Lakshmi Baramma Serial: ವೈಷ್ಣವ್ ಅತ್ತೆ ಸುಪ್ರೀತಾ ತೆರೆಮೇಲೆ ಹಂಗೆ.. ತೆರೆ ಹಿಂದೆ ಹಿಂಗೆ!
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಪೊಸೆಸಿವ್‌ನೆಸ್ ಅನ್ನೋದು ಇಬ್ಬರು ಹೆಣ್ಣು ಮಕ್ಕಳ ಜೀವನ ಹಾಗೇ ವೈಷ್ಣವ್ ಬದುಕನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮನೆಯೊಳಗಡೆಯೇ ಶತ್ರುಗಳು ಜಾಸ್ತಿ ಆಗಿದ್ದಾರೆ. ಮನೆಯಲ್ಲಿ ಮದುವೆ ಎಂಬ ವಿಚಾರ ಬಂದಾಗಿನಿಂದ ಮನೆಯವರಿಗೆ ಯಾರಿಗೂ ನೆಮ್ಮದಿಯೇ ಇಲ್ಲದಂತೆ ಆಗಿದೆ. ಕೀರ್ತಿಯ ಹುಚ್ಚಾಟವೂ ಹೆಚ್ಚಾಗಿದೆ.
ಸುಪ್ರೀತಾಳಿಗೆ ಕಾವೇರಿ ಮೇಲೆ ಇನ್ನಿಲ್ಲದ ಕೋಪ, ತಾಪ. ತನ್ನ ಅಮ್ಮನಿಂದ ಮಗನನ್ನು ದೂರ ಮಾಡಿಬಿಟ್ಟಳು ಎಂಬ ಬೇಸರ. ಹೀಗಾಗಿಯೇ ಯಾವಾಗಲೂ ಶಾಪ ಹಾಕುತ್ತಲೇ ಇರುತ್ತಾಳೆ. ನಮ್ಮ ಅಮ್ಮನ ಶಾಪ ನಿನಗೂ ತಾಕದೆ ಇರುವುದಿಲ್ಲ ಭಯ ಹುಟ್ಟಿಸುತ್ತಾ ಇರುತ್ತಾಳೆ. ಇದರ ನಡುವೆ ಸುಪ್ರೀತಾ ಸೋಷಿಯಲ್ ಮೀಡಿಯಾದಲ್ಲಿ ಹೊಸದೊಂದು ವಿಚಾರ ಹಂಚಿಕೊಂಡಿದ್ದಾರೆ.

ಸುಪ್ರೀತಾ ಆಗಿ ಕಾಡುವ ರಜನಿ
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಸುಪ್ರೀತಾ ಕೂಡ ಹೈಲೈಟ್. ವೈಷ್ಣವ್‌ಗೆ ಅತ್ತೆ ಸುಪ್ರೀತಾಳಾಗಿ ಕಾಣಿಸಿಕೊಂಡಿರುವ ನಟಿಯ ಅಸಲಿ ಹೆಸರು ರಜನಿ ಪ್ರವೀಣ್. ಮನೆಯೊಳಗೆ ಇದ್ದರೂ ಮನೆಯವರ ಮರ್ಯಾದೆ ಕಳೆಯುವ ಕೆಲಸವನ್ನೇ ಮಾಡುತ್ತಾಳೆ. ಅತ್ತಿಗೆ-ನಾದಿನಿಯ ಜಗಳ ಬಿಡಿಸುವುದಕ್ಕೆ ಮನೆಯವರೆಲ್ಲ ಹರಸಾಹಸವನ್ನೇ ಪಡುತ್ತಿರುತ್ತಾರೆ. ಅತ್ತಿಗೆ ಮೇಲಿನ ಕೋಪಕ್ಕೆ ಎಲ್ಲರಿಗೂ ಕೆಡುಕು ಬಯಸುವ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ರಜನಿ. ಆದರೆ, ಈಗ ಕೆಲ ಬದಲಾವಣೆಯ ಬಳಿಕ ಸುಪ್ರೀತಾ ಕೊಂಚ ಪಾಸಿಟಿವ್ ಆಗಿ ಬದಲಾಗಿದ್ದಾರೆ.
ಸಖತ್ ಸ್ಟೈಲಿಶ್ ವೈಷ್ಣವ್ ಅತ್ತೆ
ಇತ್ತೀಚೆಗಿನ ಧಾರಾವಾಹಿಗಳಲ್ಲಿ ವಿಲನ್ ಅಂದರೆ ಫುಲ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬಂತಾಗಿದೆ. ಅದರಂತೆ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲೂ ಸುಪ್ರೀತಾ ವಿಲನ್ ಪಾತ್ರದಲ್ಲಿಯೇ ನಟಿಸಿದ್ದು, ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ದಿನಕ್ಕೊಂದು ಡ್ರೆಸ್, ಅದಕ್ಕೆ ಮ್ಯಾಚ್ ಆಗುವಂತ ಜ್ಯುವೆಲ್ಲರಿ. ಅವರ ಡೈಲಿ ಲುಕ್ ನೋಡ್ತಾ ಇದ್ರೆ ಅದ್ಭುತ ಅಂತ ಎನಿಸದೆ ಇರುವುದಿಲ್ಲ. ಹಾಗಂತ ಬರೀ ಧಾರಾವಾಹಿಯಲ್ಲಿ ಈ ಲುಕ್ ಎನ್ನುವಂತೆ ಇಲ್ಲ. ನಿಜ ಜೀವನದಲ್ಲೂ ರಜನಿ ಅಷ್ಟೇ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳುತ್ತಾರೆ.

ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್
ಇನ್ನು ಇತ್ತಿಚೆಗೆ ಸೋಷಿಯಲ್ ಮೀಡಿಯಾ ಬಳಕೆ ಮಾಡದವರು ಇಲ್ಲವೇ ಇಲ್ಲ. ರಜನಿ ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ತೆರೆ ಮೇಲೆ ವಿಲನ್ ಆದವರೆಲ್ಲಾ ತೆರೆ ಹಿಂದೆ ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ. ಅದೇ ಥರ ಈಗ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಎಲ್ಲರೂ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಇತ್ತೀಚೆಗಷ್ಟೇ ಎಲ್ಲಾ ಸೇರಿ ಟ್ರಿಪ್ ಕೂಡ ಹೋಗಿ ಬಂದಿದ್ದರು. ರಜನಿ ಸೋಷಿಯಲ್ ಮೀಡಿಯಾ ಗಮನಿಸಿದ್ರೆ ಸೈಕಲ್ ಗ್ಯಾಪ್‌ನಲ್ಲಿ ರೀಲ್ಸ್ ಮಾಡೋದು ಗಮನಕ್ಕೆ ಬರುತ್ತೆ.
ಭವಿಷ್ಯದ ಬಗ್ಗೆ ರಜನಿ ಹೇಳೋದೇನು..?
ಧಾರಾವಾಹಿಯಲ್ಲಿ ಅತ್ತಿಗೆ ಮತ್ತು ನಾದಿನಿಗೆ ಹಾವು ಮುಂಗಸಿ ರೀತಿ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋದೆ ಇಲ್ಲ. ಸೀರಿಯಲ್ ಕ್ಯಾಮಾರಾ ಆಫ್ ಆಗಿ, ಮೊಬೈಲ್ ಕ್ಯಾಮರಾ ಆನ್ ಆದಾಗ ಇಬ್ಬರು ಬೆಸ್ಟ್ ಫ್ರೆಂಡ್ಸ್ ಇದ್ದಂತೆ. ಈಗೊಂದು ಡೈಲಾಗ್ ಮೇಲೊಂದು ರೀಲ್ಸ್ ಮಾಡಿ ಹಾಕಿದ್ದಾರೆ. ಅದಕ್ಕೆ ರಜನಿ ಕ್ಯಾಪ್ಶನ್ ಕೂಡ ಬರೆದು ಹಾಕಿದ್ದಾರೆ. ಅದರಲ್ಲಿ ಕುತೂಹಲ ಎನಿಸೋ ವಿಚಾರವನ್ನ ಬರೆದು ಹಾಕಿದ್ದಾರೆ. ಅದು ಅವರ ಅಮ್ಮನ ಬಗ್ಗೆ. "ನನ್ನಮ್ಮ ನನ್ನ ಕಡೆಯಿಂದ ಸಾಧ್ಯ ಇಲ್ಲ ಅನ್ನೋ ಕಾರಣಕ್ಕೆ ನನ್ನನ್ನ ಬಿಟ್ಟಿದ್ರು. ನನ್ನ ಹೊಸ ಫ್ರೆಂಡ್ಸ್ ಅಂದ್ರೆ ಅವಳಿಗೆ ಭಯ. ಆದ್ರೆ ನಂಗೆ ಭವಿಷ್ಯದ ಬಗ್ಗೆ ಯಾವುದೇ ಯಾವುದೇ ಚಿಂತೆ ಇಲ್ಲ" ಎಂದು ಬರೆದುಕೊಂಡಿದ್ದಾರೆ. ಆದರೆ, ಅದು ಕಾವೇರಿ ಜೊತೆಗಿರುವ ವಿಡಿಯೋ ಆಗಿದೆ. ಯಾಕೆ ಈ ಥರ ಬರೆದುಕೊಂಡರು ಎಂಬುದೇ ಗೊಂದಲವಾಗಿದೆ.


Click it and Unblock the Notifications











