'ಲಕ್ಷ್ಮೀ ಬಾರಮ್ಮ' ನಟಿ ಅನಿಕಾ ಸಿಂಧ್ಯ ಲೈಫ್ ಸ್ಟೋರಿ ಬಲು ರೋಚಕ!

By ಪ್ರಿಯಾ ದೊರೆ

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ. ಮಕ್ಕಳಿಂದ ಹಿಡಿದು ಎಲ್ಲರೂ ಈ ಧಾರಾವಾಹಿಯನ್ನು ನೋಡಿದ್ದಾರೆ. ಸರಿ ಸುಮಾರು 6 ವರ್ಷಗಳ ಕಾಲ ಮೂಡಿ ಬಂದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮೂಲಕ ಹಲವು ನಟ-ನಟಿಯರು ಫೇಮಸ್ ಆಗಿದ್ದು ಉಂಟು.

ಕವಿತಾ ಗೌಡ, ನೇಹ ಗೌಡ, ರಶ್ಮಿ ಪ್ರಭಾಕರ್, ಚಂದನ್, ಅನಿಕಾ ಸಿಂಧ್ಯ ಹೀಗೆ ಹೇಳುತ್ತಿದ್ದರೆ, ಸಾಲು ಸಾಲು ಹೆಸರುಗಳನ್ನು ಹೇಳಬಹುದು. ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಟ-ನಟಿಯರಿಗೆ ಒಳ್ಳೆಯ ಬ್ರೇಕ್ ಸಿಕ್ಕಿತ್ತು. ಧಾರಾವಾಹಿ ಮುಗಿದು ಕಾಲವೇ ಕಳೆದರೂ ಇನ್ನೂ ಈ ಸೀರಿಯಲ್ ನಲ್ಲಿ ಬಂದ ಪಾತ್ರಗಳನ್ನು ಜನ ಮರೆತಿಲ್ಲ.

ಇನ್ನು 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕುಮುದಾ ಪಾತ್ರದಲ್ಲಿ ಮಿಂಚಿದ ಅನಿಕಾ ಸಿಂಧ್ಯ ಸದ್ಯ ಎಲ್ಲೂ ಕಾಣಿಸಿಕೊಂಡಿಲ್ಲ. ಸಿನಿಮಾ ಮೂಲಕ ನಟನೆಯ ಪಯಣ ಆರಂಭಿಸಿದ ಅನಿಕಾ ಅಕಸ್ಮಾತ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರಂತೆ.

 ಕಿರುತೆರೆಯಲ್ಲಿ ಅನಿಕಾ ಬ್ಯುಸಿ!

ಕಿರುತೆರೆಯಲ್ಲಿ ಅನಿಕಾ ಬ್ಯುಸಿ!

ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ಅನಿಕಾ ಸಿಂಧ್ಯ ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ಪಾತ್ರಗಳನ್ನೂ ನಿಭಾಯಿಸಿದ್ದಾರೆ. ತಮ್ಮ ವಯಸ್ಸಿನ ಹೀರೊ- ಹೀರೋಯಿನ್ ಗಳಿಗೆ ಅತ್ತೆ, ಅಕ್ಕ ಹಾಗೂ ಚಿಕ್ಕಮ್ಮನ ಪಾತ್ರಗಳಲ್ಲಿ ಅಭಿನಯಿಸಿ ಜೈ ಎನಿಸಿಕೊಂಡಿದ್ದಾರೆ. ಅನಿಕಾ ಯಾವಾಗಲೂ ಧಾರಾವಾಹಿಗಳಲ್ಲಿ ನಟಿಸಬೇಕು ಎಂದು ನಟಿಸುವುದಿಲ್ಲ. ಬದಲಿಗೆ ಒಳ್ಳೆಯ ಪಾತ್ರ ಮಾಡಬೇಕು ಎಂದು ಅಭಿನಯಿಸುತ್ತಾರೆ. ಇದುವರೆಗೂ ಅನಿಕಾ ಸಿಂಧ್ಯ , ಐವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

 ಹೆಸರು ಕೊಟ್ಟಿದ್ದು 'ಲಕ್ಷ್ಮೀ ಬಾರಮ್ಮ' ಧಾರಾವಾಹಿ!

ಹೆಸರು ಕೊಟ್ಟಿದ್ದು 'ಲಕ್ಷ್ಮೀ ಬಾರಮ್ಮ' ಧಾರಾವಾಹಿ!

'ಲಕ್ಷ್ಮೀ ಬಾರಮ್ಮ' ಸೀರಿಯಲ್ ಹಲವರಿಗೆ ಹೆಸರು ತಂದು ಕೊಟ್ಟ ಧಾರಾವಾಹಿ ಎಂದರೆ ತಪ್ಪಾಗುವುದಿಲ್ಲ. ಇದರಲ್ಲಿ ಅನಿಕಾ ಕುಮುದಾ ಪಾತ್ರದಲ್ಲಿ ನಟಿಸಿದ್ದರು. ನೆಗೆಟಿವ್ ರೋಲ್ ಆಗಿದ್ದರೂ ಕೂಡ, ಅನಿಕಾ ಅದ್ಭುತವಾಗಿ ನಟಿಸಿದ್ದರು. ಇವರಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಅನಿಕಾ ಒಮ್ಮೆ ಒಟ್ಟೊಟ್ಟಿಗೆ 6 ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ದಿನಕ್ಕೆ ಮೂರು ಧಾರಾವಾಹಿಗಳಿಗೆ ಕಾಲ್ ಶೀಟ್ ಕೊಟ್ಟಿದ್ದಾರೆ. ಸುಕನ್ಯ, ಗುಪ್ತಗಾಮಿನಿ, ಆಕಾಶದೀಪ, ಪ್ರೇಮಲೋಕ ಹೀಗೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

 ರಿಯಾಲಿಟಿ ಶೋನಲ್ಲೂ ಮಿಂಚಿದ ಅನಿಕಾ!

ರಿಯಾಲಿಟಿ ಶೋನಲ್ಲೂ ಮಿಂಚಿದ ಅನಿಕಾ!

ನಟಿ ಅನಿಕಾ ಸಿಂಧ್ಯ ಕೇವಲ ಧಾರಾವಾಹಿಯಲ್ಲದೇ, ರಿಯಾಲಿಟಿ ಶೋಗಳಲ್ಲೂ ಭಾಗಹಿಸಿದ್ದಾರೆ. ಸೈ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲೂ ಅನಿಕಾ ಸ್ಫರ್ಧಿಸಿದ್ದರು. ಇದಿಷ್ಟೇ ಅಲ್ಲದೇ, ಅನಿಕಾ ಕೆಲ ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಆದರೆ ಅನಿಕಾ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಸುಮಾರು 16 ವರ್ಷಗಳಿಂದ ಅನಿಕಾ ಸಿಂಧ್ಯ ಕಿರುತೆರೆಯಲ್ಲಿ ಸಕ್ರಿಯಿರಾಗಿದ್ದಾರೆ. ತಮ್ಮ ಅಭಿನಯದಿಂದಲೇ ಹೆಸರನ್ನೂ ಗಳಿಸಿದ್ದಾರೆ.

 'ಪ್ರೇಮಲೋಕ'ದಲ್ಲಿ ನಟಿಸಿದ್ದ ಚೆಲುವೆ!

'ಪ್ರೇಮಲೋಕ'ದಲ್ಲಿ ನಟಿಸಿದ್ದ ಚೆಲುವೆ!

ಅನಿಕಾ ಸಿಂಧ್ಯ ಕೋವಿಡ್ ಸಮಯದಲ್ಲಿ ಶೂಟಿಂಗ್ ನಿಂದ ದೂರ ಉಳಿದಿದ್ದರು. ಸತತವಾಗಿ ಏಳು ತಿಂಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ನಂತರ 'ಪ್ರೇಮಲೋಕ' ಧಾರಾವಾಹಿಯಲ್ಲಿ ನಟಿಸಿದ ಅನಿಕಾ, ನಾಯಕ ಸೂರ್ಯಕಾಂತ್ ಅಕ್ಕನಾಗಿ ಕಾಣಿಸಿಕೊಂಡಿದ್ದರು. ಇನ್ನು ಅನಿಕಾ ಅವರಿಗೆ ಮದುವೆಯಾಗಿ ಲೈಫ್ ನಲ್ಲಿ ಸೆಟಲ್ ಆಗಬೇಕು ಎಂಬ ಆಸೆ ಇದೆ. ವೃತ್ತಿಯ ಜೊತೆಗೆ ಪರ್ಸನಲ್ ಲೈಫ್ ಬಗ್ಗೆಯೂ ಹೆಚ್ಚು ಗಮನ ಕೊಡುವ ಅನಿಕಾ ಸಿಂಧ್ಯ ಸದ್ಯ ಯಾವ ಧಾರಾವಾಹಿಯಲ್ಲೂ ಕಾಣಿಸುತ್ತಿಲ್ಲ ಎಂಬುದೇ ಅಭಿಮಾನಿಗಳಲ್ಲಿ ಬೇಸರವನ್ನು ಮೂಡಿಸಿದೆ.

More from Filmibeat

English summary
Lakshmi Baramma Serial Fame Actress Anikha Sindya Biography And Life Style, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X