Lakshmi Baramma: ನೀನ್ಯಾರು ಅಂತ ಕೇಳಿದ ವಿಧಿ ಕಪಾಳಕ್ಕೆ ಬಿತ್ತು ಲಕ್ಷ್ಮೀ ಕೈ ಏಟು..!
ವಿಧಿ ದುರಹಂಕಾರ ದಿನೇ ದಿನೆ ಹೆಚ್ಚಾಗುತ್ತಿದೆ. ಯಾರ ಮಾತಿಗೂ ಬೆಲೆ ಕೊಡ್ತಾ ಇಲ್ಲ. ಅಪ್ಪಅಮ್ಮಬುದ್ದಿ ಹೇಳಿದ್ದಕ್ಕೇನೆ ಮನೆ ಬಿಟ್ಟು ಹೋಗುವ ನಾಟಕವಾಡಿದ್ದಾಳೆ. ರೆಸಾರ್ಟ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾಳೆ. ಆದರೆ, ಆ ವಿಚಾರ ತಿಳಿಯದ ಮನೆಯವರು ಎಲ್ಲೆಡೆ ಆತಂಕದಲ್ಲಿಯೇ ಹುಡುಕುತ್ತಿದ್ದಾರೆ. ವೈಷ್ಣವ್ ಅಂತು ಟೆನ್ಶನ್ ಇದ್ದರು ತೋರಿಸಿಕೊಳ್ಳದೆ ವಿಧಿಗಾಗಿ ಬೀದಿ ಬೀದಿ ಅಲೆಯುತ್ತಿದ್ದಾನೆ.
ಕಾವೇರಿಗೆ ಈಗ ಸಂಸಾರದ್ದೇ ದೊಡ್ಡ ಚಿಂತೆಯಾಗಿದೆ. ಒಂದು ಕಡೆ ವಿಧಿ ಕಾಣಿಸುತ್ತಿಲ್ಲ. ಮತ್ತೊಂದು ಕಡೆ ಲಕ್ಷ್ಮೀ ಮೇಲೆ ಕೋಪ. ಇನ್ನೊಂದು ಕಡೆ ಕೀರ್ತಿಯ ಕಾಟ. ಮಗಳನ್ನು ಸರಿ ಮಾಡುವುದಾ..? ಮಗನನ್ನು ಮೊದಲಿನಂತೆ ಅಮ್ಮನ ಮಗನಾಗಿ ಮಾಡುವುದಾ..? ತಿಳಿಯದೆ ಕಂಗಲಾಗಿದ್ದಾಳೆ. ಇದರ ನಡುವೆ ಲಕ್ಷ್ಮೀ ತನ್ನ ಅಧಿಕಾರವನ್ನು ಚಲಾಯಿಸಿದ್ದಾಳೆ.

ವಿಧಿ ಚಿಂತೆಯಲ್ಲಿರುವ ಕಾವೇರಿಗೆ ಕೀರ್ತಿ ಕಾಟ
ಲಕ್ಷ್ಮೀಯನ್ನು ಸೊಸೆಯಾಗಿ ತರಬೇಕೆಂಬ ಕಾರಣಕ್ಕೆ ಕಾವೇರಿ ಮಾಡಿದ ನಾಟಕ ಅಷ್ಟಿಷ್ಟಲ್ಲ. ಕೀರ್ತಿ ಅಂದ್ರೆ ಈಗ ವೈಷ್ಣವ್‌ಗೂ ಕೋಪ. ಆದರೆ, ಇದಕ್ಕೆಲ್ಲಾ ಅಮ್ಮನೇ ಕಾರಣ ಅಂತ ಗೊತ್ತಾದ್ರೆ ವೈಷ್ಣವ್ ಸುಮ್ಮನೆ ಬಿಡುವುದಿಲ್ಲ. ಈ ಭಯ ಕಾವೇರಿಗೆ ಪ್ರತಿಕ್ಷಣ ಕಾಡುತ್ತೆ. ಹೀಗಾಗಿ ಕೀರ್ತಿ ಬಂದಾಗೆಲ್ಲಾ ಕಾವೇರಿ ಹೆದರುತ್ತಾಳೆ. ಈಗಲೂ ಕೀರ್ತಿ ಮತ್ತೆ ಡಿವೋರ್ಸ್ ಕೊಡಿಸಲು ಕಾವೇರಿಯನ್ನು ಕಾಡಿದ್ದಾಳೆ. ಇದು ಕಾವೇರಿಯ ಕೋಪಕ್ಕೆ ಕಾರಣವಾಗಿದೆ.
ಸುಪ್ರೀತಾಗೆ ಮೊದಲಿನಿಂದಲೂ ಅತ್ತಿಗೆ ಮೇಲೆ ಅನುಮಾನವೇ ಇದೆ. ಅದರಲ್ಲೂ ಕೀರ್ತಿ ಮತ್ತು ಕಾವೇರಿ ಕಣ್ಸನ್ನೇ ಮಾಡುವುದನ್ನೂ ಆಗಾಗ ನೋಡುತ್ತಲೇ ಇರುತ್ತಾಳೆ. ಈಗ ಮನೆಯೊಳಗೆ ಕೂತು ಇಬ್ಬರು ಮಾತನಾಡುತ್ತಿದ್ದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಈ ವೇಳೆ ನಾಟಕ ಮಾಡಿ, ಅತ್ತಿಗೆಯಿಂದ ಬಾಯಿ ಬಿಡಿಸಲು ನೋಡಿದ್ದಾಳೆ. ಕಾವೇರಿ ತುಂಬಾ ಭುಪಟ್ಟು ಇನ್ನೇನು ಸುಪ್ರೀತಾಗೆ ಎಲ್ಲಾ ವಿಚಾರ ಹೇಳಿಯೇ ಬಿಡಬೇಕು ಎನ್ನುವಷ್ಟರಲ್ಲಿ ಕೀರ್ತಿ ಮಧ್ಯಪ್ರವೇಶಿಸಿದ್ದಾಳೆ. ಸುಪ್ರೀತಾಳ ನಾಟಕವನ್ನು ಬಯಲಿಗೆಳೆದಿದ್ದಾಳೆ.

ವಿಧಿ ಬಳಿ ಒಬ್ಬಳೆ ಹೊರಟ ಲಕ್ಷ್ಮೀ
ಲಕ್ಷ್ಮೀ ದೊಡ್ಡಪ್ಪನಿಗೆ ವಿಧಿ ಇರುವ ಜಾಗ ಕಂಡಿದೆ. ರೆಸಾರ್ಟ್‌ನಲ್ಲಿ ಡ್ರಿಂಕ್ಸ್ ಮಾಡಿಕೊಂಡು ಎಂಜಾಯ್ ಮಾಡುತ್ತಿದ್ದರು. ಇದನ್ನು ತಪ್ಪಿಸುವಂತೆ ಲಕ್ಷ್ಮೀಗೆ ಹೇಳಿದ್ದಾರೆ. ಲಕ್ಷ್ಮೀ ತಕ್ಷಣ ವೈಷ್ಣವ್‌ಗೆ ಕರೆ ಮಾಡಿದರೆ ರಿಸೀವ್ ಮಾಡಿಲ್ಲ. ಬಳಿಕ ತಾನೊಬ್ಬಳೇ ಅಲ್ಲಿಗೆ ಹೋಗಿದ್ದಾಳೆ. ವಿಧಿ, ಲಕ್ಷ್ಮೀಯನ್ನು ಕಂಡು ಶಾಕ್ ಆಗಿದ್ದಾಳೆ. ಮನೆಗೆ ಬಾ ಎಂದು ಕರೆದರು ಬರುವುದಕ್ಕೆ ಒಪ್ಪಿಲ್ಲ. ಮನೆಯವರು ಅಷ್ಟೆಲ್ಲಾ ಕಷ್ಟಪಟ್ಟು ಹುಡುಕುತ್ತಿದ್ದಾರೆ. ನೀನಿಲ್ಲ ಮಜಾ ಮಾಡ್ತೀಯ ಅಂತ ಕೇಳಿದ್ರು ಡೋಂಟ್ ಕೇರ್ ಅಂತಿದ್ದಾಳೆ.
ವಿಧಿಗೆ ಸಾಧ್ಯವಾದಷ್ಟು ಬುದ್ದಿ ಹೇಳಿದಳು ಲಕ್ಷ್ಮೀ. ಮನೆಗೆ ಬಾ ಅಂತ ಕೇಳಿದಳು. ಆಗಲೂ ಬರುವುದಕ್ಕೆ ಒಪ್ಪಿಲ್ಲ. ನಾನು ಮನೆಗೆ ಬರ್ತೀನಿ, ಆದರೆ ನೀನು ಮನೆ ಬಿಟ್ಟು ಹೋಗಬೇಕು ಎಂದಿದ್ದಾಳೆ. ನೀನು ಬಂದಾದ ಮೇಲೆ ನಮ್ಮ ಮನೆಯ ನೆಮ್ಮದಿ ಹಾಳಾಗಿದ್ದು ಅಂತಾನೆ ದೂರಿದ್ದಾಳೆ. ಮನೆ ಬಿಟ್ಟು ಹೋಗು ಎಂದಾಗ ಅದು ನನ್ನ ಗಂಡನ ಮನೆ, ನೀನು ಒಪ್ಪಿದರು ಬಿಟ್ಟರು ನಾನು ಆ ಮನೆಯ ಸೊಸೆ. ಸುಮ್ಮನೆ ಮನೆಗೆ ಬಾ ಅಂತ ಲಕ್ಷ್ಮೀ ಬುದ್ಧಿ ಹೇಳಿದ್ದಾಳೆ. ಆದರೂ ಮಾತಿಗೆ ಮಾತು ಬೆಳೆದು ಅತಿಯಾಗಿ ಮಾತನಾಡಿದಾಗ ಕಪಾಳಕ್ಕೆ ಬಾರಿಸಿದ್ದಾಳೆ.


Click it and Unblock the Notifications











