Harshitha :'ಲಕ್ಷ್ಮೀ ಬಾರಮ್ಮ' ಸೀರಿಯಲ್‌ನಲ್ಲಿ ಅಡುಗೆ ಕೆಲಸ.. ರಿಯಲ್ ಲೈಫ್‌ನಲ್ಲಿ ಸುಂದರಿ ಈ ಗಂಗಾ..!
ಕಲರ್ಸ್ ಕನ್ನಡದಲ್ಲಿ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಸುಂದರವಾಗಿ ಮೂಡಿ ಬರುತ್ತಿದೆ. ಮೊದಲು ಒಂದೇ ಮನೆಯಲ್ಲಿ ಅಕ್ಕ ತಂಗಿಯ ಕಥೆ ನಡೆಯುತ್ತಾ ಇತ್ತು. ಮದುವೆಯಾದ ಮೇಲೆ ಅಕ್ಕ-ತಂಗಿಯ ಕಥೆ ಅಕ್ಕಪಕ್ಕದಲ್ಲಿ ಎಂಬಂತೆ ಆಗಿದೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಲಕ್ಷ್ಮೀ ಮತ್ತು ವೈಷ್ಣವ್ ಜೋಡಿನೇ ಹೈಲೈಟ್.
ಹಾಡು ಬರೆಯುವ ವಿಚಾರಕ್ಕೆ ಲಕ್ಷ್ಮೀ ಮತ್ತು ವೈಷ್ಣವ್ ನಡುವೆ ಕಾವೇರಿ ತಂದಿಟ್ಟು ತಮಾಷೆ ನೋಡುತ್ತಿದ್ದಾಳೆ. ಇನ್ನೇನು ದೂರ ದೂರ ಇರುತ್ತಾರೆ. ಕೀರ್ತಿಗೆ ಕೊಟ್ಟ ಮಾತು ಉಳಿಸಿದಂತೆ ಆಗುತ್ತದೆ ಎಂದೇ ಕಾವೇರಿ ಸಮಾಧಾನವಾಗಿದ್ದಳು. ಆದರೆ, ಈಗ ವಿನಾಯಕನ ಆಶೀರ್ವಾದವೋ ಏನೋ ಮತ್ತೆ ವೈಷ್ಣವ್, ಲಕ್ಷ್ಮೀ ಅದೇ ಪ್ರೀತಿಯ ಜೋಡಿಯಾಗಿದ್ದಾರೆ.

ವೈಷ್ಣವ್-ಲಕ್ಷ್ಮೀಗೆ ಗಂಗಕ್ಕ ಸಪೋರ್ಟ್
ವೈಷ್ಣವ್ ಮತ್ತು ಲಕ್ಷ್ಮೀ ಮನೆಯವರ ಬಲವಂತಕ್ಕೆ ಮದುವೆಯಾಗಿದ್ದು. ಆದರೆ, ಅವರಿಬ್ಬರು ಇತ್ತೀಚೆಗೆ ಹೊಂದಿಕೊಂಡು ಹೋಗುವ ನಿರ್ಧಾರ ಮಾಡಿದ್ದಾರೆ. ಅದಕ್ಕೆಲ್ಲ ಮೂಲ ಕಾರಣ ಗಂಗಾ. ಇಬ್ಬರೂ ದೂರ ದೂರವೇ ಇದ್ದರು. ಆದರೆ ಇದನ್ನೆಲ್ಲ ಗಮನಿಸಿದ ಗಂಗಾ, ಇಬ್ಬರ ನಡುವೆ ಸ್ನೇಹತ್ವ ಬೆಳೆತುವಂತೆ ಮಾಡಿದರು. ಗಂಗಾ ಜೊತೆಗೆ ಅಂಕಿತ್ ಕೂಡ ಜೊತೆಯಾಗಿದ್ದಾನೆ. ಲಕ್ಷ್ಮೀ ಅಂತು ಏನು ಸಂಬಂಧವೇ ಇಲ್ಲ ಎಂಬಂತೆಯೇ ಇದ್ದಳು. ಈಗ ಗಂಗಾಳ ಮಾತುಗಳು ಲಕ್ಷ್ಮೀಯನ್ನು ಬದಲಾಯಿಸಿದೆ.
ಕಶ್ಯಪ್ ಮನೆಯಲ್ಲಿ ಗಂಗಾಗೆ ಅಡುಗೆ ಕೆಲಸ
ಕಶ್ಯಪ್ ಮನೆಯಲ್ಲಿ ಜನ ಹೆಚ್ಚು. ತುಂಬು ಕುಟುಂಬ ಅದು. ಹೀಗಾಗಿ ಮನೆಕೆಲಸದ ಸಹಾಯಕ್ಕೆ ಯಾರಾದರೂ ಬೇಕಾಗುತ್ತದೆ. ಆದರೆ ಗಂಗಾ ಒಬ್ಬಳಿದ್ದರೆ ಸಾಕು ಎಲ್ಲಾ ಕೆಲಸ ಪಟಾಪಟ್ ಅಂತ ಮುಗಿದು ಬಿಡುತ್ತದೆ. ಪಾಪ ಗಂಡ ದುಬೈನಲ್ಲಿದ್ದಾನೆ. ಬ್ಲೂಟೂತ್ ಕನೆಕ್ಟ್ ಮಾಡಿಕೊಂಡು, ಸದಾ ಹಾಯ್ ಬೈ ಅಂತ ಹೇಳಿಕೊಂಡು, ಒಂದಷ್ಟು ಜಗಳ ಮಾಡಿಕೊಂಡು, ಮನೆಯಲ್ಲೆಲ್ಲಾ ಓಡಾಡುತ್ತಾ ಎಲ್ಲರಿಗೂ ಇಷ್ಟವಾಗಿ ಬಿಡುತ್ತಾಳೆ. ಗಂಗಾಳದ್ದು ಎಲ್ಲರನ್ನು ಖುಷಿ ಇಡುವ ಪಾತ್ರ.

ಗಂಗಾ ರಿಯಲ್ ಆಗಿ ಹೇಗಿದ್ದಾರೆ ಗೊತ್ತಾ..?
ಕಲೆಗೆ ಒತ್ತು ಕೊಡುವವರೇ ಹಾಗೆ. ಪಾತ್ರ ಯಾವುದಾದರೇನು ಕಲೆಗೆ ಮಾತ್ರ ಬೆಲೆ. ಗಂಗಾ ಕೂಡ ನಿಜ ಜೀವನದಲ್ಲಿ ಬೇರೆಯದ್ದೇ ರೀತಿ ಇದ್ದಾರೆ. ಆದರೆ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಮಾತ್ರ ಮನೆ ಕೆಲಸದವರಂತೆ ಇರುವುದು. ಗಂಗಾ ಅಲಿಯಾಸ್ ಹರ್ಷಿತಾ ತುಮಕೂರು ಜಿಲ್ಲೆಯ ಮಧುಗಿರಿಯವರು. ಮಾಡ್ರನ್ ಲುಕ್ ಗೂ ಸೈ ಸೀರೆ ಹಾಕೊಂಡು ಸೌಟ್ ಹಿಡಿಯುವುದಕ್ಕೂ ಜೈ ಅಂತಾರೆ. ಅದರಲ್ಲೂ ನಾನು ಕಾವಾಲಯ್ಯ ಹಾಡಿಗೆ ಹೆಜ್ಜೆ ಹಾಕಿರುವುದಂತು ಸಿಕ್ಕಾಪಟ್ಟೆ ಹಿಟ್ ಆಗಿದೆ. ಆ ಕೆಂಪು ಬಣ್ಣದ ಸೀರೆಯಲ್ಲಂತೂ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲೂ ಫುಲ್ ಆಕ್ಟೀವ್
ಹರ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಸೆಟ್‌ನಲ್ಲಿದ್ದಾಗಲೇ ಹೆಚ್ಚು ರೀಲ್ಸ್ ಅನ್ನು ಮಾಡುತ್ತಾರೆ. ಅಷ್ಟೇ ಅಲ್ಲ ಸಾಕಷ್ಟು ಫೋಟೋಶೂಟ್‌ಗಳನ್ನು ಮಾಡಿಸಿದ್ದಾರೆ. ಒಳ್ಳೆ ಡ್ಯಾನ್ಸರ್ ಕೂಡ. ಮೊದಲೇ 'ಲಕ್ಷ್ಮೀ ಬಾರಮ್ಮ' ಸೆಟ್‌ನಲ್ಲಿ ಇರುವವರೆಲ್ಲರೂ ರೀಲ್ಸ್ ಮಾಡುವುದರಲ್ಲಿ ಎಕ್ಸ್ ಪರ್ಟ್‌ಗಳೇ. ಹೀಗಾಗಿ ಗ್ಯಾಪ್ ಸಿಕ್ಕಿದರೆ ಸಾಕು ಹರ್ಷಿತಾ ಕೂಡ ಟೀಂ ಜೊತೆ ರೀಲ್ಸ್ ಮಾಡುತ್ತಾ ಇರುತ್ತಾರೆ. ಸದ್ಯಕ್ಕೆ ಹರ್ಷೀತಾ Instagram Followers 48 ಸಾವಿರ ದಾಟಿದೆ.


Click it and Unblock the Notifications











