Lakshmi Baramma Serial: ಲಕ್ಷ್ಮೀ ಹೇಳಿದ್ದರಲ್ಲಿ ತಪ್ಪೇನಿದೆ ? ಆದರೆ, ಕಾವೇರಿ ವಾದವೇ ಬೇರೆ.. ಮುಂದೇನು?

By ಎಸ್ ಸುಮಂತ್

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ವೈಷ್ಣವ್ ಒಬ್ಬ ದೊಡ್ಡ ಸಿಂಗರ್. ಬರೀ ಸಿಂಗರ್ ಮಾತ್ರವಲ್ಲ, ಆತನೇ ಲಿರಿಕ್ಸ್ ಬರೆದು, ಆತನೇ ಕಂಪೋಸ್ ಕೂಡ ಮಾಡುವಂತಹ ದೊಡ್ಡ ಸಿಂಗರ್. ವೈಷ್ಣವ್ ಎಲ್ಲಿಯೇ‌ ಕಂಡರೂ ನಂಗೊಂದು ಫೋಟೋ, ನಂಗೊಂದು ಸೆಲ್ಫಿ ಅಂತ ಕ್ಯೂ ನಿಲ್ತಾರೆ. ಅಷ್ಟು ದೊಡ್ಡ ಫ್ಯಾನ್ ಬೇಸ್ ಹೊಂದಿದ್ದಾನೆ ವೈಷ್ಣವ್.

ಫ್ಯಾನ್ಸ್ ಹೊಂದಿದ್ರೆ, ದೊಡ್ಡ ಸೆಲೆಬ್ರಿಟಿಯಾದ್ರೆ ತಪ್ಪೇ ಮಾಡಲ್ವಾ. ಇಲ್ಲಾ ತಪ್ಪು ಮಾಡಿದರೂ ಕೂಡ ಅದನ್ನ ಸ್ವೀಕರಿಸಬೇಕಾ..? ಈ ವಿಚಾರ ಇಂದು ವೈಷ್ಣವ್ ಮತ್ತು ಕಾವೇರಿಯ ನಡುವೆ ನಡೆದ ಮಾತುಕತೆಯಾಗಿದೆ. ಆದರೆ, ವೈಷ್ಣವ್ ಸದಾ ಕಾಲಕ್ಕೂ ಲಕ್ಷ್ಮೀಯ ಮಾತನ್ನೇ ಕೇಳೋದು.

Lakshmi Baramma serial Written Update on August 21st episode

ಲಕ್ಷ್ಮೀಗೆ ಕ್ಲಾಸ್ ತೆಗೆದುಕೊಂಡ ಕಾವೇರಿ

ವೈಷ್ಣವ್ ಇತ್ತೀಚೆಗೆ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿದ್ದ. ಅದು ಕೀರ್ತಿಯಿಂದಾಗಿ. ಅವಳು ಕೊಟ್ಟ ಕಾಟದಿಂದ ಸರಿಯಾಗಿ ಲಿರಿಕ್ಸ್ ಕೂಡ ಬರೆಯುವುದಕ್ಕೆ ಆಗಿಲ್ಲ. ಹೀಗಾಗಿಯೇ ಒಂದು ಪ್ರಾಜೆಕ್ಟ್ ಕೈ ತಪ್ಪಿ ಹೋಗಿತ್ತು. ಈ ಬಗ್ಗೆ ಲಕ್ಷ್ಮೀ ಪಾಸಿಟಿವ್ ಆಗಿಯೇ ಸಲಹೆ ನೀಡಿದಳು. ವೈಷ್ಣವ್ ಕೂಡ ಪಾಸಿಟಿವ್ ಆಗಿಯೇ ತೆಗೆದುಕೊಂಡಿದ್ದು. ಎಲ್ಲಿಯೂ ಅಹಂ ತೋರಿಸದೆ ಅದಕ್ಕೆ ಏನು ನ್ಯಾಯ ಒದಗಿಸಬೇಕು ಎಂಬುದರ ಕಡೆಗೆ ಗಮನ ಕೊಡುತ್ತಿದ್ದಾನೆ. ಲಕ್ಷ್ಮೀಯ ಸಲಹೆ ಕಾವೇರಿಗೆ ಸಮಂಜಸ ಎನಿಸಲಿಲ್ಲ. ಅದಕ್ಕೆ ಅಲ್ಲ ಕಲ್ಲೋಲವನ್ನೇ ಸೃಷ್ಟಿಸಿದ್ದಾಳೆ.

ಮಗನ ಬಗ್ಗೆ ಗುಣಗಾನ

ಲಕ್ಷ್ಮೀ ಮತ್ತೆ ಪ್ರಯತ್ನ ಪಡಿ. ಮತ್ತೆ ಒಂದೊಳ್ಳೆ ಹಾಡನ್ನು ಬರೆಯಬಹುದು ಎಂದಿದ್ದೇ ಕಾವೇರಿಗೆ ಇಷ್ಟವಾಗಲಿಲ್ಲ. ವೈಷ್ಣವ್ ಅಂದ್ರೆ ಏನು..? ಅವನ ಘನತೆ ಎಷ್ಟಿದೆ ಅನ್ನೋದನ್ನ ಮೊದಲು ಲಕ್ಷ್ಮೀ ತಿಳಿದುಕೊಳ್ಳಬೇಕು ಎಂದೇ ಕಾವೇರಿ ಬಯಸಿದ್ದಳು. ಸುಮ್ಮನೆ ಹೆಂಡತಿಯಾಗುವುದಲ್ಲ. ಅವನ ಬಗ್ಗೆ ಎಲ್ಲಾ ತಿಳಿದು ಮಾತಾಡು ಎಂದು ಜೋರಾಗಿ ರೇಗಿದಳು. ವೈಷ್ಣವ್ ಅಂದ್ರೆ ಸುಮ್ನೆ ಅಲ್ಲ ಅವನು ವೈಷ್ಣವ್ ಕಾವೇರಿ ಕಶ್ಯಪ್ ಎಂದು ಬೀಗುತ್ತಾ ತನ್ನ ಮಗನ ಗುಣಗಾನ ಮಾಡಿದಳು.

Lakshmi Baramma serial Written Update on August 21st episode

ವೈಷ್ಣವ್ ಮಾತು ಕೇಳ್ತಾಳಾ ಕಾವೇರಿ?

ಇತ್ತ ವೈಷ್ಣವ್‌ಗೆ ಲಕ್ಷ್ಮೀ ಹೇಳಿದ್ದು ತಪ್ಪು ಎಂದು ಎನಿಸಲಿಲ್ಲ. ನಡೆದ ಘಟನೆಯನ್ನು ವಿವರಿಸುವುದಕ್ಕೆ ಪ್ರಯತ್ನ ಪಟ್ಟಿದ್ದ. ಆದರೆ, ಕಾವೇರಿಗೆ ಅರ್ಥವಾಗಬೇಕಲ್ಲ. ವೈಷ್ಣವ್ ಅಂದ್ರೆ ಫೇಮಸ್ ಸಿಂಗರ್ ಅನ್ನೋದು ಮಾತ್ರ ತಲೆಯಲ್ಲಿ ಉಳಿದಿದೆ. ಹೀಗಾಗಿಯೇ ನೀನು ಈಗ ಏನನ್ನು ಬರೆದಿದ್ದಿಯೋ ಅದನ್ನೇ ಒಪ್ಪಿಕೊಂಡು ಮ್ಯೂಸಿಕ್ ಕಂಪೋಸ್ ಮಾಡಲಿ. ಇಲ್ವಾ.. ಅವರಿಗಿಂತ ದೊಡ್ಡ ಬಜೆಟ್ ಹಾಕೋರನ್ನ ನಾನು ಹುಡುಕ್ತೀನಿ. ಅವಳು ಯಾರು ನನ್ನ ಪುಟ್ಟನ ಹಾಡು ಚೆನ್ನಾಗಿಲ್ಲ ಅಂತ ಹೇಳೋಕೆ ಅಂತಾ ಸಿಕ್ಕಾಪಟ್ಟೆ ರೇಗಾಡಿದ್ದಾಳೆ.

ಲಕ್ಷ್ಮೀ ಮಾತಿಗೆ ಸೈ ಎಂದ ವೈಷ್ಣವ್

ಇದು ಅಕ್ಷರಶಃ ವೈಷ್ಣವ್‌ಗೆ ಇಷ್ಟವಾಗಲಿಲ್ಲ. ಅಮ್ಮನ ಮಾತಿನ ದಾಟಿ ಸರಿ ಇಲ್ಲ ಎಂದೇ ಎನಿಸಿದೆ. ತಾಳ್ಮೆಯಿಂದ ಹೇಳುವುದಕ್ಕೆ ಹೋದಾಗ ಕೇಳಿಸಿಕೊಳ್ಳದ ಅಮ್ಮನಿಗೆ ತಿಳಿಸಿದ್ದಾನೆ. ಸುಕನ್ಯಾ ಅಪ್ಪನೇ ಅಲ್ವಾ ಅಮ್ಮ ನನಗೆ ಮೊದಲ ಅವಕಾಶ ಕೊಟ್ಟಿದ್ದು. ಆ ರೀತಿ ಅವರ ಬಳಿ ಹೇಳೋದು ತಪ್ಪಾಗುತ್ತೆ. ಈಗ ಸರಿ ಇಲ್ಲ ಎನಿಸಿದಾಗ ಸರಿ ಮಾಡೋದ್ರಲ್ಲಿ ತಪ್ಪೇನಿದೆ. ಅವರಿಗಿಷ್ಟವಾಗುವ ಸಾಲುಗಳನ್ನೇ ರೆಡಿ ಮಾಡಿದರೇ ಆಯಿತು ಎಂದು ವೈಷ್ಣವ್ ಕಾವೇರಿಗೆ ಬುದ್ದಿ ಹೇಳಿದ್ದಾನೆ. ಆದರೆ, ಆ ಮಿಸ್ಟೇಕ್‌ಗೆ ಮನೆಯಲ್ಲಿ ನಿರ್ಮಾಣವಾದ ಆ ವಾತಾವರಣವೇ ಕಾರಣ ಅನ್ನೋದು ಮಾತ್ರ ಗೊತ್ತಿಲ್ಲ.

More from Filmibeat

English summary
Lakshmi Baramma serial Written Update on August 21st episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X