Sukrutha Nag: 'ಲಕ್ಷಣ' ಧಾರಾವಾಹಿ ದಿ ಎಂಡ್.. ನಟಿ ಸುಕೃತನಾಗ್ ಶೇರ್ ಮಾಡಿದ ವಿಡಿಯೋದಲ್ಲಿ ಏನಿದೆ?

By ಅನಿತಾ ಬನಾರಿ

ಬಿಗ್ ಬಾಸ್ ಸೀಸನ್ 10 ಆರಂಭವಾಗುತ್ತಿರುವುದೇ ಸದ್ಯದ ಬಿಗ್ ನ್ಯೂಸ್ ಆಗಿರುವ ಸಂದರ್ಭದಲ್ಲಿ ಇದೀಗ 'ಲಕ್ಷಣ' ಧಾರಾವಾಹಿ ಕೊನೆಗೂಳ್ಳುತ್ತಿದೆ. ಹೌದು, ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರವಾಹಿ ಆಗಿದ್ದ 'ಲಕ್ಷಣ' ಧಾರಾವಾಹಿ ಇದೀಗ ಕೊನೆಗೂಳ್ಳುತ್ತಿದ್ದು, ಪ್ರೇಕ್ಷಕರು ಅಭಿಮಾನಿಗಳು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಅಂದ ಹಾಗೆ 'ಲಕ್ಷಣ' ಧಾರಾವಾಹಿಯಲ್ಲಿ ಖಳನಾಯಕಿಯ ಪಾತ್ರ ಮಾಡಿ ವೀಕ್ಷಕರನ್ನು ರಂಜಿಸಿ, ಸೈ ಎನಿಸಿಕೊಂಡಿರುವ ನಟಿ ಸುಕೃತಾ ನಾಗ್ ಬಿಗ್ ಬಾಸ್ ಸ್ಪರ್ಧೆಯಾಗಿ ಬಿಗ್ ಹೌಸ್‌ಗೆ ಕಾಲಿಡಲಿದ್ದಾರೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ.

sukrutha-nag-lakshna-kannada-serial

ಒಟ್ಟಿನಲ್ಲಿ ಇದೀಗ ಧಾರಾವಾಹಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ನಟಿ ಸುಕೃತಾ ನಾಗ್ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಅದು ಈಗ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನಟಿ ಸುಕೃತಾ ನಾಗ್ 'ಲಕ್ಷಣ ಒಂದು ಸುಂದರ ಜರ್ನಿ' ಎಂದು ಬರೆದುಕೊಂಡು ಶೇರ್ ಮಾಡಿರುವ ವಿಡಿಯೋ ಇದೀಗ ಫ್ಯಾನ್‌ಗಳಿಗೆ ಖುಷಿಯಾಗಿದೆ. "ಲಕ್ಷದಲ್ಲಿ ಒಬ್ಬಳು ಲಕ್ಷಣ" ಎಂದು ಬಹಳಷ್ಟು ಜನ ಕಾಮೆಂಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಜಗನ್ ಸಿ, ಸುಕೃತಾ ನಾಗ್ ಹಾಗೂ ವಿಜಯಲಕ್ಷ್ಮಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಈ ಧಾರಾವಾಹಿಯಲ್ಲಿ ಹಲವಾರು ನಟರು ನಟಿಸಿದ್ದಾರೆ. 2021ರ ಆಗಸ್ಟ್‌ನಲ್ಲಿ ಆರಂಭವಾದ ಈ ಧಾರಾವಾಹಿ ಒಂದೊಳ್ಳೆಯ ಕಥಾ ಹಂದರವನ್ನು ಹೊಂದಿದ್ದು, ಇದೀಗ ಮುಕ್ತಾಯಗೊಳ್ಳುತ್ತಿದೆ.

ಅಂದ ಹಾಗೆ ಈ ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರವನ್ನು ಮಾಡಿರುವ ಸುಕೃತಾ ನಾಗ್ ಇದಕ್ಕೂ ಮೊದಲು ಕನ್ನಡದ ಖ್ಯಾತ ಧಾರಾವಾಹಿ ಆಗಿದ್ದ 'ಅಗ್ನಿಸಾಕ್ಷಿ'ಯಲ್ಲಿ ನಾಯಕ ಸಿದ್ದಾರ್ಥ್‌ನ ತಂಗಿ ಅಂಜಲಿಯಾಗಿ ಅಭಿನಯಿಸಿದ್ದರು. ಇದೀಗ ಮೊದಲ ಬಾರಿಗೆ ಖಳನಾಯಕಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಸುಕೃತಾ ನಾಗ್ ನಟನಾ ಜಗತ್ತಿಗೆ ಕಾಲಿಟ್ಟಿದ್ದು ಬಾಲನಟಿಯಾಗಿ.

sukrutha-nag-lakshna-kannada-serial

'ಕಾದಂಬರಿ' ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಕಿರುತೆರೆಯತ್ತ ಮುಖ ಮಾಡಿದ ಈಕೆ, ಮುಂದೆ 'ಶಿವಲೀಲಾಮೃತ', 'ಪುರುಷೋತ್ತಮ', 'ಸರಸ್ವತಿ', 'ಮಹಾಭಾರತ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು 'ಪಾರ್ಟ್ನರ್' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿರುವ ಸುಕೃತಾಗೆ ಒಂದೇ ರೀತಿಯ ಪಾತ್ರಗಳಲ್ಲಿ ನಟಿಸುವಾಸೆಯಂತೆ.

ಯಾವುದೇ ಒಂದು ರೀತಿಯ ಪಾತ್ರಕ್ಕೆ ಬ್ರಾಂಡ್ ಆಗುವುದು ನನಗೆ ನಿಜವಾಗಿಯೂ ಮನಸ್ಸಿಲ್ಲ ಎಂದು ಹೇಳುವ ಸುಕೃತಾ ನಾಗ್ ಅವರಿಗೆ ಆರಂಭದಲ್ಲಿ 'ಲಕ್ಷಣ' ಧಾರಾವಾಹಿಯ ಶ್ವೇತಾ ಪಾತ್ರ ದೊರೆತಾಗ ಖುಷಿಗಿಂತಲೂ ಭಯವೇ ಜಾಸ್ತಿ ಆಗಿತ್ತಂತೆ. ಮೊದಲ ಬಾರಿಗೆ ಖಳನಾಯಕಿಯ ಪಾತ್ರ ಮಾಡುವ ಅವಕಾಶ ದೊರಕಿದೆ. ತನ್ನಿಂದ ಸಾಧ್ಯವೇ ಎಂಬ ಅಳುಕು ಮೂಡಿತ್ತಂತೆ. ಆದರೆ, ಮುಂದೆ ಜನ ಒಪ್ಪಿಕೊಂಡಾಗ ಶ್ವೇತಾ ಪಾತ್ರದಲ್ಲಿ ನಟಿಸಿದ್ದು ಸಾರ್ಥಕ ಎಂದೆನಿಸಿತು ಎಂದು ಹೇಳುತ್ತಾರೆ ಸುಕೃತಾ ನಾಗ್.

ನಟನೆಯ ಮೂಲಕ ಮನ ಸೆಳೆದಿದ್ದ ಸುಕೃತಾ ನಾಗ್ ಕಳೆದ ವರ್ಷ ಅನುಬಂಧ ಅವಾರ್ಡ್ಸ್‌ನಲ್ಲಿ ಜನ ಮೆಚ್ಚಿದ ಯೂತ್ ಐಕಾನ್ ಪ್ರಶಸ್ತಿಯನ್ನು ಕೂಡಾ ಪಡೆದಿದ್ದರು. ಹೀಗಿರುವಾಗ ಈಕೆ ಇದೀಗ ಬಿಗ್ ಬಾಸ್‌ಗೆ ಮನೆಯೊಳಗೆ ಹೋಗುವ ಸುದ್ದಿಯಾಗಿದ್ದು ಏನಾಗುತ್ತದೆಂದು ಕಾದು ನೋಡಬೇಕಿದೆ.

More from Filmibeat

English summary
Lakshana serial is about to end actress Sukrutha Nag posted a video on social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X