For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟ ಚಂದು ಗೌಡ

  |

  ಚಿತ್ರರಂಗದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸ್ಯಾಂಡಲ್ ವುಡ್ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಅನೇಕ ಕಲಾವಿದರು ಹಸೆಮಣೆ ಏರುತ್ತಿದ್ದಾರೆ. ಇದೀಗ ಕನ್ನಡ ಕಿರುತೆರೆಯ ಖ್ಯಾತ ನಟ ಚಂದು ಬಿ ಗೌಡ ಬಹುಕಾಲದ ಗೆಳತಿ ಶಾಲಿನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ

  ಗುರುವಾರ (ಅ.29) ನಡೆದ ಮದುವೆ ಸಮಾರಂಭದಲ್ಲಿ ನಟ ಚಂದು ಗೆಳತಿ ಶಾಲಿನಿ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ಚಂದು ಮತ್ತು ಶಾಲಿನಿ ಸರಳವಾಗಿ, ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ಇಬ್ಬರ ಮದುವೆ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ತೀರಾ ಆಪ್ತರು ಮಾತ್ರ ಹಾಜರಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ಮುಂದೆ ಓದಿ..

  ಸ್ನೇಹಿತರು, ಕಿರುತೆರೆ ಕಲಾವಿದರು ಭಾಗಿ

  ಸ್ನೇಹಿತರು, ಕಿರುತೆರೆ ಕಲಾವಿದರು ಭಾಗಿ

  ನಟ ವಿಜಯ್ ಸೂರ್ಯ ಸೇರಿದಂತೆ ಕಿರುತೆರೆಯ ಕೆಲವು ಕಲಾವಿದರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಕೊರೊನಾ ವೈರಸ್ ಹಿನ್ನಲೆ ಸರಳವಾಗಿ ಚಂದು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಂದು ಶಾಲಿನಿ ಮದುವೆಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಚಂದು-ಶಾಲಿನಿ ಅವರದ್ದು 4 ವರ್ಷದ ಪ್ರೀತಿ

  ಚಂದು-ಶಾಲಿನಿ ಅವರದ್ದು 4 ವರ್ಷದ ಪ್ರೀತಿ

  ಅಂದ್ಹಾಗೆ ಶಾಲಿನಿ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರದ್ದು 4 ವರ್ಷದ ಪ್ರೀತಿ. ಸ್ನೇಹಿತರ ಮೂಲಕ ಶಾಲಿನಿ, ಚಂದುಗೆ ಪರಿಚಯವಾಗಿದ್ದಾರೆ. ಇಬ್ಬರಿಗೂ ಸ್ನೇಹವಾಗಿ, ಬಳಿಕ ಪ್ರೀತಿಗೆ ತಿರುಗಿದೆ. ಇಬ್ಬರ ಪ್ರೀತಿಗೆ ಮನೆಯವರಿಂದ ಗ್ರೀನ್ ಸಿಗ್ನಲ್ ಸಹ ಸಿಕ್ಕಿ ಈಗ ಪತಿ-ಪತ್ನಿಯರಾಗಿದ್ದಾರೆ.

  ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಖ್ಯಾತಿ

  ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಖ್ಯಾತಿ

  ಚಂದು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಂದನ್ ಪಾತ್ರದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಕನ್ನಡ ಕಿರುತೆರೆ ಮಾತ್ರವಲ್ಲದೆ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ತೆಲುಗಿನ ಸೂಪರ್ ಹಿಟ್ ತ್ರಿನಯನಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಬೇರೆ ಭಾಷೆಯಲ್ಲೂ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಚಾಟ್ ಕಾರ್ನರ್ ಎಂಬ ಟಾಕಿಂಗ್ ಶೋ ಮೂಲಕ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ರಾಬರ್ಟ್ ಸಿನಿಮಾದಲ್ಲಿ ಅಭಿನಯ

  ರಾಬರ್ಟ್ ಸಿನಿಮಾದಲ್ಲಿ ಅಭಿನಯ

  ಧಾರಾವಾಹಿ ಮಾತ್ರವಲ್ಲದೆ ಬೆಳ್ಳಿ ಪರದೆಮೇಲು ಮಿಂಚಿದ್ದಾರೆ. ಸದ್ಯ ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲಿ ಚಂದು ಅಭಿನಯಿಸಿದ್ದಾರೆ. ಮೊದಲ ಬಾರಿಗೆ ಚಂದು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಚಂದು, ಕುಷ್ಕ, ಜಾಕ್ ಪಾಟ್, ಕಮರೊಟ್ಟು ಚಕ್ ಪೋಸ್ಟ್, ಶ್ರೀ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Lakshmi Baramma fame Actor Chandu b gowda ties the knot with Shalini.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X