Lakshmi Baramma Serial: ಅಬ್ಬಬ್ಬಾ ಲಕ್ಷ್ಮೀ ಮುಖದಲ್ಲಿ ನಾಚಿಕೆ ತರಿಸಿಬಿಟ್ಟ ವೈಷ್ಣವ್.. ಅಂಥದ್ದೇನಾಯ್ತು ?
ವೈಷ್ಣವ್ ಮತ್ತು ಲಕ್ಷ್ಮೀ ಇಕ್ಕಟ್ಟಿನಲ್ಲಿಯೇ ಮದುವೆಯಾದವರು. ಮನೆಯವರ ಆಸೆಗಾಗಿ ತಮ್ಮ ಆಸೆಗಳನ್ನು ಬಲಿ ಕೊಟ್ಟವರು. ಆದ್ರೆ ಈಗ ಹಳೆಯದ್ದನ್ನೆಲ್ಲ ಮರೆತು ಹೊಸ ಬದುಕಿನತ್ತ ನಡೆಯಲು ಇಬ್ಬರು ಪ್ರಯತ್ನ ಪಡ್ತಾ ಇದ್ದಾರೆ. ಅದರ ನಡುವೆ ಸಮಸ್ಯೆ ಆಗುವಂತೆ ಮಾಡುತ್ತಿರುವುದೇ ಕೀರ್ತಿ.
ಕೀರ್ತಿಯಿಂದ ಬರೀ ಕಿರಿಕಿರಿ ಆಗ್ತಾ ಇದೆ ಎಂದು ಗೊತ್ತಾದ ಮೇಲೆ ಮನೆಯವರೆಲ್ಲಾ ಸೇರಿ ಗಂಡ ಹೆಂಡತಿಯ ಸಂಬಂಧವನ್ನು ಗಟ್ಟಿ ಮಾಡುವುದಕ್ಕೆ ಹೊರಟಿದ್ದಾರೆ. ಇದೀಗ ಅದರ ಬಹು ದೊಡ್ಡ ಭಾಗವಾಗಿರೋದು ಲಕ್ಷ್ಮೀಯನ್ನು ವೈಷ್ಣವ್ ಸಿಂಗಲ್ ಆಗಿ ಕರೆಯಬೇಕು ಅನ್ನೋದು. ಅದು ಅಷ್ಟು ಸುಲಭವಾಗಿಲ್ಲವಾದರೂ ಮನೆಯವರು ಮನಸ್ಸು ಮಾಡಿದ್ರೆ ಯಾವುದು ಅಸಾಧ್ಯವೂ ಅಲ್ಲ.

ಕಾವೇರಿಗೆ ಗೊತ್ತಾಯ್ತು ವೈಷ್ಣವ್ ಪ್ರಾಬ್ಲಮ್
ಕಾವೇರಿಗೆ ತನ್ನದೇ ಪ್ರಾಬ್ಲಮ್ ಜಾಸ್ತಿಯಾಗಿದೆ. ಕೀರ್ತಿ ನೆಮ್ಮದಿಯಾಗಿ ಇರುವುದಕ್ಕೆ ಬಿಡುತ್ತಿಲ್ಲ. ಈಗ ಬೇರೆ ಲಕ್ಷ್ಮೀ ನೆಮ್ಮದಿಯನ್ನೇ ಹಾಳು ಮಾಡುವಂತೆ ಡಿಮ್ಯಾಂಡ್ ಮಾಡುತ್ತಿದ್ದಾಳೆ. ಇದರ ನಡುವೆ ಕಾವೇರಿಗೆ ಮಗನ ಬಗ್ಗೆ ಶಾಕಿಂಗ್ ಎನಿಸುವಂತ ವಿಷಯ ಕಿವಿಗೆ ಬಿದ್ದಿದೆ. ವೈಷ್ಣವ್ ಬರೆದ ಹಾಡು ಈ ಬಾರಿ ಮ್ಯೂಸಿಕ್ ಕಂಪನಿಯವರಿಗೆ ಇಷ್ಟ ಆಗಿರಲಿಲ್ಲ. ಹೀಗಾಗಿ ಆ ಪ್ರಾಜೆಕ್ಟ್ ರಿಜೆಕ್ಟ್ ಆಗಿತ್ತು. ಇಷ್ಟು ದಿನ ವೈಷ್ಣವ್ ಆ ವಿಚಾರವನ್ನು ಮುಚ್ಚಿಟ್ಟಿದ್ದ. ಈಗ ಅದು ಕಾವೇರಿಯ ಮುಂದೆ ಬಯಲಾಗಿದೆ.
ಕೀರ್ತಿಯಿಂದ ಕಾವೇರಿಗೂ ತೊಂದ್ರೆ
ಕೀರ್ತಿಯಿಂದ ಕಾವೇರಿಗೆ ತಲೆ ನೋವು ತಪ್ಪಿದ್ದಲ್ಲ. ಯಾಕಂದ್ರೆ ಸಾಕ್ಷಿ ಸಮೇತ ಲಾಕ್ ಆಗಿದ್ದಾಳೆ. ಹೀಗಾಗಿ ಏನನ್ನು ಮಾಡುವುದಕ್ಕೆ ಆಗದೆ ಶಪಿಸುತ್ತಿದ್ದಾಳೆ. ಕೀರ್ತಿ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುತ್ತಿದ್ದಾಳೆ. ಕಷ್ಟವಾದ ಕೆಲಸವಾದರೂ ಸರಿ ಪ್ರಯತ್ನ ಮಾಡ್ತೀನಿ ಅಂತಾನೇ ಹೇಳ್ತಿದ್ದಾಳೆ. ಆದರೆ, ಕೀರ್ತಿಯ ಡಿಮ್ಯಾಂಡ್ ಇರೋದು ವೈಷ್ಣವ್ ಬೇಕು ಎಂಬಂತೆ. ಯಾವುದನ್ನು ಬೇಡ ಅಂದುಕೊಂಡು ಲಕ್ಷ್ಮೀಯನ್ನು ಮದುವೆ ಮಾಡಿಕೊಂಡಳೋ, ಈಗ ಅವಳನ್ನೇ ಮನೆಗೆ ಕರೆಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಳ್ಳೆ ಕಾಫಿಗಾಗಿ ವೈಷ್ಣವ್ ಒದ್ದಾಟ
ಈ ಕಡೆ ಮನೆಯವರೆಲ್ಲಾ ಒಂದು ಕಡೆ ನಿಂತಿದ್ದಾರೆ. ಆ ಕಡೆ ಕಾವೇರಿಯನ್ನು ಕೀರ್ತಿ ಆಟವಾಡಿಸುತ್ತಾ ಇದ್ದರೆ. ಈ ಕಡೆ ಮನೆಯವರೆಲ್ಲಾ ಸೇರಿ ಲಕ್ಷ್ಮೀ ಮತ್ತು ವೈಷ್ಣವ್ ನಡುವೆ ಸಂಬಂಧ ಬೆಸೆಯುತ್ತಿದ್ದಾರೆ. ಲಕ್ಷ್ಮೀಯನ್ನು ಈಗಲೂ ಹೆಂಡತಿಯ ರೀತಿ ಕರೆಯುತ್ತಿಲ್ಲ ಅನ್ನೋದು ಮನೆಯವರ ವಾದ. ಹೀಗಾಗಿ ಲಕ್ಷ್ಮೀಯನ್ನು ಅಡುಗೆ ಮನೆಗೆ ಬಿಟ್ಟುಕೊಳ್ಳುತ್ತಿಲ್ಲ. ವೈಷ್ಣವ್‌ಗೂ ಸರಿಯಾದ ಫುಡ್ ಸಿಗುತ್ತಿಲ್ಲ. ಲಕ್ಷ್ಮೀಯನ್ನು ಸಿಂಗಲ್ ಆಗಿ ಕರೆದರೆ ಮಾತ್ರ ಒಳ್ಳೆಯ ಊಟ, ತಿಂಡಿ, ಕಾಫಿ ಸಿಗೋದು. ಅದಕ್ಕೆ ಈಗ ಕಲಗಚ್ಚಿನ ಥರದ ಕಾಫಿಯನ್ನೇ ನೀಡಿದ್ದಾರೆ.
ಗಂಡನ ಮಾತು ಕೇಳಿ ನಾಚಿಕೊಂಡ ಲಕ್ಷ್ಮೀ
ವೈಷ್ಣವ್‌ಗೆ ಒಳ್ಳೆ ಕಾಫಿ ಇಲ್ಲದೆ ಬರೆಯುವುದು ಅಷ್ಟು ಸುಲಭವಲ್ಲ. ಪದಗಳು ಲೀಲಾ ಜಾಲವಾಗಿ ಹೋಗಬೇಕು ಅಂದ್ರೆ ಅದು ಲಕ್ಷ್ಮೀ ಮಾಡಿದ ಕಾಫಿಯೇ ಆಗಬೇಕು. ಆದರೆ, ಅದು ಸಾಧ್ಯ ಆಗೋದು ಲಕ್ಷ್ಮೀಯನ್ನು ಸಿಂಗಿಲ್ ಆಗಿ ಮಾತಾಡಿಸಿದಾಗ. ವೈಷ್ಣವ್ ಕೂಡ ನಿರ್ಧಾರ ಮಾಡಿಯೇ ಬಿಟ್ಟ. ನಾಟಕ ಆಡೋದ್ರಲ್ಲಿ ತಪ್ಪು ಏನು ಅಂತ. ಮನೆಯವರ ಮುಂದೆಲ್ಲಾ ಲಕ್ಷ್ಮೀ ತನ್ನ ಗೋಳು ಹೇಳಿಕೊಳ್ಳುತ್ತಾ ಇದ್ದಳು. ಆಗ ದಿಢೀರನೇ ಎಂಟ್ರಿ ಕೊಟ್ಟ ವೈಷ್ಣವ್, ಲಕ್ಷ್ಮೀ ನಂಗೊಂದು ಕಾಫಿ ಮಾಡಿ ಕೊಡೆ ಅಂದಿದ್ದಾನೆ. ಅಬ್ಬಬ್ಬಾ ಈ ಮಾತು ಕೇಳಿ ಮನೆಯವರೆಲ್ಲಾ ಫುಲ್ ಖುಷಿ ಆಗೋದ್ರು. ಲಕ್ಷ್ಮೀ ಮಾತ್ರ ನಿಂತಲ್ಲಿಯೇ ಕಳೆದು ಹೋದ್ದಳು.


Click it and Unblock the Notifications











