ಮಕ್ಕಳ ದಿನಾಚರಣೆ ದಿನ ಫೋಟೊ ಸಮೇತ ಮಗಳನ್ನು ಪರಿಚಯಿಸಿದ ಗೊಂಬೆ ನೇಹಾ ಗೌಡ

ಒಂದಷ್ಟು ವಿವಾದ, ಸಿನಿಮಾಗಳ ಸೋಲಿನ ನಡುವೆಯೂ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಸಿಹಿಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿದೆ. ಕಿರುತೆರೆ, ಹಿರಿತೆರೆಯ ನಟಿಯರಯಲ್ಲಿ ಇತ್ತೀಚೆಗೆ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಖುಷಿಯಲ್ಲಿದ್ದಾರೆ. ಮೊನ್ನೆ ಮೊನ್ನೆ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಇದಕ್ಕೂ ಮುನ್ನ ನಟಿಯರಾದ ಕವಿತಾ ಗೌಡ, ಹರ್ಷಿಕಾ ಪೂಣಚ್ಚ, ಮಿಲನಾ ನಾಗರಾಜ್, ಪ್ರಣೀತಾ(ಎರಡನೇ ಮಗು) ಹಾಗೂ ನೇಹಾ ಗೌಡ ಸೇರಿದಂತೆ ಕೆಲವರು ಸಿಹಿಸುದ್ದಿ ಕೊಟ್ಟಿದ್ದರು. ಇತ್ತೀಚೆಗೆ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿ ಕೂಡ ಮೊದಲು ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಹಂಚಿಕೊಂಡಿದ್ದರು. ಅಕ್ಟೋಬರ್ 30ರಂದು ಕಿರುತೆರೆ ನಟಿ ನೇಹಾ ಗೌಡ ಹಾಗೂ ನಟ ಚಂದನ್ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು.

Lakshmi baramma fame Gombe Neha gowda shares first glimpse of her baby girl on children s day

ಇವತ್ತು ಮಕ್ಕಳ ದಿನಾಚರಣೆ(ನವೆಂಬರ್ 14) ನೇಹಾ ಗೌಡ ತಮ್ಮ ಮಗಳ ಫೋಟೊ ಹಂಚಿಕೊಂಡಿದ್ದಾರೆ. "ನವೆಂಬರ್ 14 ರಂದು, ನಮ್ಮ ಪುಟ್ಟ ಮಗುವನ್ನು ನಿಮಗೆ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಜೀವನದಲ್ಲಿ ಅವಳನ್ನು ಹೊಂದಿರುವುದು ನಿಜವಾಗಿಯೂ ಅತ್ಯಂತ ವಿಶೇಷವಾದ ಭಾವನೆ. ಅವಳು ನಮ್ಮ ಹೃದಯವನ್ನು ನಿರೀಕ್ಷೆ ಮೀರಿ ತುಂಬಿಕೊಂಡಿದ್ದಾಳೆ. ಆಕೆಯಿಂದ ನಾವು ಸಂಪೂರ್ಣ ಆದಂತೆ ಆಗಿದೆ" ಎಂದು ನೇಹಾ ಪೋಸ್ಟ್ ಮಾಡಿದ್ದಾರೆ.

"ನಮ್ಮ ಮಗಳ ಜೊತೆ ಪ್ರತಿ ದಿನವೂ ಅವಳ ಪೋಷಕರಂತೆ ಬಹಳ ಸುಂದರವಾದ ಪಾತ್ರವನ್ನು ಹೊಂದಲು ನಾವು ಎಷ್ಟು ಅದೃಷ್ಟವಂತರು ಎಂಬುದನ್ನು ನೆನಪಿಸುತ್ತದೆ. ಎಲ್ಲಾ ಮಕ್ಕಳು ಹೊಳೆಯುತ್ತಿರಿ. ಮಕ್ಕಳ ದಿನಾಚರಣೆ ಶುಭಾಶಯ" ಎಂದು ಬರೆದುಕೊಂಡಿದ್ದಾರೆ.

ನೇಹಾ- ಚಂದನ್ ಪೋಸ್ಟ್‌ಗೆ ಶ್ರುತಿ ಪ್ರಕಾಶ್, ಪನ್ನಗಭರಣ, ನಮ್ರತಾ ಗೌಡ, ಪಲ್ಲವಿ ಗೌಡ, ಅನುಪಮಾ ಗೌಡ, ರಾಕೇಶ್ ಅಡಿಗ ಸೇರಿದಂತೆ ಹಲವರು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಅಭಿಮಾನಿಗಳು ಕೂಡ ಲೈಕ್ಸ್, ಕಾಮೆಂಟ್ಸ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಪುಟಾಣಿ ಗೊಂಬೆಯ ಫೋಟೊ ನೋಡ ನೋಡುತ್ತಲೇ ವೈರಲ್ ಆಗಿದೆ.

ನೇಹಾ ಗೌಡ ಹಾಗೂ ಚಂದನ್ ಚಿಕ್ಕಂದಿನಿಂದಲೂ ಒಟ್ಟಿಗೆ ಆಡಿ ಬೆಳೆದವರು. ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಇತ್ತೀಚೆಗೆ 'ಅಂತರಪಟ' ಧಾರಾವಾಹಿಯಲ್ಲಿ ನೇಹಾ ಪತಿ ಚಂದನ್ ಸಹ ನಾಯಕನಾಗಿ ನಟಿಸಿದ್ದರು. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಿಂದ ನೇಹಾ ಗೌಡ ಮನೆಮಾತಾಗಿದ್ದರು. ಆಕೆಯ ತಂದೆ ಮೇಕಪ್ ಕಲಾವಿದ ರಾಮಕೃಷ್ಣ ಕೂಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದರು.

ನೇಹಾ ಸಹೋದರಿ ಸೋನು ಗೌಡ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಕೂಡ ನೇಹಾ ನಟಿಸಿದ್ದರು. ಕಾಳತಾಳೀಯ ಅಂದರೆ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಟಿಸಿದ್ದ ಕವಿತಾ ಗೌಡ ಹಾಗೂ ನೇಹಾ ಗೌಡ ಒಟ್ಟೊಟ್ಟಿಗೆ ತಾಯ್ತನ ಎಂಜಾಯ್ ಮಾಡುತ್ತಿದ್ದಾರೆ. ಸೆಪ್ಟೆಂಬರ್ 18ರಂದು ಕವಿತಾ ಗೌಡ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಅಂದಹಾಗೆ ನೇಹಾ ಹಾಗೂ ಕವಿತಾ ಇಬ್ಬರೂ ಚಂದನ್ ಹೆಸರಿನ ಹುಡುಗನ್ನು ಪ್ರೀತಿಸಿ ಮದುವೆ ಆಗಿದ್ದಾರೆ. 2021 ರಲ್ಲಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಮದುವೆ ನಡೆದಿತ್ತು. 2018ರಲ್ಲಿ ನೇಹಾ ಹಾಗೂ ಚಂದನ್ ಹಸೆಮಣೆ ಏರಿದ್ದರು. ಮದುವೆಯಾಗಿ 6 ವರ್ಷಗಳ ಬಳಿಕ ನೇಹಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಕೆಲ ದಿನಗಳ ಹಿಂದೆ ನಡೆದ ನೇಹಾ ಗೌಡ ಸೀಮಂತ ಶಾಸ್ತ್ರ ಕಾರ್ಯಕ್ರಮದಲ್ಲಿ ಸಾಕಷ್ಟು ನಟ- ನಟಿಯರು ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿದ್ದವು. ಸದ್ಯ ಪುಟಾಣಿ ಗೊಂಬೆಯನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

More from Filmibeat

English summary
Kannada actress Neha Gowda post adorable glimpse of her baby girl;
Read more about: tv actress kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X