For Quick Alerts
  ALLOW NOTIFICATIONS  
  For Daily Alerts

  'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಚಿನ್ನು ಪರಭಾಷೆಯ ಕಿರುತೆರೆಯಲ್ಲಿ ಸೂಪರ್ ಬ್ಯುಸಿ

  By ಅನಿತಾ ಬನಾರಿ
  |

  ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ಬಾರಮ್ಮ' ಕೂಡಾ ಒಂದು. ಬರೋಬ್ಬರಿ ಏಳು ವರ್ಷಗಳ ಕಾಲ ವಿಭಿನ್ನ ಕಥಾಹಂದರದ ಮೂಲಕ ವೀಕ್ಷಕರನ್ನು ರಂಜಿಸಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯು ಪಾತ್ರವರ್ಗದ ಮೂಲಕವೂ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿತ್ತು.

  'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಚಿನ್ನು ಆಲಿಯಾಸ್ ಲಕ್ಷ್ಮಿಯಾಗಿ ಅಭಿನಯಿಸಿದ್ದ ರಶ್ಮಿ ಪ್ರಭಾಕರ್ ಇಂದಿಗೂ ಆ ಪಾತ್ರದ ಮೂಲಕವೇ ಫೇಮಸ್ಸು. ಹೌದು, ಧಾರಾವಾಹಿ ಮುಗಿದು ವರ್ಷ ಮೂರು ಕಳೆಯುತ್ತಾ ಬಂದರೂ ಇಂದಿಗೂ ರಶ್ಮಿ ಪ್ರಭಾಕರ್ ಹೆಸರು ಕೇಳಿದ ತಕ್ಷಣ ನೆನಪಾಗುವುದು ಚಿನ್ನು ಪಾತ್ರ. ಅಷ್ಟರ ಮಟ್ಟಿಗೆ ಆ ಪಾತ್ರ ಜನಪ್ರಿಯತೆ ಗಿಟ್ಟಿಸಿಕೊಂಡು ಬಿಟ್ಟಿತ್ತು.

  ರೋಜಾ ಅವತಾರವೆತ್ತಿ ತೆಲುಗು ಕಿರುತೆರೆಗೆ ಕಾಲಿಟ್ಟ ಸುಪ್ರಿತಾ ಸತ್ಯನಾರಾಯಣರೋಜಾ ಅವತಾರವೆತ್ತಿ ತೆಲುಗು ಕಿರುತೆರೆಗೆ ಕಾಲಿಟ್ಟ ಸುಪ್ರಿತಾ ಸತ್ಯನಾರಾಯಣ

  ಸದ್ಯ ತಮಿಳಿನ ಸ್ಟಾರ್ ವಿಜಯ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ 'ಕಣ್ಣೆ ಕಲೈಮಾನೆ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ರಶ್ಮಿ ಪ್ರಭಾಕರ್ ಪೋಷಕ ಪಾತ್ರಗಳ ಮೂಲಕ ಕಿರುತೆರೆಗೆ ಕಾಲಿಟ್ಟ ಚೆಲುವೆ‌. ಜೀ ಕನ್ನಡದ 'ಶುಭವಿವಾಹ' ಧಾರಾವಾಹಿಯಲ್ಲಿ ನಾಯಕಿ ಶ್ರದ್ಧಾ ತಂಗಿ ರಚನಾ ಪಾತ್ರಕ್ಕೆ ಜೀವ ತುಂಬುವ ಮೂಲಕ ಕಿರುತೆರೆಗೆ ಕಾಲಿಟ್ಟ ರಶ್ಮಿ ಪ್ರಭಾಕರ್ ಈಗ ನಾಯಕಿಯಾಗಿ ಮಿಂಚುತ್ತಿದ್ದಾರೆ‌.

  ಕಿರುತೆರೆ ನಟಿ ರಶ್ಮಿ ಪಯಣ

  ಕಿರುತೆರೆ ನಟಿ ರಶ್ಮಿ ಪಯಣ

  ಪೌರಾಣಿಕ ಧಾರಾವಾಹಿ 'ಮಹಾಭಾರತ'ದಲ್ಲಿ ದುರ್ಯೋಧನನ ತಂಗಿ ದುಶ್ಯಲೆಯಾಗಿ ನಟಿಸಿದ್ದ ಈಕೆ ಮುಂದೆ 'ಜೀವನ ಚೈತ್ರ' ಧಾರಾವಾಹಿಯಲ್ಲಿ ದೊಡ್ಮಲ್ಲಿಯಾಗಿ ಮೋಡಿ ಮಾಡಿದ್ದರು. ಮುಂದೆ ಪರಭಾಷೆಯ ಕಿರುತೆರೆಯಿಂದ ಅವಕಾಶ ಗಿಟ್ಟಿಸಿಕೊಂಡಿರುವ ರಶ್ಮಿ ತಮಿಳಿನ ಅರುಂಧತಿ ಧಾರಾವಾಹಿಯ ಸಂಗವಿಯಾಗಿ ಪರಭಾಷೆಯ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು.

  Kavya Ramesh:ಕಿರುತೆರೆ ನಂತರ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಕಾವ್ಯ ರಮೇಶ್!Kavya Ramesh:ಕಿರುತೆರೆ ನಂತರ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಕಾವ್ಯ ರಮೇಶ್!

  ಚಿನ್ನು ಪಾತ್ರದಲ್ಲಿ ರಶ್ಮಿ ಶೈನಿಂಗ್

  ಚಿನ್ನು ಪಾತ್ರದಲ್ಲಿ ರಶ್ಮಿ ಶೈನಿಂಗ್

  'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಚಿನ್ನು ಆಗಿ ನಟಿಸುತ್ತಿದ್ದ ಕವಿತಾ ಗೌಡ ಕಾರಣಾಂತರಗಳಿಂದ ಪಾತ್ರಕ್ಕೆ ವಿದಾಯ ಹೇಳಿದಾಗ ಆ ಜಾಗಕ್ಕೆ ಬಂದವರೇ ರಶ್ಮಿ ಪ್ರಭಾಕರ್. ಈಗಾಗಲೇ ಕವಿತಾ ಗೌಡ ನಿರ್ವಹಿಸುತ್ತಿದ್ದ ಪಾತ್ರದಲ್ಲಿ ನಟಿಸಲು ನನ್ನಿಂದ ಸಾಧ್ಯವೇ ಎಂಬ ರಶ್ಮಿ ಮನಸ್ಸಿನ ಅಳುಕನ್ನು ಹೋಗಲಾಡಿಸಿದ್ದು ವೀಕ್ಷಕರು. ಚಿನ್ನು ಪಾತ್ರವನ್ನು ಅವರು ಅಪ್ಪಿಕೊಂಡರು.

  'ಪೌರ್ಣಮಿ'ಯಲ್ಲಿ ದ್ವಿಪಾತ್ರ

  'ಪೌರ್ಣಮಿ'ಯಲ್ಲಿ ದ್ವಿಪಾತ್ರ

  ತೆಲುಗಿನ 'ಪೌರ್ಣಮಿ' ಧಾರಾವಾಹಿಯಲ್ಲಿಯೂ ಬಣ್ಣ ಹಚ್ಚಿದ್ದ ಈಕೆ ಪೌರ್ಣಮಿ ಹಾಗೂ ವೆನಿಲ್ಲಾ ಎಂಬ ದ್ವಿಪಾತ್ರಗಳಲ್ಲಿ ನಟಿಸಿದ್ದರು. ಈ ಧಾರಾವಾಹಿ ಮೂಲಕ ರಶ್ಮಿ ಪ್ರಭಾಕರ್ ಕನ್ನಡ ಮತ್ತೆ ತೆಲುಗು ಕಿರುತೆರೆಯಲ್ಲಿ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು. ಮಾತ್ರವಲ್ಲ ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿದ್ದರು ರಶ್ಮಿ ಪ್ರಭಾಕರ್.

  Priya Kesare:'ಅಶ್ವಿನಿ ನಕ್ಷತ್ರ' ಖ್ಯಾತಿ ನಟಿ ಪ್ರಿಯಾ ಕೆಸರೆ ನಟನೆಯಿಂದ ದೂರ ಉಳಿದಿದ್ದೇಕೆ? ಕಾರಣ ಇದೇನೆ!Priya Kesare:'ಅಶ್ವಿನಿ ನಕ್ಷತ್ರ' ಖ್ಯಾತಿ ನಟಿ ಪ್ರಿಯಾ ಕೆಸರೆ ನಟನೆಯಿಂದ ದೂರ ಉಳಿದಿದ್ದೇಕೆ? ಕಾರಣ ಇದೇನೆ!

  ರಾಗ ಅವತಾರದಲ್ಲಿ ಮಿಂಚಿಂಗ್

  ರಾಗ ಅವತಾರದಲ್ಲಿ ಮಿಂಚಿಂಗ್

  'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ರಶ್ಮಿ ಪ್ರಭಾಕರ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸ್ಸೆಲ್ಲಾ ನೀನೆ' ಧಾರಾವಾಹಿಯ ರಾಗ ಆಗಿ ಕಿರುತೆರೆಗೆ ಮರಳಿದರು. ಒಂದಷ್ಟು ಸಮಯದವರೆಗೆ ರಾಗ ಆಗಿ ರಂಜಿಸಿದ್ದ ರಶ್ಮಿ ಪ್ರಭಾಕರ್ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದರು.

  ಪರಭಾಷೆಯಲ್ಲಿ ರಶ್ಮಿ 'ಮಹಾಕಾವ್ಯ'

  ಪರಭಾಷೆಯಲ್ಲಿ ರಶ್ಮಿ 'ಮಹಾಕಾವ್ಯ'

  ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವ್ಯಾಂಜಲಿ' ಧಾರಾವಾಹಿಯು ತೆಲುಗಿಗೆ ರಿಮೇಕ್ ಆಗಿದ್ದು, ಅದರಲ್ಲಿ ಕಾವ್ಯಾ ಪಾತ್ರಕ್ಕೆ ರಶ್ಮಿ ಪ್ರಭಾಕರ್ ಜೀವ ತುಂಬಿದ್ದರು. ಕಿರುತೆರೆಯ ಜೊತೆಗೆ ಹಿರಿತೆರೆಗೂ ಕಾಲಿಟ್ಟ ರಶ್ಮಿ 'ಬಿಬಿ5' ಹಾಗೂ 'ಮಹಾಕಾವ್ಯ' ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

  ಸೂಪರ್‌ ಕ್ವೀನ್ ರಶ್ಮಿ

  ಸೂಪರ್‌ ಕ್ವೀನ್ ರಶ್ಮಿ

  ಸದ್ಯ ತಮಿಳು ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ರಶ್ಮಿ ಪ್ರಭಾಕರ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಸೂಪರ್ ಕ್ವೀನ್'ನಲ್ಲಿ ಸ್ಪರ್ಧಿಯಾಗಿ ನಟಿಸುತ್ತಿರುವ ರಶ್ಮಿ ಪ್ರತಿ ವಾರವೂ ವಿಭಿನ್ನ ರೀತಿಯಲ್ಲಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

  English summary
  Lakshmi Baramma Serial Chinnu Fame Rashmi Prabhakar Busy In Tamil Serial,Know More
  Sunday, January 15, 2023, 16:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X