Don't Miss!
- Sports
ಭಾರತ vs ನ್ಯೂಜಿಲೆಂಡ್: 3ನೇ ಏಕದಿನ ಪಂದ್ಯ, ವೈಟ್ವಾಶ್ ಮೇಲೆ ಭಾರತದ ಕಣ್ಣು
- News
ಒಡಿಶಾ: ಭೂಮಿ ಕಳೆದುಕೊಂಡ ಗ್ರಾಮಸ್ಥರಿಗೆ ಪರಿಹಾರ ಸಿಗುವವರೆಗೆ ಜಿಲ್ಲಾಧಿಕಾರಿಗೆ ಸಂಬಳವಿಲ್ಲ ಎಂದ ಹೈಕೋರ್ಟ್
- Finance
America IT Company Layoffs: ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತ: ಲಕ್ಷಾಂತರ ವೃತ್ತಿಪರರ ಬದುಕು ಅತಂತ್ರ
- Automobiles
ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ 2023ರ ಹೋಂಡಾ ಸಿಟಿ ಕಾರು
- Technology
ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Lakshana: ನಕ್ಷತ್ರಳನ್ನು ಸೊಸೆ ಎಂದು ಒಪ್ಪಿಕೊಂಡ ಶಕುಂತಲಾ ದೇವಿ
'ಲಕ್ಷಣ' ಧಾರಾವಾಹಿಯಲ್ಲಿ ಬಾಗಿಲಿನಲ್ಲೇ ನಿಂತುಕೊಂಡಿರುವ ಆರತಿ, ಚಂದ್ರಶೇಖರ್ ಹಾಗೂ ನಕ್ಷತ್ರ ಶಕುಂತಲಾದೇವಿಗೆ ಇವಾಗ ಯಾರು ಗೆದ್ದರು ಎಂಬುದು ನಿಮಗೆ ಗೊತ್ತಾಗಿದೆ. ಬೆಳಗ್ಗೆ ಹೋಟೆಲ್‌ನಿಂದ ತಿಂಡಿ ಆರ್ಡರ್ ಮಾಡಿದಾಗಲೇ ಶ್ವೇತಾ ಸೋತಿದ್ದಾಳೆ ಎಂದು ಸಿ.ಎಸ್ ಹೇಳುತ್ತಾನೆ. ಆಗ ಅಲ್ಲೇ ಇದ್ದ ಆರತಿ ಶಕುಂತಲಾ ದೇವಿ ಅವರೇ ನೀವು ಶ್ವೇತಾಳನ್ನು ಕೆಲವು ತಿಂಗಳುಗಳಿಂದ ನೋಡಿದ್ದೀರಿ ನಾವು 24 ವರ್ಷದಿಂದ ನೋಡಿದ್ದೇವೆ. ಅವಳಿಗೆ ಒಂದು ಕಾಫಿ ಮಾಡೋಕು ಬರಲ್ಲ, ಅಯ್ಯೋ ಕಾಫಿ ಯಾಕೆ ಬೀಸಿ ನೀರು ಕಾಯಿಸೋಕು ಬರಲ್ಲ ಎಂದು ಆರತಿ ಹೇಳುತ್ತಾಳೆ.
ಈ ಕಡೆ ಶಕುಂತಲಾ ದೇವಿ ಶ್ವೇತ ಮೇಲೆ ಕೋಪ ಮಾಡಿಕೊಂಡು ಆ ಕಡೆ ಆರತಿ ಸಿ.ಎಸ್.ಮಾತುಗಳನ್ನು ಕೇಳಿಕೊಂಡು ನಿಂತಿರುತ್ತಾರೆ. ಆದರೆ ನಕ್ಷತ್ರ ಗೆದ್ದಿದ್ದು ಮಯೂರಿಗೆ, ಭೂಪತಿಗೆ ಹಾಗೂ ಮನೆ ಕೆಲಸದವರಿಗೆ ಖುಷಿಕೊಡ್ತಾ ಇರುತ್ತದೆ. ಈ ಕಡೆ ಮಿಲ್ಲಿ ಇಷ್ಟೆಲ್ಲಾ ಆದ ಮೇಲೆ ಅವರಮ್ಮ ಡೆವಿಲ್‌ಗೆ ಫೋನ್ ಮಾಡಿ ಪ್ಲ್ಯಾನ್ ಎಲ್ಲಾ ಹಾಳು ಅಯ್ತು ಕೊನೆಯ ಕ್ಷಣದಲ್ಲಿ ನಕ್ಷತ್ರ ಅದೃಷ್ಟ ಖುಲಾಯಿಸಿತು ಅಂತಾ ಹೇಳಿ ಚನ್ನಾಗಿ ಬೈಸಿಕೊಳ್ತಾಳೆ. ನೀನು ನಿನ್ನ ತಾಯಿ ನಂಬಿಕೆ ಕಳೆದುಕೊಳ್ತಾ ಇದ್ದೀಯಾ ನಾನು ಸಿಎಸ್ ತವರು ಮನೆಗೆ ಮಗಳನ್ನು ಕರೆದುಕೊಂಡು ಬರ್ತಾನೆ ಅಂತಾ ಖುಷಿಯಿಂದ ಇದ್ದೆ ಎಂದು ಹೇಳಿ ಫೋನ್ ಕಟ್ ಮಾಡ್ತಾಳೆ ಡೆವಿಲ್.
ತಲೆ
ಸುತ್ತಿ
ಬಿದ್ದ
ಪುಟ್ಟಕ್ಕ;
ರಾಜೇಶ್ವರಿ
ಪಿತೂರಿಯನ್ನು
ಮಕ್ಕಳ
ಬಳಿ
ಹೇಳುತ್ತಾಳಾ
ಪುಟ್ಟಕ್ಕ?
ಈ ಕಡೆ ಶ್ವೇತಾಳನ್ನು ಎಳೆದುಕೊಂಡು ಹೋದ ಶಕುಂತಲಾ ದೇವಿ ಯಾಕೆ ಹೀಗೆ ಮಾಡಿದೆ ಶ್ವೇತಾ ನಿನ್ನ ನಂಬಿಕೊಂಡು ನಾನು ಈ ಕೆಲಸಕ್ಕೆ ಕೈಹಾಕಿದೆ ಆದರೆ ನೀನು ನನಗೆ ಮೋಸ ಮಾಡ್ಬಿಟ್ಟೆ ಎನ್ನುತ್ತಾರೆ ಅಷ್ಟರಲ್ಲಿ ಸಮಜಾಯಿಷಿ ಕೊಡಲು ಬಂದ ಶ್ವೇತ ಕಾಪಾಳಕ್ಕೆ ಶಾಕುಂತಲ ದೇವಿ ಹೊಡೆಯುತ್ತಾರೆ. ನಂತರ ಹಾಲ್‌ಗೆ ಬರ್ತಾರೆ.

ಸಿ.ಎಸ್ ಮಾತಿಗೆ ದನಿಗೂಡಿಸಿದ ಆರತಿ
ನಕ್ಷತ್ರಳ ಬಹುದಿನಗಳ ಕನಸು ಈಡೇರಿದೆ ನಕ್ಷತ್ರ ಈ ಮನೆ ಸೊಸೆ ಎಂದು ಶಕುಂತಲಾ ದೇವಿ ಒಪ್ಪಿಕೊಂಡಿದ್ದಾರೆ. ನಕ್ಷತ್ರ ಮನೆಯೊಳಗೆ ಹೋಗೋಕೆ ಹೋದಾಗ ಸಿ.ಎಸ್ ತಡೆಯುತ್ತಾರೆ. ಆಗ ಶಕುಂತಲಾ ದೇವಿ ಯಾಕೆ ಎಂದು ಪ್ರಶ್ನೆ ಮಾಡುತ್ತಾರೆ. ನನ್ನ ಮಗಳಿಗೆ ಶಾಸ್ತ್ರೋಕ್ತವಾಗಿ ಶಾಸ್ತ್ರ ಮದುವೆ ಆಗಿಲ್ಲ. ಈಗ ಸೊಸೆಗೆ ಸಿಗಬೇಕಾದ ಗೌರವ ಸಿಗಬೇಕು ಎಂದು ಸಿ.ಎಸ್ ಹೇಳಿದಾಗ ಇದಕ್ಕೆ ಆರತಿ ಸಹ ಧ್ವನಿ ಗೂಡಿಸುತ್ತಾಳೆ.

ಶ್ವೇತಾಗೆ ಅಸಮಾಧಾನ
ಶಕುಂತಲಾ ದೇವಿ ಇವಾಗ ನಿಮ್ಮ ಮಗಳನ್ನು ಸೊಸೆ ಎಂದು ಒಪ್ಪಿಕೊಂಡ ಮೇಲೆ ಶಾಸ್ತ್ರ ಮಾಡೋದು ಏನು ಮಹಾ ಮಾಡೋಣ ಎಂದು ಮಯೂರಿಗೆ ಶಾಸ್ತ್ರ ಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಹೇಳುತ್ತಾರೆ. ಮಯೂರಿ ಎಲ್ಲಾ ತಯಾರಿ ಮಾಡಿಕೊಳ್ತಾ ಇರಬೇಕಾದರೆ ಶ್ವೇತ ಮಾತ್ರ ಚೆನ್ನಾಗಿ ಉರಿದುಕೊಳ್ತಾ ಇರ್ತಾಳೆ. ಆದರೆ ಮಯೂರಿ ಖುಷಿ ಆಕಾಶಕ್ಕೆ ಮುಟ್ಟಿರುತ್ತದೆ ನಕ್ಷತ್ರ ಗೆಲುವನ್ನು ಸಂಭ್ರಮಿಸುತ್ತಾ ಆರತಿ ರೆಡಿ ಮಾಡ್ತಾಳೆ.

ತಂದೆಯನ್ನು ತಬ್ಬಿಕೊಂಡ ನಕ್ಷತ್ರ
ಸಿ. ಎಸ್ ಹತ್ತಿರ ಶಾಕುಂತಲದೇವಿ ಕೊನೆಗೆ ನೀವೇ ಗೆದ್ರಿ ಚಂದ್ರಶೇಖರ್ ಅಂತಾ ಹೇಳುತ್ತಾಳೆ. ಇದಕ್ಕೆ ಚಂದ್ರಶೇಖರ್‌ಗೆ ತುಂಬಾ ಖುಷಿಯಾಗುತ್ತದೆ. ನಕ್ಷತ್ರ ನನ್ನ ಜೀವನದಲ್ಲಿ ದೇವರು ಒಂದು ದೊಡ್ಡ ಪವಾಡ ನಡೆಸಿ ಬಿಟ್ಟ ನನ್ನ ಕೈಬಿಡಲಿಲ್ಲ, ಕೊನೆಯಲ್ಲಿ ಕೈ ಹಿಡಿದುಕೊಂಡ ಎಂದು ಹೇಳಿ ತಂದೆಯನ್ನು ತಬ್ಬಿಕೊಳ್ಳುತ್ತಾಳೆ.
ಶಾಕುಂತಲದೇವಿ ಆರತಿ ಮಾಡೋಕೆ ಹೋದಾಗ ಭೂಪತಿ ಒಂದು ನಿಮಿಷ ಅಮ್ಮ ಎಂದು ಹೇಳಿ ನಕ್ಷತ್ರ ಪಕ್ಕದಲ್ಲಿ ಬಂದು ನಿಲ್ಲುತ್ತಾನೆ.

ಸೇರು ಒದ್ದು ಒಳಗೆ ಬಂದ ನಕ್ಷತ್ರ
ಆರತಿ ಇಬ್ಬರಿಗೂ ಆರತಿ ಬೆಳಗಿ ಕುಂಕುಮವನ್ನು ಹಚ್ಚುತ್ತಾರೆ. ಈ ವೇಳೆ ನಕ್ಷತ್ರಗೆ ತುಂಬಾನೇ ಖುಷಿಯಾಗುತ್ತದೆ. ಸೇರು ಒದ್ದು ಒಳಗೆ ಹೋಗೋಕೆ ಅಣಿಯಾಗ್ತಾಳೆ. ಈ ಕಡೆ ಮಿಲ್ಲಿ ಮತ್ತೆ ಶ್ವೇತ ಇದೆಲ್ಲವನ್ನೂ ನೋಡಿ ತುಂಬಾನೇ ಬೇಜಾರ್ ಮಾಡಿಕೊಳ್ತಾ ಇರ್ತಾರೆ. ಈಗ ಶ್ಚೇತ ಮುಂದಿನ ಗತಿ ಎನು ಎಂಬುದೇ ಕುತೂಹಲಕಾರಿಯಾಗಿದೆ.