ಮೇಕಪ್ ಇಲ್ಲದೆ ಭಾಗ್ಯಲಕ್ಷ್ಮೀ & ಲಕ್ಷ್ಮೀಬಾರಮ್ಮ ಟೀಂ ನೋಡಿ ವೀಕ್ಷಕರು ಏನಂದ್ರು?

By ಎಸ್ ಸುಮಂತ್

'ಭಾಗ್ಯಲಕ್ಷ್ಮೀ' ಹಾಗೂ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನೋಡಿದವರಿಗೆ ಎಲ್ಲಾ ಕಲಾವಿದರ ಪರಿಚಯ ಇದ್ದೆ ಇರುತ್ತೆ. ಮೊದಲು ಒಂದೇ ಧಾರಾವಾಹಿ ಮೂರು ಕುಟುಂಬವಾಗಿತ್ತು. ಈಗ ಎರಡು ಧಾರಾವಾಹಿ ನಾಲ್ಕು ಕುಟುಂಬವಾಗಿದೆ. ಅದರಲ್ಲಿ ಭಾಗ್ಯಲಕ್ಷ್ಮೀಯಲ್ಲಿ ಸುನಂದಾ ಕೆಡುಕು ಬಯಸಿದರೆ, ಕುಸುಮಾ ತುಂಬಾ ಒಳ್ಳೆಯ ಮನಸ್ಸಿನ ಅತ್ತೆ. ಆ ಕಡೆ 'ಲಕ್ಷ್ಮೀಬಾರಮ್ಮ' ಧಾರಾವಾಹಿಯಲ್ಲಿ ಕಾವೇರಿ, ಸುಪ್ರೀತಾ ಸಿಕ್ಕಾಪಟ್ಟೆ ಕೆಡುಕು ಸ್ವಭಾವದವರು.

ಈಗ ಹೇಳುವುದಕ್ಕೆ ಹೊರಟಿರುವುದು ಧಾರಾವಾಹಿಯ ವಿಚಾರವನ್ನಲ್ಲ. ಧಾರಾವಾಹಿಯಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಕ್ಯಾರೆಕ್ಟರ್. ಆದರೆ, ರಿಯಲ್ ಲೈಫ್‌ನಲ್ಲಿ ಎಲ್ಲರೂ ಕ್ಲೋಸ್ ಆಗಿರ್ತಾರೆ. ಪೂಜಾಳ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ವಿಡಿಯೋವೊಂದು ಪೋಸ್ಟ್ ಆಗಿದೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Lakshmi Baramma, BhagyaLakshmi, serial

ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಆಕ್ಟೀವ್

ಇತ್ತೀಚೆಗಂತು ಸೋಷಿಯಲ್ ಮೀಡಿಯಾ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ಇಲ್ಲದವರೆ ಇಲ್ಲ. ಒಂದು ಕಡೆ ಎಂಜಾಯ್‌ಮೆಂಟ್ ಆದ್ರೆ, ಮತ್ತೊಂದು ಕಡೆ ಆದಾಯದ ಮೂಲವು ಹೌದು. ಜೊತೆಗೆ ಹೆಚ್ಚಿನ ಜನ ಮನರಂಜನೆಗಾಗಿ ಸೋಷಿಯಲ್ ಮೀಡಿಯಾ ಮೇಲೆ ಅವಲಂಭಿತರಾಗಿದ್ದಾರೆ. ಹೀಗಾಗಿ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಅದರಲ್ಲೂ ಕಲಾವಿದರಂತು ಸಿಕ್ಕಾಪಟ್ಟೆ ವಿಡಿಯೋಗಳನ್ನು ಮಾಡುತ್ತಾ, ಹಂಚಿಕೊಳ್ಳುತ್ತಿರುತ್ತಾರೆ. ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀಬಾರಮ್ಮ ಧಾರಾವಾಹಿಯಲ್ಲಿ ಇರುವ ಎಲ್ಲರೂ ರಿಯಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇರುವವರಂತೆಯೇ ಕಾಣುತ್ತಾರೆ. ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಶೂಟಿಂಗ್ ಇಲ್ಲದೆ ಇದ್ರೆ ಏನ್ ಮಾಡ್ತಾರೆ..?

ಇತ್ತೀಚೆಗೆ ಶೂಟಿಂಗ್ ಇಲ್ಲದೆ ಹೋದರೆ ಡ್ಯಾನ್ಸ್ ಮಾಡಿಕೊಂಡು ಟೈಮ್ ಪಾಸ್ ಮಾಡುವುದು ಸಹಜವಾಗಿ ಬಿಟ್ಟಿದೆ. ಅಷ್ಟೇ ಅಲ್ಲ ಶೂಟಿಂಗ್ ಇದ್ರೂ ಕೂಡ ಸಣ್ಣ ಗ್ಯಾಪ್‌ನಲ್ಲಿ ವಿಡಿಯೋ ಮಾಡ್ತಾರೆ. ರೀಲ್ಸ್ ಮಾಡೋದು, ಡ್ಯಾನ್ಸ್ ಮಾಡೋದು ಒಂಥರ ಬೂಸ್ಟ್ ಇದ್ದಂಗೆ. ಹೀಗಾಗಿ ಗ್ಯಾಪ್ ಸಿಕ್ಕಾಗೆಲ್ಲಾ ರೀಲ್ಸ್ ಮಾಡುತ್ತಾರೆ. ಅದರ ಜೊತೆಗೆ ಅವರವರ ಟೀಂ ಜೊತೆಗೆ ಟೈಮ್ ಕಳೆದಾಗ ಬಾಂಧವ್ಯ ಕೂಡ ಇನ್ನು ಹೆಚ್ಚಾಗುತ್ತದೆ.

ಎರಡು ಕುಟುಂಬ ನೋಡಿ ಕಂಗಲಾದ ಜನ?

'ಭಾಗ್ಯಲಕ್ಷ್ಮೀ' ಮತ್ತು 'ಲಕ್ಷ್ಮೀಬಾರಮ್ಮ' ಧಾರಾವಾಹಿ ಈಗ ಬೇರೆ ಬೇರೆ ಸಮಯದಲ್ಲಿ ಬರ್ತಾ ಇದೆ. ಆದ್ರೆ ಆಗೊಮ್ಮೆ ಈಗೊಮ್ಮೆ ಎರಡು‌ ಕುಟುಂಬಗಳು ಒಟ್ಟಿಗೆ ಸೇರುತ್ತವೆ. ಒಂದೇ ಕುಟುಂಬಸ್ಥರಾಗಿರುವ ಕಾರಣ ಒಟ್ಟಿಗೆ ಸೇರುತ್ತಾರೆ. ಈಗ ಭಾಗ್ಯಾಳ ತಂಗಿ ಪೂಜಾ ಅಲಿಯಾಸ್ ಆಶಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋ ನೋಡಿ ಜನ ಶಾಕ್ ಆಗಿದ್ದಾರೆ. ಧಾರಾವಾಹಿ ಶುರುವಾಗುವುದಕ್ಕು ಮುನ್ನ ಸಹಜವಾಗಿಯೇ ಮೇಕಪ್ ಹಾಕದೆ ಬಂದಿರುತ್ತಾರೆ. ಯಾಕಂದ್ರೆ ಧಾರಾವಾಹಿಗೆ ಅಂತ ಮೇಕಪ್ ಹಾಕಿಯೇ ಹಾಕುತ್ತಾರೆ. ಈಗ ಡ್ಯಾನ್ಸ್ ಮಾಡಿರುವ ವಿಡಿಯೋದಲ್ಲೂ ಮೇಕಪ್ ಇಲ್ಲದೇ ಎಲ್ಲರೂ ಕಾಣಿಸಿಕೊಂಡಿದ್ದಾರೆ.

ದೊಡ್ಡವರಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು..?

ವಿಡಿಯೋದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಡ್ರೆಸ್ ಇದೆ. ಕುಸುಮಾ ಲಾಂಗ್ ಕುರ್ತಾ ಹಾಕಿರಯವ ರೀತಿ ಇದ್ದರೆ, ಸುನಂದಾ ಶಾರ್ಟ್ ಡ್ರೆಸ್ ಹಾಕಿದ್ದಾರೆ.‌ ಇನ್ನು ಕಾವೇರಿ ಸಿಂಗಲ್ ಟಾಪ್ ಹಾಕಿದ್ದಾರೆ. ಸುಪ್ರೀತಾ ಶಾಟ್ಸ್ ಹಾಕಿದ್ದಾರೆ. ಇದನ್ನೆಲ್ಲಾ ನೋಡಿ ಕಮೆಂಟ್ ಗಳ ಸುರಿಮಳೆಯೇ ಸುರಿಯುತ್ತಿದೆ. ಪೂಜಾ, ವಿಧಿ ಏನೋ ಚಿಕ್ಕವರು. ನಿಮ್ಗೆಲ್ಲಾ ಏನು ಬಂದಿದೆ ಅಂತೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ.

More from Filmibeat

English summary
Lakshmi Baramma and Bhagyalakshmi tv serial artist video goes viral. Here is the details about Pooja Instagram video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X