Lakshmi Baramma: ವಿಧಿ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ಲಕ್ಷ್ಮೀ.. ಸತ್ಯ ಗೊತ್ತಾಗುತ್ತಾ?

By ಎಸ್ ಸುಮಂತ್

ಲಕ್ಷ್ಮೀಗೆ ಪ್ರತಿ ದಿನವೂ ಚಾಲೆಂಜ್. ಸುಪ್ರೀತಾ ಮತ್ತು ವಿಧಿಗೆ ಲಕ್ಷ್ಮೀ ಟಾರ್ಗೆಟ್ ಆಗಿದ್ದಾಳೆ. ಈಗಾಗಲೇ ಸಾಕಷ್ಟು ಅವಮಾನ ಎದುರಿಸಿದ್ದಾಳೆ. ಆದರೂ ಅವರಿಬ್ಬರೂ ಸುಮ್ನೆ ಆಗ್ತಾನೇ ಇಲ್ಲ. ಏನಾದರೂ ಕಿತಾಪತಿ‌ ಮಾಡಿಕೊಂಡೆ ಕೂತಿದ್ದಾರೆ. ಸುಪ್ರೀತಾ ಈಗ ನೇರವಾಗಿ ಅಖಾಡಕ್ಕೆ ಇಳಿಯಲು ಆಗುವುದಿಲ್ಲ. ಯಾಕಂದ್ರೆ, ಕಾವೇರಿಯ ಕೆಂಗಣ್ಣಿಗೆ ಅದಾಗಲೇ ಒಮ್ಮೆ ಗುರಿಯಾಗಿದ್ದಾಳೆ. ಮನೆಯಿಂದಾನೇ ಹೊರಗೆ ಹಾಕಿಸಿಕೊಳ್ಳುವ ಸ್ಥಿತಿ ತಲುಪಿದ್ದಳು. ಆದರೂ, ಸುಪ್ರೀತಾ ಸರಿ ಏನು ಹೋಗಿಲ್ಲ. ಬದಲಿಗೆ ಹಿಂದೆ ನಿಂತು ವಿಧಿಯನ್ನು ಮುಂದೆ ಬಿಟ್ಟಿದ್ದಾಳೆ.

ಮನೆಯಲ್ಲಿ ಸಂಭ್ರಮ. ಇವತ್ತು ಲಕ್ಷ್ಮೀ ಮತ್ತು ವೈಷ್ಣವ್‌ಗೆ ಮತ್ತೊಂದು ಶಾಸ್ತ್ರವಿದೆ. ಅರಿಶಿನ ಕುಂಕುಮಕ್ಕೆ ಕರೆಯುವ ಶಾಸ್ತ್ರ. ಇದಕ್ಕೆ ಲಕ್ಷ್ಮೀ ತುಂಬಾ ಸುಂದರವಾಗಿಯೇ ರೆಡಿಯಾಗಿದ್ದಳು. ಆದರೆ, ವಿಧಿಯಿಂದಾಗಿ ಎಲ್ಲರ ಮುಂದೆ ತಲೆ ತಗ್ಗಿಸುವಂತೆ ಆಯ್ತು. ಬರೀ ಲಕ್ಷ್ಮೀ ಮಾತ್ರ ಅಲ್ಲ. ಭಾಗ್ಯಾ ಕೂಡ ತಲೆ ತಗ್ಗಿಸುವಂತೆ ಆಗಿದೆ.

Lakshmi Baramma serial Written Update on April 6th episode

ಭಾಗ್ಯಾಗೆ ಕಾವೇರಿ - ತಾಂಡವ್ ಕ್ಲಾಸ್

ಇವತ್ತು ಕಾವೇರಿ ಮನೆಯಲ್ಲಿ ಮದುವೆಯ ಮುಂದಿನ ಶಾಸ್ತ್ರವಿದೆ. ಅಳಿಮೈತನ ಮಾಡಬೇಕಿದೆ. ಅದಕ್ಕೆ ಲಕ್ಷ್ಮೀಯ ತವರು ಮನೆಯ ಕಡೆಯವರು ಬರಬೇಕಿದೆ. ಆದರೆ ಯಾರು ಬಂದಿಲ್ಲ. ಇದು ಕಾವೇರಿಗೆ ಸಿಟ್ಟು ತರಿಸಿದೆ. ಭಾಗ್ಯಾಳ‌ ಮನೆಗೆ ಬಂದವಳೇ ಭಾಗ್ಯಾಳಾ ಮೇಲೆ ಕೂಗಾಡಿದ್ದಾಳೆ. ಭಾಗ್ಯಾಳೋ ನಾನೇ ನೋಡಿಕೊಳ್ಳುತ್ತೇನೆ ಎಂದ ಕೂಡಲೇ ತಾಂಡವ್‌ಗೆ ಕೋಪ ಬಂದಿದೆ. ಎಲ್ಲಾದಕ್ಕೂ ನಾನೇ ಇದ್ದೀನಿ ಅಂತ ಓಡಾಡಬೇಡ ಎಂದಿದ್ದಾನೆ. ಕುಸುಮಾ ಸಮಾಧಾನ ಮಾಡಿ ಕರೆದುಕೊಂಡು ಹೊರಟಿದ್ದಾಳೆ.

ವಿಧಿಗೆ ಲಕ್ಷ್ಮೀ ಮೇಲೆ ಕುತ್ತಿಗೆ ತನಕ ದ್ವೇಷವಿದೆ. ಅದನ್ನ ಸಮಯ ಸಿಕ್ಕಾಗೆಲ್ಲ ಹಂಗಿಸುವ ಮಾತನಾಡಿ ಸೇಡು ತೀರಿಸಿಕೊಂಡಿದ್ದಾಳೆ. ಆದರೆ ಈಗ ದೊಡ್ಡ ಮಟ್ಟದಲ್ಲಿಯೇ ಅವಮಾನ ಮಾಡಿದ್ದಾಳೆ. ಅದಕ್ಕೆ ಅವಳ ಕೋತಿ ಗ್ಯಾಂಗ್ ಬೇರೆ ಸಪೋರ್ಟ್ ಮಾಡಿದೆ.ಲಕ್ಷ್ಮೀ ಬೇಡ ಬೇಡವೆಂದರೂ ಮೇಕಪ್‌ ಮಾಡಿದ್ದಾರೆ. ಕನ್ನಡಿಯನ್ನೇ ನೀಡದೆ ಎಲ್ಲರ ಮುಂದೆ ಬಿಟ್ಟಿದ್ದಾರೆ. ಲಕ್ಷ್ಮೀಯ ಮುಖ ವಿಕಾರವಾಗಿ ಕಾಣುವಂತೆ ಮಾಡಿದ್ದಾರೆ.

Lakshmi Baramma serial Written Update on April 6th episode

ಎಲ್ಲರಿಂದ ನಿಂದಿಸಿಕೊಂಡ ಲಕ್ಷ್ಮೀ

ಲಕ್ಷ್ಮೀ ನೋಡುವುದಕ್ಕೆ ಸಿಕ್ಕಾಪಟ್ಟೆ ಕೆಟ್ಟದಾಗಿ ಕಾಣಿಸುತ್ತಾ ಇದ್ದಳು. ಅದನ್ನು ನೋಡಿದ ನೆಂಟರು ಶಾಕ್ ಆಗಿದ್ದಾರೆ. ಎಲ್ಲರೂ ಪ್ರಶ್ನೆ ಮಾಡಿದ್ದಾರೆ. ಅದೇ ಸಮಯಕ್ಕೆ ಸುಪ್ರೀತಾ ಕೂಡ ಮಾತನಾಡಿದ್ದಾಳೆ. ಲಕ್ಷ್ಮೀ, ವಿಧಿಯ ಹೆಸರನ್ನೇ ಹೇಳಬಾರದು ಆ ರೀತಿ ಕಟ್ಟಿ ಹಾಕಿದ್ದಾರೆ. ವಿಧಿ, ಉಲ್ಟಾ ಹೊಡೆದಿದ್ದಾಳೆ. ನಿಮಗೆ ಮೇಕಪ್ ಬೇಕು ಎಂದಿದ್ದರೆ ನಮ್ಮ ಸಹಾಯ ಕೇಳಬೇಕಿತ್ತು ಅಲ್ವಾ ಎಂದಿದ್ದಾಳೆ. ತವರು ಕಡೆಯಿಂದ ಭಾಗ್ಯಾಳ ಫ್ಯಾಮಿಲಿ ಬಂದಿದೆ. ಭಾಗ್ಯಾ ಕೂಡ ಲಕ್ಷ್ಮೀ ಅವತಾರ ನೋಡಿ ಶಾಕ್ ಆಗಿದ್ದಾರೆ. ಕುಸುಮಾ, ಕನ್ನಡಿ ತರಿಸಿ ಅವತಾರ ತೋರಿಸಿದ್ದಾಳೆ.

ಎಲ್ಲರೂ ಕೇಳಿದಾಗ ಲಕ್ಷ್ಮೀ ಮನಸ್ಸು ಮಾಡಿದರೆ ವಿಧಿ ಹೆಸರನ್ನು ಹೇಳಬಹುದಿತ್ತು. ಆದರೆ ಮೊದಲೇ ನನ್ನನ್ನು ಕಂಡರೆ ಕೋಪ ಮಾಡಿಕೊಳ್ಳುತ್ತಾಳೆ ಎಂದು ತಿಳಿದೆ ಲಕ್ಷ್ಮೀ ಹೆಸರೇಳದೇ ತನ್ನ ಮೇಲೆಯೇ ತಪ್ಪನ್ನು ಹಾಕಿಕೊಂಡಿದ್ದಾಳೆ. ನಾನೇ ಮಾಡಿಕೊಂಡಿದ್ದು, ಕನ್ನಡಿ ಮಬ್ಬಾಗಿತ್ತು, ತಿಳಿಯಲಿಲ್ಲ ಎಂದೆಲ್ಲಾ ಹೇಳಿದ್ದಾಳೆ. ಕಡೆಗೆ ಎಲ್ಲರ ಮುಂದೆ ಇನ್ನು ಚರ್ಚೆ ಬೇಡ ಅಂತ ಅಲ್ಲಿಗೆ ನಿಲ್ಲಿಸಿದ್ದಾರೆ. ಅಷ್ಟರಲ್ಲಿ ವೈಷ್ಣವ್ ಕೂಡ ಬಂದಿದ್ದು, ಅವನಿಗೂ ವಿಷಯ ತಿಳಿಯಲಿಲ್ಲ. ಆದರೆ ಲಕ್ಷ್ಮೀ ತನ್ನ ಮನದ ನೋವನ್ನು ಹೇಳಿಕೊಳ್ಳುವ ಅಗತ್ಯವಿದೆ.

More from Filmibeat

English summary
Colors Kannada Lakshmi Baramma serial Written Update on April 6th episode. Here is the details about Lakshmi and Bhagya shocking movements.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X