For Quick Alerts
  ALLOW NOTIFICATIONS  
  For Daily Alerts

  'ಲಕ್ಷ್ಮೀ ಬಾರಮ್ಮ' ಹೋಗ್ತಾಳೆ, 'ಕನ್ನಡತಿ' ಬರ್ತಾಳೆ: ಮತ್ತೆ 'ಪುಟ್ಟಗೌರಿ' ಹವಾ ಶುರು.!

  |
  ಮತ್ತೆ ಶುರುವಾಯ್ತು ಪುಟ್ಟಗೌರಿ ಹವಾ | KANNADATHI | RANJINI | FILMIBEAT KANNADA

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನಪ್ರಿಯತೆ ಪಡೆದ ಮೆಗಾ ಸೀರಿಯಲ್ ಗಳಾದ 'ಪುಟ್ಟಗೌರಿ ಮದುವೆ', 'ಅಗ್ನಿಸಾಕ್ಷಿ', 'ರಾಧಾ ರಮಣ' ಮುಕ್ತಾಯಗೊಂಡಿದೆ. ಈಗ ಇದೇ ಸಾಲಿಗೆ ಸೇರುತ್ತಿರುವ ಮತ್ತೊಂದು ಸೀರಿಯಲ್ 'ಲಕ್ಷ್ಮೀ ಬಾರಮ್ಮ'.

  ಆರುವರೆ ವರ್ಷಗಳಿಂದ, 2100ಕ್ಕೂ ಹೆಚ್ಚು ಸಂಚಿಕೆಗಳಿಂದ ಕಿರುತೆರೆ ವೀಕ್ಷಕರನ್ನು ರಂಜಿಸಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇದೇ ತಿಂಗಳು (ಜನವರಿ) 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಕೊನೆಗೊಳ್ಳಲಿದೆ.

  'ಲಕ್ಷ್ಮೀ ಬಾರಮ್ಮ' ಸೀರಿಯಲ್ ಪ್ರಸಾರ ಆಗುತ್ತಿದ್ದ ಸಮಯಕ್ಕೆ 'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿ ರಾಘವನ್ 'ಕನ್ನಡತಿ'ಯಾಗಿ ಎಂಟ್ರಿ ಕೊಡಲಿದ್ದಾರೆ. ಮುಂದೆ ಓದಿರಿ...

  ಮುಕ್ತಾಯವಾಗಲಿದೆ 'ಲಕ್ಷ್ಮೀ ಬಾರಮ್ಮ'

  ಮುಕ್ತಾಯವಾಗಲಿದೆ 'ಲಕ್ಷ್ಮೀ ಬಾರಮ್ಮ'

  ಅಂತೂ-ಇಂತೂ ಗೊಂಬೆ-ಚಿನ್ನು ಕಥೆಗೆ ಅಂತ್ಯ ಹಾಡುವ ಕಾಲ ಬಂದೇ ಬಿಟ್ಟಿದೆ. ಮುಂದಿನ ವಾರ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ 'ದಿ ಎಂಡ್' ಆಗಲಿದೆ. ಗೊಂಬೆ ಮತ್ತು ಚಿನ್ನು ಸಮಾಗಮದಿಂದ 'ಲಕ್ಷ್ಮೀ ಬಾರಮ್ಮ'ಗೆ ಹ್ಯಾಪಿ ಎಂಡಿಂಗ್ ಸಿಗಲಿದೆ.

  'ಲಕ್ಷ್ಮೀ ಬಾರಮ್ಮ' ಸೀರಿಯಲ್ ಫ್ಯಾನ್ಸ್ ಗೆ ಕಾದಿದೆ ಬಹುದೊಡ್ಡ ಶಾಕಿಂಗ್ ನ್ಯೂಸ್.!'ಲಕ್ಷ್ಮೀ ಬಾರಮ್ಮ' ಸೀರಿಯಲ್ ಫ್ಯಾನ್ಸ್ ಗೆ ಕಾದಿದೆ ಬಹುದೊಡ್ಡ ಶಾಕಿಂಗ್ ನ್ಯೂಸ್.!

  ಹೊಸ ಧಾರಾವಾಹಿ ಶುರು.!

  ಹೊಸ ಧಾರಾವಾಹಿ ಶುರು.!

  ಇಲ್ಲಿಯವರೆಗೂ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಸಂಜೆ 7.30ಕ್ಕೆ ಪ್ರಸಾರ ಆಗುತ್ತಿತ್ತು. 'ಲಕ್ಷ್ಮೀ ಬಾರಮ್ಮ' ಮುಗಿಯುತ್ತಿದ್ದಂತೆಯೇ, ಅದೇ ಸಮಯಕ್ಕೆ ಜನವರಿ 27 ರಿಂದ ಹೊಸ ಧಾರಾವಾಹಿ 'ಕನ್ನಡತಿ' ಆರಂಭ ಆಗಲಿದೆ.

  'ಕನ್ನಡತಿ' ಭುವನೇಶ್ವರಿ ಆಗಿ ಮತ್ತೆ ನಿಮ್ಮ ಮನೆಗೆ ಬರ್ತಿದ್ದಾರೆ ರಂಜನಿ ರಾಘವನ್.!'ಕನ್ನಡತಿ' ಭುವನೇಶ್ವರಿ ಆಗಿ ಮತ್ತೆ ನಿಮ್ಮ ಮನೆಗೆ ಬರ್ತಿದ್ದಾರೆ ರಂಜನಿ ರಾಘವನ್.!

  ಮತ್ತೆ 'ಪುಟ್ಟಗೌರಿ' ಹವಾ

  ಮತ್ತೆ 'ಪುಟ್ಟಗೌರಿ' ಹವಾ

  'ಪುಟ್ಟಗೌರಿ ಮದುವೆ' ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮನಗಳಲ್ಲಿ ಜನಪ್ರಿಯತೆ ಪಡೆದಿದ್ದ ನಟಿ ರಂಜನಿ ರಾಘವನ್. 'ಪುಟ್ಟಗೌರಿ ಮದುವೆ' ಮುಗಿದ ಮೇಲೆ ತೆರೆ ಹಿಂದೆ ಸರಿದು 'ಇಷ್ಟ ದೇವತೆ'ಗೆ ಕ್ರಿಯೇಟಿವ್ ಡೈರೆಕ್ಟರ್, ಸ್ಕ್ರಿಪ್ಟ್ ರೈಟರ್ ಮತ್ತು ಕೋ-ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸಿದ್ದ ರಂಜನಿ ರಾಘವನ್ ಇದೀಗ ಮತ್ತೆ 'ಕನ್ನಡತಿ' ಸೀರಿಯಲ್ ಮೂಲಕ ನಿಮ್ಮೆಲ್ಲರ ಮುಂದೆ ಬಂದಿದ್ದಾರೆ. ಅಲ್ಲಿಗೆ, ಕನ್ನಡ ಕಿರುತೆರೆಯಲ್ಲಿ ಮತ್ತೆ ರಂಜನಿ ಹವಾ ಶುರುವಾದ ಹಾಗೆ.!

  ಕನ್ನಡ ಟೀಚರ್ ಆಗಿ ರಂಜನಿ

  ಕನ್ನಡ ಟೀಚರ್ ಆಗಿ ರಂಜನಿ

  'ಕನ್ನಡತಿ' ಧಾರಾವಾಹಿಯಲ್ಲಿ ಕನ್ನಡ ಟೀಚರ್ ಭುವನೇಶ್ವರಿ ಆಗಿ ರಂಜನಿ ಅಭಿನಯಿಸಿದ್ದಾರೆ. ಹೆಮ್ಮೆಯ ಕನ್ನಡತಿ ಭುವನೇಶ್ವರಿ ಮತ್ತು ದೊಡ್ಡ ಬಿಸಿನೆಸ್ ಮ್ಯಾನ್ ಸುತ್ತ ಸುತ್ತವ ಕಥೆಯೇ 'ಕನ್ನಡತಿ' ಧಾರಾವಾಹಿಯ ಹೂರಣ.

  English summary
  Colors Kannada Channel's popular serial Lakshmi Baramma serial to end and New serial Kannadathi to telecast in the same slot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X