'ಲಕ್ಷ್ಮೀ ಬಾರಮ್ಮ' ಸೀರಿಯಲ್ ಫ್ಯಾನ್ಸ್ ಗೆ ಕಾದಿದೆ ಬಹುದೊಡ್ಡ ಶಾಕಿಂಗ್ ನ್ಯೂಸ್.!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಅತಿ ಜನಪ್ರಿಯ ಸೀರಿಯಲ್ ಗಳ ಪೈಕಿ 'ಲಕ್ಷ್ಮೀ ಬಾರಮ್ಮ' ಕೂಡ ಒಂದು. ಆರು ವರ್ಷಗಳಿಂದ ಪ್ರಸಾರ ಆಗುತ್ತಿರುವ ಈ ಧಾರಾವಾಹಿಗೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ.

ಪ್ರತಿ ದಿನ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ನ ಮಿಸ್ ಮಾಡದೆ ನೋಡುವ ವೀಕ್ಷಕರಿಗೆ ಇಲ್ಲಿದೆ ಒಂದು ಬೇಸರದ ಸುದ್ದಿ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಗೆ ಅಂತ್ಯ ಹಾಡುವ ಕಾಲ ಬಂದಿದೆ. ಇನ್ನು ಬೆರಳೆಣಿಕೆಯಷ್ಟು ದಿನಗಳಲ್ಲಿ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಮುಕ್ತಾಯವಾಗಲಿದೆ. ಮುಂದೆ ಓದಿರಿ...

'ಲಕ್ಷ್ಮೀ ಬಾರಮ್ಮ' ಸೀರಿಯಲ್ ಗೆ ಫುಲ್ ಸ್ಟಾಪ್

'ಲಕ್ಷ್ಮೀ ಬಾರಮ್ಮ' ಸೀರಿಯಲ್ ಗೆ ಫುಲ್ ಸ್ಟಾಪ್

ಕಲರ್ಸ್ ಕನ್ನಡ ವಾಹಿನಿಯ ಮೆಗಾ ಸೀರಿಯಲ್ 'ಲಕ್ಷ್ಮೀ ಬಾರಮ್ಮ' ಕೊನೆಯ ಹಂತ ತಲುಪಿದೆ. ಸದ್ಯದಲ್ಲೇ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ 'ಅಂತಿಮ ಸಂಚಿಕೆ' ಪ್ರಸಾರ ಆಗಲಿದೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಕನ್ಫರ್ಮ್ ಮಾಡಿಲ್ಲ.

2100ಕ್ಕೂ ಹೆಚ್ಚು ಸಂಚಿಕೆಗಳು

2100ಕ್ಕೂ ಹೆಚ್ಚು ಸಂಚಿಕೆಗಳು

ಮಾರ್ಚ್ 4, 2013 ರಂದು ಪ್ರಾರಂಭವಾದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ 2131 ಸಂಚಿಕೆಗಳು ಇಲ್ಲಿಯವರೆಗೂ ಪ್ರಸಾರ ಕಂಡಿದೆ. ರೋಚಕ ತಿರುವುಗಳನ್ನು ಕಂಡಿರುವ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಗೆ ಅಭಿಮಾನಿ ಬಳಗ ದೊಡ್ಡದಿದೆ. ಹಾಗೇ, ಈ ಧಾರಾವಾಹಿ ಬಗ್ಗೆ ಟ್ರೋಲ್ ಮಾಡುವವರ ಸಂಖ್ಯೆ ಕೂಡ ಕಮ್ಮಿ ಏನಿಲ್ಲ.

ಬದಲಾದ ಕಲಾವಿದರು

ಬದಲಾದ ಕಲಾವಿದರು

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಆರಂಭವಾದಾಗ ಪ್ರಮುಖ ಪಾತ್ರದಲ್ಲಿ ಚಂದನ್ ಕಾಣಿಸಿಕೊಂಡಿದ್ದರು. ಬಳಿಕ ಸಿನಿಮಾಗಳಲ್ಲಿ ಬಿಜಿಯಾದ ಚಂದನ್ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಗೆ ಗುಡ್ ಬೈ ಹೇಳಿದರು. ಚಂದನ್ ಜಾಗಕ್ಕೆ ಶೈನ್ ಶೆಟ್ಟಿ ಬಂದು ಹೋದ ಮೇಲೆ ಇದೀಗ ಲೀಡ್ ರೋಲ್ ನಲ್ಲಿರುವವರು ಚಂದು ಗೌಡ. ಇನ್ನೂ ಲಚ್ಚಿ ಅಲಿಯಾಸ್ ಚಿನ್ನು ಪಾತ್ರಕ್ಕೆ ಮೊದಲು ಬಣ್ಣ ಹಚ್ಚಿದವರು ಕವಿತಾ ಗೌಡ. ಬೆಳ್ಳಿತೆರೆಗೆ ಕವಿತಾ ಗೌಡ ಕಾಲಿಟ್ಟ ಮೇಲೆ ಚಿನ್ನು ಆಗಿದ್ದು ರಶ್ಮಿ ಪ್ರಭಾಕರ್.

ಕ್ಲೈಮ್ಯಾಕ್ಸ್ ಹಂತದಲ್ಲಿ ಧಾರಾವಾಹಿ

ಕ್ಲೈಮ್ಯಾಕ್ಸ್ ಹಂತದಲ್ಲಿ ಧಾರಾವಾಹಿ

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಸದ್ಯ ಅಂತಿಮ ಘಟ್ಟ ತಲುಪಿದೆ. ಕಥೆಯ ಒಂದೊಂದೇ ಸೀಕ್ರೆಟ್ ರಿವೀಲ್ ಆಗುತ್ತಿದೆ. ಇನ್ನೊಂದು ವಾರದೊಳಗೆ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಗೆ ಹ್ಯಾಪಿ ಎಂಡಿಂಗ್ ಸಿಗಲಿದೆ. ಅದೇ ಸಮಯಕ್ಕೆ ಹೊಸ ಧಾರಾವಾಹಿ ಆರಂಭವಾಗಲಿದೆ.

More from Filmibeat

English summary
According to the latest Grapevine, Colors Kannada Channel's popular serial Lakshmi Baramma to end soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X