Sushma Nanaiah: 'ಲಕ್ಷ್ಮಿ ಬಾರಮ್ಮ' ಕಾವೇರಿ ಫ್ಯಾಮಿಲಿ ನೋಡಿದ್ದೀರಾ? ಇಲ್ಲಿದೆ ಮಸ್ತ್ ಫೋಟೊಶೂಟ್
ಸುಷ್ಮಾ ನಾಣಯ್ಯ... ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ವೈಷ್ಣವ್ ಅಮ್ಮ ಕಾವೇರಿಯಾಗಿ ಅಭಿನಯಿಸುತ್ತಿರುವ ಸುಷ್ಮಾ ನಾಣಯ್ಯ ಇತ್ತೀಚೆಗಷ್ಟೇ ಮಾಡಿಸಿಕೊಂಡಿರುವ ಫೋಟೋಶೂಟ್ ಸಖತ್ ಸದ್ದು ಮಾಡುತ್ತಿದೆ. ಹೌದು, ಸುಷ್ಮಾ ತಮ್ಮ ಪತಿ ಹಾಗೂ ಮುದ್ದಿನ ಮಗಳೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಈ ಮುದ್ದಾದ ಕುಟುಂಬ ಕಂಡು ನೆಟ್ಟಿಗರು ಪಿಧಾ ಆಗಿದ್ದಾರೆ.
ತಮ್ಮ ಕುಟುಂಬದ ಅದ್ಭುತವಾದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸುಷ್ಮಾ ನಾಣಯ್ಯ ಅವರು ಫೋಟೋಗ್ರಾಫರ್‌ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. "ನಾನು ನನ್ನ ಮಗಳು ಮತ್ತು ಪತಿಯೊಡನೆ ಫೋಟೋಶೂಟ್ ಮಾಡಿಸಿಕೊಳ್ಳಬೇಕು ಎಂದು ಅಂದುಕೊಂಡಿದ್ದೆ. ಅದಕ್ಕಾಗಿ ನಾನು ಒರ್ವ ಅದ್ಭುತ ಫೋಟೋಗ್ರಾಫರ್‌ನ ಹುಡುಕಾಟದಲ್ಲಿದ್ದೆ. ಆಗ ನನ್ನ ಸ್ನೇಹಿತರೊಬ್ಬರಿಂದ ಪ್ರೊಫೆಶನಲ್ ಫೋಟೋಗ್ರಾಫರ್ ಪೂಜಾ ಬಗ್ಗೆ ತಿಳಿಯಿತು" ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ "ಫೋಟೋಶೂಟ್ ಪೂರ್ತಿ ಅವರು ತುಂಬಾ ತಾಳ್ಮೆಯಿಂದ ಇದ್ದರು. ಮಾತ್ರವಲ್ಲದೇ ನನ್ನ, ಮಗಳ ಹಾಗೂ ಕುಟುಂಬದ ಫೋಟೋವನ್ನು ತುಂಬಾ ಚೆನ್ನಾಗಿ ಸೆರೆ ಹಿಡಿದಿದ್ದಾರೆ. ನಿಮಗೆ ಆಲ್ ದಿ ಬೆಸ್ಟ್ ಹಾಗೂ ನಿಮ್ಮ ಕೆಲಸ ಹೀಗೆ ಸಾಗುತ್ತಿರಲಿ" ಎಂದು ಸುಷ್ಮಾ ನಾಣಯ್ಯ ಶುಭ ಹಾರೈಸಿದ್ದಾರೆ.
ಸುಷ್ಮಾ ನಾಣಯ್ಯ ಅವರ ಪತಿ ಹೆಸರು ಪ್ರತೀಕ್. ಇವರದು ಲವ್ ಕಮ್ ಆರೆಂಜ್ ಮ್ಯಾರೇಜ್ ಎಂದರೆ ತಪ್ಪಾಗಲಾರದು. ಸುಷ್ಮಾ ಹಾಗೂ ಪ್ರತೀಕ್ ಸ್ಕೂಲ್ ಫ್ರೆಂಡ್ಸ್ ಹೌದು. ಮುಂದೆ ಒಬ್ಬರನ್ನೊಬ್ಬರು ಪ್ರೀತಿಸಲಾರಂಭಿಸಿದರು. ವಿದ್ಯಾಭ್ಯಾಸದ ಬಳಿಕ ಕೆರಿಯರ್ ಶುರು ಮಾಡಿದಾಗ ಪ್ರತೀಕ್, ಸುಷ್ಮಾಗೆ ಪ್ರಪೋಸ್ ಮಾಡಿದರು.

ಸುಷ್ಮಾ ಹಾಗೂ ಪ್ರತೀಕ್ ಅವರು ತಮ್ಮ ತಮ್ಮ ವೃತ್ತಿ ಜೀವನದಲ್ಲಿ ಸರಿಯಾಗಿ ಸೆಟಲ್ ಆದ ಬಳಿಕ ತಮ್ಮ ಪ್ರೇಮದ ವಿಚಾರವನ್ನು ಮನೆಯವರಿಗೆ ತಿಳಿಸಿ, ಅವರ ಒಪ್ಪಿಗೆ ಪಡೆದು 2013ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ನಾನಿಂದು ನಟಿಯಾಗಲು ಪ್ರತೀಕ್ ಅವರೇ ಕಾರಣ. ಅವರು ನೀಡಿದ ಪ್ರೋತ್ಸಾಹ, ಬೆಂಬಲದಿಂದಲೇ ನಾನು ನಟಿಯಾದೆ ಎಂದು ಹೇಳುವ ಸುಷ್ಮಾ ಅವರು ಮುದ್ದಾದ ಹೆಣ್ಣು ಮಗುವಿನ ತಾಯಿಯೂ ಹೌದು.
ಮಗಳು ದಿವಿಯಾನಾ ಕಾರಣದಿಂದಾಗಿ ಕೊಂಚ ಸಮಯ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದ ಸುಷ್ಮಾ ನಾಣಯ್ಯ, ಇದೀಗ ವಯಸ್ಸಿಗೂ ಮೀರಿದ ಪಾತ್ರದ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ. ಪೋಷಕ ಪಾತ್ರದ ಮೂಲಕ ಕಿರುತೆರೆಗೆ ಸುಷ್ಮಾ ನಾಣಯ್ಯ ಅವರು ಮರಳಿದ್ದರೂ ತಮ್ಮ ನಟನೆಯ ಮೂಲಕ ಮತ್ತೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.


Click it and Unblock the Notifications











