Lakshmi Baramma: ಹನಿಮೂನ್ ವಿಚಾರಕ್ಕೆ ಮನೆಯಲ್ಲಿ ಜಗಳ.. ಹುಟ್ಟುತ್ತಾ ಪ್ರೀತಿ?

By ಎಸ್ ಸುಮಂತ್

ವೈಷ್ಣವ್‌ಗೆ ಕೀರ್ತಿ ಎಂದರೆ ಬರೀ ಪ್ರೀತಿ ಅಲ್ಲ. ಅವಳನ್ನೊಂದು ಜೀವನ ಎಂದುಕೊಂಡಿದ್ದ. ಇಬ್ಬರು ಕೂತು ನಾವಿಬ್ಬರು ಹೇಗೆ ಲೈಫ್ ಲೀಡ್ ಮಾಡಬೇಕು ಎಂಬುದನ್ನು ಚರ್ಚೆ ಮಾಡಿದ್ದರು. ಅದಕ್ಕೆ ಬೇಕಾದ ಎಲ್ಲಾ ಪ್ಲ್ಯಾನ್‌ಗಳನ್ನು ಮಾಡಿಕೊಂಡಿದ್ದರು. ಆದರೆ, ಆಗಿದ್ದೆಲ್ಲವೂ ಉಲ್ಟಾ. ಕಾವೇರಿಯ ಸ್ವಾರ್ಥಕ್ಕೆ ವೈಷ್ಣವ್ ಮತ್ತು ಕೀರ್ತಿಯ ಪ್ರೀತಿ ಮುಳುಗಿತು.

ಆ ಕಡೆ ಕಾವೇರಿಯ ಆಟವನ್ನು ಅರಿಯದೆ ಕೀರ್ತಿ ಕನಸು ಕಾಣುತ್ತಾ ಕೂತಿದ್ದಾಳೆ. ಈ ಜನ್ಮಕ್ಕೆ ವೈಷ್ಣವ್ ಮಾತ್ರ ಅಂತ ಭ್ರಮೆಯಲ್ಲಿದ್ದಾಳೆ. ಈ ಕಡೆ ವೈಷ್ಣವ್, ಕೀರ್ತಿ ಮಾಡಿದ್ದು ಮೋಸ ಎಂದುಕೊಂಡೇ ಸಮಯ ದೂಡುತ್ತಿದ್ದಾನೆ. ಇಲ್ಲಿ ಆಟ ಬಯಲಾದರೂ, ಮೂವರ ಜೀವನವೂ ಅತಂತ್ರಕ್ಕೆ ಸಿಲುಕಿ ಬಿಡುತ್ತದೆ.

Lakshmi Baramma serial Written Update on April 5th episode

ಹನಿಮೂನ್ ವಿಚಾರಕ್ಕೆ ಮನೆಯಲ್ಲಿ ಜಗಳ

ಸುಪ್ರೀತಾ ಮತ್ತು ವಿಧಿಗೆ ಲಕ್ಷ್ಮೀಯನ್ನು ಕಂಡರೆ ಆಗುತ್ತಿಲ್ಲ. ನಮ್ಮ ಅಂತಸ್ತಿಗೆ ಅಲ್ಲದ ಹುಡುಗಿ ಎಂಬಂತೆ ಫೀಲ್ ಮಾಡುತ್ತಿದ್ದಾರೆ. ಆ ಕಾರಣದಿಂದಾಗಿಯೇ ಲಕ್ಷ್ಮೀಯನ್ನು ಯಾವಾಗಲೂ ನಿಂದಿಸುತ್ತಾರೆ. ಸುಪ್ರೀತಾಳ ಜೊತೆಗೆ ವಿಧಿ ಕೂಡ ಸೇರಿದ್ದಾಳೆ. ಹೀಗಾಗಿಯೇ ಲಕ್ಷ್ಮೀಗೆ ಹೆಚ್ಚಿನ ಟಾರ್ಚರ್ ಶುರುವಾಗಿದೆ. ಈಗಾಗಲೇ ನನ್ನ ಸೊಸೆಯ ಸುದ್ದಿಗೆ ಬರಬೇಡ ಅಂತ ಕಾವೇರಿ ವಾರ್ನ್ ಮಾಡಿ ಆಗಿದೆ. ಮನೆ ಬಿಟ್ಟು ಹೊರ ಕಳುಹಿಸುವ ನಿರ್ಧಾರವನ್ನು ಮಾಡಿದ್ದಳು. ಆದರೂ ಸುಪ್ರೀತಾ ಮಾತ್ರ ಮತ್ತದೇ ಹಳೇ ಚಾಳಿ ಶುರು ಮಾಡಿದ್ದಾಳೆ.

ವೈಷ್ಣವ್ ಮತ್ತು ಲಕ್ಷ್ಮೀ ಇಷ್ಟಪಟ್ಟು ಮದುವೆಯಾಗದೆ ಇದ್ದರು, ಶಾಸ್ತ್ರಗಳನ್ನು ಮಾತ್ರ ಅನುಸರಿಸಿದ್ದಾರೆ. ಎಲ್ಲಾ ಶಾಸ್ತ್ರಗಳನ್ನು ಮಾಡಿರುವ ಈ ಜೋಡಿಗೆ ಈಗ ಹನಿಮೂನ್‌ಗೆ ಹೋಗುವ ಭಾಗ್ಯ ಸಿಕ್ಕಿದೆ. ಇದಕ್ಕೆ ವೈಷ್ಣವ್ ಒಪ್ಪಿಲ್ಲ. ಹನಿಮೂನ್ ಗೆಲ್ಲಾ ಯಾಕೆ ಎಂದಾಗ, ಮನೆಯಲ್ಲಿ ದೊಡ್ಡ ರಾದ್ಧಾಂತವೇ ಆಗಿದೆ. ಅದು ಸುಪ್ರೀತಾ ಮತ್ತು ವಿಧಿಯೇ ಶುರು ಮಾಡಿದ ರಾದ್ಧಾಂತವದು.

Lakshmi Baramma serial Written Update on April 5th episode

ಬರುವಾಗ ಪ್ರೀತಿಯಾಗುತ್ತಾ..?

ವೈಷ್ಣವ್ ಮೊದಲೇ ಪ್ರೀತಿಯಿಂದ ನೊಂದಿದ್ದಾನೆ. ಕೀರ್ತಿಯನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಇದರ ಮಧ್ಯೆ ಸುಪ್ರೀತಾ ಮತ್ತು ವಿಧಿ ಮಾಡುವ ಕಿತಾಪತಿಯಿಂದ ವೈಷ್ಣವ್ ಟ್ರಿಗರ್ ಆಗುತ್ತಿದ್ದಾನೆ. ಈಗಲೂ ಅಷ್ಟೇ ವಿಧಿ ಆಡಿದ ಮಾತುಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾನೆ. ಇಷ್ಟವಿಲ್ಲದೆ ಮದುವೆಯಾಗಿದ್ದಾನೆ ಎಂಬ ಆರೋಪದ ನಡುವೆಯೂ ನಾನು ಲಕ್ಷ್ಮೀ ಹನಿಮೂನ್ ಹೋಗ್ತಾ ಇದ್ದೀವಿ ಅನ್ನೋದನ್ನ ಎಲ್ಲರ ಎದುರಿಗೆ ಹೇಳಿದ್ದಾನೆ.

ಮೊದಲೇ ವಿಧಿ ಹೇಳಿದ ಮಾತುಗಳು ಲಕ್ಷ್ಮೀ ತಲೆಯಲ್ಲಿ ಕೂತು ಬಿಟ್ಟಿದೆ. ಕಟ್ಟಿಕೊಂಡಿರೊ ತಪ್ಪಿಗೆ ಇಷ್ಟವಿಲ್ಲದೆ ಇದ್ದರು ಜವಾಬ್ದಾರಿ ತೆಗೆದುಕೊಂಡಿದ್ದಾನೆ ಅಣ್ಣ ಎಂಬ ಮಾತು. ಅದರ ಜೊತೆಗೆ ವೈಷ್ಣವ್ ಬಂದು ಲಕ್ಷ್ಮೀ ನನ್ನ ಜವಾಬ್ದಾರಿ ಅಂತ ಹೇಳಿದ್ದಾನೆ. ಇದು ಲಕ್ಷ್ಮೀಗೆ ಕಿರಿಕಿರಿ ಮಾಡಿದೆ. ವೈಷ್ಣವ್‌ಗೆ ಇಷ್ಟವಿಲ್ಲದೆ ಇರುವ ಕೆಲಸವನ್ನು ಮಾಡುವುದು ಬೇಡ ಎಂಬುದು ಅವಳ ಅಭಿಪ್ರಾಯ. ಅದನ್ನು ಹೇಳಲು ಬಂದಾಗಲೂ ವೈಷ್ಣವ್ ಕೋಪ ಮಾಡಿಕೊಂಡೆ ಎದ್ದು ಹೊರಟಿದ್ದಾನೆ.

ಇತ್ತ ಕೀರ್ತಿಗೆ ತಾನೂ ಮೋಸ ಹೋಗಿರುವುದು ತಿಳಿದಿಲ್ಲ. ವೈಷ್ಣವ್ ಅವಳನ್ನು ಮರೆಯುವುದಕ್ಕೆ ಸಾಕಷ್ಟು ಕಷ್ಟ ಪಡುತ್ತಿದ್ದಾನೆ. ಅದಕ್ಕಾಗಿಯೇ ಆದಷ್ಟು ಅವಳಿಂದ ದೂರ ಇರುವ ಪ್ರಯತ್ನ ಮಾಡುತ್ತಿದ್ದಾನೆ. ತನ್ನ ಆಲ್ವಮ್ ನಿಂದ ಕೀರ್ತಿಯನ್ನು ತೆಗೆದಿದ್ದಾನೆ. ಆದರೆ ಈಗ ಕೀರ್ತಿ ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಾಳೆ. ಮಾಧ್ಯಮದವರಿಗೆ ಆ ಸುದ್ದಿ ಕೊಟ್ಟಿದ್ದಾಳೆ. ಇದರಿಂದ ವೈಷ್ಣವ್ ಇನ್ನಷ್ಟು ಟ್ರಿಗರ್ ಆಗುವ ಸಾಧ್ಯತೆ ಇದೆ.

More from Filmibeat

English summary
Colors Kannada Lakshmi Baramma serial Written Update on April 5th episode. Here is the details about Vaishnav and Lakshmi Honeymoon plan, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X