Lakshmi Baramma Serial: ಲಕ್ಷ್ಮೀ ಆಯ್ತು.. ಈಗ ಕಾವೇರಿಯನ್ನೇ ಕೊಲೆ ಮಾಡಲು ಹೊರಟ ಕೀರ್ತಿ!
ಕೀರ್ತಿಯ ನಡೆ ಮಿತಿಮೀರಿದೆ. ವೈಷ್ಣವ್ ಪಡೆಯುವುದಕ್ಕೆ ಇರೋ ಬರೋ ದಾರಿಯನ್ನೆಲ್ಲಾ ಹುಡುಕುತ್ತಾ ಇದ್ದಾಳೆ. ಅದಕ್ಕೂ ಮೊದಲು ಲಕ್ಷ್ಮೀಯನ್ನೇ ಟಾರ್ಗೆಟ್ ಮಾಡಿದ್ದಾಳೆ. ಎಲ್ಲಾ ಸತ್ಯ ಹೇಳಿ ಬಿಡ್ತೀನಿ ಅಂತ ಹೋಗಿ, ಮತ್ತಷ್ಟು ಗೊಂದಲ ಮಾಡಿಟ್ಟು ಬಂದಿದ್ದಾಳೆ. ಲಕ್ಷ್ಮೀಗೆ ಈಗಲೂ ಸತ್ಯ ಅರ್ಥ ಆಗಿಲ್ಲ. ಕೀರ್ತಿಯ ವಿಚಿತ್ರ ವರ್ತನೆಯ ಮೇಲೆನೇ ಅನುಮಾನ ಶುರುವಾಗಿದೆ.
ಸದ್ಯ ಕೀರ್ತಿ ತನಗಿದ್ದ ಸ್ವಾತಂತ್ರ್ಯವನ್ನು ಕಡಿದುಕೊಂಡಿದ್ದಾಳೆ. ವೈಷ್ಣವ್ ಮನೆಗೆ ಸುಲಭವಾಗಿ ಹೋಗ್ತಾ ಇದ್ಲು. ಆದರೆ, ಈಗ ಕಾವೇರಿಯೂ ಯಾವುದೇ ಸಹಾಯ ಮಾಡುವುದಕ್ಕೆ ಆಗದಷ್ಟು ಎಡವಟ್ಟು ಮಾಡಿಟ್ಟಿದ್ದಾಳೆ ಕೀರ್ತಿ. ಕೋಪದ ಕೈಗೆ ಬುದ್ದಿ ಕೊಡುವ ಕೀರ್ತಿ, ಈಗ ಕಾವೇರಿಯನ್ನು ಕೊಲೆ ಮಾಡಲು ಹೊರಟಿದ್ದಾಳೆ.

ಲಕ್ಷ್ಮೀ ಜೊತೆಗೆ ನನ್ನ ಲೈಫ್ ಎಂದ ವೈಷ್ಣವ್
ಕೀರ್ತಿಯ ಮಾತು ಮತ್ತಷ್ಟು ಮಿತಿ ಮೀರಿದೆ. ಲಕ್ಷ್ಮೀ ಮುಖ್ಯ ಅಲ್ಲ, ನಾನೇ ಮುಖ್ಯ ಅಂತ ಹೇಳು ಅಂತ ವೈಷ್ಣವ್ ಬಳಿ ಹೇಳಿದ್ದಾಳೆ. ಅದಕ್ಕೆ ವೈಷ್ಣವ್, ಕೀರ್ತಿ ಮಾಡಿದ ಮೋಸವನ್ನೆಲ್ಲ ಒಮ್ಮೆ ತಿರುವಿ ಹಾಕಿದ್ದಾನೆ. ಬಿಟ್ಟು ಹೋದವಳ ನೋವಲ್ಲಿದ್ದಾಗ ಬಂದು ಲೈಫ್ ಸರಿ ಮಾಡಿದ್ದು ಮಹಾಲಕ್ಷ್ಮಿ. ನನ್ನ ಪ್ರಿಯಾರಿಟಿ ಏನಿದ್ದರು ಮಹಾಲಕ್ಷ್ಮಿಗೆ. ನನ್ನ ಹೆಂಡತಿ ಇರುವಾಗ ನೀನು ಯಾರೇ. ನನ್ನ ಲೈಫ್ ಏನಿದ್ದರು ಮಹಾಲಕ್ಷ್ಮಿ ಜೊತೆಗೆ ಎಂದಿದ್ದಾನೆ.
ತಲೆ ಸುತ್ತಿ ಬಿದ್ದ ಕೀರ್ತಿ
ಮಹಾಲಕ್ಷ್ಮಿಗೆ ಕೊಡುವ ಪ್ರಾಮುಖ್ಯತೆ ನಿಂಗೆ ಕೊಡಲ್ಲ ಎಂದಾಗ ಕೀರ್ತಿಗೆ ತಡೆದುಕೊಳ್ಳುವುದಕ್ಕೆ ಆಗಿಲ್ಲ. ತಲೆ ಸುತ್ತಿ ಬಿದ್ದಳು. ತಕ್ಷಣ ಲಕ್ಷ್ಮೀ ಮತ್ತು ವೈಷ್ಣವ್ ಇಬ್ಬರು ಮನೆಗೆ ಕರೆದುಕೊಂಡು ಹೋದ್ರು. ಕಾರುಣ್ಯ ಕೂಡ ವೈಷ್ಣವ್‌ನನ್ನೇ ಬೈದಿದ್ದಾಳೆ. ನೀವೂ ಕೊಟ್ಟಿರುವ ಸಲಿಗೆಯಿಂದಾನೇ ಕೀರ್ತಿ ಈ ರೀತಿಯೆಲ್ಲಾ ಮಾಡ್ತಾ ಇರೋದು. ನೀವೂ ಕಂಟ್ರೋಲ್‌ನಲ್ಲಿ ಇರಿ ಎಂದಾಗ ವೈಷ್ಣವ್ ಕೂಡ ಶಪಥ ಮಾಡಿ ಹೋಗಿದ್ದಾನೆ. ಇನ್ಯಾವತ್ತು ಕೀರ್ತಿಯನ್ನು ಮನೆಗೆ ಸೇರಿಸಲ್ಲ ಎಂದು ಹೇಳಿ ಹೋಗಿದ್ದಾನೆ.

ಕಾವೇರಿಗೆ ಎಲ್ಲರಿಂದ ಕ್ಲಾಸ್
ಆ ಕಡೆ ಮನೆಯವರೆಲ್ಲಾ ಟೆನ್ಶನ್ ಆಗಿದ್ದಾರೆ. ಕೀರ್ತಿಯಿಂದ ಸಮಸ್ಯೆ ತಪ್ಪಿದ್ದಲ್ಲ. ಇನ್ಮುಂದೆ ಅವಳನ್ನು ಮನೆಯ ಒಳಗೂ ಬಿಟ್ಟುಕೊಳ್ಳುವುದು ಬೇಡ ಎಂದು ಮಾತಾಡಿಕೊಂಡಿದ್ದಾರೆ. ಆದರೆ, ಕಾವೇರಿಗೆ ಅದು ಒಪ್ಪಿಗೆ ಆಗುತ್ತಿಲ್ಲ. ಕೀರ್ತಿಗೆ ಇನ್ನು ಕೂಡ ಸಿಂಪತಿ ತೋರಿಸುತ್ತಿದ್ದಾಳೆ. ಹೀಗಾಗಿ ಮನೆಯವರೆಲ್ಲಾ ಕಾವೇರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಲಕ್ಷ್ಮೀ ಕೂಡ ಉತ್ತರಿಸುವುದಕ್ಕೆ ಆಗದಂತ ಪ್ರಶ್ನೆ ಮಾಡಿದ್ದಾಳೆ. ವೈಷ್ಣವ್‌ಗೆ ಹಳೆ ಗರ್ಲ್ ಫ್ರೆಂಡ್ ಇದ್ರಲ್ಲ ಆಗಲೂ ಕೀರ್ತಿ ಇಷ್ಟೇ ವಿಚಿತ್ರವಾಗಿ ಆಡ್ತಾ ಇದ್ರಾ ಎಂದು ಕೇಳಿದರೆ ಮನೆಯವರ ಬಳಿ ಉತ್ತರವಿಲ್ಲ.
ಕೀರ್ತಿಯಿಂದ ಕಾವೇರಿ ಜೀವಕ್ಕೆ ಅಪಾಯ
ಕೀರ್ತಿಯಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ವೈಷ್ಣವ್‌ನನ್ನು ಪಡೆಯುವುದಕ್ಕೆ ನಾನಾ ಕಸರತ್ತು ನಡೆಸುತ್ತಿರುವ ಕೀರ್ತಿಗೆ ಕೋಪ ಬಂದರೆ ತಾನೇನು ಮಾಡ್ತೀನಿ ಅನ್ನೋದು ನೆನಪಿರಲ್ಲ. ತನ್ನ ಕೋಪದಿಂದ ಈಗಾಗಲೇ ಲಕ್ಷ್ಮೀ ಪ್ರಾಣಕ್ಕೆ ಕುತ್ತು ತಂದಿದ್ದಳು. ಈಗ ಕಾವೇರಿಯ ಪ್ರಾಣಕ್ಕೂ ಅಪಾಯ ತಂದಿದ್ದಾಳೆ. ಮಾತನಾಡಿಸಿ, ಸಮಾಧಾನ ಮಾಡಲು ಬಂದ ಕಾವೇರಿಯನ್ನು ಟೆರೆಸ್ ಮೇಲೆ ಕರೆದುಕೊಂಡು ಹೋಗಿದ್ದಾಳೆ. ವೈಷ್ಣವ್ ಸಿಗಲ್ಲ ಎನ್ನುವ ಮಾತನ್ನು ಕೀರ್ತಿಗೆ ಸಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಅದು ತಾಯಿಯಾದರೂ ಸರಿ, ಕಾವೇರಿಯಾದರೂ ಸರಿ. ಕಾವೇರಿಯಿಂದ ಯಾವುದು ಸರಿಯಾಗ್ತಿಲ್ಲ ಎಂದು ತಿಳಿದು ಬಿಲ್ಡಿಂಗ್ ಮೇಲಿಂದ ತಳ್ಳುವುದಕ್ಕೆ ಹೊರಟಿದ್ದಾಳೆ.


Click it and Unblock the Notifications











