Lakshmi Baramma Serial: "ನಾನು ಹೆಂಡ್ತಿ.. ನೀನು ಫ್ರೆಂಡ್" ಎಂದ ಲಕ್ಷ್ಮೀ.. ಪ್ರಾಣ ತೆಗೆಯಲು ಮುಂದಾದ ಕೀರ್ತಿಗೆ ಕಪಾಳಮೋಕ್ಷ
ಕೀರ್ತಿಯ ನಡವಳಿಕೆ ಮಿತಿಮೀರಿದೆ. ಎಲ್ಲಾ ಸತ್ಯವನ್ನು ಇಂದು ಹೇಳಿಯೇ ಬಿಡುತ್ತೀನಿ ಎಂದು ಬಂದವಳು ಮತ್ತೆ ಅರ್ದಂಬರ್ಧ ಹೇಳಿ ಸುಮ್ಮನೆ ಗೊಂದಲ ಸೃಷ್ಟಿ ಮಾಡಿದ್ದಾಳೆ. ಕೀರ್ತಿಯ ವರ್ತನೆ ಕಂಡು ಮೊದಲೇ ಲಕ್ಷ್ಮೀಗೆ ಕೋಪ ಬಂದಿದೆ. ಅಧಿಕಾರದ ಬಗ್ಗೆ ಪ್ರಶ್ನೆ ಮಾಡಿದಾಗಲೂ ತಾಳ್ಮೆಯಿಂದ ಉತ್ತರ ನೀಡಿದ್ದಾಳೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಕೀರ್ತಿಗೆ ಇಲ್ಲವಾಗಿದೆ.
ಆ ಕಡೆ ಕಾವೇರಿಗೆ ಭಯ ಶುರುವಾಗಿದೆ. ಲಕ್ಷ್ಮೀಯನ್ನು ಕರೆದುಕೊಂಡು ಹೋಗಿರೋದು ಎಲ್ಲಿಗೆ ಅಂತ. ಕಾರುಣ್ಯ ಬಳಿ ಕೇಳಿದ್ರೆ ಎಲ್ಲಾ ಸತ್ಯ ಹೇಳುವುದಕ್ಕೆ ಕರೆದುಕೊಂಡು ಹೋಗಿದ್ದಾಳೆ ಎಂದಿದ್ದು, ಕಾವೇರಿಗೆ ಭಯವಾಗಿದೆ. ಏನು ಮಾಡಬೇಕು ಅಂತ ತಿಳಿಯದೆ ವಾಪಾಸ್ ಆಗಿದ್ದಾಳೆ. ಆದರೆ, ಯಾವುದನ್ನು ಕೀರ್ತಿ ಸರಿಯಾಗಿ ಹೇಳಿಲ್ಲ.

ಲಕ್ಷ್ಮೀ ಮಾತಿಗೆ ಕೋಪಗೊಂಡ ಕೀರ್ತಿ
ಕೀರ್ತಿಯದ್ರು ಒಂದೇ ವಾದ. ನೀನು ಬಂದ ಮೇಲೆ ಎಲ್ಲವೂ ಬದಲಾಗಿದೆ. ಎಲ್ಲರೂ ನಿನ್ನ ಮಾತನ್ನೇ ಕೇಳುವಂತೆ ಆಗಿದೆ. ನನ್ನ ಮಾತು ನಡೆಯುತ್ತಿಲ್ಲ. ಅದೇಗೆ ನೀನು ಮುಖ್ಯ ಆಗ್ತೀಯ..? ನಾನು ಮಾತ್ರ ಮುಖ್ಯ ಆಗಬೇಕು ಅನ್ನೋದು ವಾದ. ಅದಕ್ಕೂ ಲಕ್ಷ್ಮೀ ಬಿಡಿ ಬಿಡಿಯಾಗಿ ಉತ್ತರ ನೀಡಿದ್ದಾಳೆ. ನಾನು ಅಗ್ನಿ ಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡಿರುವ ಹೆಂಡತಿ. ಅದಕ್ಕೆಂದೇ ಅಷ್ಟೊಂದು ಬೆಲೆ. ನೀನು ಫ್ರೆಂಡ್ ಅಷ್ಟೇ. ಫ್ರೆಂಡ್ ಆಗಿನೇ ಇರು ಎಂದಾಗ ಕೀರ್ತಿಗೆ ಆ ಹೆಂಡತಿ ಸ್ಥಾನವನ್ನು ಬಿಟ್ಟುಕೊಡುವುದಕ್ಕೆ ಆಗಿಲ್ಲ.
ಲಕ್ಷ್ಮೀಯನ್ನು ಕಾಪಾಡಿದ ವೈಷ್ಣವ್
ಕೀರ್ತಿ ಕಂಟ್ರೋಲ್ ಮೀರಿದಾಗ, ಲಕ್ಷ್ಮೀ ಸಮಾಧಾನ ಮಾಡುವುದಕ್ಕೆ ಹೊರಟಳು. ವಾಸ್ತವತೆಯನ್ನು ಅರ್ಥ ಮಾಡಿಕೊ ಎನ್ನುವಾಗಲೇ, ನಾನಲ್ಲ ಅರ್ಥ ಮಾಡಿಕೊಳ್ಳಬೇಕಾಗಿರೋದು, ನೀನು ಎಂದು ಕೆರೆಗೆ ದೂಕಿದ್ದಾಳೆ. ಆದರೆ, ಅಷ್ಟರಲ್ಲಿ ವೈಷ್ಣವ್ ಅಲ್ಲಿಗೆ ಬಂದಿದ್ದಾನೆ. ನೀರಿಗೆ ಬೀಳಬೇಕಿದ್ದ ಲಕ್ಷ್ಮೀಯನ್ನು ಕೈಹಿಡಿದು ಕಾಪಾಡಿದ್ದಾನೆ. ಮೊದಲೇ ಆ ಜಾಗದ ಬಗ್ಗೆ ವೈಷ್ಣವ್‌ಗೆ ಐಡಿಯಾ ಇದ್ದ ಕಾರಣಕ್ಕೆ ವೈಷ್ಣವ್ ಸರಿಯಾದ ಸಮಯಕ್ಕೆ ಬಂದು ಕಾಪಾಡಿದ್ದಾನೆ.

ಲಕ್ಷ್ಮೀಯ ಮೇಲೆ ಆರೋಪದ ಸುರಿಮಳೆ
ಲಕ್ಷ್ಮೀಯನ್ನು ಕಾಪಾಡಿ, ಕೀರ್ತಿ ಇರುವ ಕಡೆಗೆ ಬಂದಾಗ ಕೀರ್ತಿ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾಳೆ. ಈ ಲಕ್ಷ್ಮೀ ನೀನು ಬರುವುದಕ್ಕೂ ಮುನ್ನ ಏನೆಲ್ಲಾ ಅಂದಳು ಗೊತ್ತಾ? ಎಲ್ಲಾ ಅಧಿಕಾರ ಅವಳದ್ದೇ ಅಂತೆ. ನಾನು ಫ್ರೆಂಡ್ ಅಂತೆ ಅವಳು ಹೆಂಡತಿ ಅಂತೆ. ಏನೇನೋ ಹೇಳ್ತಾಳೆ. ಅದಕ್ಕೆ ನಂಗೆ ಸಿಟ್ಟು ಬಂದಿದ್ದು. ನಿನ್ನೆಯಿಂದ ನಂಗೆ ಕೋಪ ಬರಿಸುತ್ತಿದ್ದಾಳೆ ಅಂತ ಏನೇನೋ ಹೇಳಿದ್ದಾಳೆ.
ಕೀರ್ತಿ ಕಪಾಳಕ್ಕೆ ಬಿಟ್ಟ ವೈಷ್ಣವ್
ವೈಷ್ಣವ್ ಮೊದಲೇ ಕೋಪದಲ್ಲಿದ್ದ. ಲಕ್ಷ್ಮೀಯ ಪ್ರಾಣಕ್ಕೆ ಕುತ್ತು ತಂದಿದ್ದಾಳಲ್ಲ ಎಂಬ ಸಿಟ್ಟು ಅವನಲ್ಲಿತ್ತು. ಅದಕ್ಕೆಂದೇ ಕೀರ್ತಿಗೆ "ಸುಮ್ಮನೆ ಇರು ಕೀರ್ತಿ, ನೀನು ಏನು ಅಂತ ಗೊತ್ತು. ಮಹಾಲಕ್ಷ್ಮಿ ಏನು ಅಂತಾನೂ ನಂಗೆ ಗೊತ್ತು" ಅಂತ ಆದಷ್ಟು ಪರಿಸ್ಥಿತಿಯನ್ನು ತಣ್ಣಗೆ ಮಾಡುವುದಕ್ಕೆ ನೋಡಿದ್ದಾನೆ. ಆದರೆ, ಕೀರ್ತಿ ಕೇಳುವುದಕ್ಕೆ ರೆಡಿ ಇರಲಿಲ್ಲ. ವೈಷ್ಣವ್‌ನ ಮೀರಿ ಮತ್ತೆ ಲಕ್ಷ್ಮೀ ಬಳಿಗೆ ಬಂದಳು. "ಹೇಳು ಲಕ್ಷ್ಮೀ ಈ ಹಳೇ ಅರಿಶಿನ ದಾರಕ್ಕೆ ಇಷ್ಟೊಂದು ಆಡ್ತಿದ್ದೀಯಲ್ಲ ನೀನು" ಎಂದಾಗ ಕೀರ್ತಿ ಕಪಾಳಕ್ಕೆ ವೈಷ್ಣವ್ ಬಾರಿಸಿದ್ದಾನೆ. ಕೀರ್ತಿಗೆ ಮತ್ತೆ ಉತ್ತರ ಕೊಡದಂಗೆ ತಡೆದಿದ್ದಾನೆ. ಆದರೆ ಮನೆಗೆ ಹೋದಾಗ ಕಾವೇರಿ ಹಾಗೂ ವೈಷ್ಣವ್ ಕಡೆಯಿಂದ ಲಕ್ಷ್ಮೀಗೆ ಕ್ಲಾರಿಟಿ ಸಿಗಬೇಕಿದೆ.


Click it and Unblock the Notifications











