Lakshmi Baramma Serial: ಕಾವೇರಿಯಿಂದ ಹೊಸ ಆಟ ಶುರು.. ಲಕ್ಷ್ಮೀ ಓಕೆ ಅಂದ್ರೆ ಅಷ್ಟೇ ಕಥೆ..!

By ಎಸ್ ಸುಮಂತ್

ಕಾವೇರಿ ತಾನೂ ಮಾಡಿದ ತಪ್ಪನ್ನು ಈಗಲೂ ಬಿಡುತ್ತಿಲ್ಲ. ಮತ್ತದೇ ಅಧಿಕಾರ, ಮತ್ತದೇ ಪೊಸೆಸಿವ್‌ನೆಸ್. ಮಗನ ಬಗ್ಗೆ ಕಾವೇರಿಗಿರುವ ಭಾವನೆಯಿಂದಾನೇ ಹಲವು ಸಮಸ್ಯೆ. ಮಗ ಎಲ್ಲೂ ಹೋಗಬಾರದು, ಮಗನಿಗೆ ಬೇರೆ ಯಾರೂ ಕಾಳಜಿ ತೋರಬಾರದು, ಮಗನ ಎಲ್ಲಾ ಜವಾಬ್ದಾರಿಗಳನ್ನು ತಾನೇ ನಿಭಾಯಿಸಬೇಕು ಅನ್ನೋದೇ ಕಾವೇರಿಯ ವಾದ. ಇದರಿಂದಾಗಿಯೇ ಕೀರ್ತಿ ಬಳಿ ತಗಲಾಕಿಕೊಂಡಿರುವುದು.

ಈಗ ಕೀರ್ತಿ ಬಿಟ್ಟು ಲಕ್ಷ್ಮೀ ಮೇಲೆ ಎಗರಾಡುವುದಕ್ಕೆ ಶುರು ಮಾಡಿದ್ದಾಳೆ. ತಾನೂ ಯಾವುದೇ ತಪ್ಪು ಮಾಡದೇ ಹೋದರೂ ಲಕ್ಷ್ಮೀ, ಕಾವೇರಿಯ ಬಳಿ ಬೈಸಿಕೊಳ್ಳುತ್ತಾ ಇದ್ದಳು. ಈಗ ಕಾವೇರಿ ಹೊಸ ವರಸೆ ಶುರು ಮಾಡಿದ್ದಾಳೆ. ಆದರೆ, ಈಗ ಲಕ್ಷ್ಮೀ ಒಮ್ಮೆಗೆ ಓಕೆ ಅಂದ್ರೆ ಕಾವೇರಿ ಲೆಕ್ಕ ತಲೆಕೆಳಗಾಗಿ ಬಿಡುತ್ತೆ.

Lakshmi Baramma Serial Written Update on August 22nd episode

ಲಕ್ಷ್ಮೀ ಮೇಲೆ ಕಾವೇರಿಗೆ ಕೋಪ

ಏನು ಮಾಡದೆ ಇದ್ದರೂ ಲಕ್ಷ್ಮೀ, ಕಾವೇರಿ ದೃಷ್ಟಿಯಲ್ಲಿ ತಪ್ಪಿತಸ್ಥೆಯಾಗುತ್ತಿದ್ದಾಳೆ. ಅದರಲ್ಲೂ ವೈಷ್ಣವ್ ವಿಚಾರಕ್ಕೆ. ಕಾವೇರಿ ಈ ರೀತಿಯಾಗಿ ಆಡುತ್ತಿರುವುದಕ್ಕೆ ಕೀರ್ತಿಯೇ ಕಾರಣ. ಇನ್ನೊಂದು ದಿನದಲ್ಲಿ ಲಕ್ಷ್ಮೀಯನ್ನು ವೈಷ್ಣವ್ ಬೈಯ್ಯುವಂತೆ ಮಾಡಬೇಕು ಎಂದು ಹೇಳಿ ಕಳುಹಿಸಿದ್ದಾಳೆ. ಈಗ ಆ ಕೆಲಸ‌ ಮಾಡುವುದಕ್ಕೆ ಕಾವೇರಿ ಎಲ್ಲಾ ತಯಾರಿ ನಡೆಸುತ್ತಿದ್ದಾಳೆ. ಕೀರ್ತಿ ಹೇಳಿದ ಕೆಲಸವನ್ನು ಕಾವೇರಿ ಮಾಡದೆ ಇದ್ದಲ್ಲಿ, ತಿಕ್ಕಲು ಥರ ಕೀರ್ತಿ ಏನು ಬೇಕಾದರೂ ಮಾಡಬಹುದು.

ಮನೆ ಕೀ ಕೊಟ್ಟ ಕಾವೇರಿ

ಕಾವೇರಿ ಅದೆಷ್ಟು ಕೋಪಗೊಂಡಿದ್ದಾಳೆ ಅಂದ್ರೆ ಲಕ್ಷ್ಮೀಯನ್ನು ಕಂಡಾಗೆಲ್ಲಾ ಜೋರು ಮಾಡುತ್ತಿದ್ದಾಳೆ. ವೈಷ್ಣವ್ ಬಳಿ ಲಕ್ಷ್ಮೀ ಹೋಗ್ತೀನಿ ಅಂದ್ರೆ ಸಾಕು ಅಲ್ಲೂ ಅಡ್ಡಗಾಲು ಹಾಕಿ‌ ನಿಲ್ಲುತ್ತಾಳೆ. ಅದರಲ್ಲೂ ಈಗಂತೂ ಲಕ್ಷ್ಮೀ ಮಾತನ್ನು ವೈಷ್ಣವ್ ಕೇಳುತ್ತಿರುವುದೇ ಕಾವೇರಿಯ ಜೋರು ಕೋಪಕ್ಕೆ ಕಾರಣವಾಗಿದೆ. ಆ ಕೋಪವನ್ನೆಲ್ಲಾ ಬೇರೆ ರೀತಿಯಲ್ಲಿಯೇ ತೀರಿಸಿಕೊಳ್ಳುತ್ತಿದ್ದಾಳೆ. ಮನೆ ಕೀ ಗೊಂಚಲು ತಂದು. ತಗೋ ಇನ್ಮುಂದೆ ನಿನ್ನದೇ ಜವಾಬ್ದಾರಿ ಅಂತ ಹೇಳಿದ್ದಾಳೆ. ಇದನ್ನು ನೋಡಿ ಲಕ್ಷ್ಮೀ ಮೂಕ ವಿಸ್ಮಿತಳಾಗಿ ನಿಂತಿದ್ದಾಳೆ.

ವೈಷ್ಣವ್ ಆಸ್ತಿ ಪತ್ರವನ್ನು ಕೊಟ್ಟ ಕಾವೇರಿ

ಕಾವೇರಿ ಲಕ್ಷ್ಮೀಯ ವಿರುದ್ಧ ಜೋರು ಜೋರು ಮಾತಾಡಿದ್ದಾಳೆ. ನಿಂದೆ‌ ಅಲ್ವಾ‌ ಈ ಮನೆಯಲ್ಲಿ ಎಲ್ಲಾ ಮಾತು ನಡೆಯೋದು, ನೀನೆ ಹೇಳಿದರೆ ಎಲ್ಲರೂ ಒಪ್ಪುತ್ತಾರೆ ಅಲ್ವಾ. ತಗೋ ಇದೊಂದು ಬಾಕಿ ಇದೆ. ಕೀ ತಗೊಂಡು ಸಂಸಾರ ಎಲ್ಲಾ ನಿಭಾಯಿಸು ಎಂದಿದ್ದಾಳೆ. ತಕ್ಷಣ ನೆನಪಾಗಿ ಓ ಇದೊಂದು ಇದ್ದರೆ ಸಾಲಲ್ಲ. ಇರು ಬರ್ತೀನಿ ಅಂತ ಹೇಳಿ, ಮನೆಯ ಆಸ್ತಿ ಪತ್ರವನ್ನೆಲ್ಲಾ ತಂದು ಕೊಟ್ಟಿದ್ದಾಳೆ. ಮುಖ್ಯವಾಗಿ ವೈಷ್ಣವ್‌ಗೆ ಸಂಬಂಧಿಸಿದ ಪತ್ರಗಳು.

Lakshmi Baramma Serial Written Update on August 22nd episode

ಅಪ್ಪಿತಪ್ಪಿ ಲಕ್ಷ್ಮೀ ಓಕೆ ಎಂದರೆ

ಕಾವೇರಿಯ ನಡೆ ಲಕ್ಷ್ಮೀಗೆ ಆಶ್ಚರ್ಯ ತಂದಿದೆ. ನಿಜ. ಲಕ್ಷ್ಮೀಯನ್ನು ತೀರಾ ಮುಗ್ದೆ, ಏನು ಅರಿಯದವಳು, ನಾವೂ ಹೇಳಿದಂತೆ ಕೇಳಿಕೊಂಡು, ಕೆಲಸ ಮಾಡಿಕೊಂಡು ಇರುತ್ತಾಳೆ ಎಂದಷ್ಟೇ ಕಾವೇರಿ ಬಯಸಿದ್ದಳು. ಆದರೆ, ಲಕ್ಷ್ಮೀ ತನ್ನ ಸ್ವಾಭಿಮಾನಕ್ಕೆ ದ್ರೋಹ ಮಾಡಿಕೊಂಡು ಎಂದಿಗೂ ಬದುಕುವುದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ‌ ಬರಕೂಡದು. ಅತ್ತೆ ಎಂದು ಮರ್ಯಾದೆ ಕೊಟ್ಟಿದ್ದಾಳೆ. ಈಗಲೂ ಮನೆಯ ಎಲ್ಲಾ ಜವಾಬ್ದಾರಿ ನೋಡಿಕೊಳ್ಳುತ್ತೇನೆ. ಆದರೆ, ಕೀ ಬೇಡ ಎಂದೇ ಹೇಳಿದ್ದಾಳೆ. ಒಂದು ವೇಳೆ ಸರಿ ಕೊಡಿ ಎಂದು ಲಕ್ಷ್ಮೀ ಕೀ ತೆಗೆದುಕೊಂಡರೆ ಕಾವೇರಿಗಿಂತ ಚೆನ್ನಾಗಿಯೇ ನಡುವೆ ಭಾಯಿಸುತ್ತಾಳೆ‌. ಆದರೆ, ಕಾವೇರಿ ತಿಳಿದಂತೆ ಕೀರ್ತಿಗಾಗಿ ವೈಷ್ಣವ್‌ನ ಬಿಟ್ಟು ಕೊಡುವುದು ಸುಲಭವಲ್ಲ.

More from Filmibeat

English summary
Lakshmi Baramma Serial Written Update on August 22nd episode:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X