Lakshmi Baramma: ಫ್ರೆಂಡ್ಸ್ ಜೊತೆ ಜಾಲಿ ಮೂಡ್‌ನಲ್ಲಿ ವಿಧಿಗಾಗಿ ಬೀದಿ ಬೀದಿ ಅಲೆಯುತ್ತಿರುವ ಕಾವೇರಿ – ವೈಷ್ಣವ್!
ಸುಪ್ರೀತಾಗೆ ತಕ್ಕ ದೋಸ್ತಿ ಅಂದ್ರೆ ವಿಧಿ. ಸ್ಟೇಟಸ್, ಮಣ್ಣು ಮಸಿ ಅಂತ ಸೇಮ್ ಟು ಸೇಮ್ ಅತ್ತೆಯಂತೆಯೇ ಆಡುತ್ತಿದ್ದಾಳೆ ವಿಧಿ. ಈಗ ಅಮ್ಮ ಮತ್ತು ಅಣ್ಣನಿಗೆ ಬುದ್ದಿ ಕಲಿಸಬೇಕೆಂದುಕೊಂಡು ಅತ್ತೆಯ ಜೊತೆಗೆ ಸೇರಿ ಮನೆ ಬಿಟ್ಟು ಹೋಗಿದ್ದಾಳೆ. ವಿಧಿ ಕಾಣುತ್ತಿಲ್ಲ ಎಂದು ಎಲ್ಲರೂ ಗಾಬರಿಯಾಗಿದ್ದರೆ, ತಾನೂ ಗಾಬರಿಯಾದವಳಂತೆ ಸುಪ್ರೀತಾ ಕೂಡ ನಾಟಕ ಶುರು ಮಾಡಿದ್ದಾಳೆ. ಸಣ್ಣ ಸಣ್ಣಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿದ್ದಾಳೆ.
ಲಕ್ಷ್ಮೀ ಕಂಡರೆ ಮೊದಲಿನಿಂದಾನೂ ಅಷ್ಟಕ್ಕೆ ಅಷ್ಟೇ. ಕೀರ್ತಿಯೇ ಬರಬೇಕಿತ್ತು ಈ ಇಬ್ಬರಿಗೆ. ಆದರೆ ಕಾವೇರಿ ಆಯ್ಕೆ ಮಾಡಿದ ಸೊಸೆ ಬಂದಾಗಿದೆ. ಹೀಗಾಗಿ ಲಕ್ಷ್ಮೀಯನ್ನು ಅವಮಾನ ಮಾಡಲು ಹೋದ ವಿಧಿಗೆ, ಅಣ್ಣ, ಅಪ್ಪ, ಅಮ್ಮನಿಂದ ಬುದ್ಧಿವಾದದ ಕ್ಲಾಸ್ ಸಿಕ್ಕಿತ್ತು. ಇದೀಗ ಅದಕ್ಕೆಲ್ಲಾ ಉತ್ತರ ಕೊಡಲೆಂದೆ ವಿಧಿ ಮನೆ ಬಿಟ್ಟು ಹೋಗುವ ನಾಟಕವಾಡಿದ್ದಾಳೆ.

ಸ್ನೇಹಿತರ ಜೊತೆ ಮೋಜು ಮಸ್ತಿಯಲ್ಲಿ ವಿಧಿ
ಪಕ್ಕಾ ಅತ್ತೆಯ ಸೊಸೆ ಈ ವಿಧಿ. ಈಗ ಮನೆಯವರಿಗೆಲ್ಲಾ ಬಿಸಿ ಮುಟ್ಟಿಸುವ ಸಲುವಾಗಿ ವಿಧಿ ಮನೆ ಬಿಟ್ಟು ಹೋದವಳಂತೆ ಪತ್ರ ಬರೆದಿಟ್ಟು ಹೋಗಿದ್ದಾಳೆ. ಮನೆಯವರೆಲ್ಲಾ ಅದೇ ಸತ್ಯ ಎಂದು ನಂಬಿದ್ದಾರೆ. ಆದರೆ ವಿಧಿಯ ಆಟವೇ ಬೇರೆಯಾಗಿದೆ. ರೆಸಾರ್ಟ್‌ಗೆ ತನ್ನ ಕಪಿ ಸೈನ್ಯವನ್ನು ಕರೆದುಕೊಂಡು ಹೋಗಿರುವ ವಿಧಿ, ಮಸ್ತ್ ಮಜಾ ಮಾಡುತ್ತಿದ್ದಾಳೆ. ಅದರಲ್ಲೂ ತನ್ನ ಜೊತೆಗೆ ಬಂದಿರುವ ತನ್ನ ಸ್ನೇಹಿತೆಯರಿಗೆಲ್ಲಾ ತನ್ನದೇ ದುಡ್ಡಿನಿಂದ ಟ್ರೀಟ್ ಕೊಡಿಸುತ್ತಿದ್ದಾಳೆ.
ವಿಧಿ ಮಾಡಿದ ತಪ್ಪಿಗೆ ಮನೆಯಲ್ಲಿಯೇ ಇಲ್ಲದ ಲಕ್ಷ್ಮೀಯನ್ನು ದೂರುತ್ತಿದ್ದಾರೆ. ಸುಪ್ರೀತಾದು ಮಾಮೂಲಿ ಚಾಳಿ ಆದರೆ, ಈ ಬಾರಿ ಕಾವೇರಿಯೂ ತಿರುಗಿ ಬಿದ್ದಿದ್ದಾಳೆ. ವೈಷ್ಣವ್ ಮಾತನಾಡಲು ಬಂದಾಗ ಕಾವೇರಿ ಅವನ ಬಾಯಿ ಮುಚ್ಚಿಸಿದ್ದಾಳೆ. "ನೀನು ಅವತ್ತು ಎಲ್ಲರ ಮುಂದೆ ನಿನ್ನ ಹೆಂಡತಿಯನ್ನು ವಹಿಸಿಕೊಂಡು ಬಾರದೆ ಇದ್ದಿದ್ದರೆ ಇವತ್ತು ಹೀಗೆ ಆಗ್ತಾ ಇರ್ಲಿಲ್ಲ. ನೀನು ಬಹಳ ಬದಲಾವಣೆಯಾಗಿದ್ದೀಯ. ಎಲ್ಲದಕ್ಕೂ ಹೆಂಡತಿ ಹೆಂಡತಿ ಎಂದುಕೊಂಡು" ಎಂದು ಹಿಗ್ಗಾಮುಗ್ಗಾ ಬೈದಿದ್ದಾಳೆ.
ವಿಧಿಯನ್ನು ಹುಡುಕುತ್ತಾ ಹೊರಟ ವೈಷ್ಣವ್
ಆದರೆ, ಸಂಬಂಧವೇ ಇಲ್ಲದ ವಿಚಾರಕ್ಕೆ ಲಕ್ಷ್ಮೀಗೆ ಬೈದರೆ ವೈಷ್ಣವ್ ಸಹಿಸಿಕೊಳ್ಳುವುದಿಲ್ಲ. ಮನೆಯಲ್ಲೂ ಅಮ್ಮನಿಗೆ ಅದೇ ಬುದ್ಧಿ ಮಾತು ಹೇಳಿದ್ದಾನೆ. ಲಕ್ಷ್ಮೀಯದ್ದು ತಪ್ಪಿಲ್ಲ ಎಂದು, ವಿಧಿಯನ್ನು ನಾನೇ ಹುಡುಕಿಕೊಂಡು ಬರುತ್ತೀನಿ ಅಂತ ಹೊರಟಿದ್ದಾನೆ. ಗೊತ್ತಿರುವ ಸ್ನೇಹಿತರಿಗೆಲ್ಲಾ ಫೋನ್ ಮಾಡಿದ್ದಾನೆ. ಯಾವುದೇ ಸುಳಿವು ಸಿಕ್ಕಿಲ್ಲ. ಈ ಗ್ಯಾಪ್‌ನಲ್ಲಿ ಲಕ್ಷ್ಮೀಗೂ ಶಾಂತಾಳಿಂದ ವಿಚಾರ ಗೊತ್ತಾಗಿದೆ. ವೈಷ್ಣವ್‌ಗೆ ಕಾಲ್ ಮಾಡಿ ಧೈರ್ಯ ಹೇಳಿದ್ದಾಳೆ.

ಇತ್ತ ವಿಧಿ ಹೋಗಿ ಎಂಜಾಯ್ ಮಾಡಿರುವ ರೆಸಾರ್ಟ್‌ನಲ್ಲಿ ಲಕ್ಷ್ಮೀಯ ದೊಡ್ಡಪ್ಪ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿಧಿ ಅಲ್ಲಿರುವುದನ್ನು ನೋಡಿದ್ದಾರೆ. ಆ ಕಡೆ ಲಕ್ಷ್ಮೀ ಕೂಡ ವಿಧಿಯನ್ನು ಹುಡುಕಿಕೊಂಡು ಹೊರಟಿದ್ದಾಳೆ. ಅದಕ್ಕೂ ಮುನ್ನ ದೊಡ್ಡಮ್ಮನಿಂದ ಮನಸ್ಸಿಗೆ ಘಾಸಿಯಾಗುವಷ್ಟು ಬೈಸಿಕೊಂಡಿದ್ದಳು. ವಿಧಿಯನ್ನು ಹುಡುಕುತ್ತಾ ಹೊರಟವಳಿಗೆ ದೊಡ್ಡಪ್ಪನಿಂದ ಸಮಾಧಾನದ ಉತ್ತರ ಸಿಕ್ಕಿದೆ. ಪಾರ್ಟಿ ಅದು ಇದು ಅಂತ ಮಾತನಾಡುತ್ತಿದ್ದ ವಿಧಿಯನ್ನು ಕಂಡು ದೊಡ್ಡಪ್ಪ ಗಾಬರಿಯಾಘಿದ್ದರು. ಅದಕ್ಕೆ ಇದನ್ನು ಲಕ್ಷ್ಮೀಗೆ ತಿಳಿಸಲು ಫೋನ್ ಮಾಡಿದ್ದರು. ಆತಂಕದಲ್ಲಿದ್ದ ಲಕ್ಷ್ಮೀಗೆ ವಿಧಿ ಇರುವ ಜಾಗ ಗೊತ್ತಾಗಿದೆ. ಈಗ ವೈಷ್ಣವ್‌ಗೂ ವಿಚಾರ ತಿಳಿಸಿ, ಜೊತೆಯಲ್ಲಿಯೇ ಹೋದರೆ ವಿಧಿ ನಾಟಕ ಬಯಲಾಗುತ್ತದೆ.


Click it and Unblock the Notifications











