Lakshmi Baramma: ಲಕ್ಷ್ಮಿಯೇ ಬೇಕು ಎಂದು ಹರಕೆ ಕಟ್ಟಿದ ವೈಷ್ಣವ್‌ಗೆ ಗೊಂಬೆ ಮಾರುವವನಿಂದ ಭಯ!
ವೈಷ್ಣವ್ ಈಗ ಸಂಪೂರ್ಣ ಬದಲಾಗಿದ್ದಾನೆ. ಕೀರ್ತಿಯ ನೆನಪುಗಳೇ ಬಾರದಂತೆ. ಲಕ್ಷ್ಮೀ ಕಂಡರೆ ಸಿಕ್ಕಾಪಟ್ಟೆ ಇಷ್ಟವಾಗಿ ಬಿಟ್ಟಿದೆ. ಲಕ್ಷ್ಮೀಗಾಗಿ ಏನು ಬೇಕಾದರೂ ಮಾಡುತ್ತಾನೆ. ಅದಕ್ಕಾಗಿಯೇ ದೇವರ ಬಳಿ ತಾನೂ ಮತ್ತು ಲಕ್ಷ್ಮೀ ತುಂಬಾ ಚೆನ್ನಾಗಿ ಇರಬೇಕು ಎಂದು ಹರಕೆಯನ್ನು ಹೊತ್ತಿದ್ದಾನೆ. ಲಕ್ಷ್ಮೀ ಕೂಡ ದೇವರ ಬಳಿ ವೈಷ್ಣವ್ ಕೇಳಿದ್ದನ್ನು ಕೊಟ್ಟು ಬಿಡು ಎಂದು ಕೇಳಿದ್ದಾಳೆ.
ಲಕ್ಷ್ಮೀ - ವೈಷ್ಣವ್ ಬಯಸಿ ಆದ ಮದುವೆಯೇನು ಅಲ್ಲ ಇದು. ಮನೆಯವರ ಒತ್ತಾಯಕ್ಕೆ ಆದ ಮದುವೆಯಾಗಿದೆ. ಆದರೆ ಲಕ್ಷ್ಮೀಯ ಗುಣ, ನಡವಳಿಕೆಯಿಂದಾಗಿ ವೈಷ್ಣವ್ ಕಳೆದೇ ಹೋಗಿದ್ದಾನೆ. ಇರುವಷ್ಟು ದಿನ ಲಕ್ಷ್ಮೀಯನ್ನೇ ಬಯಸುತ್ತಿದ್ದಾನೆ. ತಾಂಡವ್ ಆಸೆ ಪಟ್ಟಂತೆ ಲಕ್ಷ್ಮೀಯನ್ನು ತೋರಿಸುವುದಕ್ಕೆ ವೈಷ್ಣವ್ ಮುಜುಗರ ಮಾಡಿಕೊಳ್ಳುವುದಿಲ್ಲ. ಬದಲಿಗೆ ಅವಳು ಹೇಗಿರುತ್ತಾಳೋ, ಹಾಗೆಯೇ ಪ್ರಪಂಚಕ್ಕೆ ತೋರಿಸಲು ಇಷ್ಟಪಡುತ್ತಾನೆ.

ಲಕ್ಷ್ಮೀಯೇ ಬೇಕೆಂದು ಹರಕೆ ಕಟ್ಟಿದ ವೈಷ್ಣವ್
ಲಕ್ಷ್ಮೀ ಮತ್ತು ವೈಷ್ಣವ್ ದೇವಸ್ಥಾನಕ್ಕೆ ಬಂದಿದ್ದರು. ಅಲ್ಲಿ ಬಳೆ ಕಟ್ಟುವ ಸಂಪ್ರದಾಯವಿದೆ. ಆದರೆ ಅದಕ್ಕೊಂದು ಹರಕೆ ಇರಬೇಕು. ಲಕ್ಷ್ಮೀಗೋ ಯಾವ ಹರಕೆ ಹೊತ್ತುಕೊಂಡು ಕಟ್ಟಬೇಕು ಗೊತ್ತಿಲ್ಲ. ಆಗ ವೈಷ್ಣವ್ "ಇಬ್ಬರಿಗೂ ಒಂದು ದೊಡ್ಡ ಪ್ರಶ್ನೆಯೇ ಇದೆ. ಮದುವೆಯಂತು ಆಗಿಬಿಟ್ವಿ. ಜೊತೆಯಾಗಿ ಹೇಗೆ ಇರ್ತೀವಿ ಅನ್ನೋದು. ಹೀಗಾಗಿ ಇಬ್ಬರನ್ನು ಹೀಗೆ ಜೀವನ ಪೂರ್ತಿ ಜೊತೆಗಿರಿಸು ದೇವರೇ" ಎಂದು ವೈಷ್ಣವ್ ಬೇಡಿಕೊಂಡು ಹರಕೆ ಕಟ್ಟಿದ್ದಾನೆ. ಬಳಿಕ ಇಬ್ಬರು ದೇವರಲ್ಲಿ ಅದೇ ಪ್ರಾರ್ಥನೆ ಸಲ್ಲಿಸಿದ್ದಾರೆ.
ಗೊಂಬೆ ಮಾರುವವನ ಭವಿಷ್ಯ ನಿಜವಾಗುತ್ತಾ..?
ವೈಷ್ಣವ್‌ಗೆ ತುಂಬಾ ಕಾಡುವ ವ್ಯಕ್ತಿ ಈ ಗೊಂಬೆ ಮಾರುವವರು. ಯಾಕಂದ್ರೆ, ಮದುವೆಗೂ ಮುನ್ನವೂ ವೈಷ್ಣವ್‌ಗೆ ಹೇಳಿದ್ದ ಎಲ್ಲಾ ಭವಿಷ್ಯ ನಿಜವಾಗಿತ್ತು. ಇದೀಗ ವೈಷ್ಣವ್ ಅವರನ್ನು ಕಂಡು ತಾನೇ ಕರೆದು ಭವಿಷ್ಯ ಕೇಳಿದ್ದಾನೆ. ಆಗ ಆ ವ್ಯಕ್ತಿ ಗಾಬರಿಯಾಗುವಂತ ಭವಿಷ್ಯ ನುಡಿದಿದ್ದಾನೆ. "ಹಿತ ಶತ್ರುಗಳು ಹೆಚ್ಚಾಗಿದ್ದಾರೆ. ನಿಮ್ಮಿಬ್ಬರನ್ನು ದೂರ ಮಾಡುವ ಸಾಧ್ಯತೆ ಇದೆ" ಎಂದೇ ತಿಳಿಸಿದ್ದಾರೆ. ಇದನ್ನು ಕೇಳಿ ವೈಷ್ಣವ್ ಹಾಗೂ ಲಕ್ಷ್ಮೀ ಶಾಕ್ ಆದರೂ ಕೂಡ, ತಮಗೆ ತಾವೇ ಸಮಧಾನ ಮಾಡಿಕೊಂಡಿದ್ದಾರೆ. ಇಬ್ಬರು ಒಟ್ಟಾಗಿಯೇ ಇರೋಣಾ ಎಂದು ಮಾತು ಕೊಟ್ಟಿಕೊಂಡಿದ್ದಾರೆ.
ಲಕ್ಷ್ಮೀಯ ತವರಿಗೆ ಬಂದ ಅಳಿಯ
ಅಂತು ಇಂದು ವೈಷ್ಣವ್‌ಗೆ ಅಳಿಮೈತನ ಇದೆ. ಲಕ್ಷ್ಮೀಯನ್ನು ದೇವಸ್ಥಾನಕ್ಕೆ ಸುತ್ತಾಡಿಸಿ, ಮನೆಗೆ ಬರುವಷ್ಟರಲ್ಲಿ ಅಕ್ಕ ಮತ್ತು ದೊಡ್ಡಮ್ಮ ಅಲ್ಲಿ ಹಾಜರಾಗಿದ್ದರು. ಇಬ್ಬರಿಗೂ ಆರತಿ ಎತ್ತಿ ಒಳಗೆ ಕರೆದು, ಸಕ್ಕರೆ ಹಾಕಿದ ಹಾಲು ತರುವಷ್ಟರಲ್ಲಿ ಅಮ್ಮನ ಕರೆ ಬಂದಿದೆ. ಇಂದೇ ಬಂದು ಬಿಡು ಅಂದ್ರೆ, ಬರುವುದಕ್ಕೆ ಒಲ್ಲೆ ಅಂತಿದ್ದಾನೆ ವೈಷ್ಣವ್. ಬಳಿಕ ಕುಸುಮಾ ಮಾತನಾಡಿ ಎಲ್ಲವೂ ಸರಿ ಮಾಡಿದ್ದಾರೆ.

ಕುಸುಮಾಗೆ ಕೈಗೆ ಸಿಕ್ಕಿ ಬಿಡ್ತು ರಿಯಲ್ ಒಡವೆ..!
ಕುಸುಮಾಗೆ ಭಾಗ್ಯಾಳ ಅಮ್ಮ ಪುಷ್ಪಾ ಮೇಲೆ ಕೆಂಡದಷ್ಟು ಕೋಪ. ಮತ್ತೆ ಬಂದವರನ್ನು ಸರಿಯಾಗಿ ವಿಚಾರಿಸಿಕೊಳ್ಳಲ್ಲ. ಲಕ್ಷ್ಮೀಯನ್ನಂತು ಹುರಿದು ತಿಂದು ಬಿಟ್ಟಿದ್ದಾಳೆ. ಈಗ ಮನೆಗೆ ಬಂದ ಅಳಿಯನಿಗೆ ಬೆಳ್ಳಿ ಲೋಟದಲ್ಲಿ ಹಾಲು ಕೊಡುವ ಬದಲು ಅದರಲ್ಲೂ ಕಂಜೂಸುತನ ತೋರಿಸುತ್ತಾಳೆ. ಅದಕ್ಕೆ ಆ ಬೆಳ್ಳಿ ಲೋಟವನ್ನು ಹುಡುಕಲು ಹೊರಟಾಗ ಪುಷ್ಪಾಳ ಸುಳ್ಳಿನ ಸಾಮ್ರಾಜ್ಯ ಬಯಲಾಗಿದೆ. ಅಸಲಿ ಚಿನ್ನವನ್ನು ಅಡಗಿಸಿಟ್ಟಿದ್ದ ಜಾಗ ಗೊತ್ತಾಗಿದೆ. ಭಾಗ್ಯಾ ಹಾಗೂ ಲಕ್ಷ್ಮೀಗೆ ಮೋಸ ಮಾಡಿಟ್ಟಿದ್ದ ಒಡವೆಯದು. ಈಗ ಕುಸುಮಾಳ ಕೈಯಲ್ಲಿ ಜೋಪಾನವಾಗಿದೆ.


Click it and Unblock the Notifications











