ಮಾಡರ್ನ್ ಕ್ರೇಜಿಸ್ಟಾರ್ ಕಿಶನ್ ಬೆಳಗಲಿ ಜೊತೆ ಹೆಜ್ಜೆ ಹಾಕಿ ಮನ ಸೆಳೆದ ತನ್ವಿ ರಾವ್; ಡ್ಯಾನ್ಸ್ ವಿಡಿಯೋ ಟ್ರೆಂಡಿಂಗ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಕೀರ್ತಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವವರು ನಟಿ ತನ್ವಿ ರಾವ್. ಈ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ತನ್ವಿ ರಾವ್ ಬಹಳ ಮಿಂಚಿದ್ದು, ತಮ್ಮ ಅಭಿನಯದಿಂದಲೇ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಪ್ರತಿ ಘಳಿಗೆಗೂ ಒಂದೊಂದು ರೀತಿ ಆಡುವ ಕೀರ್ತಿಯ ಪಾತ್ರ ಆ ಜನರಿಗೆ ಬಹಳಷ್ಟು ಮನೋರಂಜನೆ ನೀಡಿದೆ.
ಈಗಂತೂ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಕೀರ್ತಿಯ ಜೀವನದಲ್ಲಿ ಯಾರೂ ಊಹಿಸಲು ಸಾಧ್ಯವಾಗದಂತಹ ದೊಡ್ಡ ದೊಡ್ಡ ತಿರುವುಗಳೇ ಕಾಣಿಸುತ್ತಿದೆ. ಅದೇನೆ ಆಗಲಿ ಕೀರ್ತಿ ಪಾತ್ರಧಾರಿ ನಟಿ ತನ್ವಿ ರಾವ್ ಅವರು ಮಾತ್ರ ಯಾವುದೇ ರೀತಿಯ ಅಭಿನಯಕ್ಕೂ ಸೈ ಎನ್ನುವಂತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ನಿಜವಾಗಿಯೂ ಶ್ಲಾಘನೀಯ.

ಅಭಿನಯವಷ್ಟೇ ಅಲ್ಲದೆ ಡ್ಯಾನ್ಸರ್ ಕೂಡ ಆಗಿರುವ ನಟಿ ತನ್ವಿ ರಾವ್ ಆಗಾಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಡ್ಯಾನ್ಸ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅಂತೆಯೇ ಇದೀಗ ತನ್ವಿ ರಾವ್ ಅವರು ಪೋಸ್ಟ್ ಮಾಡಿರುವ ಹೊಸದೊಂದು ವಿಡಿಯೋ ಬಹಳ ವೈರಲ್ ಆಗಿದೆ.
ಮೂಲತಃ ಭರತನಾಟ್ಯ ಕಲಾವಿದೆಯೂ ಆಗಿರುವ ನಟಿ ತನ್ವಿ ರಾವ್ ಇತ್ತೀಚೆಗೆ ನಟ ಕೊರಿಯೋಗ್ರಾಫರ್ ಕಿಶನ್ ಬೆಳಗಲಿ ಅವರೊಂದಿಗೆ ಮಾಡಿರುವ ಡ್ಯಾನ್ಸ್ ಇನ್‌ಸ್ಟಾಗ್ರಾಂ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ.
ಹೌದು, ವಾಸುಕಿ ವೈಭವ್ ಅವರು ಹಾಡಿರುವ 'ಮುಂದಿನ ನಿಲ್ದಾಣ' ಚಿತ್ರದ "ಇನ್ನೂನು ಬೇಕಾಗಿದೆ.." ಹಾಡಿಗೆ ನಟಿ ತನ್ವಿ ರಾವ್ ಹಾಗೂ ಡ್ಯಾನ್ಸರ್ ಕಿಶನ್ ಬೆಳಗಲಿ ಸ್ಟೆಪ್ ಹಾಕಿದ್ದಾರೆ. ತನ್ವಿ ರಾವ್ ಭರತನಾಟ್ಯ ಹೆಜ್ಜೆ ಹಾಕಿದರೆ, ಕಿಶನ್ ಬೆಳಗಲಿ ಮಾತ್ರ ಮಾಡರ್ನ್ ಡಾನ್ಸ್ ಸ್ಟೆಪ್ಸ್ ಅನ್ನು ಹಾಕಿದ್ದಾರೆ. ಇವರಿಬ್ಬರ ಈ ಫ್ಯೂಶನ್ ಬಹಳ ಅದ್ಭುತವಾಗಿ ಮೂಡಿ ಬಂದಿದ್ದು ನೋಡುಗರ ಕಣ್ಮನ ಸೆಳೆಯುವಂತಿದೆ.
ಅಂದ ಹಾಗೇ ನಟ,_ಡ್ಯಾನ್ಸರ್ ಕಿಶನ್ ಬೆಳಗಲಿ ಆಗಾಗ ಧಾರಾವಾಹಿ ಸೆಲೆಬ್ರಿಟಿಗಳೊಂದಿಗೆ ಈ ರೀತಿಯ ಡಾನ್ಸ್ ವಿಡಿಯೋಗಳನ್ನು ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ನಟಿ ಧನ್ಯಾ ರಾಮ್ ಕುಮಾರ್ ಸೇರಿದಂತೆ ಸೀರಿಯಲ್ ನಟಿ ನಮ್ರತಾ ಗೌಡ ಅವರೊಂದಿಗೂ ಬಹಳಷ್ಟು ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.
ಇನ್ನು ನಟಿ ತನ್ವಿ ರಾವ್ ಹಾಗೂ ಕಿಶನ್ ಬೆಳಗಲಿ ಅವರ ಈ ವಿಡಿಯೋ ಮಾತ್ರ ಹೆಚ್ಚಿನ ಲೈಕ್ಸ್ ಹಾಗೂ ಶೇರ್‌ಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ 24 ಸಾವಿರಕ್ಕೂ ಹೆಚ್ಚಿನ ಶೇರುಗಳನ್ನು ಪಡೆದುಕೊಂಡಿರುವ ಈ ಡಾನ್ಸ್ ವಿಡಿಯೋ, ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಲೈಕ್ ಗಳನ್ನು ಕೂಡ ಪಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಡ್ಯಾನ್ಸ್ ಸ್ಟೆಪ್ ಅಷ್ಟೇ ಅಲ್ಲದೆ ಸೆಟ್ಟಿಂಗ್ ಹಾಗೂ ಕಾಸ್ಟ್ಯೂಮ್ ಬಗ್ಗೆ ಕೂಡ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications