Lakshmi Baramma: ವೈಷ್ಣವ್ ಹೆಂಡತಿ ಲಕ್ಷ್ಮೀ ತವರು ಮನೆಗಾಗಿ ಅಂಗಡಿಯಲ್ಲಿ ಕೂತು ವ್ಯಾಪಾರ ಮಾಡಬೇಕಾ?

By ಎಸ್ ಸುಮಂತ್

ಮಾತಾನಾಡದೆ ಇರುವುದು ಕೂಡ ಕೆಲವೊಮ್ಮೆ ಸಮಸ್ಯೆಗೆ ಸಿಲುಕಿಸುವ ದಾರಿಯಾಗಿರುತ್ತದೆ. ಎಲ್ಲದನ್ನು ಯಾವಾಗಲೂ ಸಹಿಸಬಾರದು. ತಾಳ್ಮೆಗೂ ಒಂದು ಹಿತಿ - ಮಿತಿ ಎಂಬುದು ಇರಬೇಕಾಗುತ್ತದೆ.

ಅದು ಇಲ್ಲದೆ ಹೋದಲ್ಲಿ ಅನಾಹುತಗಳು ಮನೆಯ ಬಾಗಿಲಿಗೆ ಹುಡುಕಿಕೊಂಡು ಬರುತ್ತವೆ. ಈಗ ಲಕ್ಷ್ಮೀಯ ಪರಿಸ್ಥಿತಿಯೂ ಅದೇ ಆಗಿದೆ. ಮಾಡದೆ ಇರುವ ತಪ್ಪಿಗೂ ಲಕ್ಷ್ಮೀಯೇ ಹೊಣೆ, ಬೇಡದ ಇರುವ ಜನರ ನಿಂದನೆಗೂ ಲಕ್ಷ್ಮೀಯೇ ಹೊಣೆಯಾಗಿದ್ದಾಳೆ.

Lakshmi Baramma serial Written Update on April 12th episode

ಗಂಡನ ಮನೆಯಲ್ಲಿ ಲಕ್ಷ್ಮೀ ಬರೀ ಲಕ್ಷ್ಮೀಯಲ್ಲ ಮಹಾಲಕ್ಷ್ಮೀಯಾಗಿ ಬದುಕುತ್ತಿದ್ದಾಳೆ‌. ಇಬ್ಬರ ನಡುವೆ ಪ್ರೀತಿ ಅನ್ನೋದು ಇನ್ನು ಶುರುವಾಗದೆ ಇರಬಹುದು. ಆದರೆ ಸ್ನೇಹ ಅನ್ನೋದಾದರೂ ಇದೆಯಲ್ಲ. ವೈಷ್ಣವ್ ಅದೆಷ್ಟು ಬದಲಾಗಿದ್ದಾನೆ ಎಂದರೆ ಲಕ್ಷ್ಮೀಯ ನೆನಪು ಸಾಕಷ್ಟು ಕಾಡುತ್ತಿದೆ. ಲಕ್ಷ್ಮೀ ಇಲ್ಲದಿರುವಿಕೆ ಅವನನ್ನು ಕೆಣಕುತ್ತಿದೆ.

ಅಂಗಡಿಯಲ್ಲಿ ಪುಷ್ಪಾಳ ರಂಪಾಟ

ಲಕ್ಷ್ಮೀ ಮದುವೆಗೂ ಮುನ್ನ ಸಂಸಾರವನ್ನು ತೂಗಿಸುವುದಕ್ಕೆ ಅಂಗಡಿಯನ್ನು ಬಾಡಿಗೆ ತೆಗೆದುಕೊಂಡಿದ್ದಳು. ಮದುವೆಯಾದ ಮೇಲೂ ಸಂಸಾರಕ್ಕಾಗಿ ಆ ಅಂಗಡಿಯನ್ನು ಉಳಿಸಿದ್ದಾಳೆ. ಆದರೆ ಪುಷ್ಪ ಆಡುವ ದುರಹಂಕಾರದ ಮಾತುಗಳಿಗೆ ಜನರ್ಯಾರು ಮತ್ತೆ ಮತ್ತೆ ಬರುವ ನಿರೀಕ್ಷೆ ಇಲ್ಲ. ಅದಕ್ಕೆ ಅಂಗಡಿ ಮಾಲೀಕರು ಆ ಜಾಗವನ್ನು ಮಾರುವ ನಿರ್ಧಾರ ಮಾಡಿದ್ದಾರೆ. ಆದರೆ ಪುಷ್ಪ ಬಾಯಿ ಅವರ ಮುಂದೆಯೂ ಜೋರಾಗಿದೆ.

ಲಕ್ಷ್ಮೀಯ ನಯ - ವಿನಯಕ್ಕೆ ಮೆಚ್ಚಿ ಅಂಗಡಿ ಮಾಲೀಕರು ಅಂಗಡಿ ಕೊಟ್ಟಿದ್ದರು. ಆದರೆ ಲಕ್ಷ್ಮೀ ಮದುವೆಯಾಗಿ ಹೋದ ಮೇಲೆ ಪುಷ್ಪಾನೆ ಅಂಗಡಿ ನೋಡಿಕೊಳ್ಳುತ್ತಿದ್ದಾಳೆ. ಕೋದಂಡನನ್ನು ಆಳಿನ ರೀತಿ ನೋಡಿಕೊಳ್ಳುವ ಪುಷ್ಪ ತಾನು ಮಹಾರಾಣಿಯಂತೆ ಕುಳಿತುಕೊಳ್ಳುತ್ತಾಳೆ. ಆದರೆ ವ್ಯಾಪಾರ ಕಡಿಮೆಯಾಗುತ್ತಿದೆ‌. ಇದೆ ಕಾರಣಕ್ಕೆ ಮಾಲೀಕರು ಅಂಗಡಿ ಮಾರಲು ಬಂದಾಗ ಲಕ್ಷ್ಮೀಯನ್ನು ಕರೆಸಿದ್ದಾಳೆ ಪುಷ್ಪ. ಮದುವೆಯಾದ ಮೇಲೂ ನನ್ನ ತವರಿನ ಜವಬ್ದಾರಿ ನನ್ನದೆ ಎಂದಿದ್ದಲ್ಲ, ಈಗ ನಾಳೆಯಿಂದ ಬಂದು ಅಂಗಡಿಯಲ್ಲಿ ಕುಳಿತುಕೋ ಎಂದು ಲಕ್ಷ್ಮೀಗೆ ದೊಡ್ಡಮ್ಮ ಆರ್ಡರ್ ಮಾಡಿದ್ದಾಳೆ‌.

Lakshmi Baramma serial Written Update on April 12th episode

ಮನೆಯಲ್ಲೆಲ್ಲಾ ಲಕ್ಷ್ಮೀಯದ್ದೇ ವಿಚಾರ

ಲಕ್ಷ್ಮೀ ಈಗ ದೊಡ್ಡ ಮನೆಯ ಸೊಸೆಯಾಗಿದ್ದಾಳೆ. ಅವರ ಅತ್ತೆ ಮನೆಯನ್ನೇ ಗಿಫ್ಟ್ ಕೊಟ್ಟಿದ್ದಳು. ಈಗ ದೊಡ್ಡಮ್ಮನ ಮಾತಿಗೆ ತಲೆ ಬಾಗಿ ಲಕ್ಷ್ಮೀ ಅಂಗಡಿಯಲ್ಲಿ ಕುಳಿತುಕೊಳ್ಳುವುದಕ್ಕೆ ಸಾಧ್ಯವಿದೆಯಾ..? ಆದರೆ ಲಕ್ಷ್ಮೀಗೆ ತಾನೂ ಕೊಟ್ಟ ಮಾತು ಕೂಡ ಮುಖ್ಯವಾಗುತ್ತೆ. ತವರು ಮನೆಯನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಈಗ ಯಾವ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂಬುದೇ ಮುಖ್ಯ.

ಇತ್ತ ಲಕ್ಷ್ಮೀ ಮನೆಯಲ್ಲಿ ಲಕ್ಷ್ಮೀಗೆ ದುಷ್ಮನ್ ಏನು ಕಡಿಮೆ ಇಲ್ಲ. ಈಗ ಸುಪ್ರೀತಾ ಎಲ್ಲವನ್ನು ಮುಂದೆ ನಿಂತು ಮಾಡುವಂತೆ ಇಲ್ಲ. ಬದಲಿಗೆ ವಿಧಿಯನ್ನು ಬಳಸಿಕೊಳ್ಳುತ್ತಿದ್ದಾಳೆ. ಲಕ್ಷ್ಮೀ ವಿರುದ್ದ ವಿಧಿಯನ್ನು ಎತ್ತಿ ಕಟ್ಟಿದ್ದಾಳೆ. ವಿಧಿ, ಲಕ್ಷ್ಮೀಯ ಮರ್ಯಾದೆ ತೆಗೆಯುವ ಕೆಲಸ ಮಾಡಿದಾಗ, ಅಪ್ಪ ಅಮ್ಮ ಅವಳಿಗೆ ಬುದ್ದಿ ಹೇಳಿದ್ದಾರೆ. ಆಗಲೂ ಎದುರು ಮಾತನಾಡಿದ್ದಾಳೆ.

ಬೆಳಗ್ಗೆ ಎಲ್ಲರು ತಿಂಡಿ ತಿನ್ನಲು ಕುಳಿತಾಗಲೂ ವೈಷ್ಣವ್ ನನ್ನು ಕಾಡುತ್ತಿದ್ದರು. ಆಗ ಸುಪ್ರೀತಾ, ಮಗನಷ್ಟೇ ಮಗಳ ಮೇಲೂ ಕಾಳಜಿ ಇರಲಿ ಎಂದಿದ್ದಾಳೆ. ಮಾತಿಗೆ ಮಾತು ಬೆಳೆದು ಕಡೆಗೆ ವೈಷ್ಣವ್ ತಾನೇ ವಿಧಿಯನ್ನು ಕರೆ ತರುವುದಕ್ಕೆ ಹೊರಟಿದ್ದಾನೆ. ಆಗ ವಿಧಿ ಲೆಟರ್ ಬರೆದಿಟ್ಟು ಮನೆ ಬಿಟ್ಟು ಹೋಗಿರುವುದು ಗೊತ್ತಾಗಿದೆ. ಇದು ಸುಪ್ರೀತಾ ಮಾಡಿರುವ ಪ್ಲ್ಯಾನ್ ಆಗಿರುವುದರಲ್ಲಿ ಅನುಮಾನವೇ ಇಲ್ಲ.

More from Filmibeat

English summary
Colors Kannada Lakshmi Baramma serial Written Update on April 12th episode. Here is the details about Vaishnav sister Vidhi escape.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X