Lakshana serial : ಅಣ್ಣನಿಗೆ ಸತ್ಯ ಹೇಳಲು ಮೌರ್ಯನ ಪರದಾಟ.. 'ಲಕ್ಷಣ'ದಲ್ಲಿ ಮುಂದೇನು?

By ಶೃತಿ ಹರೀಶ್ ಗೌಡ

ಇವರೆಗೆ 'ಲಕ್ಷಣ' ಧಾರಾವಾಹಿಯಲ್ಲಿ ಡೆವಿಲ್‌ಗೆ ಶ್ವೇತಾ ಶಾಕ್ ಕೊಟ್ಟಿದ್ದಾಳೆ ಭಾರ್ಗವಿ ಮಾತನಾಡುವುದನ್ನು‌ ಶ್ವೇತಾ ಕೇಳಿಸಿಕೊಂಡಿದ್ದಾಳೆ. ಇದನ್ನೇ ಬಂಡವಾಳ ಮಾಡಿಕೊಂಡು ತನ್ನ ಬೇಳೆ ಬೇಯಿಸಿ ಕೊಳ್ಳಲು‌ಹೊರಟಿದ್ದಾಳೆ.

ಶ್ವೇತಾ ಭಾರ್ಗವಿಯ ಮುಂದೆ ಬಂದು ನಾನು ನೀನು ಬೆಳೆಸಿದ ಹುಡುಗಿ ನನ್ನನ್ನೇ ಈ ರೀತಿ ನೀನು ದ್ವೇಷ ಮಾಡುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಭಾರ್ಗವಿ ನೀನು ಯಾವಾಗ ನನ್ನ ಅಣ್ಣ ಅತ್ತಿಗೆಯನ್ನೇ ಸಾಯಿಸಲು ಬಂದೇಯೋ ಆವಾಗಲೇ ನನ್ನ ನಿನ್ನ ಸಂಬಂಧ ಮುಗಿದು ಹೋಯಿತು ಎಂದು ಹೇಳುತ್ತಿದ್ದಾಳೆ.

 ಭಾರ್ಗವಿಗೆ ಬ್ಲಾಕ್ ಮೇಲ್ ಮಾಡುತ್ತಿರುವ ಶ್ವೇತಾ

ಭಾರ್ಗವಿಗೆ ಬ್ಲಾಕ್ ಮೇಲ್ ಮಾಡುತ್ತಿರುವ ಶ್ವೇತಾ

ಈ ಕಡೆ ಭಾರ್ಗವಿಗೆ ಶ್ವೇತಾ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. "ನೀನೇ ಡೆವಿಲ್ ಎಂದು ನನಗೆ ಗೊತ್ತಾಯಿತು ಯಾಕೆ ನಾಟಕವಾಡುತ್ತಿದ್ದೀಯ" ಎಂದು ಕೇಳುತ್ತಿದ್ದಾಳೆ. ಆಗ ಭಾರ್ಗವಿ "ಅಯ್ಯೋ ಗೊತ್ತಾದರೆ ಏನು ನಿನ್ನ ಬಳಿ ಏನು ಪ್ರೂಫ್ ಇದೆ" ಎಂದು ಕೇಳುತ್ತಿದ್ದಾಳೆ. ನೀನು ನನ್ನ ಅಣ್ಣ ಅತ್ತಿಗೆಯ ಬಳಿ ನಾನೇ ಡೆವಿಲ್ ಎಂದು ಹೇಳಿದರು ಅವರು ನಂಬುವುದಿಲ್ಲ ನಾನೇ ಡೆವಿಲ್ ಏನು ಈಗ ಎಂದು ಭಾರ್ಗವಿ ಶ್ವೇತಾಗೆ ಜೋರು ಮಾಡಿದ್ದಾಳೆ.ಭಾರ್ಗವಿ ಮತ್ತು ಶ್ವೇತ ಮಾತನಾಡುತ್ತಿರುವುದು ಶ್ವೇತಾಳ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ ಇದು ಭಾರ್ಗವಿಗೆ ಗೊತ್ತಿಲ್ಲ ಇನ್ನು ಶ್ವೇತ ಭಾರ್ಗವಿಯ ಬಳಿ ಎಲ್ಲವನ್ನು ಮಾತನಾಡಿಕೊಂಡು ಬಂದ ಮೇಲೆ ಶ್ವೇತಾ ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂತೆಂತವರಿಗೂ ನಾನು ಮಣ್ಣುಮುಕ್ಕಿಸಿದ್ದೇನೆ ಇನ್ನು ನೀನ್ಯಾವ ಲೆಕ್ಕ ಎಂದು ಶ್ವೇತ ಗೆ ಭಾರ್ಗವಿ ಹೇಳಿದ್ದಾಳೆ. ಅಯ್ಯೋ ಬಾರ್ಗು ನಾನು ನೀನು ಬೆಳೆಸಿದ ಹುಳ ನಿನ್ನ ತಲೆಯಲ್ಲಿ ಏನು ಬುದ್ಧಿ ಇದೆ ಅದೇ ನನಗೂ ಸ್ವಲ್ಪ ಇರುತ್ತದೆ ಅದು ಯಾಕೆ ನಿನಗೆ ತಿಳಿದಿಲ್ಲ ಎಂದು ಶ್ವೇತಾ ಹೇಳಿದ್ದಾಳೆ.

 ಚಂದ್ರಶೇಖರ್ ಆರತಿಗೆ ತಿಳಿಯುತ್ತಾ ಸತ್ಯ

ಚಂದ್ರಶೇಖರ್ ಆರತಿಗೆ ತಿಳಿಯುತ್ತಾ ಸತ್ಯ

ಇನ್ನು ಶ್ವೇತಾ ಆಡುತ್ತಿರುವ ಮಾತುಗಳನ್ನ ಕೇಳಿದ ಭಾರ್ಗವಿ ಶಾಕ್ ಆಗಿದ್ದಾಳೆ ಏನು ನನ್ನ ಬಳಿ ಪ್ರೂಫ್ ಇಲ್ವಾ ಎಂದು ಹೊರಗಡೆ ಹೋಗಿ ಚಿಟಕಿಯ ಬಳಿ ಇದ್ದ ಮೊಬೈಲನ್ನು ಭಾರ್ಗವಿಗೆ ತಂದು ತೋರಿಸಿದ್ದಾಳೆ. ನಾನೇ ಡೆವಿಲ್ ನಿನ್ನ ಕೈಲಿ ಏನು ಮಾಡಿಕೊಳ್ಳಲು ಆಗುತ್ತದೆ ಎಂದು ಹೇಳಿದ ಮಾತುಗಳೆಲ್ಲವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಲಾಗಿದ್ದು ಅದನ್ನು ನೋಡಿದ ಭಾರ್ಗವಿಗೆ ಶಾಕ್ ಆಗಿದೆ.

 ಚಂದ್ರಶೇಖರ್, ಆರತಿ ನಾಟಕ

ಚಂದ್ರಶೇಖರ್, ಆರತಿ ನಾಟಕ

"ನಿನ್ನ ಮುಖವಾಡವನ್ನು ಬಯಲು ಮಾಡುತ್ತೇನೆ ಎಂದು ಚಂದ್ರಶೇಖರ್ ಮತ್ತು ಆರತಿಯನ್ನು ಶ್ವೇತಾ ಕರೆದಿದ್ದಾಳೆ. ಆದರೆ ಅಲ್ಲಿಗೆ ಬಂದ ಚಂದ್ರಶೇಖರ್ ಮತ್ತು ಆರತಿ ಶ್ವೇತಾಗೆ ಬಯಲು ಶುರು ಮಾಡಿದ್ದಾಳೆ. ಇನ್ನು ಸ್ಥಳಕ್ಕೆ ಬಂದ ಭಾರ್ಗವಿ ಎಲ್ಲಿ ಸತ್ಯ ಹೇಳುತ್ತಾಳೋ ಎಂದುಕೊಂಡು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿದ್ದಾಳೆ. ಕಾರಿನ ಹಿಂಭಾಗಕ್ಕೆ ಬಂದಿರುವ ಭಾರ್ಗವಿ ನಿನಗೆ ಏನು ಬೇಕೋ ಹೇಳು ಅದನ್ನೇ ನಾನು ಮಾಡುತ್ತೇನೆ ಎಂದು ಶ್ವೇತಾ ಬಳಿ ಕೇಳಿಕೊಂಡಿದ್ದಾಳೆ. ಇನ್ನು ಅಲ್ಲಿಗೆ ಬಂದ ಚಂದ್ರಶೇಖರ್ ಮತ್ತು ಆರತಿ ಇದೇನು ಹೊಸ ನಾಟಕ ಎಂದು ಹೇಳಿದ್ದಾರೆ ಆಗ ಇವಳಿಗೆ ದುಡ್ಡು ಬೇಕೆನೋ ಅದಕ್ಕೆ ಹೊಸದಾಗಿ ನಾಟಕ ಮಾಡುತ್ತಿದ್ದಾಳೆ ಎಂದು ಭಾರ್ಗವಿ ಹೇಗೋ ನಿಭಾಯಿಸಿದ್ದಾಳೆ.ಈ ಮನೆಯಲ್ಲಿ ನಿಮಗೆ ಗೊತ್ತಾಗಬೇಕಿರುವುದು ಬಹಳಷ್ಟು ಇದೆ ಎಂದು ಶ್ವೇತಾ ಅಲ್ಲಿಂದ ಹೊರಟಿದ್ದಾಳೆ.

 ಅಣ್ಣನಿಗೆ ಸತ್ಯ ಹೇಳಲು ಕಷ್ಟ ಪಡುತ್ತಿರುವ ಮೌರ್ಯ

ಅಣ್ಣನಿಗೆ ಸತ್ಯ ಹೇಳಲು ಕಷ್ಟ ಪಡುತ್ತಿರುವ ಮೌರ್ಯ

ನಕ್ಷತ್ರ ಮದುವೆ ವೇಳೆ ಆದಂತಹ ಸತ್ಯವನ್ನು ಭೂಪತಿಗೆ ಹೇಳಲು ಮೌರ್ಯ ತುಂಬಾ ಪರದಾಡುತ್ತಿದ್ದಾನೆ. ಈ ಕಡೆ ಕಾರಿನ ದಿಕ್ಕನ್ನು ತಪ್ಪಿಸಿ ತಾನೇ ಕಾರ್ ಚಲಾಯಿಸುತ್ತಿದ್ದಾನೆ. ಇದು ಭೂಪತಿಗೂ ಸಹ ಗೊತ್ತಾಗಿಲ್ಲ. ನಂತರ ಮೌರ್ಯನನ್ನು ಕತ್ತೆತ್ತಿ ನೋಡಿದ್ದಾನೆ. ಆಗ ಇದೇನು ನಿನ್ನದು ಹೊಸದು ಎಷ್ಟು ಬೈದರು ನಿನಗೆ ಬುದ್ದಿ ಇಲ್ವಾ ಎಂದು ಕೇಳಿದ್ದಾನೆ.ಅಣ್ಣ ನಿನಗೆ ತಿಳಿಯಬೇಕಾದ ಸತ್ಯ ಒಂದು ಇದೆ. ನಿನಗೆ ಅದನ್ನು ತಿಳಿದುಕೊಳ್ಳಬೇಕು ಎಂದು ಎನಿಸುತ್ತಿಲ್ಲ ಎಂದು ಕೇಳಿದ್ದಾನೆ. ಅಷ್ಟರಲ್ಲಿ ಭೂಪತಿ ಮೌರ್ಯನಿಗೆ ಬೈಯುತ್ತಿದ್ದಾನೆ. ಕಾರ್‌ ಕೀ ಕೊಡು ನಾನು ಹೋಗಬೇಕು ಸುಮ್ಮನೆ ಬಿಡು ಎಂದು ಭೂಪತಿ ಮೌರ್ಯನಿಗೆ ಬೈಯುತ್ತಿದ್ದಾನೆ. ಮುಂದೆ ಮೌರ್ಯ ಸತ್ಯ ಹೇಳುತ್ತಾನೆ ಎಂಬುದೇ ಕುತೂಹಲವಾಗಿದೆ.

English summary
Lakshana Serial Written Update On February 13th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X