Lakshmibaramma: ತಾಳಿ.. ಅಧಿಕಾರ.. ಗಂಡ ಅಂತ ಮಾತಾಡಿದ್ದೇ ಲಕ್ಷ್ಮೀ ಪ್ರಾಣಕ್ಕೆ ಕುತ್ತು ತಂದಿದೆ !

By ಎಸ್ ಸುಮಂತ್

ಕೀರ್ತಿಗೆ ಅದೆಷ್ಟು ಕೋಪ ಬಂದಿದೆ ಎಂದರೆ ಲಕ್ಷ್ಮೀ ಮೊದಲಿದ್ದ ಹಾಗೇ ಇಲ್ಲ ಅನ್ನೋದು ಅವಳ ಅಭಿಪ್ರಾಯಾವಾಗಿದೆ. ಲಕ್ಷ್ಮೀ ಹಣಕ್ಕೋಸ್ಕರವೇ ಮದುವೆಯಾಗಿದ್ದಾಳೆ. ಆದ್ರೆ ಈಗ ಅಧಿಕಾರದ ದರ್ಪ ತೋರಿಸುತ್ತಿದ್ದಾಳೆ ಅನ್ನೋದು ಕೀರ್ತಿಯ ಆಲೋಚನೆಯ ವಾದ. ಬೇರೆ ಯಾರೇ ಆದರೂ ತಮ್ಮ‌ ಪ್ಲ್ಯಾನ್ ಸರಿ ಹೊಂದುವುದಿಲ್ಲ. ಲಕ್ಷ್ಮೀ ಆದರೆ ಕೊಟ್ಟಷ್ಟು ಹಣ ತೆಗೆದುಕೊಂಡು, ವೈಷ್ಣವ್‌ನ ಬಿಟ್ಟು ಹೋಗುತ್ತಾಳೆ ಎಂದುಕೊಂಡಿದ್ದಳು ಕೀರ್ತಿ.

ಕಾವೇರಿ ಮಾಡಿರುವ ಪ್ಲ್ಯಾನ್ ಯಾರಿಗೂ ಗೊತ್ತಿಲ್ಲ ಅನ್ನೋದು ಕೀರ್ತಿಗೆ ಗೊತ್ತೆ ಇಲ್ಲ. ತಾವಿಬ್ಬರೇ ಮಾಡಿರುವ ಪ್ಲ್ಯಾನ್‌ನಲ್ಲಿ ಲಕ್ಷ್ಮೀಯ ತಪ್ಪು ಏನು ಇಲ್ಲ ಅನ್ನೋದು ಕೀರ್ತಿಯ ಅರಿವಿಗೆ ಬಂದಿಲ್ಲ. ಈಗ ವೈಷ್ಣವ್‌ನನ್ಮು ಪಡೆಯುವುದಕ್ಕೆ ಲಕ್ಷ್ಮೀಯನ್ನೇ ಸಾಯಿಸುವ ಮಟ್ಟಕ್ಕೆ ಬಂದು ನಿಂತಿದ್ದಾಳೆ.

Lakshmi Baramma-Kannada Serial

ಲಕ್ಷ್ಮೀ ಗೆ ಅಹಂಕಾರಿ ಎಂದ ಕೀರ್ತಿ

ಲಕ್ಷ್ಮೀಯನ್ನು ನಿನ್ನ ಜೊತೆಗೆ ಮಾತನಾಡಬೇಕು ಎಂದು ಕೀರ್ತಿ ಬಹಳ ದೂರ ಕರೆದುಕೊಂಡು ಬಂದಿದ್ದಾಳೆ. ಅವಳ ಹುಚ್ಚಾಟಕ್ಕೆ ಲಕ್ಷ್ಮೀ ಹೆದರಿದ್ದಂತು ಸತ್ಯ. ಆದರೆ, ಏನೋ ಮಾತನಾಡಬೇಕು ಎಂದಾಗ ಸರಿ ಮಾತಾಡು. ಇಷ್ಟು ದೂರವೇ ಬಂದಿದ್ದೀವಿ ಅಂತೆ. ಕೇಳಿಸ್ಕೊಳ್ಳುತ್ತೀನಿ ಎಂದು ಲಕ್ಷ್ಮೀ ಕೈ ಕಟ್ಟಿ‌ ನಿಂತರೆ ಕೀರ್ತಿಗೆ ಅದನ್ನು ಸಹಿಸುವುದಕ್ಕೆ ಆಗಿಲ್ಲ. ಅದಕ್ಕೆ ನಿನ್ನ ಅಹಂಕಾರಿ ಅನ್ನೋದು ಎಂದಿದ್ದಾಳೆ.

ವೈಷ್ಣವ್‌ನನ್ನು ಗಂಡ ಎಂಬುದನ್ನೇ ಸಹಿಸದ ಕೀರ್ತಿ

ನನ್ನೆಲ್ಲಾ ಅಧಿಕಾರವನ್ನು ನೀನು ಕಿತ್ತುಕೊಳ್ಳುತ್ತಿದ್ದೀಯಾ. ನೀನು ಬಂದ ಮೇಲೆ ಎಲ್ಲವೂ ಬದಲಾಗುತ್ತಿದೆ. ಹಾಗೇ ಆಗಬಾರದು ಎಂದು ಕೀರ್ತಿ ಹೇಳಿದಾಗ, ಲಕ್ಷ್ಮೀ ತನ್ನ ಸ್ಥಾನದ ಬಗ್ಗೆ ಮಾತನಾಡಿದ್ದಾಳೆ. ಆ‌ ಮನೆಗೆ ನಾನು‌ ಏನು, ನೀನು ಏನು ಅನ್ನೋದನ್ನ ವಿವರಿಸಿದ್ದಾಳೆ. ನಾನು ಅಷ್ಟು ಮಾತನಾಡುವುದಕ್ಕೆ ಕಾರಣ ಆ ಮನೆಯ ಸೊಸೆಯಾಗಿರುವುದು. ವೈಷ್ಣವ್ ನನ್ನ ಗಂಡನಾಗಿರುವುದು. ಅಷ್ಟಕ್ಕೆಲ್ಲಾ ಕಾರಣ ಈ ತಾಳಿ ಎಂದು ತೋರಿಸಿದ್ದಾಳೆ. ಆ ಬಳಿಕವೇ ಕೀರ್ತಿ ಮತ್ತಷ್ಟು ಕೋಪಗೊಂಡಿದ್ದಾಳೆ.

Lakshmi Baramma-Kannada Serial

ಕೋಪದ ಕೈಗೆ ಬುದ್ಧಿ ಕೊಟ್ಟ ಕೀರ್ತಿ

ಕೀರ್ತಿ ತನ್ನ ಕಂಟ್ರೋಲ್ ಮೀರಿ ಮಾತನಾಡುವುದಕ್ಕೆ, ವರ್ತಿಸುವುದಕ್ಕೆ ಶುರು ಮಾಡಿದ್ದಾಳೆ. ಜೋರಾದ ಧ್ವನಿಯಲ್ಲಿ ಕಿರುಚಿದ್ದಾಳೆ. ಯಾಕೋ ಎಲ್ಲವೂ ಸರಿ ಇಲ್ಲ ಎಂಬಂತೆ ನಡೆದುಕೊಂಡಿದ್ದಾಳೆ. ಇದಮ್ನ ಕಂಡ ಲಕ್ಷ್ಮೀಗೆ ಆತಂಕ ಶುರುವಾಗಿದೆ. ಕೀರ್ತಿಯನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾಳೆ. ಹೆಗಲ ಮೇಲೆ ಕೈ ಇಟ್ಟು ಸಮಾಧಾನಿಸಲು ಹೊರಟಾಗ, ಕೀರ್ತಿ ದುಡುಕಿದ್ದಾಳೆ. ಲಕ್ಷ್ಮೀಯನ್ನೇ ಕೆರೆಗೆ ತಳ್ಳಿದ್ದಾಳೆ. ಮೊದಲೇ ಯಾರೂ ಇಲ್ಲದ ಜಾಗವದು. ಕಿರುಚಿದರೂ ಸಹಾಯಕ್ಕೆ ಬರಲು ಅಲ್ಲಿ ಯಾರು ಇಲ್ಲ. ಆದರೆ ಕೀರ್ತಿಗೆ ಆ ಗಿಲ್ಟ್ ಮೊದಲೇ ಇಲ್ಲ.

ಲಕ್ಷ್ಮೀಯನ್ನು ಕಾವೇರಿ ಅದೇಗೆ ಎದುರಿಸುತ್ತಾಳೋ..?

ಕಾವೇರಿ ತನ್ನ ಅತ್ತೆಯ ಬಗ್ಗೆ ಯೋಚನೆ‌ ಮಾಡಿ, ಭಯಕ್ಕೆ ಮೂರು ಜನರ ಲೈಫ್‌ನಲ್ಲಿ ಆಟವಾಡುತ್ತಿದ್ದಾಳೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಂತ ವೈಷ್ಣವ್ ಹಾಗೂ ಕೀರ್ತಿಯನ್ನು ದೂರ ಮಾಡಿದ್ದಾಳೆ. ಮುಗ್ಧೆ ಲಕ್ಷ್ಮೀಯನ್ನು ಸೊಸೆ ಮಾಡಿಕಿಂಡಿದ್ದಾಳೆ. ಲಕ್ಷ್ಮೀ ಅಂತು ವೈಷ್ಣವ್ ನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಈಗ ಕೀರ್ತಿಯ ಹುಚ್ಚಾಟಕ್ಕೆ ಎಲ್ಲಾ ಸತ್ಯ ಲಕ್ಷ್ಮೀ ಕಿವಿಗೆ ಬಿದ್ದಿದೆ. ವೈಷ್ಣವ್ ಹಾಗೂ ಕಾವೇರಿ ಇಬ್ಬರಿಗೂ ಇನ್ಮುಂದೆ ಸವಾಲೇ ಸರಿ. ಇಬ್ಬರು ಹೇಳಿರುವ ಸುಳ್ಳು, ಮಾಡಿರುವ ನಾಟಕದಿಂದ ಮರೆಮಾಚುವುದಿ ಅಷ್ಟು ಸುಲಭವಲ್ಲ.

More from Filmibeat

English summary
Lakshmi Baramma serial Written Update on August 11th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X