Tanvi Rao: ವಿಲನ್ ಆಗಲು ಒಪ್ಪಿರಲಿಲ್ಲ ತನ್ವಿ ರಾವ್.. ಆದ್ರೀಗ ಅದೇ ಪಾತ್ರಕ್ಕೆ ಜೈ ಎಂದ ವೀಕ್ಷಕರು
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ವೈಷ್ಣವ್ ಅವರ ಪ್ರೇಯಸಿ, ಖಳನಾಯಕಿ ಕೀರ್ತಿ ಆಗಿ ಅಭಿನಯಿಸುತ್ತಿರುವ ತನ್ವಿ ರಾವ್ ನಟಿ ಮಾತ್ರವಲ್ಲದೇ ಜನ ಮೆಚ್ಚಿದ ಸ್ಟೈಲ್ ಐಕಾನ್ ಅಂತೆ! ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ಇತ್ತೀಚೆಗಷ್ಟೇ ನಡೆದಿದ್ದು, ಅದರಲ್ಲಿ ಜನ ಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು ಬಿಟ್ಟಿದ್ದಾರೆ ತನ್ವಿ ರಾವ್.
ಸದ್ಯಕ್ಕೆ ಮದುವೆಯಾಗಿರುವ ನಾಯಕ ವೈಷ್ಣವ್‌ನನ್ನು ಪಡೆದೇ ಸಿದ್ಧ ಎನ್ನುವ ಕೀರ್ತಿ ಪಾತ್ರದಲ್ಲಿ ನೆಗೆಟಿವ್ ಛಾಯೆ ಇರುವುದಂತೂ ಸತ್ಯ. ಆರಂಭದಲ್ಲಿ ಕೀರ್ತಿ ಪಾತ್ರವನ್ನು ಮಾಡಬೇಕಾಗಿ ಬಂದಾಗ ಮೊದಲಿಗೆ ನಟಿ ತನ್ವಿ ರಾವ್ ಒಪ್ಪಲಿಲ್ಲವಂತೆ. ಈ ರೀತಿ ವಿಲನ್ ಆಗಿ ಕಾಣಿಸಿಕೊಳ್ಳುವುದರಿಂದ ಜನರ ದ್ವೇಷಕ್ಕೆ ಕಾರಣವಾಗಬಹುದು ಎಂದು ಭಯವಾಗಿತ್ತಂತೆ. ಕ್ರಮೇಣ ಹೊಸ ರೀತಿಯ ಪಾತ್ರ ಎಂದು ಒಪ್ಪಿಕೊಂಡರಂತೆ. ಇದೀಗಂತೂ ಈಕೆಯ ನಟನೆಗೆ ಜನರಿಂದ ಸಿಗುತ್ತಿರುವ ಪ್ರೀತಿಗೆ ಬಹಳ ಖುಷಿಯಾಗಿದ್ದಾರಂತೆ ತನ್ವಿ ರಾವ್.

ಹೌದು! ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದರೂ ಜನರು ಆ ಪಾತ್ರವನ್ನು, ಪಾತ್ರಧಾರಿಯನ್ನು ಮೆಚ್ಚುತ್ತಿದ್ದಾರೆ ಎಂದರೆ ತನ್ವಿ ರಾವ್ ಅವರ ನಟನೆಯಲ್ಲಿ ಒಂದು ರೀತಿಯ ಪವರ್ ಇದೆ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಕೀರ್ತಿ ಒಬ್ಬ ವಿಚಿತ್ರ ಹುಡುಗಿ. ತನಗೆ ಕೋಪ ಬಂದಾಗ ಬಹಳಷ್ಟು ಕೂಗಾಡುತ್ತಾಳೆ ಖುಷಿಯಾದಾಗ ತುಂಬಾ ನಗುತ್ತಾಳೆ. ಹೀಗೆ ವಿಪರೀತವಾದ ಭಾವನೆಗಳನ್ನು ಹೊರ ಹಾಕುವ ಇವಳು ತನ್ನದೇ ಆದ ಭಾವನಾತ್ಮಕ ಸಂಕೋಲೆಯಲ್ಲಿ ಸಿಕ್ಕಿಕೊಂಡಿದ್ದಾಳೆ. ಈ ಪಾತ್ರವನ್ನು ನಿಭಾಯಿಸುವುದು ಖುಷಿಯ ವಿಚಾರವೇ.
ಆದರೆ, ಇಡೀ ಶೂಟಿಂಗ್ ಮುಗಿದಾಗ, ದಿನದ ಕೊನೆಯಲ್ಲಿ ತನ್ವಿ ಅವರಿಗೆ ಬಹಳಷ್ಟು ಸುಸ್ತಾಗಿರುತ್ತದೆಯಂತೆ. ಮನೆಗೆ ಬಂದವಳೇ ಬೇರೇನು ಚಟುವಟಿಕೆ ಮಾಡದೆ ಮಲಗಿಬಿಡುತ್ತಾರೆಯಂತೆ. ಇಷ್ಟೊಂದು ಪವರ್ ಫುಲ್ ಪಾತ್ರವನ್ನು ಮಾಡುವುದಕ್ಕೆ ತನ್ವಿ ಅವರಿಗೆ ಖುಷಿ ಹಾಗೂ ನೆಮ್ಮದಿ ಇದೆಯಂತೆ. ಈ ಪಾತ್ರ ಆಕೆಗೆ ಕೊಟ್ಟಿರುವಂತಹ ಪ್ರೀತಿ ಹಾಗೂ ಜನಪ್ರಿಯತೆ ಬಗ್ಗೆ ಬಹಳಷ್ಟು ಸಂತೃಪ್ತಿ ಇದೆಯಂತೆ.
ಅಂದ ಹಾಗೇ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕೃತಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ತನ್ವಿ ರಾವ್ ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧೆ ಶ್ಯಾಮ' ಧಾರಾವಾಹಿಯಲ್ಲಿ ನಾಯಕಿ ರಾಧಾಳಾಗಿ ನಟಿಸಿ ವೀಕ್ಷಕರ ಮನ ಸೆಳೆದರು. ಮುಂದೆ ತಮಿಳಿನ 'ಜಮೀಲಾ' ಧಾರಾವಾಹಿಯಲ್ಲಿ ನಟಿಸಿದ್ದ ಈಕೆ ಇದೀಗ ಕೀರ್ತಿಯಾಗಿ ಕನ್ನಡ ಕಿರುತೆರೆಯಲ್ಲಿ ನಟನಾ ಛಾಪನ್ನು ಪಸರಿಸುತ್ತಿದ್ದಾರೆ.

ನಟನೆಯ ಜೊತೆಗೆ ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡಿರುವ ತನ್ವಿ ರಾವ್ ಅವರು ಹಿಂದಿ ಸಿನಿರಂಗದ ಜನಪ್ರಿಯ ತಾರೆಯರಾದ ಮಾಧುರಿ ದೀಕ್ಷಿತ್ ಹಾಗೂ ಜೂಹಿ ಚಾವ್ಲಾ ಅವರ ಜೊತೆಗೆ ತೆರೆ ಹಂಚಿಕೊಂಡಿರುವ ಅದೃಷ್ಟವಂತೆ. ಬಾಲಿವುಡ್ ಸಿನಿಮಾ 'ಗುಲಾಬಿ ಗ್ಯಾಂಗ್'ನಲ್ಲಿ ನಟಿಸಿರುವ ತನ್ವಿ ಅವರು ಮುಂದೆ 'ಗನ್ಸ್ ಆಫ್ ಬನಾರಸ್' ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಇನ್ನು ಇದರ ಜೊತೆಗೆ ಕನ್ನಡದ 'ರಂಗ್ ಬಿರಂಗಿ' ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ.


Click it and Unblock the Notifications











