Lakshmi Baramma: ಲಕ್ಷ್ಮೀ ಲಾಯಕ್ಕೇ ಅಲ್ಲ ಎಂದ ಕೀರ್ತಿ.. ಕಾರುಣ್ಯಗೆ ತಿಳಿದ ಸತ್ಯ ಮಗಳಿಗೆ ಕಾಣ್ತಿಲ್ಲ!

By ಎಸ್ ಸುಮಂತ್

ವೈಷ್ಣವ್ ಮತ್ತು ಲಕ್ಷ್ಮೀ ಈಗ ಅಪ್ಪಟ ಹೊಸ ಪ್ರೇಮಿಗಳಾಗಿದ್ದಾರೆ. ಇಬ್ಬರು ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಒಂದೇ ತಟ್ಟೆಯಲ್ಲಿ ತಿನ್ನುತ್ತಾರೆ. ಕಡಿಮೆ ಇದ್ದರೆ ಹಂಚಿಕೊಂಡು ತಿನ್ನುತ್ತಾರೆ. ಇಬ್ಬರನ್ನು ಕಡೆ ತನಕ ಜೊತೆಯಲ್ಲಿ ಇಟ್ಟಿರು ತಂದೆ ಅಂತ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಮನೆಯವರಿಗಾಗಿ ಮದುವೆಯಾಗಿದ್ದೀವಿ, ನಮಗಾಗಿ ಒಟ್ಟಿಗೆ ಬದುಕೋಣಾ ಎಂದು ಒಬ್ಬರಿಗೊಬ್ಬರು ಪ್ರಾಮೀಸ್ ಮಾಡಿ ಬದುಕುತ್ತಿದ್ದಾರೆ.

ಸದ್ಯ ವೈಷ್ಣವ್ ಮದುವೆಯಾದ ಮೇಲೆ ಮೊದಲ ಬಾರಿಗೆ ಅತ್ತೆ ಮನೆಗೆ ಬಂದಿದ್ದಾನೆ. ಸುನಂದಾ‌ ನೋಡಿಕೊಳ್ಳುವುದು ಅಷ್ಟರಲ್ಲಿಯೇ ಇದೆ. ಯಾವಾಗಲೂ ಮುಖ ಗಂಟು ಹಾಕಿಕೊಂಡೆ ಇರುತ್ತಾಳೆ. ಈ ರೀತಿಯ ನಡವಳಿಕೆ ವೈಷ್ಣವ್‌ಗೆ ಅಭ್ಯಾಸವಿಲ್ಲ. ಆದರೂ ಲಕ್ಷ್ಮೀಗೋಸ್ಕರ ಎಲ್ಲದನ್ನು ಸಹಿಸಿಕೊಳ್ಳುತ್ತಿದ್ದಾನೆ. ಪ್ಯಾನ್ ಇಲ್ಲದೆ ಇದ್ದರು. ಬಾತ್ ರೂಮ್ ಸರಿ ಇಲ್ಲದೆ ಇದ್ದರು ಲಕ್ಷ್ಮೀಗಾಗಿ ಏನು ಕೇಳಲ್ಲ. ಆದರೆ ಸುನಂದಾಳ ಮಾತು ಮತ್ತೊಂದು ಹಂತಕ್ಕೆ ಮಿತಿಮೀರಿದೆ.

Lakshmi Baramma serial Written Update on April 24th episode

ಮಿತಿ ಮೀರಿದ ಕೀರ್ತಿಯ ನಾಟಕ

ಲಕ್ಷ್ಮೀಗೆ ಮತ್ತು ವೈಷ್ಣವ್‌ಗೆ ಡಿವೋರ್ಸ್ ಆಗುತ್ತೆ. ಕಾವೇರಿ ಆಂಟಿ ಮತ್ತೆ ನನ್ನನ್ನೇ ಸೊಸೆ‌ ಮಾಡಿಕೊಳ್ಳುತ್ತಾರೆ ಅಂತ ಕೀರ್ತಿ ಕನಸಿನ ಲೋಕದಲ್ಲಿಯೇ ತೇಲುತ್ತಿದ್ದಾಳೆ. ಈ ಕಡೆ ಕಾರುಣ್ಯಗೆ ಮಗಳ ಭ್ರಮಾಲೋಕವನ್ನು ನೋಡಿ ಆತಂಕವಾಗಿದೆ. ಅದಕ್ಕೆಂದೇ ಕಾವೇರಿಗೆ ಕ್ಲಾಸ್ ತೆಗೆದುಕೊಳ್ಳಲೆಂದು ಹೋದಾಗ ಕೀರ್ತಿ ಸೂಸೈಡ್ ನಾಟಕವಾಡಿದ್ದಾಳೆ. ಮತ್ಯಾವತ್ತೂ ಕಾವೇರಿ ಆಂಟಿ ತಂಟೆಗೆ ಹೋಗಬಾರದೆಂದು ಅಮ್ಮನಿಗೆ ವಾರ್ನಿಂಗ್ ಮಾಡಿದ್ದಾಳೆ.

ಲಕ್ಷ್ಮೀ ಬಗ್ಗೆ ತಿಳಿ ಹೇಳಿದ ಕಾರುಣ್ಯ

ಕೀರ್ತಿ ತಲೆಯಲ್ಲಿ ಲಕ್ಷ್ಮೀ ಬಗ್ಗೆ ಬೇರೆಯದ್ದೆ ಅಭಿಪ್ರಾಯವಿದೆ. ಲಕ್ಷ್ಮೀ ಬಳಿ ಒಳ್ಳೆ ಬಟ್ಟೆ ಇಲ್ಲ, ಸ್ಟೈಲ್ ಇಲ್ಲ, ಬ್ಯಾಂಗ್ರೌಂಡ್ ಇಲ್ಲ. ಹೀಗಾಗಿ ವೈಷ್ಣವ್ ಗೆ ಲಕ್ಷ್ಮೀ ಮೇಲೆ ಯಾವ ಭಾವನೆಯೂ ಬರಲ್ಲ. ಎಲ್ಲಾ ಇರುವ ನನ್ನನ್ನು ಮಾತ್ರ ವೈಷ್ಣವ್ ಇಷ್ಟಪಡೋದು ಎಂಬ ಭ್ರಮೆ ಕೀರ್ತಿಯದ್ದು. ಆದರೆ ಕಾರುಣ್ಯಗೆ ಎಲ್ಲಾ ಸತ್ಯ ಅರ್ಥವಾಗುತ್ತಿದೆ. ಮಗಳಿಗೆ ತಿಳಿ ಹೇಳುವ ಪ್ರಯತ್ನಕ್ಕೆ ಕೈ ಹಾಕಿದ್ದಾಳೆ. ಬ್ಯೂಟಿ, ಬಟ್ಟೆ, ಸ್ಟೇಟಸ್ ಇಲ್ಲದೆ ಇರಬಹುದು. ಆದರೆ ಅವಳಲ್ಲಿ ಏನೋ ಒಂದು ಚಾರ್ಮ್ ಇದೆ. ವೈಷ್ಣವ್ ಅವಳನ್ನು ಯಾರ ಮುಂದೆಯೂ ಬಿಟ್ಟು ಕೊಡಲ್ಲ ಎಂದು ತಿಳಿ ಹೇಳಿದ್ದಾಳೆ. ಅವಳ ಸ್ವಭಾವವೇ ಎಲ್ಲರಿಗೂ ಹತ್ತಿರ ಮಾಡಿಸುತ್ತೆ ಎಂದಿದ್ದಾಳೆ.

ವೈಷ್ಣವ್ ಇಲ್ಲಂದ್ರೆ ಬದುಕಲ್ವಾ ಕೀರ್ತಿ

ವೈಷ್ಣವ್ ನನ್ನ ಬಿಟ್ಟು ಲಕ್ಷ್ಮೀಯನ್ನು ಇಷ್ಟ ಪಡೋಕೆ ಸಾಧ್ಯವೇ ಇಲ್ಲ ಎಂಬ ಕೀರ್ತಿಯ ಹಠಕ್ಕೆ ಕಾರುಣ್ಯ ಬುದ್ದಿ ಹೇಳಿದ್ದಾಳೆ. ನೀ‌ನು ವೈಷ್ಣವ್ ಮನಸ್ಸಿಗೆ ಮಾಡಿರುವ ಗಾಯ ಅಷ್ಟಿಷ್ಟಲ್ಲ. ಅವನು ಲಕ್ಷ್ಮೀ ಜೊತೆಗೆ ಬದುಕಲೇ ಬೇಕು ಎಂದು ನಿರ್ಧರಿಸಿ ಬಿಟ್ಟರೆ ಅದನ್ನು ತಡೆಯುವವರು ಯಾರು ಇಲ್ಲ ಎಂದಾಗ ಕೀರ್ತಿ ಯೋಚನೆ ಮಾಡಲು ಶುರು ಮಾಡಿದ್ದಾಳೆ. ವೈಷ್ಣವ್ ಇಲ್ಲದೆ ಇದ್ರೆ ಕೀರ್ತಿ ಇರೋಕೆ ಸಾಧ್ಯವಿಲ್ಲ ಅಂತ ತೀರ್ಮಾನ ಕೂಡ ಮಾಡಿದ್ದಾಳೆ.

Lakshmi Baramma serial Written Update on April 24th episode

ಗಂಡನನ್ನು ಬಿಟ್ಟು ಕೊಡದ ಲಕ್ಷ್ಮೀ

ಈ ಕಡೆ ವೈಷ್ಣವ್ ಅಳಿಮೈತನಕ್ಕಾಗಿ ಲಕ್ಷ್ಮೀಯ ತವರಿಗೆ ಬಂದಿದ್ದಾನೆ. ಹೀಗೆ ಒಂದೇ ಪ್ಲೇಟಲ್ಲಿ ಇಬ್ಬರು ಹಂಚಿಕೊಂಡು ತಿನ್ನುತ್ತಾ ಇರುವಾಗ ತಮಾಷೆಗಾಗಿ ವೈಷ್ಣವ್, ನಿಮ್ಗೆ ನಿಮ್ಮ ದೊಡ್ಡಮ್ಮ ಊಟ ಹಾಕ್ತಾ ಇರ್ಲಿಲ್ವಾ ಅಂತ ಕೇಳಿದ್ದಾನೆ. ಅದನ್ನು ಕೇಳಿಸಿಕೊಂಡ ಸುನಂದಾ ಫುಲ್ ಗರಂ ಆಗಿದ್ದಾಳೆ. ಅಳಿಯ ಅಂತಾನು ನೋಡದೆ ರಾದ್ಧಾಂತ ರಂಪಾಟ ಮಾಡಿದ್ದಾಳೆ. ಕ್ಷಮೆ‌ ಕೇಳು ಎಂದಾಗ, ಲಕ್ಷ್ಮೀ ಮಧ್ಯೆ ಬಂದಿದ್ದಾಳೆ. ನನ್ನ ಗಂಡ ತಪ್ಪೆ ಮಾಡದೆ ಕ್ಷಮೆ ಯಾಕೆ ಕೇಳಬೇಕು ಅಂತ ವೈಷ್ಣವ್ ಪರ ನಿಂತಿದ್ದಾಳೆ.

More from Filmibeat

English summary
colors kannada Lakshmi Baramma serial Written Update on April 24th episode. Here is the details Keerthi suicide drama.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X