Lakshmi Baramma: ಆಲ್ಬಮ್ ಸಾಂಗ್‌ಗೆ ಸೆಲೆಕ್ಟ್ ಆಗಿದ್ದು ಲಕ್ಷ್ಮಿ..! ಕಾದು ಸುಸ್ತಾದ ಕೀರ್ತಿ ಮಾಡಿದ್ದೇನು..!?

By ಶೃತಿ ಹರೀಶ್ ಗೌಡ

ಲಕ್ಷ್ಮಿ ಬಾರಮ್ಮ ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ತಿರುವನ್ನ ಪಡೆದುಕೊಂಡು ಸಾಗುತ್ತಿದೆ. ಲಕ್ಷ್ಮಿ ಹಾಗೂ ವೈಷ್ಣವ್ ಜೋಡಿ ನೋಡಲು ನಾವು ಧಾರಾವಾಹಿ ನೋಡುತ್ತಿರುವುದಾಗಿ ವೀಕ್ಷಕರು ತಿಳಿಸಿದ್ದಾರೆ. ಇದೆಲ್ಲದರ ನಡುವೆ ಲಕ್ಷ್ಮಿ ಬರೆದಿರುವ ಹಾಡಿಗೆ ವೈಷ್ಣವ್ ದನಿಯಾಗಿದ್ದಾನೆ. ಅಷ್ಟೇ ಅಲ್ಲದೆ ಲಕ್ಷ್ಮಿಯನ್ನು ತನ್ನ ಆಲ್ಬಮ್ ಸಾಂಗ್‌ನಲ್ಲಿ ಡ್ಯಾನ್ಸ್ ಮಾಡಿಸಬೇಕು ಎಂದು ಎಲ್ಲೋ ಒಂದು ಕಡೆ ಪ್ಲ್ಯಾನ್ ಮಾಡಿದಂತೆ ಕಾಣುತ್ತಿದೆ. ಆದರೆ ಕೀರ್ತಿ ಮಾತ್ರ ವೈಷ್ಣವ್ ನನ್ನನ್ನು ಆಲ್ಬಮ್ ಸಾಂಗ್ ಸೇರಿಸಿಕೊಂಡಿರುವುದರಿಂದ ನನಗೆ ತುಂಬಾನೇ ಖುಷಿಯಾಗಿದೆ ಎಂದು ಕ್ಷಣ ಕ್ಷಣಕ್ಕೂ ಕೂಡ ಖುಷಿಪಡುತ್ತಾ ಇದ್ದಾಳೆ .ಆದರೆ ಇಲ್ಲಿ ವೈಷ್ಣವ್ ಮಾಡಿರುವ ಪ್ಲ್ಯಾನ್ ಬೇರೆನೆ.

ಕೀರ್ತಿ ಅಮ್ಮ ನೀನು ಇಷ್ಟೆಲ್ಲ ಖುಷಿ ಪಡಬೇಡ ಎಂದು ಹೇಳಿದ್ದರು. ಆದರೆ ಕೀರ್ತಿಗೆ ಇದ್ಯಾವುದರ ಪರಿವೆಯು ಇಲ್ಲ. ಆಲ್ಬಮ್ ಸಾಂಗ್‌ನಿಂದ ಲಕ್ಷ್ಮಿ ಹೊರಟು ಹೋಗಿ ನಾನೇ ವೈಷ್ಣವ್ ಜೊತೆಯಲ್ಲಿ ನಟಿಸಬೇಕು ಎಂಬುದಷ್ಟೇ ಕೀರ್ತಿಯ ಆಸೆ. ಇದಕ್ಕಾಗಿ ಎಲ್ಲಾ ಕೀರ್ತಿ ತಯಾರಿ ಮಾಡಿಕೊಂಡಿದ್ದಾಳೆ. ಕಾಸ್ಟ್ಯೂಮ್ ಹಾಗೂ ಜೆವೆಲ್ಸ್ ಎಲ್ಲವನ್ನು ಕೂಡ ತಾನೇ ಸೆಟ್ ಮಾಡಿಕೊಂಡಿದ್ದು ಈಗ ಸಾಂಗ್ ಶೂಟ್ ಮಾಡುವ ಸ್ಥಳಕ್ಕೆ ಬಂದಿದ್ದಾಳೆ. ಶೂಟಿಂಗ್ ಎಷ್ಟು ಹೊತ್ತಿಗೋ ಏನೋ ಎಂದು ಕಾಯುತ್ತಾ ಎಕ್ಸೈಟ್ಮೆಂಟ್‌ನಲ್ಲಿ ಕೀರ್ತಿ ಇದ್ದಾಳೆ. ವೈಷ್ಣವ್ ಯಾವಾಗ ಬರುತ್ತಾನೆ ಎಂದು ಪ್ರೀತಿ ವೈಷ್ಣವ್ ದಾರಿಯನ್ನೇ ಕಾಯುತ್ತಿದ್ದಾಳೆ.

Lakshmi Baramma kannada serial Written Update on december 29th episode

ಲಕ್ಷ್ಮಿಯನ್ನ ಕಾರ್ ಡ್ರೈವರ್ ದೇವಸ್ಥಾನದಿಂದ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾ ಇದ್ದಾನೆ ಲಕ್ಷ್ಮಿ ಎಲ್ಲಿಗೆ ಎಂದರು ಕೂಡ ಮಾತನಾಡದೆ ಇದ್ದಾನೆ. ಇದು ಲಕ್ಷ್ಮೀಗೆ ಗಾಬರಿ ತರಿಸುತ್ತಿದೆ ಜೊತೆಗೆ ತನ್ನ ಮೊಬೈಲ್ ಫೋನ್ ನೋಡಿಕೊಳ್ಳುತ್ತಾ ಇದ್ದಾಳೆ. ಪೋನ್ ಇಲ್ಲದೆ ಇರುವುದಕ್ಕೂ ಕೂಡ ಗಾಬರಿ ಮಾಡಿಕೊಂಡಿದ್ದಾಳೆ. ವೈಷ್ಣವ್ ಲಕ್ಷ್ಮಿ ಜೊತೆಯಲ್ಲಿ ಆಲ್ಬಮ್ ಸಾಂಗ್ ನಲ್ಲಿ ನಟಿಸಬೇಕು ಎಂದು ಅಂದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸುಕನ್ಯಾ ಬಳಿಯೂ ಕೂಡ ಅದನ್ನೇ ಹೇಳಿದ್ದಾನೆ. ನೀನು ಕೀರ್ತಿ ಬರುವುದನ್ನ ಒಪ್ಪಿಕೋ ನಾನು ಬೇರೆ ರೀತಿಯಲ್ಲಿ ಮಾಡುತ್ತೇನೆ. ನಿನಗೆ ನಾನು ಬೇಸರ ತರಿಸುವುದಿಲ್ಲ ಎಂದು ಹೇಳಿದ್ದಾನೆ.

ಶೂಟಿಂಗ್ ಬಾರದ ವೈಷ್ಣವ್, ಕಾದು ಕಾದು ಸುಸ್ತಾದ ಕೀರ್ತಿ

ಕೀರ್ತಿ ಚೆನ್ನಾಗಿ ರೆಡಿಯಾಗಿ ಶೂಟಿಂಗ್ ಸೆಟ್ನಲ್ಲಿ ಕಾಯುತ್ತಾ ಇದ್ದಾಳೆ. ಕೀರ್ತಿಯ ಬಳಿ ಬಂದ ಮತ್ತಿಬ್ಬರು ಹುಡುಗಿಯರು ಮೇಡಂ ಯಾವಾಗ ಹಾಡಿನ ಶೂಟಿಂಗ್ ನಡೆಯುತ್ತದೆ ಎಂದು ಕೇಳಿದಾಗ ಕೀರ್ತಿ ಅವರಿಬ್ಬರಿಗೂ ಕೂಡ ಗದರಿದ್ದಾಳೆ. ಇನ್ನೇನು ರಾತ್ರಿ ಆಗಿದೆ ಅಲ್ಲಿಗೆ ಬಂದ ಸುಕನ್ಯಾ ಇಂದು ಹಾಡಿನ ಶೂಟಿಂಗ್ ನಡೆಯೋದಿಲ್ಲ ಪ್ಯಾಕಪ್ ಮಾಡಿ ಎಂದು ಹೇಳಿದ್ದಾಳೆ. ಆದರೆ ಕೀರ್ತಿಗೆ ಸುಕನ್ಯಾ ಮಾತು ಕೇಳಿ ಒಂದು ಕ್ಷಣ ಗಾಬರಿಯಾಗಿದೆ. ಸುಕನ್ಯಾ ತನ್ನ ಮೇಲಿನ ದ್ವೇಷಕ್ಕೆ ಈ ರೀತಿ ಏನಾದರೂ ಹೇಳುತ್ತಿದ್ದಾಳಾ ಎಂದುಕೊಂಡಿದ್ದಾಳೆ. ಸುಕನ್ಯಾ ಅಲ್ಲಿದ್ದ ಹುಡುಗಿಯರಿಗೆ ಇಂದು ಹಾಡಿನ ಚಿತ್ರೀಕರಣ ಇಲ್ಲ. ಊಟ ರೆಡಿಯಾಗಿದೆ ಜೊತೆಗೆ ಮ್ಯಾನೇಜರ್‌ಗೆ ಹೇಳಿದ್ದೇನೆ ನಿಮ್ಮ ಹಣವನ್ನ ತೆಗೆದುಕೊಂಡು ಮನೆಗೆ ಹೋಗಿ ಎಂದು ಹೇಳಿದ್ದಾಳೆ.

Lakshmi Baramma kannada serial Written Update on december 29th episode

ಈ ಕಡೆ ಕೀರ್ತಿ ಸುಕನ್ಯಾ ಬಳಿಯಲ್ಲಿ ನನ್ನ ಮೇಲೆ ಇರುವ ದ್ವೇಷಕ್ಕೆ ನೀನು ನನಗೆ ಈ ರೀತಿಯೆಲ್ಲಾ ಮಾತನಾಡಬೇಡ. ವೈಷ್ಣವ್ ನನಗೆ ಫೋನ್ ಮಾಡಿ ಬರುತ್ತೇನೆ ಎಂದು ಹೇಳಿದ್ದಾನೆ ಎಂದು ವೈಷ್ಣವ್‌ಗೆ ಫೋನ್ ಮಾಡುತ್ತಾಳೆ. ಆದರೆ, ಆತ ಕಾಲ್ ಪಿಕ್ ಮಾಡಿಲ್ಲ. ಬಳಿಕ ಕೂಡ ವೈಷ್ಣವ್ ಊಟ ಮಾಡಿ ಮಲಗಿರಬೇಕು ಮನೆಗೆ ಹೋಗಿ ಕೇಳು ಎಂದು ಹೇಳುತ್ತಾಳೆ.

ಕೀರ್ತಿ ದಿಕ್ಕು ತಪ್ಪಿಸಿದ್ನಾ ವೈಷ್ಣವ್, ಏನೋ ಸರಿ ಇಲ್ಲ ಎಂದುಕೊಂಡ ಕಾವೇರಿ!

ವೈಷ್ಣವ್ ಕೀರ್ತಿಯ ದಿಕ್ಕನ್ನು ತಪ್ಪಿಸಿದ್ನಾ ಎಂಬ ಗೊಂದಲ ಈಗ ಶುರುವಾಗಿದೆ. ಯಾಕೆಂದರೆ ಕೀರ್ತಿಗೆ ನೀನೆ ಆಲ್ಬಮ್ ಸಾಂಗ್‌ನಲ್ಲಿ ನಟನೆ ಮಾಡಬೇಕು ಎಂದು ಹೇಳಿ ಕೀರ್ತಿ ಮಾಡಿದ್ದ ಪ್ಲಾನ್ ವೈಷ್ಣವ್ ಉಲ್ಟಾ ಮಾಡಿದಂತೆ ಕಾಣಿಸುತ್ತಿದೆ. ಈ ಕಡೆ ಕಾವೇರಿಗೂ ಕೂಡ ಇಲ್ಲಿ ಏನು ಸರಿ ಇಲ್ಲ ಎಂಬ ಗೊಂದಲ ಶುರುವಾಗಿದೆ. ಹೀಗಾಗಿ ತನ್ನ ಗಂಡ ಕೃಷ್ಣನ ಬಳಿ ಇಲ್ಲಿ ಏನೋ ಸರಿ ಇಲ್ಲ ನನಗೆ ಎಲ್ಲವೂ ಕೂಡ ಕನ್ಫ್ಯೂಸ್ ಆಗುತ್ತಿದೆ ಎಂದು ಹೇಳಿದ್ದಾಳೆ. ಅಷ್ಟರಲ್ಲಿ ವೈಷ್ಣವ್ ಬಂದು ಎಲ್ಲವೂ ಕೂಡ ಸರಿಯಾಗಿಯೇ ನಡೆಯುತ್ತಿದೆ ನಾನಂದುಕೊಂಡಂತೆ ಆಗುತ್ತಿದೆ ಎಂದು ಹೇಳುತ್ತಿದ್ದಾನೆ. ಈಗ ನಿಜವಾಗಿಯೂ ವೈಷ್ಣವ್ ಜೊತೆಗೆ ಲಕ್ಷ್ಮಿ ಆಲ್ಬಮ್ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾಳಾ ಇಲ್ಲವಾ ಇದೆಲ್ಲವಕ್ಕೂ ಕೂಡ ಮುಂದೆ ಉತ್ತರ ಸಿಗಲಿದೆ.

More from Filmibeat

English summary
Lakshmi Baramma serial Written Update on december 29th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X