Lakshmi Baramma: ಅಮ್ಮನಿಂದ ಹಾಳಾಗಿದ್ದ ವೈಷ್ವವ್.. ಲಕ್ಷ್ಮೀಯಿಂದ ಸರಿಯಾಗ್ತಾನಾ ?

By ಎಸ್ ಸುಮಂತ್

ಲಕ್ಷ್ಮೀಯನ್ನು ಅನಿವಾರ್ಯತೆಗೆ ಕಟ್ಟು ಬಿದ್ದು ಮದುವೆಯಾಗಿದ್ದಾನೆ ವೈಷ್ಣವ್. ಆದ್ರೆ ಕಾಳಜಿ ಮಾಡುವುದನ್ನು ಬಿಟ್ಟಿಲ್ಲ. ಸಿಂಪತಿಗಾಗಿ, ಜವಾಬ್ದಾರಿಗಾಗಿ ಕಾಳಜಿ ಮಾಡಬೇಡಿ. ಅದಾಗಿ ಅದೇ ಮನಸ್ಸಾರೆ ಪ್ರೀತಿ ಹುಟ್ಟಿದರೆ ಮಾತ್ರ ಪ್ರೀತಿ ತೋರಿಸಿ. ಇಲ್ಲವಾದಲ್ಲಿ ಯಾವ ಸಮಸ್ಯೆಯೂ ಇಲ್ಲ ಅಂತ ಅದಾಗಲೇ ಲಕ್ಷ್ಮೀ ಹೇಳಿ ಆಗಿದೆ. ಹೀಗಾಗಿ ವೈಷ್ಣವ್ ಮನಸ್ಸು ಕೊಂಚ ಡಿಸ್ಟರ್ಬ್ ಆಗುತ್ತಾ ಹೋಗುತ್ತಿದೆ. ಲಕ್ಷ್ಮೀಗಾಗಿ ಕನವರಿಸುತ್ತಿದ್ದಾನೆ.

ಲಕ್ಷ್ಮೀ ಇದ್ದಾಗ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿಬಿಡುತ್ತಾ ಇದ್ದಳು. ಗಂಡನಿಗೆ ಹಾರೈಕೆ ಮಾಡಿಕೊಂಡು, ಏನು ಬೇಕು, ಬೇಡಗಳನ್ನು ಗಮನಿಸಿ, ವೈಷ್ಣವ್‌ಗೆ ಬೇಸರ ಆಗದಂತೆ ನೋಡಿಕೊಳ್ಳುತ್ತಾ ಇದ್ದಳು. ವೈಷ್ಣವ್‌ಗೆ ಪ್ರೀತಿ ಇಲ್ಲದೆ ಇದ್ದರು, ಲಕ್ಷ್ಮೀ ಇದ್ದರೆ ಬೇಸರ ಆಗಲ್ಲ. ಖುಷಿ ಖುಷಿಯಾಗಿರುತ್ತಾನೆ. ಆದರೆ ಈಗ ಲಕ್ಷ್ಮೀ ಮನೆಯಲ್ಲಿ ಇಲ್ಲದೆ ಇರುವುದು ಏನೋ ಕಳೆದುಕೊಂಡ ಭಾವ ವೈಷ್ಣವ್‌ದು.

Lakshmi Baramma serial Written Update on April 11th episode

ಲಕ್ಷ್ಮೀ ಬಳಿ ಕ್ಷಮೆ ಕೇಳಲು ವೈಷ್ಣವ್ ಒದ್ದಾಟ

ಲಕ್ಷ್ಮೀ ಒಂದಷ್ಟು ದಿನ ಅಂತ ತವರು ಸೇರಿದ್ದಾಳೆ. ಇದನ್ನ ವೈಷ್ಣವ್ ನಿಂದ ಸಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಒಂಟಿತನ ಅವನಲ್ಲಿ ಕಾಡುತ್ತಿದೆ. ರೂಮು ಖಾಲಿ ಖಾಲಿ ಹೊಡೆಯುತ್ತಿದೆ. ಅದರ ಜೊತೆಗೆ ಲಕ್ಷ್ಮೀಗೆ ನೋವಾಗುವಂತೆ ನಡೆದುಕೊಂಡಿದ್ದು, ವೈಷ್ಣವ್‌ಗೂ ಬೇಸರ ತರಿಸಿತ್ತು. ಹೇಗಾದರೂ ಮಾಡಿ ಕ್ಷಮೆ ಕೇಳಬೇಕೆಂದು ಕಾಯುತ್ತಿದ್ದ ವೈಷ್ಣವ್‌ಗೆ ಶಾಂತಾ ಹಾಗೂ ತಮ್ಮನೇ ಐಡಿಯಾ ಕೊಟ್ಟಿದ್ದಾರೆ. ಆದರೆ ಲಕ್ಷ್ಮೀ ಹೇಳಿದ ಮಾತುಗಳಿಂದ ವೈಷ್ಣವ್ ಮತ್ತೆ ಮತ್ತೆ ಯೋಚನೆಯಲ್ಲಿ ಮುಳುಗಿದ್ದಾನೆ.

ವೈಷ್ಣವ್ ಈಗಲೂ ಮಗು ರೀತಿಯ ಸ್ವಭಾವ ಇರುವವನು. ಅಮ್ಮ ಮುದ್ದು ಮಾಡು ಬೆಳೆಸಿದ್ದಕ್ಕೆ ಆ ರೀತಿ ಇರುವುದೋ ಅಥವಾ ಅವನ ನಡವಳಿಕೆಯೇ ಆ ರೀತಿಯೋ ಗೊತ್ತಿಲ್ಲ. ಆದರೆ ಲಕ್ಷ್ಮೀಗೆ ಯಾರಾದರೂ ನೋವು ಮಾಡಿದರೇ ಅದನ್ನು ಸಹಿಸುವುದಿಲ್ಲ. ಈಗ ಅಮ್ಮನ ಬಳಿ‌ ಲಕ್ಷ್ಮೀ ಬಗ್ಗೆ ದೂರು ನೀಡುತ್ತಿದ್ದಾನೆ. "ನೋಡಮ್ಮ ಮಹಾಲಕ್ಷ್ಮೀ ರೂಮನ್ನೆಲ್ಲಾ ಕ್ಲೀನ್ ಮಾಡಿದ್ದಾರೆ. ನಾನು ಒಂದು ಶರ್ಟ್ ಕೇಳಿದರೆ ಒಂದೇ ಕೊಡ್ತಾರೆ. ಅದೇಗೆ ಅಷ್ಟು ಕ್ಲೀನಾಗಿ ಮಡಿಚಿಡುತ್ತಾರೆ ಅನ್ನೋದೆ ಗೊತ್ತಿಲ್ಲ" ಅಂತ ದೂರು ನೀಡಿದ್ದಾನೆ.

Lakshmi Baramma serial Written Update on April 11th episode

ಮಗನ ಮಾತಿನಿಂದ ಕಾವೇರಿಗೆ ಖುಷಿ

ಕಾವೇರಿಗೆ ಮಗನ ವಿಚಾರದಲ್ಲಿ ತುಂಬಾ ಅಂದ್ರೆ ತುಂಬಾ ಪೊಸೆಸಿವ್ ಇದೆ. ಮಗನ ಎಲ್ಲಾ ಜವಾಬ್ದಾರಿಗಳನ್ನು ನಾನೇ ನೋಡಿಕೊಳ್ಳಬೇಕು. ಅವನಿಗೆ ನಾನೇ ಹೆಚ್ಚಿನ ಪ್ರೀತಿ ಕೊಡುವವಳು ಎನಿಸಬೇಕು ಎಂಬ ಆಸೆಯದು. ಲಕ್ಷ್ಮೀ ಇದ್ದಾಗ ಅದು ಸ್ವಲ್ಪ ಕಷ್ಟವೇ ಆಗಿತ್ತು. ಆದ್ರೆ ಈಗ ಸೊಸೆಯಿಲ್ಲ. ಟೀ ತಂದು ಕೊಟ್ಟಿದ್ದಾಳೆ. ಈ ವೇಳೆ, ವೈಷ್ಣವ್ ಹೇಳಿದ ಮಾತಿಗೆ ಕಾವೇರಿ ಖುಷಿಯಾಗಿದ್ದಾಳೆ. ನಿನ್ನ ಟೀ ಮಿಸ್ ಮಾಡಿಕೊಂಡೆ ಅಮ್ಮ ಎಂದಿದ್ದಾನೆ.

ಹೀಗೆ ಅಮ್ಮನ ಬಳಿ ಲಕ್ಷ್ಮೀ ಬಗ್ಗೆ ಹೇಳುತ್ತಿದ್ದ ವೈಷ್ಣವ್, ನಾನೇನಾದರೂ ಬಟ್ಟೆಯನ್ನೆಲ್ಲಾ ಹರಡಿದರೆ ನನಗೂ ಬೈತಾರೆ ಅಮ್ಮ. ನಮ್ಮ ಮನೆಯಲ್ಲೂ ಯಾರೂ ಇಲ್ಲ. ಅಷ್ಟು ಕ್ಲೀನ್ ಆಗಿರುತ್ತಾರೆ. ನಾನು ಹಳೆ ರೂಮ್ ನ ತುಂಬಾ ಮಿಸ್ ಮಾಡಿಕೊಳ್ಳುತ್ತಾ ಇದ್ದೀನಿ ಅಂದಾಗ, ಕಾವೇರಿ, ಲಕ್ಷ್ಮೀಗೆ ನಾನು ಬುದ್ದಿ ಹೇಳಲಾ. ನನ್ನ ಮಗ ಹೇಗಿರ್ತಾನೋ ಹಾಗೇ ಬಿಡಲು ಹೇಳ ಅಂದ್ರೆ, ವೈಷ್ಣವ್, ಬೇಡ ಬೇಡ ಎಂದಿದ್ದಾನೆ. ಅಮ್ಮ‌ ಮುದ್ದು ಮಾಡಿ ಹಾಳು ಮಾಡಿದ್ದರು. ಆದರೆ ಲಕ್ಷ್ಮೀಯಿಂದ ಎಲ್ಲಾ ಕಲಿಯುತ್ತಾ ಇದ್ದೀನಿ ಎಂದಿದ್ದಾನೆ.

More from Filmibeat

English summary
Colors Kannada Lakshmi Baramma serial Written Update on April 11th episode. Here is the details about Vaishnav thinking about Lakshmi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X