Lakshmibaramma: ತನ್ನ ಹುಚ್ಚಾಟದಿಂದ ಲಕ್ಷ್ಮೀಯನ್ನೇ ಕೆರೆಗೆ ತಳ್ಳಿದ ಕೀರ್ತಿ.. ಮುಂದೇನಾಗುತ್ತೆ?

By ಎಸ್ ಸುಮಂತ್

ಕೀರ್ತಿಯ ತಾಳ್ಮೆ‌ ಕಟ್ಟೆ ಒಡೆದಿದೆ. ತಾಯಿಯ ಮಾತಿನಂತೆ ಸತ್ಯ ಹೇಳುವುದಕ್ಕೆ ಸಿದ್ಧವಾಗಿದ್ದಾಳೆ. ಆದರೆ, ಅದು ರಾಂಗ್ ಪರ್ಸನ್ ಹತ್ತಿರ. ವೈಷ್ಣವ್ ಬಳಿ ಹೇಳು ಅಂದ್ರೆ ಲಕ್ಷ್ಮೀ ಬಳಿಯೇ ಹೇಳುವುದಕ್ಕೆ ಹೊರಟಿದ್ದಾಳೆ. ಸ್ಟುಡಿಯೋಗೆ ಹೋಗುತ್ತಿದ್ದವಳನ್ನು ತನ್ನ ಕಾರಿನಲ್ಲಿ ಹತ್ತಿಸಿಕೊಂಡು, ನೇರ ಇನ್ನೆಲ್ಲಿಗೋ ಕರೆದುಕೊಂಡು ಹೋಗಿದ್ದಾಳೆ. ಮನೆಯವರಿಗೂ ವಿಷಯ ಮುಟ್ಟಿಸುವುದಕ್ಕೆ ಬಿಟ್ಟಿಲ್ಲ.

ದೊಡ್ಡ ಕೆರೆಯ ಬಳಿ ಕರೆದುಕೊಂಡು ಬಂದಿದ್ದಾಳೆ. ಜನವೇ ಇಲ್ಲದ ಜಾಗ ಅದು. ಕೇಳುವುದಕ್ಕೂ ಯಾರಿಲ್ಲ, ಏನಾದ್ರೂ ಆದ್ರೆ ಕಾಪಾಡುವುದಕ್ಕೂ ಯಾರಿಲ್ಲ. ಕೀರ್ತಿ ಮೊದಲೇ ಇತ್ತಿಚೆಗೆ ತಾಳ್ಮೆ ಕಳೆದುಕೊಂಡವಳಂತೆ ಆಡುತ್ತಿದ್ದಾಳೆ. ಮೊದಲೇ ದೊಡ್ಡ ಕೆರೆ. ಬೇಜಾರಾದಾಗ, ಖುಷಿಯಾದಾಗ ಎಲ್ಲ ಸಮಯದಲ್ಲೂ ಕೀರ್ತಿ ಅಲ್ಲಿಗೆ ಬರ್ತೀನಿ ಅಂತ ಹೇಳಿ, ಲಕ್ಷ್ಮೀಯನ್ನು ಅಪಾಯಕ್ಕೆ ಸಿಲುಕಿಸುವ ಆತಂಕ ತಂದೊಡ್ಡಿದ್ದಾಳೆ.

Lakshmi Baramma serial Written Update on August 10th episode

ಲಕ್ಷ್ಮೀ ಕಾಣದೆ ಮನೆಯವರಿಗೆ ಆತಂಕ

ವೈಷ್ಣವ್‌ಗೆ ಅಂತ ಲಕ್ಷ್ಮೀ ಊಟ ತೆಗೆದುಕೊಂಡು ಹೊರಟಿದ್ದಳು. ಆದರೆ, ವೈಷ್ಣವ್ ಮನೆಗೆ ಬಂದಿದ್ದಾನೆ. ಕಾವೇರಿ ಮತ್ತು ಸುಪ್ರೀತಾ ನಡುವೆ ನಡೆಯುತ್ತಿದ್ದ ಜಗಳ ಇನ್ನೇನು ದೊಡ್ಡದಾಗಬೇಕು ಎನ್ನುವಾಗಲೇ ಲಕ್ಷ್ಮೀ ಕಾಣಿಸದೆ ಇರುವ ಸತ್ಯ ಬಯಲಾಗಿದೆ. ಕಾಲ್ ಮಾಡಿದ್ರೆ ಪಿಕ್ ಕೂಡ ಮಾಡ್ತಿಲ್ಲ. ಎಲ್ಲಾ ಊಟಕ್ಕೆ ಕುಳಿತಿದ್ದಾಗ ಸತ್ಯ ಗೊತ್ತಾಗಿದೆ. ತಕ್ಷಣ ಎಲ್ಲರಿಗೂ ಆತಂಕ ಶುರುವಾಗಿದೆ. ಹೇಳದೆ ಕೇಳದೆ ಲಕ್ಷ್ಮೀ ಎಲ್ಲಿ ಹೋಗಿದ್ದಾಳೆ ಎಂದು ಹುಡುಕಾಟ ಶುರು ಮಾಡಿದ್ದಾರೆ.

ಕೀರ್ತಿಯಿಂದ ಕಾವೇರಿಗೆ ಹೆಚ್ಚಾಯ್ತು ಆತಂಕ

ಎಲ್ಲರೂ ಟೆನ್ಶನ್‌ನಲ್ಲಿದ್ದಾಗ ಶಾಂತ, ಡ್ರೈವರ್‌ಗೆ ಹೇಳಿದೆ ಅಂದಿದ್ದಾಳೆ. ಎಲ್ಲರೂ ಡ್ರೈವರ್‌ನ ಹುಡುಕಿಕೊಂಡು ಬಂದು ಕೇಳಿದಾಗ, ಮೇಡಂ ಬಂದೆ ಇಲ್ಲ ಎಂದಿದ್ದಾನೆ. ಕೀರ್ತಿ ಮೇಡಂ ಜೊತೆಗೆ ಹೋದ್ರಂತೆ. ಪಕ್ಕದ ಮನೆಯವರು ಹೇಳಿದರು ಎಂದಾಗ, ಕೃಷ್ಣ ಕೋಪಗೊಂಡಿದ್ದಾನೆ. ವೈಷ್ಣವ್‌ಗೂ ಇದು ಪ್ರಶ್ನೆಯಾಗಿ ಕಾಡಿದೆ. ಕಾವೇರಿಗೂ ಟೆನ್ಶನ್ ಕಾಡಿದೆ. ಕೀರ್ತಿಗೆ ಕಾಲ್ ಮಾಡಿದ್ರೆ ಅವ್ಳು ಪಿಕ್ ಮಾಡ್ತಿಲ್ಲ.

Lakshmi Baramma serial Written Update on August 10th episode

ಹುಚ್ಚಿಯಂತೆ ಆಡಿದ ಕೀರ್ತಿ

ಲಕ್ಷ್ಮೀಯನ್ನು ಕೆರೆಯ ಬಳಿ ಕರೆದುಕೊಂಡು ಬಂದ ಕೀರ್ತಿ ಏನೇನೋ ಮಾತನಾಡುವುದಕ್ಕೆ ಶುರು ಮಾಡಿದ್ದಾಳೆ. ಹುಚ್ಚಿಯಂತೆ ಕೆರೆಯ ದಂಡೆಯ ಮೇಲೆಲ್ಲಾ ಓಡಾಡಿದ್ದಾಳೆ‌. ಲಕ್ಷ್ಮೀ ಕೂಡ ಅವಳ ಹಿಂದೆ ಓಡಿದ್ದಾಳೆ. ಕೀರ್ತಿ ಇನ್ನೇನು ಬಿದ್ದೇ ಹೋಗ್ತಾಳೇನೋ ಎಂದು ಲಕ್ಷ್ಮೀ ಭಯಗೊಂಡಿದ್ದಾಳೆ. ಹಿಂದೆ ಹಿಂದೆಯೇ ಓಡಿದ್ದಾಳೆ. ಕೋಪಗೊಂಡ ಕೀರ್ತಿ ನನ್ನ ಪ್ರಾಬ್ಲಮ್ ಅನ್ನೇ ಇಲ್ಲಿಗೆ ಕರೆದುಕೊಂಡು ಬಂದಿದ್ದೀನಿ. ನೀನು ಬರುವುದಕ್ಕೂ ಮುನ್ನ ವೈಷ್ಣವ್ ಮತ್ತೆ ನಾನು ಯಾವಾಗಲೂ ಇಲ್ಲಿಗೆ ಬರ್ತಾ ಇದ್ವಿ. ನೀನು ಬಂದ ಮೇಲೆ ಎಲ್ಲವೂ ಹಾಳಾಯ್ತು ಎಂದಿದ್ದಾಳೆ‌.

ಲಕ್ಷ್ಮೀ ಮುಂದೆ ಎಲ್ಲಾ ಸತ್ಯ ಹೇಳ್ತಾಳಾ..?

"ಲಕ್ಷ್ಮೀಗೆ ನಿನ್ನ ದುರಹಂಕಾರ ಜಾಸ್ತಿಯಾಗಿದೆ. ನಿನ್ನ ನಾನು ಏನೋ ಎಂದುಕೊಂಡಿದ್ದೆ. ಆದರೆ, ನೀನು ಬೇರೆ ರೀತಿಯೇ ಆಗಿದ್ದೀಯಾ. ನನ್ನಿಂದಾನೇ ನೀನು ವೈಷ್ಣವ್‌ನ ಮದುವೆಯಾಗಿದ್ದು. ನನ್ನನ್ನ ಯಾರೂ ಪ್ರಶ್ನೆ ಮಾಡ್ತಾ ಇರ್ಲಿಲ್ಲ.‌ ಆದರೆ, ನೀನು ನನ್ನ ಪ್ರಶ್ನೆ ಮಾಡೋ ತರ ಆಗಿದ್ದೀಯಾ. ಕಶ್ಯಪ್ ಮನೆಯಲ್ಲಿ ನಾನು ಕೂಡ ಒಬ್ಬಳಾಗಿದ್ದೆ. ಆದರೆ, ನೀನು ಬಂದ ಮೇಲೆ ಎಲ್ಲವೂ ಬದಲಾವಣೆ ಆಗಿದೆ. ಒಂದು ತಾಳಿಗೋಸ್ಕರ ನೀನು ಆ ರೀತಿ ಆಡ್ತೀಯ" ಅಂತ ರೇಗಿದ್ದಾಳೆ. ನಿನ್ನಿಂದ ನನ್ನ ಲೈಫ್ ಹಾಳಾಯ್ತು. ನಂದೆಲ್ಲವನ್ನು ನೀನೆ ಕಿತ್ತುಕೊಂಡಿದ್ದೀಯಾ ಅಂತ ಕೀರ್ತಿ ಜೋರು ಮಾಡಿದ್ದಾಳೆ. ಆಗ ಲಕ್ಷ್ಮೀ ಸಮಾಧಾನ ಮಾಡುವುದಕ್ಕೆ ಹೋದಾಗ ಕೆರೆಗೆ ತಳ್ಳಿದ್ದಾಳೆ. ಸದ್ಯ ಧಾರಾವಾಹಿ ಕುತೂಹಲ ಘಟ್ಟ ತಲುಪಿದ್ದು, ಮುಂದೇನಾಗುತ್ತೆ ಅನ್ನೋದೇ ಟ್ವಿಸ್ಟ್.

More from Filmibeat

English summary
Lakshmi Baramma serial Written Update on August 10th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X