ಮಾಧುರಿ ದೀಕ್ಷಿತ್ ಜೊತೆ ನಟಿಸಿದ ಈ ನಟಿಯೀಗ ಕನ್ನಡ ಕಿರುತೆರೆ ಫೇಮಸ್ ಖಳನಾಯಕಿ: ಯಾರಿವರು?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಕೀರ್ತಿ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ತನ್ವಿರಾವ್ ತಮ್ಮ ಅಭಿನಯದ ಮೂಲಕ ಜನರ ಮನ ಗೆದ್ದಿದ್ದಾರೆ. ಪ್ರತಿ ಘಳಿಗೆಗೂ ಒಂದೊಂದು ರೀತಿ ಆಡುವ ಕೀರ್ತಿಯ ಪಾತ್ರ ಆ ಜನರಿಗೆ ಬಹಳಷ್ಟು ಮನರಂಜನೆ ನೀಡಿದೆ.

ತಾನು ಪ್ರೀತಿಸಿದ ಹುಡುಗನಿಗೆ ಬೇರೆಯವರನ್ನು ಮದುವೆಯಾಗಲು ಬಿಟ್ಟು, ಇದೀಗ ಹೇಗಾದರೂ ಮಾಡಿ ಆತನನ್ನು ಮತ್ತೆ ಪಡೆಯುವ ಹುನ್ನಾರದಲ್ಲಿ ಕೀರ್ತಿ ಇದ್ದಾಳೆ. ತನ್ನ ಪ್ರಿಯತಮ ವೈಷ್ಣವ್ ಮದುವೆ ಆಗಿ ಅವನ ಹೆಂಡತಿ ಲಕ್ಷ್ಮಿಯೊಂದಿಗೆ ಸುಖವಾಗಿರುವುದನ್ನು ಸಹಿಸಲಾಗದೆ, ತನ್ನ ಮಾರ್ಡನ್ ಉಡುಗೆ ತೊಡುಗೆಯನ್ನೆಲ್ಲಾ ಬಿಟ್ಟು ಸಾಂಪ್ರದಾಯಿಕವಾಗಿ ರೆಡಿಯಾಗಿ ವೈಷ್ಣವ್‌ನನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ ಕೀರ್ತಿ.

Lakshmi Baramma actor Tanvi Rao became an audience favourite despite being a villain

ಹತ್ತು ಹಲವಾರು ಹುನ್ನಾರಗಳನ್ನು ಹೂಡಿ ಲಕ್ಷ್ಮಿ ಹಾಗೂ ವೈಷ್ಣವನನ್ನು ದೂರ ಮಾಡಲು ಪ್ರಯತ್ನ ಪಡುತ್ತಿರುವ ಈ ಪಾತ್ರ ವಿಚಿತ್ರ ಎನಿಸಿದರೂ ತನ್ನ ಅಭಿನಯದ ಮೂಲಕ ಜನರಿಗೆ ಖುಷಿ ಕೊಟ್ಟಿದೆ.

ಪಾತ್ರದಲ್ಲಿ ಬಹಳಷ್ಟು ವೈವಿಧ್ಯತೆ ಇದೆ. ಜೊತೆಗೆ ನೈಜತೆಯೂ ಇದೆ. ಎಷ್ಟೋ ಬಾರಿ ನಾವು ಏನೋ ಯೋಚಿಸಿ ಕೆಲಸಗಳನ್ನು ಮಾಡುತ್ತೇವೆ. ನಂತರ ಪಶ್ಚಾತಾಪ ಪಡುವುದುಂಟು. ಆಗ ಮನದಲ್ಲಾಗುವ ಹಲವು ರೀತಿಯ ತಳಮಳವನ್ನು ಅಭಿನಯದ ಮೂಲಕ ಬಹಳ ಚೆನ್ನಾಗಿ ಕೀರ್ತಿ ಪಾತ್ರಧಾರಿ ತನ್ವಿ ರಾವ್ ಅವರು ವ್ಯಕ್ತಪಡಿಸುತ್ತಿದ್ದಾರೆ. ಅವರ ಈ ಅಭಿನಯಕ್ಕೆ ಬಹಳಷ್ಟು ಶ್ಲಾಘನೆಯೂ ಸಿಗುತ್ತಿದೆ.

ಪ್ರೇಕ್ಷಕರಿಗೆ ಅದರಲ್ಲೂ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಅಭಿಮಾನಿಗಳಿಗಂತೂ ಕೀರ್ತಿ ಪಾತ್ರ ಬಹಳಷ್ಟು ಮನರಂಜನೆ ನೀಡಿರುವುದು ಸುಳ್ಳಲ್ಲ. ಇದೇ ಸಮಯದಲ್ಲಿ ಕೀರ್ತಿಯ ಐವತ್ತು ಮುಖಗಳು ಎನ್ನುವ ರೀತಿಯಲ್ಲಿ ತನ್ವಿ ರಾವ್ ಅವರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಕೀರ್ತಿ ದೈನಂದಿನ ತನ್ನ ಜೀವನದಲ್ಲಿ ಯಾವ ರೀತಿಯ ಮನೋ ತುಮುಲಗಳನ್ನು ಅನುಭವಿಸುತ್ತಾಳೆ ಎಂಬುದು ಈ ಇಡೀ ವಿಡಿಯೋ ಸಾರಾಂಶವಾಗಿದೆ.

Lakshmi Baramma actor Tanvi Rao became an audience favourite despite being a villain

ಅದೇನೋ ಕೀರ್ತಿ ಪಾತ್ರ ನೋಡಿದರೆ ಸಿಟ್ಟು, ದ್ವೇಷಕ್ಕಿಂತ ಹೆಚ್ಚು ಅಯ್ಯೋ ಪಾಪ ಎನಿಸುತ್ತದೆ ಎಂದು ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ತನ್ವಿ ರಾವ್ ಅವರ ಅಭಿನಯ ಅಷ್ಟು ನೈಜವಾಗಿದೆ. ಮೂಲತಃ ಭರತನಾಟ್ಯ ಕಲಾವಿದೆಯೂ ಆಗಿರುವ ನಟಿ ತನ್ವಿರಾವ್ ತಮ್ಮ ನಟನೆ ಹಾಗೂ ಕೀರ್ತಿ ಪಾತ್ರದಲ್ಲೂ ಬಹಳಷ್ಟು ಡ್ಯಾನ್ಸ್ ಸ್ಟೆಪ್‌ಗಳನ್ನು ಹಾಗೂ ಭಾವನೆಗಳನ್ನು ಅಳಪಡಿಸಿ ಪಾತ್ರಕ್ಕೆ ಇನ್ನಷ್ಟು ಮೆರುಗು ತಂದಿದ್ದಾರೆ.

ತನ್ವಿ ರಾವ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋಗೆ ಪ್ರೇಕ್ಷಕರು ಅಭಿಮಾನಿಗಳು ಹೃದಯ ತುಂಬಿ ಶ್ಲಾಘಿಸಿದ್ದಾರೆ. ಇದರ ಜೊತೆಗೆ ಕೀರ್ತಿ ಪಾತ್ರವೂ ಸಂಪೂರ್ಣ ನೆಗೆಟಿವ್ ಆಗಿದ್ದರೂ "ಸೂಪರ್ ಆ್ಯಕ್ಟಿಂಗ್ ", "ನಿಮ್ಮಿಂದ ಧಾರಾವಾಹಿಗೆ ಕಳೆ ಹೆಚ್ಚಿದೆ" ಎಂಬಿತ್ಯಾಗಿ ಪಾಸಿಟಿವ್ ಕಾಮೆಂಟ್ ಗಳ ಮಹಾಪೂರವೇ ಹರಿದು ಬಂದಿವೆ.

More from Filmibeat

English summary
Tanvi Rao is known for her villainous role on television
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X