖುಷಿಯಾಗಿದೆ.
ನಟಿ ವಿಜಯ ಲಕ್ಷ್ಮೀ ನೋಟಕ್ಕೆ ಅನೇಕ ಜನ ಫಿದಾ ಆಗಿದ್ದಾರೆ. ನಟಿ ವಿಜಯ ಲಕ್ಷ್ಮೀ ಇದೀಗ ಜಾಲಿ ಮೂಡ್‌ನಲ್ಲಿ ಇದ್ದಾರೆ. ಹೌದು ಇವರು ಬೆಂಗಳೂರಿನ ಚರ್ಚ್ ಸ್ಟ್ರೀಟ್‌ಗೆ ಬಂದಿದ್ದ ಅವರು ಶಾಪಿಂಗ್ ಜೊತೆಗೆ ಮಾಡರ್ನ್ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.. ಇನ್ನೂ ಕೆಲವರು ಇವರ ಫೋಟೋ ನೋಡಿ ಶಾಕ್, ಆದರೆ ಹಲವಾರು ಜನ ಖುಷಿಪಟ್ಟಿದ್ದಾರೆ.

ಚರ್ಚ್ ಸ್ಟ್ರೀಟ್‌ಗೆ ಬಂದಿದ್ದ ಅವರು ಕ್ಲಿಕ್, ಫೋಟೋ ಬಾಂಬ್, ಸೆಲ್ಫ್ ದಿನ ಮುಗಿಯಿತ್ತು ಎಂದು ಬರೆದುಕೊಂಡಿದ್ದಾರೆ. ಇನ್ನೂ ವಿಜಯ ಲಕ್ಷ್ಮೀ ಫೋಟೋ ನೋಡಿದ ಅನೇಕ ಜನ ಫಿದಾ ಆಗಿರುವುದಂತು ಖಂಡಿತ..
ಬಿಳಿ ಬಣ್ಣದ ಶರ್ಟ್ ತೊಟ್ಟು ಮಿಂಚಿದ ನಟಿ
ವೈಟ್ ಬಣ್ಣದ ಶರ್ಟ್‌ಗೆ ಕ್ರೀಮ್ ಬಣ್ಣದ ಸ್ವೆಟರ್ ಧರಿಸಿದ್ದಾರೆ. ಕಪ್ಪು ಬಣ್ಣದ ಪ್ಯಾಂಟ್‌ಗೆ ಕಪ್ಪು ಬಣ್ಣದ ಕೂಲಿಂಗ್ ಗ್ಲಾಸ್ ಧರಿಸಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಲಕ್ಷಣ ಧಾರವಾಹಿ ಇಷ್ಟು ಬೇಗ ಮುಗಿಯುತ್ತದೆ ಎಂದು ವಿಜಯ ಲಕ್ಷ್ಮೀ ಅಂದುಕೊಂಡು ಇರಲಿಲ್ಲ. ಈ ಧಾರಾವಾಹಿಯಲ್ಲಿ ಬಹಳ ಉತ್ತಮವಾಗಿ ನಟಿಸಲು ಹಾಗೂ ಆಕೆಯಲ್ಲಿ ಇರುವಂಥ ಪ್ರತಿಭೆಯನ್ನು ಹೊರಹಾಕಲು ಸಿಕ್ಕಾ ಬಹುದೊಡ್ಡ ಮೆಟ್ಟಿಲು ಅಂದರೆ ತಪ್ಪಾಗದು. ಅಷ್ಟರ ಮಟ್ಟಿಗೆ ಆ ನಟಿ ನಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ನಟಿಯ ಮಾಡರ್ನ್ ಲುಕ್‌ಗೆ ಹಲವಾರು ಬೇಸರ
ಇನ್ನೂ ವಿಜಯ ಲಕ್ಷ್ಮೀ ಫೋಟೋ ನೋಡಿದ ಅನೇಕರು ಬೇಸರ ಮಾಡಿಕೊಂಡಿದ್ದಾರೆ ಸೀರೆಯಲ್ಲಿ ಫೋಟೋಗಳನ್ನು ನೋಡುತ್ತಿದ್ದ ನಟಿಯನ್ನು ಒಮ್ಮಿಂದೊಮ್ಮೆಲೆ ಮಾಡರ್ನ್ ಡ್ರೆಸ್‌ನಲ್ಲಿ ನೋಡಿದರೆ ಸಿಕ್ಕಾಪಟ್ಟೆ ಬೇಸರ ಆಗುತ್ತದೆ. ಇನ್ನೂ ಹಲವಾರು ನೆಗೆಟಿವ್ ಕಾಮೆಂಟ್ ಮಾಡಿದರೆ ಅವರ ಅಭಿಮಾನಿಗಳು ವಿಜಯ ಲಕ್ಷ್ಮೀ ತೊಟ್ಟ ಡ್ರೆಸ್ ಬಗ್ಗೆ ಮಾತನಾಡಿದ್ದಾರೆ.

ನೆಟ್ಟಿಗರ ಕಾಮೆಂಟ್‌ಗೆ ಉತ್ತರಿಸದ ವಿಜಯ ಲಕ್ಷ್ಮೀ
ಇದೇನು ವಿಜಯ ಲಕ್ಷ್ಮೀ ಅವರೇ ಇದು ಶರ್ಟಾ...? ಸ್ವೆಟ್ರಾ? ಹೋಟೆಲ್ ವೇಟರ್ ತರ ಕಾಣಿಸುತ್ತಿರುವೆ ಎಂದೆಲ್ಲ ಜನ ಕಾಮರಂಟ್ ಮಾಡಿದ್ದಾರೆ.. ಆದರೆ ಇದ್ಯಾವುದಕ್ಕೂ ವಿಜಯ ಲಕ್ಷ್ಮೀ ತಲೆ ಕೆಡಿಸಿಕೊಂಡಿಲ್ಲ.ಇನ್ನೂ ಬೇರೆ ಧಾರಾವಾಹಿ ನಟನೆಯಲ್ಲಿ ತೊಡಗಿಸಿಕೊಂಡ ಬಗ್ಗೆ ವಿಜಯ ಲಕ್ಷ್ಮೀ ಯಾವುದೇ ಮಾತು ಆಡಿಲ್ಲ. ವಿಜಯ ಲಕ್ಷ್ಮೀ ಅಭಿಮಾನಿಗಳು ಮಾತ್ರ ಇನ್ನೊಂದು ಧಾರಾವಾಹಿಯಲ್ಲಿ ಬೇಗನೆ ಕಾಣಿಸಿಕೊಳ್ಳಲಿದ್ದಾರೆ ಎಂಬ ನಂಬಿಕೆಯಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಾಗದು.


Click it and Unblock the Notifications











