Lakshmi Baramma: ತಾನೇ ತಂದ ಸೊಸೆಯನ್ನು ಸಹಿಸುತ್ತಿಲ್ಲ ಕಾವೇರಿ.. ಮುಂದೇನಾಗುತ್ತೆ?
ವೈಷ್ಣವ್ ಮತ್ತು ಲಕ್ಷ್ಮೀ ಮದುವೆಯಾದ ಮೇಲೆ ಮೊದಲ ಬಾರಿಗೆ ತವರಿಗೆ ಬಂದಿದ್ದಾರೆ. ಇಷ್ಟು ದಿನ ರಿಚ್ ಲೈಫ್ ಅನ್ನೇ ಲೀಡ್ ಮಾಡಿದ ವೈಷ್ಣವ್‌ಗೆ ಲಕ್ಷ್ಮೀ ಮನೆಯಲ್ಲಿ ಬಡತನ ಎಂಬುದು ಗೊತ್ತಿದ್ದರು ಅದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ವೈಷ್ಣವ್‌ಗೆ ಬೇಕಿರೋದು ಲಕ್ಷ್ಮೀ ಯಾವಾಗಲೂ ಜೊತೆಗಿರಬೇಕು ಎಂಬ ಭಾವವಷ್ಟೇ. ಅದರಂತೆಯೇ ಇಬ್ಬರು ಇದ್ದಾರೆ. ದೆದವರ ಬಳಿಯೂ ನಮ್ಮಿಬ್ಬರನ್ನು ದೂರ ಮಾಡಬೇಡ ಎಂದು ಬೇಡಿಕೊಂಡು ಬಂದಿದ್ದಾರೆ.
ಸದ್ಯ ಲಕ್ಷ್ಮೀ ಮನೆಗೆ ಬಂದು ಅಳಿಮಯ್ಯ ತೆಗೆದುಕೊಳ್ಳುತ್ತಿರುವ ಗೌರವ ಅಷ್ಟರಲ್ಲಿಯೇ ಇದೆ. ಯಾಕಂದ್ರೆ, ಸುನಂದಾ ಅಷ್ಟು ಅದ್ಭುತವಾಗಿ ನೋಡಿಕೊಳ್ಳುತ್ತಾಳೆ. ಸ್ನಾನ ಮಾಡುವುದಕ್ಕೂ ಕಷ್ಟವಿದೆ. ಬಾತ್ ರೂಮಿನ ಡೋರ್ ಕೂಡ ಸರಿ ಇಲ್ಲ. ವೈಷ್ಣವ್‌ಗೆ ಎಂಥದ್ದೇ ಸಮಸ್ಯೆ ಬಂದರೂ ಲಕ್ಷ್ಮೀ ಒಬ್ಬಳು ಜೊತೆಗಿದ್ದರೆ ಸಾಕು. ಎಲ್ಲಾ ಸಮಸ್ಯೆಗೂ ಪರಿಹಾರ ಸಿಕ್ಕೇ ಬಿಡುತ್ತೆ.

ಕಾವೇರಿಯ ಬಳಿ ಗಂಡನ ಪ್ರಶ್ನೆಗೆ ಉತ್ತರವಿಲ್ಲ
ಕೀರ್ತಿ ಸೊಸೆಯಾಗಿ ಬಂದರೆ ವೈಷ್ಣವ್‌ನನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಬಿಡುತ್ತಾಳೆ. ನನ್ನ ಮಗ ನನ್ನಿಂದ ದೂರಾಗಿ ಬಿಡುತ್ತಾನೆ ಎಂಬ ಭಯ ಕಾವೇರಿಗೆ ಶುರುವಾಗಿತ್ತು. ಆ ಕಾರಣಕ್ಕಾಗಿಯೇ ಕಾವೇರಿ ಪ್ಲ್ಯಾನ್ ಮಾಡಿ ಲಕ್ಷ್ಮೀಯನ್ನು ತಂದಳು. ಆದರೆ ಈಗ ಲಕ್ಷ್ಮೀ ಮತ್ತು ವೈಷ್ಣವ್ ಅನ್ಯೋನ್ಯವಾಗಿರುವುದನ್ನೇ ಸಹಿಸುತ್ತಿಲ್ಲ. ಲಕ್ಷ್ಮೀ, ನನಗೆ ಒಪ್ಪಿಗೆ ಇದೆ ಎಂದು ಎಲೆ ಮೇಲೆ ಬರೆದುಕೊಟ್ಟ ಪತ್ರವನ್ನು ವೈಷ್ಣವ್ ಜೋಪಾನ ಮಾಡಿದ್ದ. ಅದನ್ನು ಎಸೆಯಲು ಹೋದ ಕಾವೇರಿಯನ್ನು ಗಂಡ ಪ್ರಶ್ನೆ ಮಾಡುತ್ತಿದ್ದಾನೆ. ನೀನೆ ತಂದ ಸೊಸೆ ಮೇಲೆ ಹೊಟ್ಟೆ ಕಿಚ್ಚು ಯಾಕೆ ಎಂದಾಗ ಕಾವೇರಿಯ ಬಳಿ ಅದ್ಯಾವುದಕ್ಕೂ ಉತ್ತರವಿಲ್ಲದೆ ಮೌನಿಯಾಗಿ ನಿಂತಿದ್ದಳು.
ಲಕ್ಷ್ಮೀಗೆ ಸಿಗಬೇಕಾದ ಅಮ್ಮನ ಒಡವೆ ಸಿಕ್ಕಿತು
ಲಕ್ಷ್ಮೀ ಮದುವೆ ಸಂದರ್ಭದಲ್ಲಿ ಭಾಗ್ಯಾ ಅವಳ ಅಮ್ಮನ ಒಡವೆಗಳನ್ನು ಕೇಳಿದ್ದಳು. ಆದರೆ ಸುನಂದಾ ಅದೆಲ್ಲವನ್ನು ಮುರಿಸಿ, ನಿನ್ನ ಮದುವೆ ಮಾಡಿದ್ದೀನಿ ಎಂದು ಸುಳ್ಳು ಹೇಳಿದ್ದಳು. ಆದರೆ ಬೆಳ್ಳಿ ಲೋಟ ಹುಡುಕಲು ಹೋದಾಗ ಕಪಾಟಿನಲ್ಲಿ ಚಿನ್ನದ ಅಸಲಿ ಒಡವೆಗಳು ಸಿಕ್ಕಿವೆ. ಮೊದಲೇ ಕುಸುಮಾಳ ಕೈಯಲ್ಲಿ ಸಿಕ್ಕಿದೆ. ಕೇಳಬೇಕಾ? ಅದೆಲ್ಲವನ್ನು ಲಕ್ಷ್ಮೀಗೆ ಕೊಡಿಸಿದ್ದಾಳೆ.
ಸುನಂದಾಗೆ ಸಿಗುತ್ತಾ ಹಣ?
ಲಕ್ಷ್ಮೀ ಮತ್ತು ವೈಷ್ಣವ್ ಮನೆಗೆ ಬಂದಿದ್ದಾರೆ ಎಂದು ಗೊತ್ತಾದ ಕೂಡಲೇ ಅಕ್ಕ ಪಕ್ಕದ ಮನೆಯವರೆಲ್ಲಾ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರು. ಇದನ್ನು ಕಂಡ ಸುನಂದಾಗೆ ಮತ್ತು ಚಿಕ್ಕ ಮಗಳಿಗೆ ಒಳಗೊಳಗೆ ಕೋಪ. ಆದರೆ, ಅದ್ಯಾವಾಗ ಲಕ್ಷ್ಮೀಯನ್ನು ನೋಡಲು ಬಂದವರು ಮುಯ್ಯಿ ರೂಪದಲ್ಲಿ ಹಣ ಕೊಡಲೂ ಬಂದರೋ ಆಗಲೇ ಸುನಂದಾ ಕಣ್ಣು ಹಣದ ಮೇಲೆ ಬಿದ್ದು, ಶಾಸ್ತ್ರದ ನೆಪದಲ್ಲಿ ಹಣ ಮಾಡಲು ಹೊರಟಿದ್ದಾಳೆ.

ಕೀರ್ತಿಯ ನಡವಳಿಕೆಗೆ ಬೇಸತ್ತ ತಾಯಿ!
ಕೀರ್ತಿಗೆ ಇನ್ನು ನಂಬಿಕೆ. ವೈಷ್ಣವ್ ನನ್ನವನೇ ಆಗ್ತಾನೆ ಅಂತ. ಆದ್ರೆ, ವೈಷ್ಣವ್ ಹಳೆಯದ್ದನ್ನೆಲ್ಲಾ ಮರೆತು ಲಕ್ಷ್ಮೀ ಜೊತೆಗೆ ಬದುಕಲೇಬೇಕೆಂದು ಪಣ ತೊಟ್ಟಿದ್ದಾನೆ. ಆ ಕಡೆ ಕೀರ್ತಿ, ವೈಷ್ಣವ್ ಫೋಟೋ ಕೊಲ್ಯಾಜ್ ಮಾಡಿ ಕನಸು ಕಾಣುತ್ತಿದ್ದಾಳೆ. ಇದನ್ನು ಕಂಡ ಕೀರ್ತಿ ಅಮ್ಮನಿಗೆ ಕೋಪ ನೆತ್ತಿಗೇರಿದೆ. ಇದು ಇನ್ನು ಭ್ರಮೆ ಅಂತ ಆ ಫೋಟೋವನ್ನು ಒಡೆದು ಹಾಕಿದ್ದಾಳೆ. ಕೀರ್ತಿಯ ಹಠ ಮತ್ತಷ್ಟು ಹೆಚ್ಚಾಗಿದೆ.


Click it and Unblock the Notifications











